• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಮರೆಯಲಾಗದ ಮಹಾನಟಿ ಸೌಂದರ್ಯ; 16 ವರ್ಷಗಳ ನಂತರ ಮರಳಿ ಬಂದರು ಬೆಳ್ಳೆತೆರೆಯ ಮೇಲೆ..

P K Channakrishna by P K Channakrishna
October 29, 2020
in CKPLUS, ET CINEMA, STATE
Reading Time: 1 min read
0
ಮರೆಯಲಾಗದ ಮಹಾನಟಿ ಸೌಂದರ್ಯ; 16 ವರ್ಷಗಳ ನಂತರ ಮರಳಿ ಬಂದರು ಬೆಳ್ಳೆತೆರೆಯ ಮೇಲೆ..
914
VIEWS
FacebookTwitterWhatsuplinkedinEmail

ಹದಿನಾರು ವರ್ಷಗಳ ಹಿಂದೆ ಬೆಂಗಳೂರಿನ ಜಿಕೆಇಕೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ನಟಿ ಸೌಂದರ್ಯ ಮತ್ತೆ ಬೆಳ್ಳಿತೆರೆಯ ಮೇಲೆ ಬಂದಿದ್ದಾರೆ!
ಅರೆ! ಅದು ಹೇಗೆ? ಎಂದು ಆಶ್ಚರ್ಯವಾಯಿತೇ? ಹಾಗಾದರೆ ಈ ಸುದ್ದಿ ಓದಿ.

ಸೌಂದರ್ಯ ಅವರು ತಾವು ದುರ್ಮರಣಕ್ಕೀಡಾಗುವ ಕೆಲವೇ ದಿನಗಳ ಹಿಂದೆ ನಟಿಸಿದ್ದ ತೆಲುಗಿನ ʼನರ್ತನಶಾಲʼ ಎಂಬ ಸಿನಿಮಾ ಇದೀಗ ಆನ್‌ಲೈನ್‌ನಲ್ಲಿ ರಿಲೀಸ್‌ ಆಗಿದ್ದು, ಪ್ರೇಕ್ಷಕರು ತಮ್ಮ ನೆಚ್ಚಿನ ನಟಿಯ ಅಭಿನಯಕ್ಕೆ ಫಿದಾ ಆಗಿದ್ದಾರೆ.

ನಂದಮೂರಿ ಬಾಲಕೃಷ್ಣ ನಿರ್ದೇಶಿಸಿ ಅರ್ಜುನನ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಸೌಂದರ್ಯ ಅವರು ದ್ರೌಪದಿ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟ ದಿವಂಗತ ಶ್ರೀಹರಿ (ಅವರು 2013 ಅಕ್ಟೋಬರ್‌ 9ರಂದು ನಿಧನರಾಗಿದ್ದರು) ಭೀಮನ ಪಾತ್ರದಲ್ಲಿ, ಮತ್ತೊಬ್ಬ ಹಿರಿಯ ನಟ ಶರತ್‌ಬಾಬು, ಧರ್ಮರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ನಂದಮೂರಿ ಬಾಲಕೃಷ್ಣ

17 ನಿಮಿಷದ ಕಿರು ಸಿನಿಮಾ

ತಮ್ಮ ತಂದೆ ಎನ್.ಟಿ.ರಾಮಾರಾವ್‌ ಅವರು ನಟಿಸಿ ನಿರ್ದೇಶಿಸಿದ್ದ ʼನರ್ತನಶಾಲʼ ಚಿತ್ರವನ್ನೇ ಬಾಲಕೃಷ್ಣ ರೀಮೇಕ್‌ ಮಾಡಿ ಸ್ವತಃ ನಿರ್ದೇಶನ ಮಾಡಲು ಮುಂದಾಗಿದ್ದರು. ಆದರೆ; ಇದ್ದಕ್ಕಿದ್ದಂತೆ ಸೌಂದರ್ಯ ತೀರಿಕೊಂಡ ಕಾರಣಕ್ಕೆ ಬೇಸತ್ತು, ಆ ಪಾತ್ರಕ್ಕೆ ಬೇರೊಬ್ಬ ನಟಿಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲದೆ ಸುಮಾರು 17ರಿಂದ 20 ನಿಮಿಷದಷ್ಟು ಶೂಟ್‌ ಆಗಿದ್ದ ಫೂಟೇಜ್‌ ಅನ್ನು ಹಾಗೆಯೇ ಇಟ್ಟಿದ್ದರು.

ಕೋವಿಡ್‌ ಕಾಲದಲ್ಲಿ ಮತ್ತೆ ʼನರ್ತನಶಾಲʼ ಸಿನಿಮಾ ಮಾಡುವ ಆಲೋಚನೆ ಬಾಲಕೃಷ್ಣ ಅವರಿಗೆ ಬಂದಿದೆ. ಡಬ್ಬದಲ್ಲಿಟ್ಟಿದ್ದ ಫೂಟೇಜ್‌ ನೋಡಿದಾಗ ಅವರಿಗೆ ಅಚ್ಚರಿಯಾಗಿದೆ. ಅದರಲ್ಲೂ ಸೌಂದರ್ಯ ಅವರ ಸಹಜಾಭಿನಯವನ್ನು ಕಂಡು ಚಕಿತರಾಗಿದ್ದಾರೆ. ಈ ಫೂಟೇಜ್‌ನ್ನು ಹಾಗೆಯೇ ಬಿಟ್ಟರೆ ಆ ನಟಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಭಾವಿಸಿದ ಬಾಲಯ್ಯ, ಅಷ್ಟೂ ಫೂಟೇಜ್‌ನ್ನು ಶ್ರೇಯಾ ಲ್ಯಾಬ್‌ಗೆ ಒಪ್ಪಿಸಿ, ನೀಟಾಗಿ ಎಡಿಟ್‌ ಮತ್ತು ಡಬ್ಬಿಂಗ್‌ ಸೇರಿದಂತೆ ಎಲ್ಲ ಕಾರ್ಯಗಳನ್ನು ಮಾಡಿಸಿ 17 ನಿಮಿಷಗಳ ಕಿರು ʼನರ್ತನಶಾಲʼ ಚಿತ್ರವನ್ನು ಇದೇ ಅಕ್ಟೋಬರ್‌ 24ರಂದು ಡಿಜಿಟಲ್‌ ಫ್ಲಾಟ್‌ಫಾರಂನಲ್ಲಿಯೇ ರಿಲೀಸ್‌ ಮಾಡಿಸಿದ್ದಾರೆ. ಟಿಕೆಟ್‌ ದರ 50 ರೂಪಾಯಿ. ಆ ಹಣವು ಬಾಲಯ್ಯ ಅವರ ತಾಯಿ ಬಸವತಾರಕಂ ಹೆಸರಿನ ಟ್ರಸ್ಟ್‌ನ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಸೇವಾ ಕಾರ್ಯಗಳಿಗೆ ವಿನಿಯೋಗವಾಗುತ್ತದೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ನಟಿಸುವ ಮುನ್ನ ಮೋಹನ್‌ ಬಾಬು ಜತೆ ʼಶಿವಶಂಕರ್‌ʼ ಎಂಬ ಚಿತ್ರದಲ್ಲಿ ನಟಿಸಿದ್ದ ಸೌಂದರ್ಯ, ಅದ್ಭುತವಾಗಿ ನಟಿಸಿದ್ದರು. ಚಿತ್ರದಲ್ಲಿ ಬೌದ್ಧಬಿಕ್ಕುವಾಗಿ ನಟಿಸಿದ್ದ ಮೋಹನ್‌ ಬಾಬುಗೆ ನಾಯಕಿಯಾಗಿ ನಟಿಸಿದ್ದ ಅವರು, ಅಭಿನಯದ ಮೂಲಕ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದರು. ಆ ಚಿತ್ರದ ಹೆಚ್ಚು ಭಾಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೈಲುಕುಪ್ಪೆಯ ಬೌದ್ಧಕೇಂದ್ರದಲ್ಲಿ ನಡೆದಿತ್ತು. ಆದರೆ, ಅವರ ಕೊನೆಯ ಚಿತ್ರ ʼನರ್ತನಶಾಲʼ ಎಂದೇ ಹೇಳಬಹುದು. ಕೇವಲ ಮೂರ್ನಾಲ್ಕು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಅವರು ಸೊಗಸಾಗಿ ನಟಿಸಿದ್ದಾರೆ. ಅವರನ್ನು ಖಂಡಿತಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎನಿಸದಿರದು.

  • ಶ್ರೀಹರಿ, ಸೌಂದರ್ಯ, ಶರತ್‌ಬಾಬು

ಇನ್ನು ಅರ್ಜುನನ ಪಾತ್ರದಲ್ಲಿ ಬಾಲಯ್ಯ ಸೂಪರ್.‌ ಟಾಲಿವುಡ್‌ನಲ್ಲಿ ಈಗ ಪೌರಾಣಿಕ ಪಾತ್ರಗಳಿಗೆ ಅವರನ್ನು ಬಿಟ್ಟರೆ ಬೇರೆ ಇಲ್ಲ ಎಂಬುದನ್ನು ಮತ್ತೆ ತೋರಿಸಿಕೊಟ್ಟಿದ್ದಾರೆ. ಧರ್ಮರಾಯ (ಶರತ್‌ಬಾಬು)ನನ್ನು ಉದ್ದೇಶಿಸಿ ಹೇಳುವ ದೀರ್ಘ ಡೈಲಾಗ್‌ ಈ ಚಿತ್ರದ ಹೈಲೇಟ್.‌ ಇನ್ನು, ಶ್ರೀಹರಿ ಬಗ್ಗೆ ಹೇಳಲೇಬೇಕು. ಭೀಮನ ಪಾತ್ರದಲ್ಲಿ ಅವರು ಘರ್ಜಿಸಿದ್ದಾರೆ. ಆದರೆ, ಅವರಿಗೆ ಕಂಠದಾನ ಮಾಡಿರುವ ಕಲಾವಿದ ಇನ್ನಷ್ಟು ಶ್ರಮ ಹಾಕಬೇಕಿತ್ತು ಎನಿಸುತ್ತದೆ. ಬಾಲಯ್ಯ ʼಬೃಹನ್ನಳೆʼ ವೇಷ ಧರಿಸಿ ಉತ್ತರೆಗೆ ನೃತ್ಯಪಾಠ ಹೇಳಿಕೊಡುವಲ್ಲಿಗೆ ಸಿನಿಮಾ ಮುಗಿಯುತ್ತದೆ. ಎನ್‌ಟಿಆರ್‌ ಅವರ ಹಳೆಯ ʼನರ್ತನಶಾಲʼ ಚಿತ್ರದ ಕೆಲ ದೃಶ್ಯಗಳನ್ನು ಒಪ್ಪವಾಗಿ ಬಳಸಿಕೊಳ್ಳಲಾಗಿದೆ. ಹೀಗಾಗಿ 17 ನಿಮಿಷ ಮುಗಿದದ್ದೇ ಗೊತ್ತಾಗುವುದಿಲ್ಲ.

ಸೌಂದರ್ಯ ಅವರು ತೀರಿಕೊಳ್ಳದೇ ಇದ್ದಿದ್ದರೆ ಈ ಸಿನಿಮಾ ಪೂರ್ಣವಾಗುತ್ತಿತ್ತು. ಟಾಲಿವುಡ್‌ನಲ್ಲೊಂದು ಟ್ರೆಂಡ್‌ಸೆಟ್ಟರ್‌ ಖಂಡಿತಾ ಆಗುತ್ತಿತ್ತು. ರಿಲೀಸ್‌ ಆದ ಮೊದಲ ದಿನವೇ ಚಿತ್ರವನ್ನು 1.95 ಲಕ್ಷ ಮಂದಿ ನೋಡಿದ್ದಾರೆಂದು ಹೇಳಲಾಗಿದೆ.

https://www.youtube.com/watch?v=cgUlBCD10ZM
ನರ್ತನಶಾಲ ಚಿತ್ರದ ಟ್ರೇಲರ್.‌

2004 ಏಪ್ರಿಲ್‌ ತಿಂಗಳಲ್ಲಿ ಲೋಕಸಭೆ ಚುನಾವಣೆ ಬಂದಿತ್ತು. ಆ ತಿಂಗಳ 17ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ಮುಗಿಸಿಕೊಂಡು ಅದೇ ದಿನ ಅಂದಿನ ಆಂಧ್ರ ಪ್ರದೇಶದ ಕರೀಂನಗರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ವಿದ್ಯಾಸಾಗರ ರಾವ್ ಪರ ಚುನಾವಣಾ ಪ್ರಚಾರಕ್ಕೆ ತೆರಳಬೇಕಾಗಿತ್ತು. ಜಕ್ಕೂರು ಹೇರೋಡ್ರಂನಲ್ಲಿ ಸೌಂದರ್ಯ ಅವರನ್ನು ಹತ್ತಿಸಿಕೊಂಡ ಅಗ್ನಿ ಎವಿಯೇಷನ್‌ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನವು ಟೇಕಾಫ್‌ ಆದ ಕೆಲ ನಿಮಿಷಗಳಲ್ಲಿಯೇ ಪಕ್ಕದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಪತನವಾಯಿತು. ಅಲ್ಲಿಗೆ ಬಾಲಯ್ಯ ಅವರ ʼನರ್ತನಶಾಲʼಕ್ಕೆ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದ ನಟಿಯೊಬ್ಬರು ಇನ್ನಿಲ್ಲವಾದರು.

ಅಂತೂ ಹೊಸ ʼನರ್ತನಶಾಲʼ ಚಿತ್ರದ ಮೂಲಕ ಸೌಂದರ್ಯ ಮತ್ತೆ ನಮ್ಮ ಕಣ್ಮುಂದೆ ಬಂದಿದ್ದಾರೆ.

Tags: nandamuri balakrishnanarthanasala 2020soundaryatelugu cinema
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಆಪದ್ಭಾಂದವನಂತೆ ಬಂದ ದರ್ಶನ್; ರಾಜರಾಜೇಶ್ವರಿ ನಗರದಲ್ಲಿ ಬದಲಾಗುತ್ತಾ ಲೆಕ್ಕಾಚಾರ

ಆಪದ್ಭಾಂದವನಂತೆ ಬಂದ ದರ್ಶನ್; ರಾಜರಾಜೇಶ್ವರಿ ನಗರದಲ್ಲಿ ಬದಲಾಗುತ್ತಾ ಲೆಕ್ಕಾಚಾರ

Leave a Reply Cancel reply

Your email address will not be published. Required fields are marked *

Recommended

ಕರ್ನಾಟಕ ಭಾರತದ ಬಯೋಟೆಕ್ನಾಲಜಿ ರಾಜಧಾನಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕರ್ನಾಟಕ ಭಾರತದ ಬಯೋಟೆಕ್ನಾಲಜಿ ರಾಜಧಾನಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

5 years ago
ದಿನ 2: ಸಿಇಟಿ ಪರೀಕ್ಷೆ ಸುಖಾಂತ್ಯ

ಸಿಇಟಿ ಕೌನ್ಸೆಲಿಂಗ್: ಜನವರಿ 15ರವರೆಗೆ ಕಾಲಾವಕಾಶ ನೀಡುವಂತೆ ಕೋರಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿಗೆ ಪತ್ರ ಬರೆದ ಸರಕಾರ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ