• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಹಿತವಾದ ಸುದ್ದಿ!; ಕನ್ನಡಕ್ಕೆ ಬರಲಿದೆ ಎಸ್ಪಿಬಿ, ಲಕ್ಷ್ಮೀ ನಟನೆಯ ದೃಶ್ಯಕಾವ್ಯ ಮಿಥುನಂ

P K Channakrishna by P K Channakrishna
December 7, 2020
in STATE
Reading Time: 1 min read
0
ಹಿತವಾದ ಸುದ್ದಿ!; ಕನ್ನಡಕ್ಕೆ ಬರಲಿದೆ ಎಸ್ಪಿಬಿ, ಲಕ್ಷ್ಮೀ ನಟನೆಯ ದೃಶ್ಯಕಾವ್ಯ ಮಿಥುನಂ
921
VIEWS
FacebookTwitterWhatsuplinkedinEmail
ಲಕ್ಷ್ಮೀ, ಎಸ್.ಪಿ.ಬಾಲಸುಬ್ರಹ್ಮಣ್ಯಂ

ಕನ್ನಡಕ್ಕೆ ಸಂಭಾಷಣೆ-ಸಾಹಿತ್ಯ ಬರೆದ ವರದರಾಜು ಚಿಕ್ಕಬಳ್ಳಾಪುರ

ಬೆಂಗಳೂರು: 2012ರಲ್ಲಿ ಟಾಲಿವುಡ್‌ನಲ್ಲಿ ಬಹಳ ಚರ್ಚೆಗೊಳಗಾದ ಚಿತ್ರವೆಂದರೆ, ಅದು ʼಮಿಥುನಂʼ ಮಾತ್ರ. ಬಹುತೇಕ ಕಮರ್ಷಿಯಲ್‌ ಚಿತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಆ ವರ್ಷದ ಕೊನೆಯಲ್ಲಿ ಬಂದ ಈ ಸಿನಿಮಾ ಹೊಸ ಅಲೆಯನ್ನೇ ಎಬ್ಬಿಸಿತ್ತು. ಈಗ ಕನ್ನಡಕ್ಕೆ ಡಬ್‌ ಮಾಡಲಾಗುತ್ತಿದೆ.

ತೆಲುಗಿನ ಖ್ಯಾತನಟ, ಸಾಹಿತಿ ತೆನಿಕಳ್ಳ ಭರಣಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಲೆಜೆಂಡರಿ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕನ್ನಡದ ನಟಿ ಲಕ್ಷ್ಮೀ ಮಾತ್ರವೇ ನಟಿಸಿದ್ದರು. ಅವರಿಬ್ಬರು ಬಿಟ್ಟರೆ ಮೂರನೇ ಪಾತ್ರ ಇರಲಿಲ್ಲ.

ಮಿಥುನಂ ಚಿತ್ರದ ದೃಶ್ಯ.

ಎಸ್‌ಪಿಬಿ ನಿಧನರಾದ 38 ದಿನಗಳ ನಂತರ, ಅಂದರೆ ನವೆಂಬರ್‌ 1ಕ್ಕೆ ʼಮಿಥುನಂʼ ಚಿತ್ರವನ್ನು ಕನ್ನಡಕ್ಕೆ ʼಮಿಥುನʼ ಎಂಬ ಹೆಸರಿನಲ್ಲಿ ಡಬ್‌ ಮಾಡಲಾಗುತ್ತಿದೆ. ವಿಶೇಷವೆಂದರೆ; ಈ ಕನ್ನಡ ಡಬ್ಬಿಂಗ್‌ ಸಿನಿಮಾಕ್ಕೆ ಚಿಕ್ಕಬಳ್ಳಾಪುರದ ವರದರಾಜು ಸಂಭಾಷಣೆ-ಸಾಹಿತ್ಯ ಬರೆದಿದ್ದಾರೆ. ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಯುತ್ತಿದ್ದು, ತೆಲುಗಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದ ‌ಆನಂದ ಮುಯಿದ ರಾವು ಅವರೇ ಕನ್ನಡದಲ್ಲೂ ನಿರ್ಮಿಸುತ್ತಿದ್ದಾರೆ.

ಕಥೆ ಹೇಗಿದೆ?

ತೆಲುಗು ʼಮಿಥುನಂʼ ಸಿನಿಮಾದಲ್ಲಿ ʼಅಪ್ಪದಾಸುʼ ಎಂಬ ಪಾತ್ರವಿದೆ. ಸರಕಾರಿ ಶಾಲೆಯ ಹೆಡ್‌ ಮಾಸ್ಟರ್‌ ಆಗಿ ನಿವೃತ್ತಿಗೊಂಡು ತಮ್ಮ ಹಳ್ಳಿಯಲ್ಲೇ ವಾಸ ಮಾಡುತ್ತಿದ್ದ ಆತನಿಗೆ ʼಬುಚ್ಚಿʼ (ಲಕ್ಷ್ಮೀ) ಎಂಬ ಹೆಂಡತಿ. ಜೀವನದ ಸಂಧ್ಯಾಕಾಲದಲ್ಲಿರುವ ಅವರಿಬ್ಬರೇ ಮನೆಯಲ್ಲಿದ್ದರೆ, ಅವರ ಮಕ್ಕಳು ವಿದೇಶಗಳಲ್ಲಿ ಸೆಟ್ಲ್‌ ಆಗಿರುತ್ತಾರೆ. ಮಕ್ಕಳ ನೆನಪಿನಲ್ಲೇ ಸಾಗುವ ಅವರ ಬದುಕಿನಲ್ಲಿ ಘಟಿಸುವ ಸರಸ-ವಿರಸ ಇತ್ಯಾದಿಗಳ ಹದವಾದ ಮಿಶ್ರಣವೇ ʼಮಿಥುನಂʼ. ಅರವತ್ತರ ಆಸುಪಾಸಿನ ದಾಂಪತ್ಯ ಮಧುರಾನುಭೂತಿಗಳು ಪ್ರತಿಯೊಬ್ಬರಿಗೂ ಕಚಗುಳಿ ಇಡುವಂತೆ ಇದ್ದವು. ಮೇಲಾಗಿ, ಈ ಚಿತ್ರ ಆಸ್ಕರ್‌ ಪ್ರಶಸ್ತಿಗೂ ನಾಮಿನೇಟ್‌ ಆಗಿತ್ತು.

advt

2012ರಲ್ಲಿ ಈ ಚಿತ್ರಕ್ಕೆ ನಂದಿ ಪುರಸ್ಕಾರವೂ ಸಿಕ್ಕಿತ್ತು. ಜತೆಗೆ, ಎಸ್‌ಪಿಬಿ ಮತ್ತು ಲಕ್ಷ್ಮೀ ಅವರಿಗೂ ಪ್ರಶಸ್ತಿ ಸಿಕ್ಕಿತ್ತು. ಶ್ರೀರಮಣ ಅವರು ಬರೆದಿದ್ದ ಈ ಸುಂದರ ಕಥೆಗೆ ತೆನಿಕಳ್ಳ ಭರಣಿ ಮತ್ತು ಕವಿ ಜೊನ್ನವಿತ್ತುಲ ಅದ್ಭುತವಾದ ಚಿತ್ರಕಥೆ ಬರೆದಿದ್ದರು. ತೆಲುಗಿನ ಸಂಭಾಷಣೆಯಂತೂ ಆ ಲಯವೇ ಬೇರೆ. ಆ ಮಾತುಗಳಿಗೆ ಸ್ವತಃ ಎಸ್‌ಪಿಬಿ ಮತ್ತು ಲಕ್ಷ್ಮೀ ಅವರೇ ಧ್ವನಿ ನೀಡಿದ್ದರು. ಈಗ ಕನ್ನಡಕ್ಕೆ ಡಬ್‌ ಆಗುತ್ತಿರುವ ʼಮಿಥುನʼಕ್ಕೆ ಇವರಿಬ್ಬರಿಗೆ ಯಾರು ಕಂಠದಾನ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ತೆಲುಗು ʼಮಿಥುನಂʼ ನೋಡಿರುವ ಕನ್ನಡಿಗರು, ಇಲ್ಲವೇ ಈ ಮಹಾ ಕಲಾವಿದರಿಬ್ಬರ ಧ್ವನಿಯ ಪರಿಚಯ ಇದ್ದವರಿಗೆ ಇನ್ನೊಬ್ಬರ ಧ್ವನಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಏನೇ ಆದರೂ ಇಂಥ ಸದಭಿರುಚಿಯ ಸಿನಿಮಾವೊಂದು ಕನ್ನಡಕ್ಕೆ ಬರುತ್ತಿರುವುದಕ್ಕೆ ಮೆಚ್ಚಲೇಬೇಕು.

ಕೊನೆಗೆ; ʼಮಿಥುನಂʼ ಚಿತ್ರವು ಎಸ್‌ಪಿಬಿ ಮತ್ತು ಲಕ್ಷ್ಮೀ ಇಬ್ಬರ ನಟಜೀವನದಲ್ಲಿ ದೃಶ್ಯಕಾವ್ಯ ಎನ್ನಲೇಬಹುದು. ಮಿಸ್‌ ಮಾಡಲೇಬಾರ ಚಿತ್ರವಿದು.

Tags: actress lakshmimithunam telugu filmsp balasubrahmanyam
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ರಿಟೈರ್‌ಮೆಂಟ್‌ ಕೋರೊನಗೆ ಮಾತ್ರ, ಆಟಕ್ಕಲ್ಲಎಂದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು;  ಶಾಕ್‌ ಆಯಿತೆಂದ ಕೇಂದ್ರ ಕ್ರೀಡಾ  ಮಂತ್ರಿ

ರಿಟೈರ್‌ಮೆಂಟ್‌ ಕೋರೊನಗೆ ಮಾತ್ರ, ಆಟಕ್ಕಲ್ಲಎಂದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು; ಶಾಕ್‌ ಆಯಿತೆಂದ ಕೇಂದ್ರ ಕ್ರೀಡಾ ಮಂತ್ರಿ

Leave a Reply Cancel reply

Your email address will not be published. Required fields are marked *

Recommended

ಜೀವಂತ ವ್ಯಕ್ತಿಯ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಜಮೀನು ಅಕ್ರಮ ಪರಭಾರೆ

ಜೀವಂತ ವ್ಯಕ್ತಿಯ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಜಮೀನು ಅಕ್ರಮ ಪರಭಾರೆ

5 years ago
ಪ್ರಾಧ್ಯಾಪಕರಾದ ದಳಪತಿ

ಎತ್ತಿನಹೊಳೆ ಯೋಜನೆಯಲ್ಲಿ ಸರಕಾರದ ಕಣ್ಣಾಮುಚ್ಚಾಲೆ: ಹೆಚ್ಡಿಕೆ ಟೀಕೆ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ