• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ವರ್ಚುಯಲ್‌ ಮೇಲೆ ಕರ್ನಾಟಕದ ಬೆಡಗು; ಖಂಡಗಳನ್ನುದಾಟಿದ ಬೆಂಗಳೂರು ಟೆಕ್‌ ಸಮಿಟ್-2020

cknewsnow desk by cknewsnow desk
November 21, 2020
in STATE, TECH
Reading Time: 2 mins read
0
ವರ್ಚುಯಲ್‌ ಮೇಲೆ ಕರ್ನಾಟಕದ ಬೆಡಗು; ಖಂಡಗಳನ್ನುದಾಟಿದ ಬೆಂಗಳೂರು ಟೆಕ್‌ ಸಮಿಟ್-2020
915
VIEWS
FacebookTwitterWhatsuplinkedinEmail

Lead photo pixabay from pexels

ಬೆಂಗಳೂರು: ಮೂರು ದಿನಗಳ ಜಾಗತಿಕ ಮಟ್ಟದ ಬೆಂಗಳೂರು ಟೆಕ್‌ ಸಮಿಟ್-2020 ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ವರ್ಚುಯಲ್‌ ವೇದಿಕೆಯ ಮೂಲಕ ನಡೆದ ಈ ಪ್ರತಿಷ್ಠಿತ ಶೃಂಗವು 2.5 ಕೋಟಿಗೂ ಹೆಚ್ಚು ದೇಶ-ವಿದೇಶಿಯರನ್ನು ತಲುಪಿದೆ.

ಕೋವಿಡ್‌ ಸಂಕಷ್ಟ ಕಾಲದಲ್ಲಿ ನಡೆದ ಈ ಶೃಂಗವು ಎಲ್ಲರ ಊಹೆಯನ್ನೂ ಮೀರಿ ಮಿಂಚಿದ್ದು, ಈವರೆಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಮೂಲಕ ಕರ್ನಾಟಕವನ್ನು ಗುರುತಿಸುತ್ತಿದ್ದ ಜಗತ್ತಿನ ಪ್ರಮುಖ ದೇಶಗಳು, ಈಗ ತಂತ್ರಜ್ಞಾನದ ಮೂಲಕವೂ ರಾಜ್ಯವನ್ನು ಅಚ್ಚರಿಯಿಂದ ನೋಡುತ್ತಿವೆ ಎಂದು ಐಟಿ ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರು ಟೆಕ್‌ ಸಮಿಟ್‌-2020 ಸಮಾರೋಪದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು; ಕೋವಿಡ್‌ ನಡುವೆಯೂ ಈವರೆಗೆ ಜಗತ್ತಿನಲ್ಲೇ ನಡೆದ ಅತಿದೊಡ್ಡ ತಂತ್ರಜ್ಞಾನ ಶೃಂಗ ಇದಾಗಿದೆ. ಮಾರಕ ವೈರಸ್‌ ನಡುವೆಯೂ ಯಶಸ್ವಿಯಾಗಿ ನಡೆಸಿದ ರಾಜ್ಯದ ಕಾರ್ಯಕ್ಷಮತೆಯ ಬಗ್ಗೆ ಆವಿಷ್ಕಾರ ಮೈತ್ರಿಕೂಟದ (ಜಿಐಎ) 25 ದೇಶಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಡಿಸಿಎಂ ಸಂತಸ ವ್ಯಕ್ತಪಡಿಸಿದರು. ಅವರು ನೀಡಿದ ವಿವರಗಳು ಹೀಗಿವೆ;

2.25 ಕೋಟಿಗೂ ಹೆಚ್ಚು ಜನ

ಭೌತಿಕವಾಗಿ (ಆಫ್‌ಲೈನ್)‌ ಹೊರತಾಗಿ ಇದೇ ಮೊದಲ ಬಾರಿಗೆ ಸಂಪೂರ್ಣ ಆನ್‌ಲೈನ್‌ ಮೂಲಕವೇ ನಡೆದ ಈ ಶೃಂಗವು ತಂತ್ರಜ್ಞಾನದ ಮೂಲಕ ಎರಡೂವರೆ ಕೋಟಿಗೂ ಹೆಚ್ಚು ಜನರನ್ನು ತಲುಪಿದೆ. ರಾಜ್ಯದ ಮನೆಮನೆಗೂ ಮಾತ್ರವಲ್ಲದೆ; ಭಾಷೆ, ಗಡಿ, ರಾಜ್ಯ, ದೇಶ, ಖಂಡಗಳನ್ನು ದಾಟಿಕೊಂಡು ಜಗತ್ತಿನ ಪ್ರತಿಮೂಲೆಯನ್ನೂ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಟೆಕ್‌ ಸಮಿಟ್‌ ಮಾಡುವ ನಮ್ಮ ಉತ್ಸಾಹಕ್ಕೆ ಗಜಬಲ ಬಂದಂತೆ ಆಗಿದೆ.

ಎಲೆಕ್ಟ್ರಾನಿಕ್‌ ಸುದ್ದಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು, ಡಿಜಿಟಲ್‌ ಮಾಧ್ಯಮ, ಯುಟ್ಯೂಬ್‌, ಬಿಟಿಎಸ್‌ ವರ್ಚುವಲ್‌ ವೇದಿಕೆ, ಬಿಟಿಎಸ್‌ ಯುಟ್ಯೂಬ್‌ ಚಾನೆಲ್‌, ಫೇಸ್‌ಬುಕ್‌ ಪೇಜ್‌ಗಳು, ವೆಬ್‌ ಪೇಜ್‌ಗಳು ಸೇರಿದಂತೆ ಹೊಸ ತಲೆಮಾರಿನ ಎಲ್ಲ ತಂತ್ರಜ್ಞಾನ ಕಂಟೆಂಟ್‌ ವಾಹಕಗಳ ಮೂಲಕ ಇಷ್ಟು ಅಗಾಧ ಜನಸಮೂಹವನ್ನು ಟೆಕ್‌ ಸಮಿಟ್‌ ತಲುಪಿದೆ.

ಇದೆಲ್ಲವೂ ಎಷ್ಟು ಸುಸೂತ್ರವಾಗಿ ನಡೆಯಿತೆಂದರೆ, ಯಾವುದೇ ಹಂತದಲ್ಲೂ ಒಂದು ಸಣ್ಣ ಸಮಸ್ಯೆಯೂ ಆಗಲಿಲ್ಲ. ವರ್ಚುಯಲ್‌ ವೇದಿಕೆ ಕಾರ್ಯಕ್ರಮಗಳು, ಸಂವಾದಗಳು, ಗೋಷ್ಠಿಗಳು ಸೇರಿದಂತೆ ಎಲ್ಲಿಯೂ ಅಡ್ಡಿ ಉಂಟಾಗಲಿಲ್ಲ. ತಂತ್ರಜ್ಞಾನವನ್ನು ಅದೆಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಶೃಂಗವೂ ಅತ್ಯುತ್ತಮ ಉದಾಹರಣೆ.

ದೇಶ-ವಿದೇಶಿ ಪ್ರತಿನಿಧಿಗಳು

ಬಿಟಿಎಸ್‌-2020ಯಲ್ಲಿ ನಿರೀಕ್ಷೆಗೂ ಮೀರಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಆರಂಭದಲ್ಲಿ 4,000 ಪ್ರತಿನಿಧಿಗಳು ಭಾಗವಹಿಸಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ, ಅಂದಾಜಿಗಿಂತ ದುಪ್ಪಟ್ಟು ಅಂದರೆ; 8,507 ಪ್ರತಿನಿಧಿಗಳು ನೋಂದಾಯಿಸಿಕೊಂಡು ಭಾಗಿಯಾಗಿದ್ದು ಈ ಶೃಂಗದ ದೊಡ್ಡ ದಾಖಲೆ. ಇನ್ನು ಭಾಷಣ, ಸಮ್ಮೇಳನ, ಪ್ರಶಸ್ತಿಗಳು, ರಸಪ್ರಶ್ನೆ ಸ್ಪರ್ಧೆ ವಿಭಾಗಗಳಲ್ಲಿ 19,381 ಪ್ರತಿನಿಧಿಗಳು ಪಾಲ್ಗೊಂಡಿದ್ದರು. 12 ಮುಖ್ಯ ಅಧಿವೇಶನಗಳು, 93 ಸೆಷನ್‌ಗಳು, 357 ಭಾಷಣಕಾರರ ಸಂಖ್ಯೆಯೂ ಮಹತ್ವದ್ದು.

ಪಾಲುದಾರ ದೇಶಗಳು

ಆವಿಷ್ಕಾರ ಮೈತ್ರಿಕೂಟ (ಜಿಐಎ)ದ 25 ದೇಶಗಳಿಂದ 731 ಪ್ರತಿನಿಧಿಗಳು ಭಾಗಿಯಾಗಿದ್ದರು. ಹತ್ತು ಸಚಿವ ಮಟ್ಟದ ನಿಯೋಗಗಳು ಶೃಂಗದಲ್ಲಿ ಭಾಗಿಯಾಗಿದ್ದವು. ಕಳೆದ ವರ್ಷದ ಆಫ್‌ಲೈನ್ ಶೃಂಗದಲ್ಲಿ 21 ದೇಶಗಳು, 253 ಪ್ರತಿನಿಧಿಗಳು, ಕೇವಲ 44 ಸೆಷನ್‌ಗಳು, 262 ಸ್ಪೀಕರ್‌ಗಳು ಮಾತ್ರ ಭಾಗಿಯಾಗಿದ್ದರು. 4 ಮುಖ್ಯ ಅಧಿವೇಶನಗಳಷ್ಟೇ ನಡೆದಿದ್ದವು.

ಬಿ2ಬಿ ಸಭೆಗಳ ದಾಖಲೆ

ಪ್ರಸಕ್ತ ಶೃಂಗದಲ್ಲಿ ಬಿಸ್ನೆಸ್‌ 2 ಬಿಸ್ನೆಸ್‌ ಸಭೆಗಳು ದಾಖಲೆ ಪ್ರಮಾಣದಲ್ಲಿ ನಡೆದಿದ್ದು, ಅಂತಹ ಒಟ್ಟು 312 ಸಭೆಗಳು ಜರುಗಿವೆ ಎಂದ ಉಪ ಮುಖ್ಯಮಂತ್ರಿ, ಇಂಥ ಇನ್ನೂ ಅನೇಕ ಸಭೆಗಳು, ಮಾತುಕತೆಗಳು ನಡೆದಿದ್ದು, ಈ ತಿಂಗಳ ಕೊನೆಯವರೆಗೂ ಮುಂದುವರಿಯಲಿವೆ.

ಪ್ರದರ್ಶನದಲ್ಲೂ ದಾಖಲೆ

ವರ್ಚುಯಲ್‌ ಆಗಿ ನಡೆದರೂ ಈ ಶೃಂಗದಲ್ಲಿ ಪ್ರದರ್ಶನ ಮಳಿಗೆಗಳ ಸ್ಥಾಪನೆಯಲ್ಲೂ ದಾಖಲೆ ಆಗಿದೆ. ಕಳೆದ ವರ್ಷ ಭೌತಿಕವಾಗಿ ನಡೆದ ಶೃಂಗಕ್ಕಿಂತ ಈ ಬಾರಿ ವರ್ಚುಯಲ್‌ ಶೃಂಗದಲ್ಲಿ 248 ಪ್ರದರ್ಶನಕಾರರು ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾ, ಕೆನಡಾ, ಯುಎಸ್ಎ, ಬ್ರಿಟನ್‌, ಜರ್ಮನಿ ಮುಂತಾದ ದೇಶಗಳ ಕಂಪನಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಇದರಲ್ಲಿ ಐಟಿ, ಎಲೆಕ್ಟ್ರಾನಿಕ್ಸ್, ಹೆಲ್ತ್‌ಕೇರ್, ಮೆಡಿಕಲ್‌, ಅಗ್ರಿಟೆಕ್, ನೆಟ್‌ವರ್ಕ್‌ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರದರ್ಶನಗಳಿದ್ದವು. ಜತೆಗೆ, 146 ಸ್ಟಾರ್ಟಪ್‌ಗಳು ಕೂಡ ಮಳಿಗೆಗಳನ್ನು ತೆರೆದಿದ್ದವು. ಸುಮಾರು 9,870 ಜನ ಈ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ.

ಎಂಟು ಒಪ್ಪಂದ

ಟೆಕ್‌ ಸಮಿಟ್‌ನಲ್ಲಿ ಈಗಾಗಲೇ ಎಂಟು ಒಪ್ಪಂದಗಳನ್ನು ಜಿಐಎ ದೇಶಗಳ ಜತೆ ಮಾಡಿಕೊಳ್ಳಲಾಗಿದ್ದು, ಅಂಕಿತವೂ ಬಿದ್ದಿದೆ. ಇನ್ನೂ ನಾಲ್ಕು ಒಪ್ಪಂದಗಳು ಅಂತಿಮ ಹಂತದಲ್ಲಿದ್ದು, ಅಂಕಿತಕ್ಕೆ ಬಾಕಿ ಇವೆ. ಕಳೆದ ವರ್ಷ ಕೇವಲ ಒಂದೇ ಒಂದು ಒಪ್ಪಂದ ಆಗಿತ್ತು. ಇವಿಷ್ಟೂ ಒಪ್ಪಂದಗಳ ಕಾರಣದಿಂದ ಕರ್ನಾಟಕ್ಕೆ ದೊಡ್ಡ ಬಲ ಬಂದಂತೆ ಆಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಇವುಗಳ ಫಲಶ್ರುತಿ ಗೋಚರವಾಗಲಿದೆ. ಇದುವರೆಗೂ ಐಟಿ-ಬಿಟಿ ಹಬ್‌ ಆಗಿದ್ದ ಕರ್ನಾಟಕ ಇನ್ನು ಮುಂದೆ ಟೆಕ್ನಾಲಜಿ ಹಬ್‌ ಆಗಿ ಜಾಗತಿಕವಾಗಿ ಗುರುತಿಸಿಕೊಳ್ಳಲಿದೆ.

ಬಿಟಿಎಸ್‌2020-21ಗೆ ಡೇಟ್‌ ಫಿಕ್ಸ್

ಇದೇ ವೇಳೆ ಡಿಸಿಎಂ ಅವರು, ಮುಂದಿನ ವರ್ಷದ ಬೆಂಗಳೂರು ಟೆಕ್‌ ಸಮಿಟ್‌ಗೆ ದಿನಾಂಕವನ್ನೂ ಪ್ರಕಟಿಸಿದರು. 2021ರ 18, 19 ಮತ್ತು 20ರಂದು ಶೃಂಗವು ನಡೆಯಲಿದ್ದು, ಅದು 2019ರ ಆಫ್‌ಲೈನ್‌ ಹಾಗೂ 2020ರ ಆನ್‌ಲೈನ್‌ ಕಾಂಬಿನೇಷನ್‌ನಲ್ಲಿ ನಡೆಯುತ್ತದೆ. ಆಗ ಪ್ರಸಕ್ತ ಶೃಂಗ ದಾಖಲೆಗಳನ್ನು ಮೀರುವಂತೆ ಅದನ್ನು ಯಶಸ್ವಿಗೊಳಿಸಲಾಗುವುದು. ಅದಕ್ಕೆ ಈಗಿನಿಂದಲೇ ತಯಾರಿ ಮಾಡಲಾಗುವುದು.

ಮುಂದಲ್ಲ, ಈಗಲೇ

ನೆಕ್ಸ್ಟ್‌ ಈಸ್‌ ನೌ ಅಂದರೆ, ಮುಂದಲ್ಲ ಈಗಲೇ ಎಂಬ ಪರಿಕಲ್ಪನೆ ಮತ್ತು ಗುರಿಯೊಂದಿಗೆ ನಡೆದ ಬಿಟಿಎಸ್-2020, ಫಲಶ್ರುತಿ ಅದ್ಭುತ ಎಂದೇ ಹೇಳಬಹುದು. ನಮಗಿಂತ ಮುಂದೆ ಇರುವ ದೇಶಗಳೆಲ್ಲವೂ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿ ಕರ್ನಾಟಕದ ಜತೆ ಕೈಜೋಡಿಸಿವೆ. ಕೃತಕ ಬುದ್ಧಿಮತ್ತೆ, ಸೈಬರ್‌ ಭದ್ರತೆ, ಕೃಷಿ, ಜೈವಿಕ ತಂತ್ರಜ್ಞಾನ, ರಕ್ಷಣೆ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಮುಂದೆ ವಿಪುಲ ಅವಕಾಶಗಳಿವೆ. ಇಡೀ ವಿಶ್ವವೇ ಕರ್ನಾಟಕದ ಮೂಲಕ ನೋಡಿಕೊಳ್ಳುವ ದಿನಗಳು ದೂರವಿಲ್ಲ.

ಈ ಶೃಂಗದ ಫಲವು ರಾಜ್ಯದ ಕಟ್ಟಕಡೆಯ ಪ್ರಜೆಗೂ ಖಚಿತವಾಗಿ ತಲುಪಲಿದೆ. ಮುಖ್ಯವಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕೃತಕ ಬುದ್ಧಿಮತ್ತೆ ಟೆಕ್ನಾಲಜಿ ಮೂಲಕ ಕೃಷಿಗೆ ಬಹಳ ಪ್ರಯೋಜನವಾಗಲಿದೆ. ಬಯೋ ಕ್ಷೇತ್ರದಲ್ಲಿ 300 ಶತಕೋಟಿ ಡಾಲರ್‌ ಆರ್ಥಿಕತೆ ಸಾಧಿಸುವ ಗುರಿಗೆ ಇದು ಪೂರಕವಾಗಿದೆ.

ಐಟಿ ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ಮಾತನಾಡಿದರು.

Tags: bangalore tech summit 2020BTS2020karnataka it-bt
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ತಮಿಳುನಾಡು ಗೆಲ್ಲಲು ಬಿಜೆಪಿ ಗೇಮ್‌ಪ್ಲ್ಯಾನ್;‌ ವೇಲ್‌ ಹಿಡಿದ ಸೈಲಂಟ್‌ ಟ್ರಬಲ್‌ಶೂಟರ್

ತಮಿಳುನಾಡು ಗೆಲ್ಲಲು ಬಿಜೆಪಿ ಗೇಮ್‌ಪ್ಲ್ಯಾನ್;‌ ವೇಲ್‌ ಹಿಡಿದ ಸೈಲಂಟ್‌ ಟ್ರಬಲ್‌ಶೂಟರ್

Leave a Reply Cancel reply

Your email address will not be published. Required fields are marked *

Recommended

ನಂದಿ ಗಿರಿಧಾಮ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ, 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ, ರೋಪ್ ವೇ ಕನಸು ನನಸಾಗಲಿದೆ ಎಂದ ಸಚಿವ ಡಾ.ಕೆ.ಸುಧಾಕರ್

ನಂದಿ ಗಿರಿಧಾಮ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ, 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ, ರೋಪ್ ವೇ ಕನಸು ನನಸಾಗಲಿದೆ ಎಂದ ಸಚಿವ ಡಾ.ಕೆ.ಸುಧಾಕರ್

5 years ago
ಮೋದಿ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ

ಪರೀಕ್ಷಾ ಪೇ ಚರ್ಚಾದ 5ನೇ ಆವೃತ್ತಿಯಲ್ಲಿ ಮೋದಿ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ