• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NEWS IN USE

ತಿರುಮಲದಲ್ಲಿ ನಿವಾರ್‌ ಅಬ್ಬರಕ್ಕೆ ಭಕ್ತರು ತತ್ತರ; ಇನ್ನೂ 3 ದಿನ ತಮಿಳುನಾಡು ಕಡೆ ಹೋಗಲೇಬೇಡಿ

cknewsnow desk by cknewsnow desk
November 25, 2020
in NEWS IN USE, STATE
Reading Time: 1 min read
0
ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸಿರುವ ಆಂಧ್ರಪ್ರದೇಶ ಆಗುತ್ತಿದೆಯಾ ಕ್ರೈಸ್ತಪ್ರದೇಶ !?
920
VIEWS
FacebookTwitterWhatsuplinkedinEmail
Lead Photo: CKPhotography ಸಿಕೆಪಿ@ckpixels

ತಿರುಮಲ/ಬೆಂಗಳೂರು: ನಿವಾರ್‌ ಚಂಡಮಾರುತದ ಪ್ರಭಾವಕ್ಕೆ ತಮಿಳುನಾಡು ಜತೆಗೆ ಆಂದ್ರ ಪ್ರದೇಶವೂ ಸಿಲುಕಿದೆ. ಮುಖ್ಯವಾಗಿ ಜಗತ್ಪ್ರಸಿದ್ಧ ಯಾತ್ರಾಸ್ಥಳ ತಿರುಮಲದಲ್ಲಿ ಮಳೆಯಿಂದ ಎಲ್ಲವೂ ಅಸ್ತವ್ಯಸ್ತವಾಗಿದ್ದು, ಹೊರಗಿನಿಂದ ಬರುವ ಭಕ್ತರ ಪ್ರಮಾಣ ಕಡಿಮೆಯಾಗಿದೆ.

ಬುಧವಾರ ಬೆಳಗ್ಗೆಯಿಂದಲೇ ತಿರುಮಲದಲ್ಲಿ ಮಳೆ ಆರಂಭವಾಗಿದ್ದು, ಭಕ್ತರು ಹಾಗೂ ಬೀದಿಬದಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಸಕಾಲಕ್ಕೆ ಭಕ್ತರು ದರ್ಶನಕ್ಕೆ ತೆರಳಲಾಗದೇ ಪರದಾಡಿದರು. ತಿರುಪತಿ-ತಿರುಮಲ ಘಾಟ್‌ ರಸ್ತೆಯಲ್ಲಿ ನಿಧಾನವಾಗಿ ಚಲಿಸುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರಲ್ಲದೆ, ವಾಹನ ಸವಾರರ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು, ಅಲಿಪಿರಿಯಿಂದ ಕಾಲುದಾರಿಯಲ್ಲಿ ಭಕ್ತರು ನಡೆದು ಬರುತ್ತಿಲ್ಲ. ಮಾರ್ಗಮಧ್ಯೆ ಕೆಲ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಕಾರಣಕ್ಕೆ ಭಕ್ತರೆಲ್ಲರೂ ಘಾಟ್‌ ರಸ್ತೆಯಲ್ಲೇ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಾನವನ್ನು ಸೇರಿಕೊಳ್ಳುತ್ತಿದ್ದಾರೆ.

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ತಿರಮಲದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚೆನ್ನೈಗೆ 136 ಕಿ.ಮೀ ದೂರದಲ್ಲಷ್ಟೇ ಇರುವ ತಿರುಮಲದ ಗಿರಿಶ್ರೇಣಿಯಲ್ಲಿ ನಿವಾರ್‌ ಅಬ್ಬರ ತುಸು ಜಾಸ್ತಿಯೇ ಇದೆ. ಮೊದಲೇ ಕೋವಿಡ್‌ ಭಯ, ಇನ್ನೊಂದೆಡೆ ಹೆಚ್ಚುತ್ತಿರುವ ಚಳಿಯ ಕಾರಣಕ್ಕೆ ಯಾತ್ರಿಗಳ ಪ್ರಮಾಣ ಕಡಿಮೆಯಾಗಿದೆ. ಮಕ್ಕಳು, ಹಿರಿಯ ನಾಗರೀಕರು ಕಾಣಿಸಿಕೊಳ್ಳುತ್ತಿಲ್ಲ.

130ರಿಂದ 140 ಕಿ.ಮೀ ವೇಗದಲ್ಲಿ ತಮಿಳುನಾಡು ತೀರದತ್ತ ಬರುತ್ತಿರುವ ಚಂಡಮಾರುತವು, ಚೆನ್ನೈ ಮತ್ತು ಪುದುಚೆರಿಗೆ ಅಪ್ಪಳಿಸುವಷ್ಟರಲ್ಲಿ ತಿರುಮಲದಲ್ಲಿಯೂ ಮಳೆಯ ತೀವ್ರತೆ ಹೆಚ್ಚಲಿದೆ ಎಂದು ಈಗಾಗಲೇ ಆಂಧ್ರ ಪ್ರದೇಶದ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈಗೆ 300 ಕಿ.ಮೀ ದೂರದ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಈ ಪರಿ ಮಳೆಯಾಗುತ್ತಿದೆ. ಹೀಗಾಗಿ ತಿರುಮಲಕ್ಕೆ ಭೇಟಿ ನೀಡಬೇಕೆಂದಿರುವ ಭಕ್ತರು ಮೂರು ದಿನಗಳ ನಂತರ ಹೋದರೆ ಉತ್ತಮ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಾಳಹಸ್ತಿಯಲ್ಲೂ ಮಳೆ

ಇನ್ನು, ತಿರುಪತಿಗೆ ಕೇವಲ 37 ಕಿ.ಮೀ ದೂರದಲ್ಲಿರುವ ಶ್ರೀಕಾಳಹಸ್ತಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ಮಳೆಯ ಕಾರಣಕ್ಕೆ ಶ್ರೀಕಾಳಹಸ್ತೇಶ್ವರನ ದರ್ಶನಕ್ಕೆ ಬರುವ ಭಕ್ತರು, ರಾಹುಪೂಜೆ ಮಾಡಿಸುವವೆ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು. ಇಲ್ಲಿ ಭಕ್ತರಿಗೆ ಮಳೆಯಿಂದ ಆಶ್ರಯ ಪಡೆಯುವ ಮೂಲಸೌಕರ್ಯಗಳ ಕೊರತೆ ಇದ್ದು, ಕೆಲ ಭಕ್ತರು ಮಳೆಯಲ್ಲಿ ತೊಯ್ದುಕೊಂಡೇ ದರ್ಶನ ಮಾಡಿದರು ಎಂದು ವರದಿಯಾಗಿದೆ.

Very severe cyclonic storm Nivar now lies about 50 km east-southeast of Cuddalore, about 40 km east southeast of Puducherry.LANDFALL PROCESS CONTINUES.CENTRE OF CYCLONE TO CROSS COAST NEAR PUDUCHERRY WITHIN NEXT 3 HOURS WITH WIND SPEED OF 120-130 KMPH GUSTING TO 145 KMPH. pic.twitter.com/5SJTQexHcT

— India Meteorological Department (@Indiametdept) November 25, 2020
ತಮಿಳುನಾಡು ಕಡೆ ಹೋಗಲೇಬೇಡಿ

ನಿವಾರ್‌ ಮಾರುತ ಇನ್ನೂ ತೀರಕ್ಕೆ ಅಪ್ಪಳಿಸುವ ಮುನ್ನವೇ ಚೆನ್ನೈ ಮತ್ತು ಪುದುಚೆರಿಗಳ ಪರಿಸ್ಥಿತಿ ಅಯೋಮಯವಾಗಿದೆ. ಮುಖ್ಯವಾಗಿ ಚೆನ್ನೈ ನಗರದ ರಸ್ತೆಗಳಲ್ಲಿ ನದಿಗಳಂತೆ ನೀರು ಹರಿಯುತ್ತಿದೆ. ನಗರ ಸಾರಿಗೆ, ಸಿಟಿ ರೈಲು ಸಂಚಾರ ಪೂರ್ಣ ವ್ಯತ್ಯಯವಾಗಿದೆ. ವ್ಯಾಪಾರ-ವಹಿವಾಟು ಬಂದ್‌ ಆಗಿದೆ. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಈಗಾಗಲೇ ಸಮುದ್ರದ ಪಕ್ಕದಲ್ಲಿ ವಾಸ ಮಾಡುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್‌ ಮಾಡಲಾಗಿದೆ.

ಇದೇ ವೇಳೆ ಬುಧವಾರ ರಾತ್ರಿ 11.34 ಗಂಟೆಗೆ ಟ್ವೀಟ್‌ ಮಾಡಿರುವ ಭಾರತೀಯ ಹವಾಮಾನ ಇಲಾಖೆಯು, ಇನ್ನು ಕೇವಲ ಮೂರು ಗಂಟೆಗಳಲ್ಲಿ ಪುದುಚೆರಿ ತೀರಕ್ಕೆ ನಿವಾರ್‌ ಅಪ್ಪಳಿಸಲಿದೆ ಎಂದು ಮಾಹಿತಿ ನೀಡಿದೆ.

ತಮಿಳುನಾಡಿನ ಬಹುತೇಕ ಯಾತ್ರಾಸ್ಥಳಗಳು ಭಕ್ತರಿಲ್ಲದೆ ಭಣಗುಡುತ್ತಿವೆ. ಈ ಪೈಕಿ ದ್ವೀಪವಾಗಿರುವ ರಾಮೇಶ್ವರದಲ್ಲಿ ಮಂಗಳವಾರದಿಂದಲೇ ಮಳೆ ಸುರಿಯುತ್ತಿದೆ. ಇನ್ನೂ ಹಿರಿಯರ ಪೂಜೆಗೆಂದು ಧನುಷ್ಕೋಡಿಗೆ ತೆರಳುವ ಭಕ್ತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ರಾಮೇಶ್ವರಕ್ಕೆ ಅನತಿ ದೂರದಲ್ಲಿರುವ ನೌಕಾಪಡೆ ಚೆಕ್‌ ಪಾಯಂಟ್‌ವರೆಗೂ ಬಿಡಲಾಗುತ್ತಿದೆಯಾದರೂ, ಬುಧವಾರ ಸಂಜೆಯಿಂದ ಅಲ್ಲಿಗೂ ಬಿಡುತ್ತಿಲ್ಲ ಎಂದು ರಾಮೇಶ್ವರದ ಹೋಟೆಲ್‌ವೊಂದರ ಮಾಲೀಕ ಸೇತುರಾಜನ್‌ ಅವರು ಸಿಕೆನ್ಯೂಸ್‌ ನೌ ಸುದ್ದಿತಾಣಕ್ಕೆ ಮಾಹಿತಿ ನೀಡಿದ್ದಾರೆ.

ಅದೇ ರೀತಿ; ಕೋವಿಡ್‌ ಕಾರಣಕ್ಕೆ ಭಕ್ತರು ಬರುವುದು ಕಡಿಮೆಯಾಗಿದೆ. ಇದೀಗ ನಿವಾರ್‌ ಚಂಡಮಾರುತದಿಂದ ಇನ್ನು ಮೂರ್ನಾಲ್ಕು ದಿನ ಭಕ್ತರ ಪ್ರಮಾಣ ಹೆಚ್ಚುವುದಿಲ್ಲ. ನಮಗಂತೂ ಏಟಿನ ಮೇಲೆ ಏಟು ಬೀಳುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.

ಇದೇ ರೀತಿ ವಿಶ್ವವಿಖ್ಯಾತ ಮೀನಾಕ್ಷಿ ಅಮ್ಮನವರು ನೆಲೆಸಿರುವ ಮಧುರೈಗೂ ಭಕ್ತರು ವಿರಳವಾಗಿದ್ದಾರೆ. ಸದಾ ದೇಗುಲದ ಎಲ್ಲ ದಿಕ್ಕುಗಳಲ್ಲೂ ಭಕ್ತರು ತುಂಬಿರುತ್ತಿದ್ದರು. ಆದರೆ, ಭಕ್ಕರು ಕಡಿಮೆಯಾಗಿ ಬರುತ್ತಿರುಬ ಕೆಲವೇ ಭಕ್ತರಿಗೆ ಅಮ್ಮನವರ ದರ್ಶನ ನಿರಾಳವಾಗಿ ಆಗುತ್ತಿದೆ ಎಂದು ವರದಿಯಾಗಿದೆ.

Damage expected over Nagapattinam, Myladuthurai, Cuddalore, Villupuram & Chengalpattu districts of Tamilnadu and Karaikal & Puducherry.

#StayHomeStaySafe#Nivar #NivarCycloneUpdate #நிவர் #நிவர்புயல் #CycloneAlert #NivarCyclone #chennairains #ChennaiRain #NivarCycloneUpdate pic.twitter.com/tbL9HH8uGz

— Shameema Sarmad (@Shameemaparvin) November 24, 2020

ಪುದುಚೆರಿಯಲ್ಲಿ ಪರಿಸ್ಥಿತಿ ಇನೂ ವಿಕೋಪಕ್ಕೆ ಹೋಗಿದೆ. ಅಲ್ಲಿನ ಸರಕಾರ ಮೂರು ದಿನ ಕರ್ಪ್ಯೂ ವಿಧಿಸಿ 144 ಸೆಕ್ಷನ್‌ ಜಾರಿ ಮಾಡಿದೆ. ಚಂಡಮಾರುತ ಇಳಿಮುಖ ಆಗುವ ತನಕ ಮನೆಯಲ್ಲೇ ಇರಿ ಎಂದು ಅಲ್ಲಿನ ಪೊಲೀಸ್‌ ಅಧಿಕಾರಿಗಳು ಜನರನ್ನು ಕೋರಿದ್ದಾರೆ. ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ಬುಧವಾರ ಮಳೆಯಲ್ಲೇ ಪುದುಚೆರಿ ಉದ್ದಕ್ಕೂ ಪರ್ಯಟನೆ ಮಾಡಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

  • ಈ ಸುದ್ದಿಯನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ….
ಬಂಗಾಳಕೊಲ್ಲಿಯಲ್ಲಿ ಎದ್ದ ನಿವಾರ್‌ ಚಂಡಮಾರುತ; ಚಿಕ್ಕಬಳ್ಳಾಪುರ, ಕೋಲಾರ ರೈತರ ಆತಂಕ
Tags: cyclonenivarPuducherrytamilnadutirumala
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಚಿಕ್ಕಬಳ್ಳಾಪುರ, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಹಳದಿ ಅಲರ್ಟ್;‌ ಭತ್ತ, ರಾಗಿ, ತರಕಾರಿ ರೈತರಿಗೆ ಸಂಕಷ್ಟ

ಚಿಕ್ಕಬಳ್ಳಾಪುರ, ಕೋಲಾರ ಸೇರಿ 7 ಜಿಲ್ಲೆಗಳಲ್ಲಿ ಹಳದಿ ಅಲರ್ಟ್;‌ ಭತ್ತ, ರಾಗಿ, ತರಕಾರಿ ರೈತರಿಗೆ ಸಂಕಷ್ಟ

Leave a Reply Cancel reply

Your email address will not be published. Required fields are marked *

Recommended

ನಂದಿ ಗಿರಿಧಾಮ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ, 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ, ರೋಪ್ ವೇ ಕನಸು ನನಸಾಗಲಿದೆ ಎಂದ ಸಚಿವ ಡಾ.ಕೆ.ಸುಧಾಕರ್

ನಂದಿ ಗಿರಿಧಾಮ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ, 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ, ರೋಪ್ ವೇ ಕನಸು ನನಸಾಗಲಿದೆ ಎಂದ ಸಚಿವ ಡಾ.ಕೆ.ಸುಧಾಕರ್

5 years ago
ಮೋದಿ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ

ಪರೀಕ್ಷಾ ಪೇ ಚರ್ಚಾದ 5ನೇ ಆವೃತ್ತಿಯಲ್ಲಿ ಮೋದಿ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ