- ಭಾರತಕ್ಕೆ ಭಾರತದೊಳಗಿಂದಲೇ ಅಪಾಯ ಎದುರಾಗುತ್ತಿದೆಯಾ? ಹಾಗಾದರೆ ಅದು ಎಲ್ಲಿಂದ? ಹೇಗೆ? ಯಾವ ರೂಪದಲ್ಲಿ? ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ನಮ್ಮ ನೆಲದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳನ್ನು ಇಲ್ಲಿ ಚರ್ಚೆ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ಅಸೆಂಬ್ಲಿ ಮತ್ತು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಉಂಟಾದ ಹೊಸದೊಂದು ಅನಿರೀಕ್ಷಿತ ಬೆಳವಣಿಗೆಯನ್ನು ಯಾರೂ ಅಷ್ಟಾಗಿ ಗಮನಿಸಿರಲಿಕ್ಕಿಲ್ಲ. ಬಿಹಾರದಲ್ಲಿ 20 ಸ್ಥಾನಗಳಿಗೆ ಸ್ಪರ್ಧಿಸಿದ್ದ ಅಸಾದುದ್ದೀನ್ ಓವೈಸಿ ನೇತೃತ್ವದ ಎಂಐಎಂ ಪಕ್ಷ ಅನಿರೀಕ್ಷಿತವೆಂಬಂತೆ 5 ಸ್ಥಾನಗಳಲ್ಲಿ ಭರ್ಜರಿ ಬಹುಮತದೊಂದಿಗೇ ಗೆದ್ದಿದ್ದು ಹಾಗೂ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಭಾರೀ ಅಬ್ಬರವಿದ್ದಾಗ್ಯೂ ಎಂಐಎಂ ತಾನು ಸ್ಪರ್ಧಿಸಿದ್ದ 51 ಸ್ಥಾನಗಳ ಪೈಕಿ 44 ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದ್ದು; ಇದೇ ಆ ಅನಿರೀಕ್ಷಿತ ಬೆಳವಣಿಗೆ.
2015ರ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗಳಿಸಿದ್ದ ಎಂಐಎಂ ಈ ಬಾರಿ 5 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದು ಹೇಗೆ? ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಕಳೆದ ಸಲದ ತನ್ನ ಸಂಖ್ಯಾಬಲವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದ್ದು ಹೇಗೆ? ಈ ಕುರಿತು ಸೂಕ್ತ ವಿಶ್ಲೇಷಣೆ ನಡೆಸಿದಾಗ, ಇದುವರೆಗೆ ಕಣ್ಮುಚ್ಚಿ ಕಾಂಗ್ರೆಸ್‌ಗೇ ಓಟು ಹಾಕುತ್ತಿದ್ದ ಮುಸ್ಲಿಂ ಸಮುದಾಯದ ಮತದಾರರು ಈ ಬಾರಿ ಕಾಂಗ್ರೆಸ್ ಕೈಯನ್ನು ಸಂಪೂರ್ಣ ಬಿಟ್ಟು ಓವೈಸಿಯನ್ನು ತಮ್ಮ ಭಾಗ್ಯದಾತನೆಂದು ಅಪ್ಪಿಕೊಂಡಿರುವುದು ಸ್ಪಷ್ಟವಾಗುತ್ತದೆ. ಬಿಹಾರ ಹಾಗೂ ಹೈದರಾಬಾದ್ ಚುನಾವಣೆಗಳಲ್ಲಿ ಕಾಂಗ್ರೆಸ್ ಹೇಳಹೆಸರಿಲ್ಲದಂತೆ ಒಂದಂಕಿ ತಲುಪಿರುವುದಕ್ಕೆ ಮುಸ್ಲಿಂ ಮತದಾರರು ಆ ಪಕ್ಷವನ್ನು ಸಂಪೂರ್ಣ ಕೈಬಿಟ್ಟಿರುವುದೇ ಕಾರಣ.
ಕಾಂಗ್ರೆಸ್‌ಗೆ ಮುಸ್ಲೀಮರು ಬೆನ್ನು ತಿರುಗಿಸಿದರಾ?
ಕಾಂಗ್ರೆಸ್ ಪಕ್ಷಕ್ಕೊದಗಿದ ಈ ಹೀನ ಸ್ಥಿತಿ ಕಂಡು ಕಾಂಗ್ರೆಸ್ ವಿರೋಧಿ ಪಾಳಯಕ್ಕೆ ಖುಷಿಯಾಗಿರಬಹುದು. ಆದರೆ ಮುಸ್ಲಿಂ ಮತದಾರರಲ್ಲಿ ಆಗುತ್ತಿರುವ ಈ ಅನಿರೀಕ್ಷಿತ ಬದಲಾವಣೆ ದೇಶಹಿತಕ್ಕೆ ಪೂರಕವಾಗಿಲ್ಲ ಎಂಬುದನ್ನು ನಾವ್ಯಾರೂ ಮರೆಯಕೂಡದು. ಕಾಂಗ್ರೆಸ್ ತಮ್ಮ ಸಮುದಾಯದ ಹಿತ ಕಾಪಾಡುತ್ತಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಮತದಾರರು ಆ ಪಕ್ಷಕ್ಕೆ ಬೆನ್ನು ತಿರುಗಿಸಿರುವುದೇನೋ ಸರಿ. ಆದರೆ ಅದೇ ವೇಳೆ ಓವೈಸಿ ತಮ್ಮ ಹಿತರಕ್ಷಕ, ಭಾಗ್ಯದಾತ ಎಂದು ಮುಸ್ಲಿಂ ಮತದಾರರಿಗೆ ಅನ್ನಿಸಲು ಏನು ಕಾರಣ? ಓವೈಸಿಯದು ಹೇಳಿ ಕೇಳಿ ಹೈದರಾಬಾದ್‌ನ ಚಾರ್‌ಮಿನಾರ್ ಮತ್ತು ಸುತ್ತಮುತ್ತಣ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಕ್ಕೆ ಮಾತ್ರ ಸೀಮಿತವಾದ ಪ್ರಾದೇಶಿಕ ಪಕ್ಷ. ಇಂತಹುದೊಂದು ಸಣ್ಣ ಪಕ್ಷ ಇಡೀ ಮುಸ್ಲಿಂ ಸಮುದಾಯದ ಹಿತ ಕಾಪಾಡುವುದಾದರೂ ಹೇಗೆ ಸಾಧ್ಯ? ಇಂತಹ ಅನುಮಾನ ಹಲವರಿಗೆ ಸಹಜ. ಆದರೆ ಅಲ್ಲೇ ಇರುವುದು ಒಳಗುಟ್ಟು. ಶೇ.20ರಷ್ಟು ದೇಶದ ಜನಸಂಖ್ಯೆಗೆ ಏರುತ್ತಿರುವ ಮುಸ್ಲಿಂ ಮತದಾರರ ಮತಗಳನ್ನು ಕ್ರೋಢೀಕರಿಸುತ್ತಾ, ಪ್ರಬಲ ಪಕ್ಷವಾಗಿರುವ ಬಿಜೆಪಿಗೆ ಸೆಡ್ಡು ಹೊಡೆಯುತ್ತಾ, ಮುಂದೊಂದು ದಿನ ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ಕೈಜೋಡಿಸಿ ಕೇಂದ್ರದಲ್ಲಿ ಅಧಿಕಾರಕ್ಕೇರುವುದು ಎಂಐಎಂನ ಮುಂದಿನ ಹಿಡನ್ ಅಜೆಂಡಾ. ಹಾಗಾಗಿಯೇ ಅದು ಜಾಣ ನಡೆ ಅನುಸರಿಸುತ್ತಾ ಸಾಗಿದೆ.
ಓಲೈಕೆ ಮತ್ತು ತುಷ್ಟೀಕರಣ
ಬಿಹಾರದಲ್ಲಿ ಒಟ್ಟು 243 ಸ್ಥಾನಗಳಿದ್ದರೂ ಎಂಐಎಂ ಸ್ಪರ್ಧಿಸಿದ್ದು ಕೇವಲ 20 ಸ್ಥಾನಗಳಿಗೆ ಮಾತ್ರ. ಹೈದರಾಬಾದ್ ಚುನಾವಣೆಯಲ್ಲೂ ಸ್ಪರ್ಧಿಸಿದ್ದು ಕೇವಲ 51 ಸ್ಥಾನಗಳಿಗೆ (ಒಟ್ಟು ಸ್ಥಾನಗಳು 150). ಬಿಹಾರದ ಸೀಮಾಂಚಲ ವಲಯದಲ್ಲಿ ಎಂಐಎಂ ತನ್ನ ಹೆಜ್ಜೆ ಗುರುತುಗಳನ್ನು ಬಲವಾಗಿ ಈಗ ಊರಿದೆ. ಆ ವಲಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಯು, ಆರ್‌ಜೆಡಿ ವಿರುದ್ಧ ಸೆಣಸಿ ಭರ್ಜರಿ ಅಂತರದೊಂದಿಗೆ ಅದು 5 ಸ್ಥಾನ ಗೆದ್ದಿರುವುದು ಇದಕ್ಕೆ ಸಾಕ್ಷಿ. ಹೈದರಾಬಾದ್ ಚುನಾವಣೆಯಲ್ಲಿ ಕೇವಲ 55 ಸ್ಥಾನಕ್ಕೆ ಕುಗ್ಗಿರುವ ಟಿಆರ್‌ಎಸ್ ಅಧಿಕಾರ ಹಿಡಿಯಬೇಕಾದರೆ ಅದಕ್ಕೆ ಎಂಐಎಂನ 44 ಸದಸ್ಯರ ಬೆಂಬಲ ತೀರಾ ಅನಿವಾರ್ಯ. ಟಿಆರ್‌ಎಸ್‌ಗೆ ನಿಜವಾಗಿ ದೇಶಹಿತದ ಕಾಳಜಿ ಇದ್ದಿದ್ದರೆ ಅದು ಬಿಜೆಪಿಯ 48 ಸದಸ್ಯರ ಸಂಖ್ಯಾಬಲದೊಂದಿಗೆ ಪಾಲಿಕೆ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಿತ್ತು. ಆದರೆ ಟಿಆರ್‌ಎಸ್‌ಗೆ ರಾಜಕೀಯ ಓಲೈಕೆ, ಮುಸ್ಲಿಮರ ತುಷ್ಟೀಕರಣ ಬಿಟ್ಟರೆ ದೇಶಹಿತದ ಕಾಳಜಿ ಖಂಡಿತ ಇಲ್ಲ. ಹಾಗಾಗಿಯೇ ಅದು ಈಗ ತನ್ನ ಮಿತ್ರಪಕ್ಷ ಎಂಐಎಂ ಜೊತೆ ಎಲ್ಲ ಬಗೆಯ ರಹಸ್ಯ ಒಪ್ಪಂದ ಮಾಡಿಕೊಂಡು ಪಾಲಿಕೆ ಆಡಳಿತ ಹಿಡಿಯಲು ಮುಂದಾಗಿರುವುದು.
ಬಹಳ ದಿನಗಳ ಹಿಂದೆ ಹೈದರಾಬಾದ್‌ನ ನಿಜಾಮನ ಸಂತತಿಯ ಶನಿ ಸಂತಾನಗಳಾದ ಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿಗಳು ಭಾರತದ ಅಸ್ಮಿತೆಯನ್ನೇ ಅವಮಾನಿಸುವಂತಹ, ಹಿಂದು ಸಮಾಜದ ಶ್ರದ್ಧೆಗೇ ಭಂಗ ತರುವಂತಹ ಹೇಳಿಕೆಗಳನ್ನು ನೀಡಿದ್ದರು. ‘ಪಾಕಿಸ್ತಾನದ ಮುಸ್ಲಿಮರೇ ಬೇರೆ. ಹಿಂದುಸ್ತಾನದಲ್ಲಿರುವ ಮುಸ್ಲಿಮರೇ ಬೇರೆ ಎಂದು ಹಿಂದುಗಳು ಭ್ರಮೆ ಇಟ್ಟುಕೊಳ್ಳುವ ಅಗತ್ಯವಿಲ್ಲ. ಭಾರತ ಪಾಕಿಸ್ತಾನದ ವಿರುದ್ಧ ದಾಳಿಯೆಸಗುವ ದುಸ್ಸಾಹಸ ಮಾಡಿದ್ದಾದರೆ ಆಗ ಭಾರತದಲ್ಲಿರುವ ಎಲ್ಲ 25 ಕೋಟಿ ಮುಸ್ಲಿಮರು ಪಾಕ್ ಪಡೆಯೊಂದಿಗೆ ಕೈ ಜೋಡಿಸಿ ಭಾರತದ ವಿರುದ್ಧ ಹೋರಾಡುತ್ತಾರೆʼ ಎಂದು ಅಸಾದುದ್ದೀನ್ ಅಪ್ಪಣೆ ಕೊಡಿಸಿದ್ದರೆ, ಇನ್ನು ಆತನ ಸೋದರ ಅಕ್ಬರುದ್ದೀನ್ ಓವೈಸಿ ʼಹೈದರಾಬಾದ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 50 ದಾಟಿದೆ. ಇಲ್ಲಿ ನಾವೇ ಬಹುಸಂಖ್ಯಾತರು. ಹಾಗಾಗಿ ರಾಮನವಮಿ ಮತ್ತು ಹನುಮಾನ್ ಜಯಂತಿ ಆಚರಣೆ ವಿರುದ್ಧ ಇಲ್ಲಿನ ಆಡಳಿತ ನಿಷೇಧ ಹೇರಬೇಕು. ಚಾರ್‌ಮಿನಾರ್ ಬಳಿ ಇರುವ ಭಾಗ್ಯಲಕ್ಷ್ಮೀ ದೇಗುಲವನ್ನು ಸದ್ಯದಲ್ಲೇ ನಿರ್ನಾಮ ಮಾಡುವ ತಾಕತ್ತು ನಮಗಿದೆʼ ಎಂದು ಆರ್ಭಟಿಸಿದ್ದಾನೆ.
ಏನಿದು ಅವರ ಹಿಡನ್ ಅಜೆಂಡಾ?
ಓವೈಸಿಗಳ ಬದ್ಧತೆ ಯಾವುದಕ್ಕೆ, ಹಿಡನ್ ಅಜೆಂಡಾ ಏನು ಎನ್ನುವುದಕ್ಕೆ ಈ ಹೇಳಿಕೆಗಳೇ ಸಾಕಲ್ಲವೇ? ವಂದೇ ಮಾತರಂ ಹೇಳುವುದಿಲ್ಲ. ಭಾರತ್ ಮಾತಾಕೀ ಜೈ ಎಂದು ಎಂದಿಗೂ ಘೋಷಿಸುವುದಿಲ್ಲ ಎಂಬುದಾಗಿ ಇದೇ ಅಸಾದುದ್ದೀನ್ ಓವೈಸಿ ಈ ಹಿಂದೆ ಬಹಿರಂಗವಾಗಿ ಘೋಷಿಸಿದ್ದ. ಇಂತಹ ದೇಶದ್ರೋಹಿ ಮುಖಂಡನ ಹಿಂದೆ ಈಗ ಇಡೀ ದೇಶದ ಬಹುತೇಕ ಮುಸ್ಲಿಮರು ಹೆಜ್ಜೆ ಹಾಕಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಓವೈಸಿಯದೇ ಮಾನಸಿಕತೆಯ ಎಸ್‌ಡಿಪಿಐ, ಪಿಎಫ್‌ಐ ಮೊದಲಾದ ಮುಸ್ಲಿಂ ಸಂಘಟನೆಗಳು ಸಾಮಾಜಿಕ ಸಾಮರಸ್ಯ ಕೆಡಿಸುವಲ್ಲಿ, ಸಮುದಾಯಗಳ ನಡುವೆ ಕಿಡಿ ಹೊತ್ತಿಸುವಲ್ಲಿ ನಿರತವಾಗಿರುವುದಕ್ಕೆ ಪುರಾವೆಗಳು ಸಾಕಷ್ಟು. ಶಾಂತಿಯಿಂದಿದ್ದ ಶಿವಮೊಗ್ಗದಲ್ಲಿ ಇತ್ತೀಚೆಗೆ ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಸಾಮಾಜಿಕ ಶಾಂತಿಗೆ ಹುಳಿ ಹಿಂಡಿದ ಘಟನೆ ಇತ್ತೀಚಿನ ಪುರಾವೆ. ಆದರೆ ಕೆಲವು ಮುಗ್ದ ಹಿಂದುಗಳು ಇದನ್ನು ಹಿಂದು-ಮುಸ್ಲಿಂ ಗಲಭೆ ಎಂದು ಈ ಘಟನೆಗೆ ನಾಮಕರಣ ಮಾಡಿರುವುದು ನಾಚಿಕೆಗೇಡು. ಹಿಂದುಗಳು ಯಾವ ಗಲಭೆಗೂ ಪ್ರಚೋದನೆ ನೀಡಿಲ್ಲ. ಆದರೆ ಮುಸ್ಲಿಂನ ಕೆಲ ಗೂಂಡಾಗಳೇ ಗಲಭೆಗೆ ಪ್ರಚೋದನೆ ನೀಡಿರುವುದು ಹಗಲಿನಷ್ಟು ಸ್ಪಷ್ಟ. ಹಾಗಿರುವಾಗ ಹಿಂದು-ಮುಸ್ಲಿಂ ಗಲಭೆ ಎಂಬ ಹಣೆಪಟ್ಟಿ ಹಚ್ಚುವುದು ಸಮಂಜಸವೇ?
ಇನ್ನು ಲವ್ ಜಿಹಾದ್ ಪ್ರಕರಣಗಳಂತೂ ದೇಶದಾದ್ಯಂತ ಎಗ್ಗಿಲ್ಲದೆ ನಡೆಯುತ್ತಲೇ ಇವೆ. ತಮ್ಮದೇ ಪತ್ರಿಕೆ, ಟಿವಿ ಚಾನಲ್‌ಗಳನ್ನು ಆರಂಭಿಸಿ, ಹಿಂದು ಸಮಾಜದ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವ ಷಡ್ಯಂತ್ರವನ್ನು ಕೆಲವು ಪಟ್ಟಭದ್ರ ಮುಸ್ಲಿಂ ಹಿತಾಸಕ್ತಿಗಳು ನಡೆಸಿವೆ. ಇಂತಹ ಷಡ್ಯಂತ್ರಗಳಿಗೆ ಓವೈಸಿಗಳು, ಸಲ್ಮಾನ್ ಖುರೇಷಿಗಳು, ಬಾಲಿವುಡ್‌ನ ಸಿಲೆಬ್ರಿಟಿ ಖಾನ್‌ಗಳು, ಇವರಲ್ಲದೆ ಎಡಪಂಥೀಯ ನಕಲಿ ಪ್ರಗತಿಪರರು ಮುಂತಾದವರು ಆಗಿಂದಾಗ್ಗೆ ತುಪ್ಪವೆರೆಯುತ್ತಲೇ ಇರುತ್ತಾರೆ.
ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನೇ ದುರುಪಯೋಗ ಪಡಿಸಿಕೊಂಡು ಭಾರತದ ಮಾನ ಹರಾಜು ಹಾಕುವ ದುಷ್ಟಶಕ್ತಿಗಳು ಒಳಗಿಂದೊಳಗೇ ನಿರಂತರ ಪಿತೂರಿ ನಡೆಸುತ್ತಿವೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಆ ದುಷ್ಟ ಶಕ್ತಿಗಳಿಗೆ ನಾಮ ಹಲವು; ಆದರೆ ಉದ್ದೇಶ ಮಾತ್ರ ಒಂದೇ.
ದುಷ್ಟಶಕ್ತಿಗಳ ವಿರುದ್ಧ ಹಿಂದು ಸಮಾಜ ನಿರಂತರ ಜಾಗರೂಕತೆ ವಹಿಸಿ, ಎಚ್ಚರ ತಪ್ಪದೆ ಇರಬೇಕು. ಎಚ್ಚರ! ಎಚ್ಚರ! ಎಚ್ಚರ!!!
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
Lead photo courtesy: Wikipedia