Lead Photo by CDC from Pexels
ನವದೆಹಲಿ: ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಅಧ್ಯಕ್ಷ ಸಿ.ಜಿ.ಸೋಮಾನಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಡಿಸಿಜಿಐ ಅಧ್ಯಕ್ಷ ಸಿ.ಜಿ.ಸೋಮಾನಿ ಅವರು ಭಾನುವಾರ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು.
ಕೋವ್ಯಾಕ್ಸೀನ್ ಹಾಗೂ ಕೋವಿಶೀಲ್ಡ್ ಎರಡು ಕೊರೊನಾ ಲಸಿಕೆಗಳನ್ನು ತುರ್ತು ಸಮಯದಲ್ಲಿ ಬಳಸಿಕೊಳ್ಳಲು ತಜ್ಞರ ಸಮಿತಿಯ ಶಿಫಾರಸ್ಸಿನ ಮೇಲೆ ಅನುಮತಿ ನೀಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸೇರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನ ಲಸಿಕೆಗಳಿಗೆ ಡಿಸಿಜಿಐ ಅನುಮೋದನೆ ನೀಡುತ್ತಿರುವುದು ಆರೋಗ್ಯಕರ ಮತ್ತು ಕೋವಿಡ್ ಮುಕ್ತ ರಾಷ್ಟ್ರದತ್ತ ನಮ್ಮ ಪ್ರಯಣವನ್ನು ವೇಗಗೊಳಿಸಲಿದೆ, ನಮ್ಮ ಶ್ರಮಶೀಲ ವಿಜ್ಞಾನಿಗಳಿಗೆ ಅವರ ಹೊಸತನದ ಸಂಶೋಧನೆಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ಬ್ರಿಟನ್‌ನ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾದ ವಿಜ್ಞಾನಿಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ಪ್ರಯೋಗ ಮಾಡುತ್ತಿದೆ. ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಿವೆ.