ಮೈಸೂರು: ವೀಕ್ ಚೀಫ್ ಮಿನಿಸ್ಟರ್ಗೆ ಮಾತ್ರ ಯಾರಾದರೂ ಬ್ಲಾಕ್ಮೇಲ್ ಮಾಡ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲರಿಗೂ ಹಾಗೆ ಬ್ಲಾಕ್ಮೇಲ್ ಮಾಡಲು ಆಗಲ್ಲ. ವೀಕ್ ಚೀಫ್ ಮಿನಿಸ್ಟರ್ಗೆ ಮಾತ್ರ ಬ್ಲಾಕ್ಮೇಲ್ ಮಾಡ್ತಾರೆ ಎಂದರು.
ಸಿಡಿ ಬ್ಲಾಕ್ಮೇಲ್ ಬಗ್ಗೆ ಮುಖ್ಯಮಂತ್ರಿ ಕ್ರಿಮಿನಲ್ ಕೇಸ್ ದಾಖಲು ಮಾಡಲಿ ಎಂದ ಅವರು, ಅವರ ಪಕ್ಷದವರೇ ಈ ಮಾತುಗಳನ್ನು ಹೇಳಿದ್ದಾರೆ, ಅರೋಪ ಮಾಡಿದ್ದಾರೆ. ನಾವೇನು ಆರೋಪ ಮಾಡುತ್ತಿಲ್ಲ ಎಂದು ತಿಳಿಸಿದರು.
ಅವರ ಪಕ್ಷದವರೇ ಆರೋಪ ಮಾಡ್ತಿದ್ದಾರೆ ಅಂದರೆ ಅದರಲ್ಲಿ ಸತ್ಯ ಇದೆ. ಸಿಎಂ ಬ್ಲಾಕ್ಮೇಲ್ಗೆ ಒಳಗಾಗಿದ್ದಾರೋ ಅಥವಾ ಒತ್ತಡಕ್ಕೆ ಒಳಗಾಗಿದ್ದಾರೋ ಅನ್ನೋದು ನಂಗೆ ಗೊತ್ತಿಲ್ಲ. ಅದಕ್ಕೆ ಕ್ರಿಮಿನಲ್ ಕೇಸ್ ದಾಖಲು ಮಾಡಲಿ ಎಂದು ಹೇಳುತ್ತಿದ್ದೇನೆ ಎಂದರು.
ಪಕ್ಷೇತರನಾಗಿ ಕಾಂಗ್ರೆಸ್ ಪಕ್ಷದ ಸಹಾಯದೊಂದಿಗೆ ಗೆದ್ದಿದ್ದ ಮುಳಬಾಗಿಲಿನ ಪಕ್ಷೇತರ ಶಾಸಕ ನಾಗೇಶ್ರನ್ನು ಕೈಬಿಟ್ಟಿದ್ದಾರೆ. ಅವರನ್ನು ಯಾವ ಕಾರಣಕ್ಕೆ ಬಿಟ್ಟಿದ್ದಾರೆ ಎಂದು ಹೇಳಿಲ್ಲ. ಈಗ ಮುನಿರತ್ನಗೆ ಸಚಿವ ಸ್ಥಾನ ನೀಡಿಲ್ಲ. ಕಾನೂನು ತೊಡಕಿದೆ ಎಂದು ಗೊತ್ತಿದ್ದರೂ ಯಾಕೆ ಆತನನ್ನು ಪಕ್ಷಕ್ಕೆ ಕರೆದುಕೊಂಡರು? ಇನ್ನು ಆ ವಿಶ್ವನಾಥ್, ಪಾಪ.. ಬಾಯಿ ಬಡ್ಕೊತ್ತಿದ್ದಾನೆ ಎಂದು ವ್ಯಂಗ್ಯವಾಡಿದರು.