ಚಿಕ್ಕಬಳ್ಳಾಪುರ: ನಗರದ ಸರ್ವತೋಮುಖ ಅಭಿವೃದ್ದಿಯೇ ನಮ್ಮ ಗುರಿ ಎಂದಿರುವ ನಗರಸಭೆ ಅದ್ಯಕ್ಷ ಆನಂದರೆಡ್ಡಿ ಬಾಬು, ಸ್ವಚ್ಛ ಚಿಕ್ಕಬಳ್ಳಾಪುರವನ್ನು ರೂಪಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ನಗರದ ವಿವಿಧ ಬಡಾವಣೆಗಳ ಸಿಸಿ ರಸ್ತೆಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಅವರು, ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ನಗರವು ಅತ್ಯಂತ ಸುಂದರ ಹಾಗೂ ಸ್ವಚ್ಛ ನಗರವನ್ನಾಗಿ ರೂಪಿಸುವುದೇ ನಗರಸಭೆಯ ಗುರಿ. ಸಚಿವ ಡಾ.ಕೆ.ಸುಧಾಕರ್ ಅವರು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು ಅವರ ಮಾರ್ಗದರ್ಶನದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ಕಾಮಗಾರಿಗಳು ಪರಿಣಾಮಕಾರಿಯಾಗಿ, ಗುಣಮಟ್ಟದಿಂದ ಕರ‍್ಯಗತವಾಗಬೇಕು ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ನಿಗದಿüತ ಕಾಲಮಿತಿüಯೊಳಗೆ ಎಲ್ಲ ಕೆಲಸಗಳನ್ನು ಮುಗಿಸಬೇಕೆಂದು ತಾಕೀತು ಮಾಡಬೇಕು ಎಂದರು.
39 ಲಕ್ಷ ರೂ.ಗಳಲ್ಲಿ ನಗರದ 7,8,9 ಹಾಗೂ 24ನೇ ವಾರ್ಡುಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಗೆ ಭೂಮಿಪೂಜೆ ನೆರವೇರಿದ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಯತೀಶ್, ಸುಬ್ರಹ್ಮಣ್ಯಾಚಾರಿ, ಮಟಮಪ್ಪ, ಮಂಜುನಾಥಾಚಾರಿ, ಪಾಪು, ಸತೀಶ್, ಮುಖಂಡರಾದ ಕೆ.ಎಲ್.ಸೂರಿ, ಸರ್ವಿಸ್ ಸ್ಟೇಷನ್ ರವಿ, ಕಂದವಾರ ಅನಿಲ್, ನಗರಸಭೆ ಅಧಿಕಾರಿಗಳಾದ ಎಇಇ ಮಾಧವನ್, ಎಂಜನಿಯರ್ ನರಸೇಗೌಡ ಮುಂತಾದವರು ಇದ್ದರು.