ಹೊಸಕೋಟೆ/ಬೆಂಗಳೂರು: ಹೊಸಕೋಟೆಯಲ್ಲಿ ರಾಜಕೀಯ ಮೇಲಾಟ ಶುರುವಾಗಿದ್ದು, ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಬಚ್ಚೇಗೌಡ ನಡವಿನ ತಿಕ್ಕಾಟ ಇದೀಗ ಬೀದಿ ರಂಪವಾಗಿದೆ.
ಕ್ಷೇತ್ರದಲ್ಲಿ ಶನಿವಾರ ಸರಕಾರಿ ಕಾಮಗಾರಿಯೊಂದಕ್ಕೆ ಭೂಮಿಪೂಜೆ ನಡೆಯುವ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನ ಮಾಡದೇ ಶಿಷ್ಟಾಚಾರ ಉಲ್ಲಂಘಿಸಿದ ಕಾರಣಕ್ಕೆ ಶರತ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಅವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಕೆರಳಿದ ಶಾಸಕ ಶರತ್ ಬಚ್ಚೇಗೌಡ ಬೆಂಗಲಿಗರ ಜತರ ಪ್ರತಿಭಟನೆ ನಡೆಸಿದರಲ್ಲದೆ, ರಸ್ತೆಯಲ್ಲೇ ಕೂತು ಧರಣಿ ನಡಸಿದರು.
ಏನಿದು ಬಿಕ್ಕಟ್ಟು?
ಹೊಸಕೋಟೆಯಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾಮಕಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ನಗರಸಭೆಯಿಂದ ಸಚಿವರನ್ನು ಮಾತ್ರ ಆಹ್ವಾನಿಸಿ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ಅರೋಪಿಸಿ ಸ್ಥಳದಲ್ಲಿ ಶಾಸಕ ಶರತ್ ಬಚ್ಚೇಗೌಡರ ಬೆಂಬಲಿಗರು ಪ್ರತಿರೋಧ ವ್ಯಕ್ತಪಡಿಸಿದರು. ಸಚಿವ ಎಂಟಿಬಿ ನಾಗರಾಜ್ ಕಾಮಗಾರಿ ಭೂಮಿ ಪೂಜೆ ಅಗಮಿಸಿದ ವೇಳೆ ಶಾಸಕರು ಆಕ್ರೋಶ ಕಟ್ಟೆಯೊಡೆಯಿತು. ಸ್ಥಳಕ್ಕೆ ಸಚಿವ ಎಂಟಿಬಿ ನಾಗರಾಜ್ ಅಗಮಿಸುತ್ತಿದ್ದಂತೆ ಶರತ್ ಬಚ್ಚೇಗೌಡ, ಸಚಿವ ಎಂಟಿಬಿ ನಾಗರಾಜ್ ಬೆಂಬಲಿಗರ ನಡುವೆ ಪರಸ್ಪರ ತಮ್ಮ ನಾಯಕರ ಪರ ಘೋಷಣೆ ಮೊಳಗಿತು. ಈ ಸಂದರ್ಭದಲ್ಲಿ ತೀವ್ರ ನೂಕಾಟ, ತಳ್ಳಾಟ ನಡೆದು ಉದ್ರಿಕ್ತ ಪರಿಸ್ಥಿತಿ ಸೃಷ್ಟಿಯಾಯಿತು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.
ಧರಣಿ ಕೂತ ಶರತ್ ಬಚ್ಚೇಗೌಡ
ತಮ್ಮ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿ ಶಾಸಕ ಶರತ್ ಬಚ್ಚೇಗೌಡ ತಮ್ಮ ಬೆಂಬಲಿಗರ ಜತೆಯಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು; ನಗರಸಭೆ ಶಾಸಕನಾದ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಹಾಗೆ ಮಾಡದೇ ಶಿಷ್ಟಾಚಾಋವನ್ನು ಉಲ್ಲಂಘಿಸಿದೆ. ಈ ಮೂಲಕ ನನ್ನ ಹಕ್ಕುಚ್ಯುತಿಯಾಗಿದೆ ಎಂದು ಗುಡುಗಿದರು. ಆದರೆ ಸಚಿವರು ಮಾತ್ರ ಪೂಜೆ ಮುಗಿಸಿಕೊಂಡು ತಮ್ಮ ಪಾಡಿಗೆ ತಾವು ಹೊರಟರು.