• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಸ್ಥಾವರಕ್ಕಳಿವುಂಟು, ಜಂಗಮಕ್ಕಲ್ಲ ಎಂಬ ಬಸವವಾಣಿಗೆ ನಿದರ್ಶನ; ಸತ್ಯದ ಜೊತೆಯಲ್ಲೇ ಬದುಕಿ ರಾಮ ಸ್ಮರಣೆಯಲ್ಲೇ ಅಂತಿಮ ಕ್ಷಣವನ್ನೂ ಮುಗಿಸಿದ ಮಹಾತ್ಮರು ಗೋಡ್ಸೆ ಗುಂಡಿಗೆ ಬಲಿಯಾಗಿ 73 ವರ್ಷ

cknewsnow desk by cknewsnow desk
January 30, 2021
in CKPLUS, NATION, STATE
Reading Time: 2 mins read
0
ಸ್ಥಾವರಕ್ಕಳಿವುಂಟು, ಜಂಗಮಕ್ಕಲ್ಲ ಎಂಬ ಬಸವವಾಣಿಗೆ ನಿದರ್ಶನ; ಸತ್ಯದ ಜೊತೆಯಲ್ಲೇ ಬದುಕಿ ರಾಮ ಸ್ಮರಣೆಯಲ್ಲೇ ಅಂತಿಮ ಕ್ಷಣವನ್ನೂ ಮುಗಿಸಿದ ಮಹಾತ್ಮರು ಗೋಡ್ಸೆ ಗುಂಡಿಗೆ ಬಲಿಯಾಗಿ 73 ವರ್ಷ
933
VIEWS
FacebookTwitterWhatsuplinkedinEmail
  • ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಾಥೋರಾಮ್‌ ಗೋಡ್ಸೆ ಎಂಬ ಹಂತಕನ ಗುಂಡಿಗೆ ಬಲಿಯಾಗಿ ಇಂದಿಗೂ 73 ವರ್ಷ. ಸತ್ಯದ ಜತೆಯಲ್ಲೇ ತಮ್ಮ ಅನನ್ಯ ಬದುಕು ಮುಗಿಸಿದ ಅವರು ಕೊನೆಕ್ಷಣವನ್ನೂ ರಾಮ ಸ್ಮರಣೆಯಲ್ಲೇ ಮುಗಿಸಿದರು. ಆ ಮಹಾತ್ಮನ ವಿಚಾರಗಳು ಇವತ್ತಿಗಷ್ಟೇ ಅಲ್ಲ, ಯಾವತ್ತಿಗೂ ಅಜರಾಮರ. ಖ್ಯಾತ ಲೇಖಕರೂ ಆದ ಉಪನ್ಯಾಸಕ ಡಾ.ಎಚ್.ಎಸ್.ಗುರುಪ್ರಸಾದ ಮತ್ತೊಮ್ಮೆ ಮಹಾತ್ಮರನ್ನು ನಮ್ಮ ಮುಂದೆ ಸಾಕ್ಷಾತ್ಕರಿಸಿದ್ದಾರೆ.

ಗಾಂಧಿ ಎಂಬ ಬೆಳಕು ಜಗತ್ತಿನಾದ್ಯಂತ ತೋರಿದ ದರ್ಶನದಿಂದಾಗಿ ಎಷ್ಟೋ ಜನರ ಬಾಳಲಿ ನಂದಾದೀಪವಾಗಿ ಬೆಳಗಿದೆ. ಇಂದಿಗೆ ಬಾಪು ನಮ್ಮನ್ನು ಅಗಲಿ 73 ವರ್ಷವಾಯಿತು. ಇಂದಿಗೂ ಆ ಬೆಳಕು ಪ್ರಜ್ವಲಿಸುತ್ತಲೇ ಇದೆ. ಗಾಂಧೀಜಿಯ ಉದಾತ್ತ ಚಿಂತನೆಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುವುದು ಈ ಲೇಖನದ ಉದ್ದೇಶ. ಗಾಂಧೀಜಿಯವರ ಮುಖ್ಯಗುಣ ಪಾರದರ್ಶಕತೆ ಆಗಿತ್ತು. ಹೇಳಿದ್ದನ್ನೇ ಮಾಡುವುದು, ಮಾಡಿದ್ದನ್ನೇ ಹೇಳುವುದು. ಈ ಒಂದು ವಿಶೇಷ ಗುಣದಿಂದಲೇ ಗಾಂಧೀಜಿ ಅತ್ಯಂತ ಜನಪ್ರಿಯ ನಾಯಕರಾಗಿದ್ದರು.

ಒಂದು ಸಣ್ಣ ಗುಂಪನ್ನು ಹತೋಟಿಯಲ್ಲಿ ಇಡುವುದು ಕಷ್ಟವಾಗಿರುವಾಗ, ಒಂದೇ ಒಂದು ಕರೆಯಿಂದ ಇಡೀ ದೇಶವನ್ನೇ ಸತ್ಯಾಗ್ರಹಕ್ಕೆ ಅಣಿ ಮಾಡುತ್ತಿದ್ದರು ಎಂಬ ಸತ್ಯ ಅವರ ನಾಯಕತ್ವ ಗುಣವನ್ನು ಬಿಂಬಿಸುತ್ತದೆ. ಯಶಸ್ವಿ ರಾಜಕೀಯ ನಾಯಕರಿಗಿರಬೇಕಾದ ಮುತ್ಸದ್ದಿತನ, ದೂರದೃಷ್ಟಿ ಅವರಲ್ಲಿತ್ತು.

ಶೀಲವಿಲ್ಲದ ಶಿಕ್ಷಣ ತಪ್ಪು

ಗಾಂಧೀಜಿಯು ಶಿಕ್ಷಣಕ್ಕೆ ಹೆಚ್ಚಿನ ಪಾಮುಖ್ಯತೆ ಕೊಡುತ್ತಿದ್ದರು. ಶೀಲವಿಲ್ಲದ ಶಿಕ್ಷಣ ತಪ್ಪು ಎಂದು ಭಾವಿಸಿದ್ದರು. ಆದರೆ ನಾವುಗಳು ಇಂದು ನಮ್ಮ ಶಿಕ್ಷಣರಂಗದಲ್ಲಿ, ಮಕ್ಕಳಿಗೆ ಬರೀ ‘ಮಾಹಿತಿ’ಯನ್ನು ಕೊಡುತ್ತಿದ್ದೇವೆ. ಒಬ್ಬ ಆಂಗ್ಲ ಭಾಷೆಯ ಲೇಖಕನ ಪ್ರಕಾರ, Todays education is, information, information, information but no trasformation. ಗಾಂಧೀಜಿ ನಂಬಿದ್ದ ಜೀವನ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ನಮಗೆ ಬೇಕಾಗಿದೆ. ಮನಃ ಪರಿವರ್ತನೆಯಾಗುವಂತಹ, ಎಲ್ಲ ಸಂದರ್ಭಗಳಲ್ಲಿ ಜೀವನವನ್ನು ಎದುರಿಸುವ ಧೈರ್ಯ ಕೊಡುವ ಶಿಕ್ಷಣ ನಮಗೆ ಬೇಕಾಗಿದೆ. ನಿಯತ್ತು, ಪ್ರಾಮಾಣಿಕತೆ, ನೀತಿತತ್ವ, ಇಂದು ಸವಕಲು ನಾಣ್ಯಗಳಾಗಿವೆ. ‘ಎಲ್ಲರೂ ಇರುವುದು ಹಾಗೇರೀ..’ ಎಂದು ಗೊಣಗುತ್ತೇವೆ. ಶಿಕ್ಷಣದ ಜೊತೆಗೆ, ಮಕ್ಕಳಿಗೆ ವಿವಿಧ ರಂಗಗಳ ತರಬೇತಿ ಕೊಡುವುದು, ಸರ್ವಾಂಗೀಣ ಪ್ರಗತಿಯತ್ತ ಮಕ್ಕಳನ್ನು ಕೊಂಡೊಯ್ಯುವುದು ಅತ್ಯಗತ್ಯ ಎಂದು ಗಾಂಧೀಜಿ ನಂಬಿದ್ದರು.

ಯಾವುದೇ ಶಾಲಾ ಕಾಲೇಜಿನಲ್ಲಿ ಆಟಕ್ಕೆ, ದೈಹಿಕ ಕಸರತ್ತಿಗೆ ಅವಕಾಶಗಳಿರಬೇಕು. ಮಕ್ಕಳ ಮನಸ್ಸು ಅರಳುವುದರ ಬಗ್ಗೆ ಶಿಕ್ಷಕರು ವಿಚಾರ ಮಾಡಬೇಕು ಎಂದು ಮನಶಾಸ್ತ್ರಜ್ಞರಂತೆ ಗಾಂಧೀಜಿ ಚಿಂತಿಸುತ್ತಿದ್ದರು. ಬಾಲ್ಯದಲ್ಲಿ ಬಿತ್ತಿದ ಮೌಲ್ಯಗಳು ದೊಡ್ಡವರಾದ ಮೇಲೆ ಅವರ ವ್ಯಕ್ತಿತ್ವ ಬೆಳೆಯಲು ಸಹಕಾರಿಯಾಗುತ್ತದೆ ಎಂಬ ಅಂಶ ಅವರಿಗೆ ಗೊತ್ತಿತ್ತು.

ಔದ್ಯೋಗಿಕರಣದ ನೆಪದ ಗುಲಾಮಗಿರಿಗೆ ವಿರೋಧ

ನಮ್ಮಲ್ಲಿ ಅನೇಕರು, ಗಾಂಧೀಜಿ ಔದ್ಯೋಗಿಕರಣವನ್ನು ವಿರೋಧಿಸುತ್ತಿದ್ದರು ಎಂದು ಪ್ರತಿಪಾದಿಸುತ್ತಾರೆ. ಆದರೆ, ಗಾಂಧೀಜಿ ಔದ್ಯೋಗಿಕರಣದ ನೆಪದಲ್ಲಿ ಬರುವ ಗುಲಾಮಗಿರಿಯನ್ನು ವಿರೋಧಿಸುತ್ತಿದ್ದರು. ಗ್ರಾಮಗಳಲ್ಲಿ ಗುಡಿ ಕೈಗಾರಿಕೆ, ಸಣ್ಣ ಉದ್ಯೋಗಳಿಗೆ ಸದಾ ಅವರ ಬೆಂಬಲವಿತ್ತು, ಭಾರತ ನಿಜವಾಗಿಯೂ ಹಳ್ಳಿಗಳ ದೇಶ. ಭಾರತದ ನಿಜವಾದ ಶಕ್ತಿ ಹಳ್ಳಿಯಲ್ಲಿದೆ. ಕೈಗಾರಿಕೆ ಹಳ್ಳಿಯಿಂದ ಬೆಳೆದು ಬಂದರೆ ಇಡೀ ದೇಶವೇ ಕೈಗಾರಿಕೀಕರಣದತ್ತ ಮುಖಮಾಡಿ ನಿಲ್ಲುವುದೆಂದು ಅವರು ಭಾವಿಸಿದ್ದರು. ಹೀಗಾಗಿ ರಾಮರಾಜ್ಯದ ಪರಿಕಲ್ಪನೆಯನ್ನು ಕುರಿತು ಚಿಂತಿಸುತ್ತಿದ್ದರು.

ಹಳ್ಳಿಗಳಿಗೆ ಅಧಿಕಾರ ಬಂದರೆ ಹಳ್ಳಿಯ ಜನ ತಮ್ಮ ಊರು, ಆರೋಗ್ಯ, ನೈರ್ಮಲ್ಯದ ಬಗೆಗೆ ತಾವೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹೀಗಾದಾಗ ಇಡೀ ದೇಶವೇ ರಾಮ ರಾಜ್ಯವಾಗಬಹುದೆಂದು ಅವರು ವಿಚಾರ ಮಾಡಿದ್ದರು. ಒಂದು ಹಳ್ಳಿಯಲ್ಲಿ ನಡೆಯಬಹುದಾದ ಕೈಗಾರಿಕೆ, ಅದಕ್ಕೆ ಕಚ್ಚಾಮಾಲಿನ ಪೂರೈಕೆ ಇವುಗಳ ಬಗ್ಗೆ ಸ್ಥಳೀಯ ನಾಗರಿಕರು ನಿರ್ಣಯ ತೆಗೆದುಕೊಳ್ಳಬೇಕೆಂದು ಅವರ ಕಲ್ಪನೆಯಾಗಿತ್ತು.

Courtesy: Wikipedia

ಮಹಾತ್ಮರಿಗೆ ಸತ್ಯವೇ ಉಸಿರಾಗಿತ್ತು

ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯದ ಬೊಧನೆಗಳು ಜನಜನಿತ. ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಸತ್ಯ ಮತ್ತು ಅಹಿಂಸೆಗಳು, ತಲೆತಲಾಂತರದಿಂದ ಬಂದ ನೀತಿ ಬೋಧನೆಗಳಾಗಿವೆ. ಅದರಲ್ಲಿ ನಾನು ಹೊಸದಾಗಿ ಹೇಳಿರುವುದು ಏನೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸತ್ಯ ಮತ್ತು ಅಹಿಂಸೆಗಳು, ಗಾಂಧೀಜಿಯವರ ಮುಖವಾಡ ಮಾತ್ರ ಆಗಿರಲಿಲ್ಲ. ಅವರು ಅದರಂತೆ ಬದುಕಿ ತೋರಿಸಿದ್ದರು. ಅದಕ್ಕೇ ತಮ್ಮ ಆತ್ಮಚರಿತ್ರೆಗೆ ಅವರು ‘ಸತ್ಯದೊಂದಿಗೆ ನನ್ನ ಪ್ರಯೋಗ’ ಎಂದು ಕರೆದರು.

ಈ ಸತ್ಯ ಮತ್ತು ಅಹಿಂಸೆಯೊಂದಿಗೆ ತಮ್ಮ ಕೊನೆಯ ಉಸಿರಿರುವವರೆಗೆ ಪ್ರಯೋಗ ನಡೆಸಿದರು.‘ಜಗತ್ತಿನಲ್ಲಿ ಸತ್ಯ ಹೇಳುವವನು ನಾನೊಬ್ಬನೇ’ ಎಂದು ಹೇಳುವ ಮಹಾನ್ ಸುಳ್ಳುಬುರುಕರಿರುವ ಈ ಕಾಲದಲ್ಲಿ, ಸತ್ಯವನ್ನು ಜೀವನದುದ್ದಕ್ಕೂ ಪರಿಪಾಲಿಸಿದ ಗಾಂಧೀಜಿ ತಮ್ಮ ಈ ಕ್ರಮವನ್ನು ‘ಪ್ರಯೋಗ’ ಎಂದು ಕರೆದಿರುವುದನ್ನು ಚಿಂತಿಸಬೇಕು. ಸತ್ಯ ಮತ್ತು ಅಹಿಂಸೆಗಳು ಇವತ್ತಿಗೂ ಪ್ರಸ್ತುತ. ಅವರ ಅಹಿಂಸಾವಾದದ ಚಳವಳಿಗೆ ಬ್ರಿಟೀಷ್ ಸಾಮ್ರಾಜ್ಯವೇ ಬೆದರಿತ್ತು ಎಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಇಂತಹ ಅಹಿಂಸೆಯ ಪರಿಕಲ್ಪನೆಯನ್ನು ರಾಜಕೀಯ ಹೋರಾಟಕ್ಕೆ ಬಳಸಿಕೊಂಡದ್ದು ಗಾಂಧೀಜಿಯವರ ಜಾಣ್ಮೆಗೆ ಉದಾಹರಣೆ.

ಉಪವಾಸ ಮತ್ತು ಸತ್ಯಾಗ್ರಹ

ಗಾಂಧೀಜಿಯವರ ಸತ್ಯಾಗ್ರಹದ ಕಲ್ಪನೆ ತುಂಬಾ ವಿಶಾಲವಾಗಿದೆ. ಸತ್ಯಕ್ಕಾಗಿ ಆಗ್ರಹ ಮತ್ತು ನಮ್ಮ ಹಕ್ಕಿಗಾಗಿ ಆಗ್ರಹ ಮಾಡುವುದನ್ನು ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟಿದ್ದರು. ಉಪವಾಸದಂತಹ ಕ್ರಿಯೆಯಿಂದ ಅಧಿಕಾರದಲ್ಲಿದ್ದವರಿಗೆ ಕಂಪನ ಹುಟ್ಟಿಸಬಹುದೆಂದು ತೋರಿಸಿಕೊಟ್ಟರು. ಆದರೆ ಇವತ್ತು ಇಡೀ ಸತ್ಯಾಗ್ರಹದ ಪರಿಕಲ್ಪನೆ ಅಪಹಾಸ್ಯದ ಮಟ್ಟಕ್ಕಿಳಿದಿರುವುದನ್ನು ನಾವು ಕಾಣಬಹುದು.

ದಕ್ಷಿಣ ಆಫ್ರಿಕಾದಲ್ಲಿ ಈ ಕಲ್ಪನೆ ಅವರ ಮನದಲ್ಲಿ ಮೂಡಿದ್ದು, ಅದನ್ನು ಮರಳಿ ಭಾರತಕ್ಕೆ ಬಂದಾಗ ಬ್ರಿಟೀಷರ ಮೇಲೆ ಪ್ರಯೋಗಿಸಿದ್ದು ನಮಗೆಲ್ಲ ಗೊತ್ತೇ ಇದೆ. ಗಾಂಧೀಜಿ ಭಾರತಕ್ಕೆ ಮರಳಿ ಬಂದಾಗ ಸ್ವಾತಂತ್ರ್ಯ ಸಂಗ್ರಾಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಹೋರಾಟದ ವೇದಿಕೆ ಸಿದ್ಧವಾಗಿತ್ತು, ಆಫ್ರಿಕಾದಲ್ಲಿ ಕಲಿತು ಬಂದದ್ದನ್ನೇ ಇಲ್ಲಿ ಪ್ರಯೋಗಿಸಿದ ಗಾಂಧೀಜಿ ಅದರಲ್ಲಿ ಯಶಸ್ವಿಯಾದರು.

ಗಾಂಧೀಜಿಯವರ ಕರ್ಮದ ಬಗೆಗಿನ ಚಿಂತನೆಯೂ ಉನ್ನತವಾಗಿತ್ತು. ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತಿದ್ದ ಅವರು, ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುವದರ ಮಹತ್ವವನ್ನು ಕುರಿತು ಹೇಳುತ್ತಿದ್ದರು. ಅವರು ವಿಚಾರ ವಿನಿಮಯ ಮಾಡುತ್ತಿರಲಿ ಅಥವಾ ಬಿಡುವಾಗಿರಲಿ ಸದಾ ಚರಕದ ಮುಂದೆ ಕುಳಿತು ನೇಯುತ್ತಿದ್ದರು. ಚರಕ ಮತ್ತು ಖಾದಿ ಅವರಿಗೆ ಸ್ವಾವಲಂಬನೆಯ ಸಂಕೇತವಾಗಿತ್ತು.

ಆದರೆ, ಖಾದಿಯನ್ನು ಇವತ್ತು ನಾವು ಯಾವ ಮಟ್ಟಕ್ಕೆ ಇಳಿಸಿದ್ದೇವೆ ಎಂದು ಎಲ್ಲರಿಗೂ ಗೊತ್ತು. ಹಿಂದೂ ಧರ್ಮದ ಮುಖ್ಯ ಗ್ರಂಥವಾದ ಭಗವದ್ಗೀತೆ, ಪ್ರಾರ್ಥನೆಯ ಮೂಲಕ ಆಧ್ಯಾತ್ಮಿಕವಾಗಿ ಉನ್ನತ ಮಟ್ಟ ತಲುಪಿದ್ದರು. ಮಹಾ ಗ್ರಂಥ ಭಗವದ್ಗೀತೆಯ ಪ್ರಕಾರ, ಮರಣ ಕಾಲದಲ್ಲಿ ಪರಮ ಪ್ರಭುವಿನ ನಾಮಸ್ಮರಣೆಯನ್ನು ಮಾಡಬೇಕು. ಅದರಂತೆ ಗುಂಡೇಟು ಬಿದ್ದಾಗ ಗಾಂಧೀಜಿ ಬಾಯಿಂದ ಬಂದದ್ದು ‘ಹೇ ರಾಮ್’ ಎನ್ನುವ ಪ್ರಾರ್ಥನೆ.

ಅವರಿಗೆ ಆಶ್ರಮವು ದಿನಚರಿಯ ಒಂದು ಭಾಗವಾಗಿತ್ತು. ಗುಂಪಾಗಿ ಪ್ರಾರ್ಥನೆ ಮಾಡುವುದರ ಪ್ರಯೋಜನವನ್ನು ಅವರು ಅರಿತಿದ್ದರು. ಉಪವಾಸ ಮತ್ತು ಪ್ರಾರ್ಥನೆಯಿಂದ ಮನಸ್ಸು ಸ್ವಚ್ಛವಾಗುತ್ತದೆ ಎನ್ನುವುದು ಗಾಂಧೀಜಿಗೆ ತಿಳಿದಿತ್ತು. ಆತ್ಮದ ಪರಿಶೋಧನೆಯ ಮಹತ್ವವನ್ನು ಅವರು ಅರಿತಿದ್ದರು. ‘ಮನಸ್ಸಿನಲ್ಲಿ ಗೊಂದಲವುಂಟಾದಾಗ, ಇನ್ನೇನೂ ಹೊಳೆಯದೇ ಇದ್ದಾಗ, ಮನಸ್ಸು ಮುದುಡಿದಾಗ ನಾನು ಭಗವದ್ಗೀತೆಯ ಬಳಿಗೆ ಹೋಗುತ್ತೇನೆ. ಅದು ತಾಯಿಯಂತೆ, ಗುರುವಂತೆ, ಬಂಧುವಂತೆ ನನಗೆ ದಾರಿದೀಪವಾಗುತ್ತದೆ’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಗಾಂಧೀಜಿಯ ಸರಳತೆ ಇಂದು ಹಾಸ್ಯಾಸ್ಪದ ವಿಷಯವಾಗಿದೆ. ಉದಾತ್ತ ಚಿಂತನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆಯೆ ಹೊರತು, ಆಡಂಬರದ ಜೀವನದಲ್ಲಿ ಅಲ್ಲ ಎಂದು ಅವರು ಪ್ರತಿಪಾದಿಸುತ್ತಿದ್ದರು.

ಆದರ್ಶಮಯ ಬದುಕು

ನಿಜ, ಗಾಂಧೀಜಿಯವರದು ನೂರಕ್ಕೆ ನೂರರಷ್ಟು ಆದರ್ಶಮಯ ಬದುಕು, ಅವರ ಎತ್ತರಕ್ಕೆ ಮುಟ್ಟಲಾಗುವುದಿಲ್ಲ. ಆದರೆ ಅವರ ಕಲ್ಪನೆಗಳಾದ ಸತ್ಯ, ಅಹಿಂಸೆ ಮತ್ತು ಕರ್ಮವನ್ನು ಕುರಿತು ಚಿಂತಿಸಿದರೆ ಆಗುವ ಪ್ರಯೋಜನಗಳು ಹಲವಾರು. ಗಾಂಧೀಜಿಯವರು ಹೇಳಿದ ಸ್ವಕರ್ಮ ಮತ್ತು ಸ್ವಾವಲಂಬನೆಯನ್ನು ಅನುಷ್ಠಾನಕ್ಕೆ ತಂದರೆ, ದೇಶ ರಾಮರಾಜ್ಯವಾಗುತ್ತದೆ. ನನಗೆ ವಹಿಸಿದ ಕಾರ್ಯವನ್ನು ಚಾಚೂ ತಪ್ಪದೇ ಮಾಡುತ್ತೇನೆ ಎಂಬ ಭಾವ ಎಲ್ಲರ ಮನದಲ್ಲಿ ಬಂದರೆ ಎಲ್ಲರ ಬಾಳೂ ಹಸನಾದೀತು.

Courtesy: Wikipedia

ಗಾಂಧೀಜಿಯವರ ಮೌಲ್ಯಗಳು ಯಾವತ್ತೂ ಅಳಿಯುವುದಿಲ್ಲ, ಹಳೆಯದಾಗುವದಿಲ್ಲ. ನಮ್ಮ ದೇಶಕ್ಕೆ ಅವರ ಮೌಲ್ಯಗಳ ಅವಶ್ಯಕತೆ ಎಂದೆಂದೂ ಇದೆ. ಕರ್ಮ ಎಂಬ ಒಂದೇ ತಳಹದಿಯ ಮೇಲೆ ಅನೇಕ ರಾಷ್ಟ್ರಗಳು ಅಭಿವೃದ್ಧಿ ಹೊಂದಿರುವದನ್ನು ನಾವು ಕಂಡಿದ್ದೇವೆ.

ಗಾಂಧೀಜಿಯ ಜೀವನದ ಎಲ್ಲಕ್ಕಿಂತ ಮಹತ್ವದ ಸಂಗತಿ, ಅವರು ಆರಂಭಿಸಿದ ಜನಾಂದೋಲನದಲ್ಲಿದೆ. ಇಂಥ ಜನಾಂದೋಲನವನ್ನು ಶುರು ಮಾಡಲು ಅದರ ಪ್ರೇರಣೆ ನೀಡುವ ಮನುಷ್ಯ ತುಂಬ ದೊಡ್ಡವನಾಗಿರಬೇಕಾಗುತ್ತದೆ. ಅವನ ಶಬ್ದದಲ್ಲಿ ಮಂತ್ರದ ಸಾಮರ್ಥ್ಯವಿರಬೇಕಾಗುತ್ತದೆ. ಗಾಂಧೀಜಿಯ ಶಬ್ದದಲ್ಲಿ ಈ ಸಾಮರ್ಥ್ಯವಿತ್ತು. ಅವರದನ್ನು ಜೀವನವಿಡೀ ಸಮಾಜಕ್ಕಾಗಿ ಮಾಡಿದ ತ್ಯಾಗ ಮತ್ತು ಸತ್ಯದ ಮಾರ್ಗದಿಂದ ಗಳಿಸಿದ್ದರು. ಬಾಪುವಿನ ಉದಾತ್ತ ಚಿಂತನೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಮನನ ಮಾಡಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ.

Lead photo: Monument to M.K. Gandhi in Madrid, Spain / Courtesy: Wikipedia

ಡಾ.ಗುರುಪ್ರಸಾದ ಎಚ್ ಎಸ್
ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.


Tags: January 30Mahatma Gandhimahatma Gandhi death anniversarySarvodaya day
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಶಾಸಕರನ್ನು ಕಡೆಗಣಿಸಿ ಶಿಷ್ಟಾಚಾರ ಮರೆತ  ನಗರಸಭೆ; ಹೊಸಕೋಟೆಯಲ್ಲಿ ಎಂಟಿಬಿ-ಶರತ್ ಬಚ್ಚೇಗೌಡ ಬೆಂಬಲಿಗರ ತಿಕ್ಕಾಟ, ಲಾಠಿ ಪ್ರಹಾರ ನಡೆಸಿದ ಪೊಲೀಸರು

ಶಾಸಕರನ್ನು ಕಡೆಗಣಿಸಿ ಶಿಷ್ಟಾಚಾರ ಮರೆತ ನಗರಸಭೆ; ಹೊಸಕೋಟೆಯಲ್ಲಿ ಎಂಟಿಬಿ-ಶರತ್ ಬಚ್ಚೇಗೌಡ ಬೆಂಬಲಿಗರ ತಿಕ್ಕಾಟ, ಲಾಠಿ ಪ್ರಹಾರ ನಡೆಸಿದ ಪೊಲೀಸರು

Leave a Reply Cancel reply

Your email address will not be published. Required fields are marked *

Recommended

ಉತ್ತರ ಪ್ರದೇಶದ ರೈತರ ಧಾರುಣತೆ ಬಿಚ್ಚಿಟ್ಟ ಖರ್ಗೆ

ಉತ್ತರ ಪ್ರದೇಶದ ರೈತರ ಧಾರುಣತೆ ಬಿಚ್ಚಿಟ್ಟ ಖರ್ಗೆ

4 years ago
ಗುಡಿಬಂಡೆ ಅದೃಷ್ಟದ ತಾಲ್ಲೂಕು, ಅಂದುಕೊಂಡಿದ್ದೆಲ್ಲ ಆಗುತ್ತಿದೆ!! 35 ಕೋಟಿ ರೂ. ವೆಚ್ಚದಲ್ಲಿ ಮನೆಮನೆಗೂ ಶುದ್ಧ ಕುಡಿಯುವ ನೀರು ಕೊಡಲಾಗುವುದು ಎಂದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ

ಗುಡಿಬಂಡೆ ಅದೃಷ್ಟದ ತಾಲ್ಲೂಕು, ಅಂದುಕೊಂಡಿದ್ದೆಲ್ಲ ಆಗುತ್ತಿದೆ!! 35 ಕೋಟಿ ರೂ. ವೆಚ್ಚದಲ್ಲಿ ಮನೆಮನೆಗೂ ಶುದ್ಧ ಕುಡಿಯುವ ನೀರು ಕೊಡಲಾಗುವುದು ಎಂದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ