- ನಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ಸುಲ್ತಾನ್ ಪೇಟೆಯ ನಿರ್ಮಲಮ್ಮ ಅವಿರೋಧವಾಗಿ ಆಯ್ಕೆಯಾದ ಸಂದರ್ಭ.
ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ವಿಜಯಯಾತ್ರೆ ಮುಂದುವರಿದಿದ್ದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಮಂಚೇನಹಳ್ಳಿ ಹೋಬಳಿಯ ಗೌಡಗೆರೆ, ಮಿಣಕನಗುರ್ಕಿ ಪಂಚಾಯಿತಿ, ಮಂಡಿಕಲ್ ಹೋಬಳಿಯ ಕಮ್ಮಗುಟ್ಟಹಳ್ಳಿ, ಅರೂರು, ನಂದಿ ಹೋಬಳಿಯ ನಂದಿ, ಕೊಂಡೇನಹಳ್ಳಿ, ಅಗಲಗುರ್ಕಿ, ಕಸಬಾ ಹೋಬಳಿಯ ಎಸ್.ಗೊಲ್ಲಹಳ್ಳಿ ಪಂಚಾಯಿತಿ ಸೇರಿದಂತೆ ಎಲ್ಲಾ ಎಂಟು ಗ್ರಾಮ ಪಂಚಾಯಿತಿಗಳಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.
ಗೌಡಗೆರೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ತನುಜಾ ರಾಜಶೇಖರ್, ಉಪಾಧ್ಯಕ್ಷರಾಗಿ ವರುವಣಿ ಮೂರ್ತಿ ಆಯ್ಕೆಯಾದರೆ, ಮಿಣಕನಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪೆದ್ದರೆಡ್ಡಿ ನಾಗೇನಹಳ್ಳಿಯ ಕೆ.ಟಿ.ಶ್ರೀನಿವಾಸಮೂರ್ತಿ, ಉಪಾಧ್ಯಕ್ಷರಾಗಿ ಮಿಣಕನಗುರ್ಕಿ ಕಾಂತರಾಜು ಆಯ್ಕೆಯಾಗಿದ್ದಾರೆ.
ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬೊಮ್ಮಗಾನಹಳ್ಳಿ ಪೃಥ್ವಿರಾಜ್, ಉಪಾಧ್ಯಕ್ಷರಾಗಿ ಮಾದನಾಯಕನಹಳ್ಳಿ ರತ್ನಮ್ಮ ಆಯ್ಕೆಯಾಗಿರುತ್ತಾರೆ. ಅರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆದೇಗಾರಹಳ್ಳಿ ಅರುಣಮ್ಮ, ಉಪಾಧ್ಯಕ್ಷರಾಗಿ ಮುತ್ತುಕದಹಳ್ಳಿ ವೆಂಕಟಪತಿ ಆಯ್ಕೆಯಾಗಿದ್ದಾರೆ.
ನಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ಸುಲ್ತಾನ್ ಪೇಟೆಯ ನಿರ್ಮಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಂಡೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪವಿತ್ರ ಶೈಲೇಂದ್ರ ಕುಮಾರ್, ಅಗಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚೊಕ್ಕಹಳ್ಳಿ ಪಂಕಜಾ ಹನುಮಂತ, ಉಪಾಧ್ಯಕ್ಷರಾಗಿ ಚಿಕ್ಕಕಾಡಿಗಾನಹಳ್ಳಿ ನಾರಾಯಣಮೂರ್ತಿ ಆಯ್ಕೆಯಾಗಿದ್ದಾರೆ.
ಎಸ್.ಗೊಲ್ಲಹಳ್ಳಿ ಗ್ರಾಮ ಅಧ್ಯಕ್ಷರಾಗಿ ಕೆಎಸ್.ಕೃಷ್ಣಾರೆಡ್ಡಿ, ಉಪಾಧ್ಯಕ್ಷರಾಗಿ ಸಾದೇನಹಳ್ಳಿ ನರಸಿಂಹಯ್ಯ ಆಯ್ಕೆಯಾಗಿದ್ದಾರೆ.