• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಎಸ್ಸೆಮ್ಮೆಸ್‌ ಮಾಡಿದರೂ ಸಾಕು, ಸಮಸ್ಯೆ ಪರಿಹಾರ; ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸುವೆ ಎಂದ ನೂತನ ಡಿಡಿಪಿಐ ಕೆ.ಎಂ.ಜಯರಾಮ‌ ರೆಡ್ಡಿ

cknewsnow desk by cknewsnow desk
February 18, 2021
in CHIKKABALLAPUR
Reading Time: 1 min read
0
ಎಸ್ಸೆಮ್ಮೆಸ್‌ ಮಾಡಿದರೂ ಸಾಕು, ಸಮಸ್ಯೆ ಪರಿಹಾರ; ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸುವೆ ಎಂದ ನೂತನ ಡಿಡಿಪಿಐ ಕೆ.ಎಂ.ಜಯರಾಮ‌ ರೆಡ್ಡಿ
937
VIEWS
FacebookTwitterWhatsuplinkedinEmail

M Krishnappa Chikkaballapur

ಚಿಕ್ಕಬಳ್ಳಾಪುರ: ಶಿಕ್ಷಕರು ಇರಲಿ ಅಥವಾ ಇಲಾಖೆಯ ಯಾವುದೇ ಸಮಸ್ಯೆ ಇದ್ದರೂ ಒಂದು ಎಸ್ಸೆಮ್ಮೆಸ್‌ ‌ ಮಾಡಿದರೂ ಸಾಕು. ತಕ್ಷಣ ಆ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕ (ಆಡಳಿತ) ಕೆ.ಎಂ.ಜಯರಾಮರೆಡ್ಡಿ ಭರವಸೆ ನೀಡಿದ್ದಾರೆ.

ಇದುವರೆಗೆ ಈ ಹುದ್ದೆಯಲ್ಲಿದ್ದ ಹೆಚ್.ಜಿ.ನಾಗೇಶ್ ಅವರಿಂದ ತೆರವಾದ ಸ್ಥಾನಕ್ಕೆ ಕೋಲಾರ ಡಯಟ್ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ.ಜಯರಾಮರೆಡ್ಡಿ ಅವರನ್ನು ನೂತನ ಡಿಡಿಪಿಐ ಆಗಿ ವರ್ಗಾವಣೆ ಮಾಡಲಾಗಿದೆ. ಹಾಗೆಯೇ; ಹೆಚ್.ಜಿ.ನಾಗೇಶ್ ಅವರು ಕೋಲಾರ ಡಯಟ್ ಪ್ರಾಂಶುಪಾಲರಾಗಿ ವರ್ಗಾವಣೆಯಾಗಿದ್ದಾರೆ. ಗುರುವಾರ ಜಯರಾಮ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡರು.

  • ಅಧಿಕಾರ ವಹಿಸಿಕೊಂಡ ನಂತರ ಸಿಕೆನ್ಯೂಸ್‌ ನೌ ಜತೆ ಮಾತನಾಡಿದ ಅವರು ವಿವಿಧ ವಿಚಾರಗಳನ್ನು ಹಂಚಿಕೊಂಡರು. ಅವು ಹೀಗಿವೆ;

*ಜಿಲ್ಲೆಯಲ್ಲಿ ಶೈಕ್ಷಣಕ ಪ್ರಗತಿಯ ಜತೆಗೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಕೆಲಸ ಮಾಡುವೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ವೃದ್ಧಿಸಲು ಶ್ರಮಿಸುವೆ.

*ಕೊರೋನ ಕಾಡಿದ ನಮಗೆ ಶಿಕ್ಷಣದಲ್ಲೂ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಆದರೂ ಇರುವ ಕಾಲಾವಕಾಶದಲ್ಲಿ ಶ್ರದ್ಧೆ ನಿಷ್ಠೆಯಿಂದ ಕಲಿಕೆಯಲ್ಲಿ ಮಕ್ಕಳು ನಿರತರಾಗುವಂತೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಇರುವ ಎಲ್ಲಾ ಉಪಕ್ರಮಗಳನ್ನು ಬಳಸಿ ಪಠ್ಯ ಚಟುವಟಿಕೆಯ ಮೂಲಕ ಶಿಕ್ಷಣ ನೀಡಲು ಎಲ್ಲಾ ಶಿಕ್ಷಕರು ತೊಡಗಿಸಿಕೊಳ್ಳಬೇಕು. ಶೈಕ್ಷಣಿಕ ಅವಧಿಯನ್ನು ವ್ಯರ್ಥ ಮಾಡದೇ ಮಕ್ಕಳ ಶಿಕ್ಷಣ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು.

*ಶಿಕ್ಷಕರು ಕೂಡ ತಮ್ಮ ಶೈಕ್ಷಣಿಕ ಅವಧಿ ಮತ್ತು ಇಲಾಖೆಯಿಂದ ತಮಗೆ ಆಗಬೇಕಿರುವ ಕೆಲಸ ಕಾರ್ಯದ ನಿಮಿತ್ತ ಶಾಲಾವಧಿ ಪೂರೈಸಿದ ನಂತರ ನೇರವಾಗಿ ಕಚೇರಿಯಲ್ಲಿ ಭೇಟಿ ಮಾಡಿ ಕುಂದುಕೊರತೆ ನೀಗಿಸಿಕೊಳ್ಳಬಹುದು. ಶಾಲಾವಧಿ ಹೊರತುಪಡಿಸಿ ಇನ್ನುಳಿದ ಯಾವುದೇ ಸಮಯದಲ್ಲಿ ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು.

*ಮಕ್ಕಳು ಸಹಾ ಪರಿಕ್ಷೆಯ ದೃಷ್ಟಿಕೋನದಲ್ಲಿ ಆತಂಕ ಇಟ್ಟುಕೊಳ್ಳದೆ ಪರೀಕ್ಷೆ ಎದುರಿಸಬೇಕು ಪೊಷಕರು ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಶಾಲಾ ಶಿಕ್ಷಕರೊಂದಿಗೆ ಸಮನ್ವಯ ಕಾಪಾಡಿಕೊಳ್ಳಬೇಕಲ್ಲದೆ ಮಕ್ಕಳ ಪ್ರಗತಿಗೆ ಶಿಕ್ಷಕರೊಂದಿಗೆ ಸಹಕರಿಸಬೇಕು.

ಶಿಕ್ಷಕರಿಂದ ಸ್ವಾಗತ, ಗೌರವ

ಇದೇ ವೇಳೆ ಕೆ.ಎಂ.ಜಯರಾಮರೆಡ್ಡಿ ಅವರನ್ನು ಶಿಕ್ಷಣ ಇಲಾಖೆಯ ಶಿಕ್ಷಕ ವೃಂದ ಸ್ವಾಗತಿಸಿ ಶುಭಕೋರಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ, ಕಚೇರಿ ವ್ಯವಸ್ಥಾಪಕ ಕೆ.ಎಸ್.ನಟರಾಜ್, ಅಧೀಕ್ಷಕರಾದ ಮುನಿರಾಜು, ಶ್ರೀನಾಥ್, ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಆರ್,ವೆಂಕಟರಮಣರೆಡ್ಡಿ, ಕೃಷ್ಣಮೂರ್ತಿ, ಶಿಕ್ಷಣ ಇಲಾಖೆ ಶಿಕ್ಷಕ ವೃಂದದ ಪ್ರಮುಖರಾದ ದೈಹಿಕ ಶಿಕ್ಷಣ ಶಿಕ್ಷಕ ವಿ.ನಾರಾಯಣಪ್ಪ ಸೇರಿ ಇನ್ನಿತರ ಶಿಕ್ಷಕ ವೃಂದದವರು ರೆಡ್ಡಿ ಅವರನ್ನು ಗೌರವಿಸಿ ಸನ್ಮಾನಿಸಿದರು.

ಈ ವೇಳೆ ಜಿಲ್ಲಾ ಉಪ ಸಮನ್ವಯಾಧಿಕಾರಿ ಮಂಜಣ್ಣ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮುನಿರಾಜು, ಪ್ರೌಢಶಾಲೆ ಮುಖ್ಯ ಶಿಕ್ಷಕ ಉಸ್ಮಾನ್‍ಸಾಬ್, ನಿವೃತ್ತ ಮುಖ್ಯ ಶಿಕ್ಷಕ ಚನ್ನಮಲ್ಲಿಕಾರ್ಜುನಯ್ಯ, ಶಿಕ್ಷಕರಾದ ಲಕ್ಷ್ಮಣ್, ಕ್ಷೇತ್ರ ಶಿಕ್ಷಣ ಇಲಾಖೆಯ ತೇಜ್‍ದೀಪು, ಕಮಲಮ್ಮ ಆನಂದ್ ನವೀನ್‍ಕುಮಾರ್ ಇದ್ದರು.

Tags: chikkaballapurddpieducationkm jayarama reddynew ddpi for chikkaballapur
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಚಿಕ್ಕಬಳ್ಳಾಪುರಕ್ಕೆ ಬಜೆಟ್’ನಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲು ಶ್ರಮಿಸಿದ ಸಂಸದ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರಕ್ಕೆ ಬಜೆಟ್’ನಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲು ಶ್ರಮಿಸಿದ ಸಂಸದ ಡಾ.ಕೆ.ಸುಧಾಕರ್

by cknewsnow desk
July 23, 2024
0

ಸಂಸದರಿಗೆ ಅಭಿನಂದನೆ ಸಲ್ಲಿಸಿದ ಆರ್.ಮಿಥುನ್ ರೆಡ್ಡಿ; ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ನಿಂದ ಬಾಗೇಪಲ್ಲಿಗೆ ಹೆಚ್ಚು ಅನುಕೂಲ

ಬಾಗೇಪಲ್ಲಿಯಲ್ಲಿ ಗುರುಪೂರ್ಣಿಮೆ

ಬಾಗೇಪಲ್ಲಿಯಲ್ಲಿ ಗುರುಪೂರ್ಣಿಮೆ

by cknewsnow desk
July 23, 2024
0

ಶ್ರೀ ಯೋಗಿನಾರೇಯಣ ಬಲಿಜ ಟ್ರಸ್ಟ್ ವತಿಯಿಂದ ಆಚರಣೆ

ಡಾ.ಕೆ.ಸುಧಾಕರ್ ಅವರಿಗೆ ಬೆಂಬಲ ಘೋಷಿಸಿದ ಮಿಥುನ್ ರೆಡ್ಡಿ

ಡಾ.ಕೆ.ಸುಧಾಕರ್ ಅವರಿಗೆ ಬೆಂಬಲ ಘೋಷಿಸಿದ ಮಿಥುನ್ ರೆಡ್ಡಿ

by cknewsnow desk
April 14, 2024
0

ಎನ್'ಡಿಎ ಅಭ್ಯರ್ಥಿ ಡಾ.ಕೆ ಸುಧಾಕರ್ ಗೆಲ್ಲಿಸುವುದೇ ನಮ್ಮ ಗುರಿ

ದ್ವಿತೀಯ ಪಿಯುಸಿ ಫಲಿತಾಂಶ; ಗುಡಿಬಂಡೆ ಕಾಲೇಜ್ ಉತ್ತಮ ಸಾಧನೆ

ದ್ವಿತೀಯ ಪಿಯುಸಿ ಫಲಿತಾಂಶ; ಗುಡಿಬಂಡೆ ಕಾಲೇಜ್ ಉತ್ತಮ ಸಾಧನೆ

by cknewsnow desk
April 10, 2024
0

ವಿಜ್ಞಾನ ವಿಭಾಗದಲ್ಲಿ ಶೇ.79 ಫಲಿತಾಂಶ

ದೇಶಕ್ಕೆ ಭಷ್ಟಾಚಾರಕ್ಕಿಂತ ವಾತಾವರಣ ಬದಲಾವಣೆಯಿಂದ ಭಾರೀ ನಷ್ಟವಾಗುತ್ತಿದೆ: ಪ್ರೊ.ಸುರೇಶ್

ದೇಶಕ್ಕೆ ಭಷ್ಟಾಚಾರಕ್ಕಿಂತ ವಾತಾವರಣ ಬದಲಾವಣೆಯಿಂದ ಭಾರೀ ನಷ್ಟವಾಗುತ್ತಿದೆ: ಪ್ರೊ.ಸುರೇಶ್

by cknewsnow desk
April 9, 2024
0

ರಣಬಿಸಿಲನ್ನು ತಡೆಯುವ ಶಕ್ತಿ ಕೇವಲ ಮರಗಿಡಗಳಿಗೆ ಮಾತ್ರ ಇದೆ

ಗುಡಿಬಂಡೆ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರ ಬ್ಲಾಸ್ಟಿಂಗ್

ಗುಡಿಬಂಡೆ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರ ಬ್ಲಾಸ್ಟಿಂಗ್

by cknewsnow desk
March 6, 2024
0

ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

Next Post
ಉನ್ನತ ಶಿಕ್ಷಣ: 6 ತಿಂಗಳಲ್ಲಿ 8,000 ಸ್ಮಾರ್ಟ್‌ಕ್ಲಾಸ್‌ ರೂಂ; ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಟ್ಯಾಬ್‌, ಪ್ರತಿ ಕಾಲೇಜಿಗೂ ಹೈಸ್ಪೀಡ್‌ ಇಂಟರ್‌ನೆಟ್‌

ಉನ್ನತ ಶಿಕ್ಷಣ: 6 ತಿಂಗಳಲ್ಲಿ 8,000 ಸ್ಮಾರ್ಟ್‌ಕ್ಲಾಸ್‌ ರೂಂ; ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಟ್ಯಾಬ್‌, ಪ್ರತಿ ಕಾಲೇಜಿಗೂ ಹೈಸ್ಪೀಡ್‌ ಇಂಟರ್‌ನೆಟ್‌

Leave a Reply Cancel reply

Your email address will not be published. Required fields are marked *

Recommended

ಕರ್ನಾಟಕ ಭಾರತದ ಬಯೋಟೆಕ್ನಾಲಜಿ ರಾಜಧಾನಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕರ್ನಾಟಕ ಭಾರತದ ಬಯೋಟೆಕ್ನಾಲಜಿ ರಾಜಧಾನಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

5 years ago
ದಿನ 2: ಸಿಇಟಿ ಪರೀಕ್ಷೆ ಸುಖಾಂತ್ಯ

ಸಿಇಟಿ ಕೌನ್ಸೆಲಿಂಗ್: ಜನವರಿ 15ರವರೆಗೆ ಕಾಲಾವಕಾಶ ನೀಡುವಂತೆ ಕೋರಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿಗೆ ಪತ್ರ ಬರೆದ ಸರಕಾರ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ