ಚಿಕ್ಕಬಳ್ಳಾಪುರ: ರಥಸಪ್ತಮಿ ಪ್ರಯುಕ್ತ ನಗರದಲ್ಲಿಂದು ಶ್ರೀ ಪತಂಜಲಿ ಯೋಗ ಸಮಿತಿಯ ವತಿಯಿಂದ ನಡೆದ ಸೂರ್ಯನಮಸ್ಕಾರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್ ಅವರು; ಯೋಗ ಎನ್ನುವುದು ನಮ್ಮ ಪೂರ್ವಜರು ನಮಗೆ ಬಿಟ್ಟುಹೋಗಿರುವ ಅನರ್ಘ್ಯ ಸಂಪತ್ತು. ಸೂರ್ಯ ನಮಸ್ಕಾರದಿಂದ ನಮ್ಮ ಆರೋಗ್ಯ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಮುಖ್ಯ ಯೋಗ ಶಿಕ್ಷಕ ನಾಗರಾಜು ಅವರು ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರವನ್ನು ಶಾಸ್ರೋಕ್ತರಾಗಿ ಮಾಡುವುದು ಹೇಗೆ? ಆರೋಗ್ಯ ಮತ್ತು ವ್ಯಕ್ತಿಯ ಜೀವನದಲ್ಲಿ ಸೂರ್ಯ ನಮಸ್ಕಾರಕ್ಕೆಷ್ಟು ಮಹತ್ತ್ವ ಇದೆ ಎಂದಬುದನ್ನು ವಿವರಿಸಿದರು.
ಯೋಗ ಶಿಕ್ಷಕರಾದ ಸುಧಾ ನಾಗರಾಜ್ ಯೋಗಾಭ್ಯಾಸ ಮಾಡಿಸಿದರಲ್ಲದೆ ಸೂರ್ಯ ನಮಸ್ಕಾರದ ಮಹತ್ವ ಮತ್ತು ರಥಸಪ್ತಮಿಯ ಮಹತ್ವವನ್ನು ತಿಳಿ ಹೇಳಿದರು. ಈ ಸಂದರ್ಭದಲ್ಲಿ ರಾಮಕೃಷ್ಣಾರೆಡ್ಡಿ, ರತ್ನವರ್ಮ, ಕೋಕಿಲ, ಕೋಮಲ, ಭಾಗ್ಯಮ್ಮ, ಗಂಗಾದೇವಿ, ಚಂದ್ರಪ್ಪ, ಸತೀಶ್, ಮಂಜುನಾಥಾಚಾರಿ, ವೇಣು. ವೆಂಕಟರಮಣಪ್ಪ, ಅನಿತ ಸೇರಿದಂತೆ ಇತರ ನೂರಕ್ಕೂ ಅಧಿಕ ಯೋಗನಿರತರು ಇದ್ದರು.