ಚಿಕ್ಕಬಳ್ಳಾಪುರ: ಹಿರೇನಾಗವೇಲಿ ಕ್ರಷರ್ ಸ್ಪೋಟ ದುರಂತದಲ್ಲಿ ಧಾರುಣವಾಗಿ ಸಾವನ್ನಪ್ಪಿದ ರಾಮುವಿನ ಕುಟುಂಬಕ್ಕೆ ಸಮಾಜ ಸೇವಕರೊಬ್ಬರು ಸಹಾಯಹಸ್ತ ಚಾಚಿದ್ದು, ಅವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದಾರೆ.
ರಾಮುವಿನ ಪುಟಾಣಿ ಮಗು ಯುಕೆಜಿʼಯಲ್ಲಿದ್ದು ಮಗುವಿಗೆ ನಿರಂತರ ಶಿಕ್ಷಣ ಕೊಡಿಸಲು ಮತ್ತು ಅದರ ಸಂಪೂರ್ಣ ವೆಚ್ಚ ಭರಿಸಲು ಇಲ್ಲಿನ ಭಗತ್ಸಿಂಗ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ್ ಬಿ.ರೆಡ್ಡಿ ಮುಂದಾಗಿದ್ದಾರೆ.
ಸ್ಪೊಟ ಘಟನೆಯಲ್ಲಿ ದುರ್ಮರಣಕ್ಕೀಡಾದ ಮೃತರಲ್ಲಿ ಒಬ್ಬರಾದ ರಾಮು ಅವರನ್ನು ಕಳೆದುಕೊಂಡ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಈ ಮನೆ ದಿಕ್ಕಿಲ್ಲದಂತಾಗಿದೆ. ಇಂಥ ಸಮಯದಲ್ಲಿ ರಾಮು ಮನೆಗೆ ತಮ್ಮ ಟ್ರಸ್ಟ್ ಪದಾಧಿಕಾರಿಗಳೊಂದಿಗೆ ಸಂದೀಪ್ ರೆಡ್ಡಿ ಭೇಟಿ ನೀಡಿದರಲ್ಲದೆ, ಅವರ ಪತ್ನಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಅವರು 50,000 ರೂ. ನಗದು ನೆರವು ನೀಡಿದರು. ಜತೆಗೆ, ಅವರ ಮಗುವಿನ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಎಲ್ಲ ನೆರವು ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಸಂದೀಪ್ ರೆಡ್ಡಿ; “ಘಟನೆಯ ಸುದ್ದಿ ತಿಳಿದು ಬಹಳ ನೋವಾಯಿತು. ಇಂಥಹ ಸಾವು-ನೋವುಗಳು ಯಾರಿಗೂ ಬಾರದಿರಲಿ. ರಾಮು ಅವರ ಮನೆಯ ಸ್ಥಿತಿ ನೋಡಿ ದುಃಖವಾಯಿತು. ನನ್ನದೊಂದು ಸಣ್ಣ ಪ್ರಯತ್ನವಾಗಿ ಮೃತರ ಕುಟುಂಬಕ್ಕೆ ನೆರವಾಗಿದ್ದೆನೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಇನ್ನುಳಿದವರ ಮನೆಯವರ ಪರಿಸ್ಥಿತಿ ಇದೇ ರೀತಿ ಇದ್ದಿರಬಹುದು. ಅವರ ಸಂಕಷ್ಟಕ್ಕೂ ನೆರವಾಗಬೇಕಾದ ಸಂಕಲ್ಪ ಕೆಲವರಾದರೂ ಮಾಡಬೇಕು” ಎಂದರು.
ರಾಮು ಅವರ ಮಗ ಅಭಿತೇಜ್ ತುಂಬಾ ಮುದ್ದಾದ ಮಗು. ಈಗ ಯುಕೆಜಿ ಓದುತ್ತಿದ್ದಾನೆ. ಅವನ ಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿನನ್ನು ನಾನೇ ಹೊತ್ತಿದ್ದೇನೆ. ಅದರಂತೆ ನಡೆದುಕೊಳ್ಳುವೆ. ಇನ್ನುಳಿದ ಐದು ಮಂದಿ ಮೃತರ ಕುಟುಂಬಗಳ ನೆರವಿಗೆ ಸಾರ್ವಜನಿಕರು ಮುಂದಾಗಬೇಕು.
-ಸಂದೀಪ್ ಬಿ.ರೆಡ್ಡಿ
ಈ ಸಂದರ್ಭದಲ್ಲಿ ದಯಾನಂದ, ಎಲ್ಐಸಿ ಲಕ್ಷ್ಮೀಪತಿ. ಸಂದರ್ಶ್, ಬಿ.ನಟೇಶ್, ರಾಮಕೃಷ್ಣ. ಮಂಜುನಾಥ್. ಶಿವಣ್ಣ ಸೇರಿದಂತೆ ಇನ್ನಿತರರು ಇದ್ದರು.
chikkaballapur blast, illegal crusher, hirenagavalli, ramu, help for ramu family,