ಗುಡಿಬಂಡೆ: ಹೋಸಪೇಟೆ ನ್ಯಾಯಾಲಯದ ಆವರಣದಲ್ಲಿ ಇತ್ತಿಚೆಗೆ ನಡೆದ ವಕೀಲರೊಬ್ಬರ ಕೋಲೆ ಖಂಡಿಸಿ ಗುಡಿಬಂಡೆ ತಾಲ್ಲೂಕಿನ ವಕೀಲರ ಸಂಘದ ವತಿಯಿಂದ ವಕೀಲರು ಪಟ್ಟಣದ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಕಲಾಪಗಳಿಂದ ದೂರ ಉಳಿದಿದ್ದರು.
ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಹಿರಿಯ ವಕೀಲ ಮತ್ತು ಕಾಂಗ್ರೆಸ್ ಮುಖಂಡ ತರಿಹಳ್ಳಿ ವೆಂಕಟೇಶ್ ಅವರನ್ನು ಇತ್ತಿಚೆಗೆ ಹೊಸಪೇಟೆಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿಯೇ ಕೊಲೆ ಮಾಡಲಾಗಿತ್ತು. ಈ ಘಟನೆ ವಕೀಲರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ವೆಂಕಟೇಶ್ ನ್ಯಾಯಾಲಯದ ಆವರಣದಲ್ಲಿದ್ದಾಗ ಆತನ ಸಂಬಂಧಿ ಮನೋಜ್, ಮತ್ತಿತರರು ಮಾರಣಾಂತಿಕ ದಾಳಿ ನಡೆಸಿದ್ದರು., ತೀವ್ರವಾಗಿ ಗಾಯಗೊಂಡ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಈ ಸಂಬಂದ ಗುಡಿಬಂಡೆ ತಾಲೂಕು ವಕೀಲರ ಸಂಘದಿಂದ ಸೋಮವಾರ ಕಲಾಪ ಬಹಿಷ್ಕರಿಸಿ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಇದೇ ವೇಳೆ ವಕೀಲರ ಸಂಘದ ಅಧ್ಯಕ್ಷ ಪಿ.ಶಿವಪ್ಪ ಆಗ್ರಹಿಸಿದರು.