karnataka budget 2021-22
ಸದಾ ಬರಪೀಡಿತಗೊಂಡು ತತ್ತರಿಸುವ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಶೂನ್ಯ ಸಂಪಾದನೆ. ಚಿಕ್ಕಬಳ್ಳಾಪುರಕ್ಕಾದರೂ ಮೂರು ಪ್ರಸ್ತಾವನೆಗಳು ಇವೆಯಾದರೂ, ಕೋಲಾರ ಜಿಲ್ಲೆ ಸೊಲ್ಲೆ ಇಲ್ಲ. ಸಚಿವರಿಲ್ಲದ ಚಿನ್ನದನಾಡಿಗೆ ಮುಂಗಡಪತ್ರದಲ್ಲಿ ತೀವ್ರ ಅನ್ಯಾಯವಾಗಿದೆ.
- ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಹೆಸರಿನಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ ಸ್ಥಾಪನೆ.
- ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 234 ಕೆರೆ ತುಂಬಿಸುವ ಯೋಜನೆಗೆ ₹500 ಕೋಟಿ ಅನುದಾನ
- ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ಗಿರಿಧಾಮದ ನಿರ್ವಹಣೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ.
- ಮಹಿಳಾ ಉದ್ಯಮಿಗಳಿಗೆ ಶೇ. 4ರ ಬಡ್ಡಿದರದಲ್ಲಿ ಸಾಲ
- ಮಹಿಳಾ ಉದ್ಯಮಿಗಳಿಗಾಗಿ ಎಲಿವೇಟ್ ವುಮನ್ ಉದ್ಯಮ ಯೋಜನೆ
- ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ
- ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ.
- ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಪಾಸ್
- ರಾಜ್ಯ ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆ
- ಈ ಬಾರಿ ಯಾವುದೇ ತೆರಿಗೆ ವಿಧಿಸದಿರಲು ನಿರ್ಧಾರ
- ಪೊಲೀಸ್ ಠಾಣೆಗಳಲ್ಲಿ 7,500 ಸಿಸಿ ಕ್ಯಾಮರಾ ಅಳವಡಿಕೆ
- ಅಬಕಾರಿ ತೆರಿಗೆ ಹೆಚ್ಚಳ ಇಲ್ಲ
- ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಇಲ್ಲ
- ₹45 ಲಕ್ಷ ರೂಪಾಯಿವರೆಗಿನ ಫ್ಲ್ಯಾಟ್ ಖರೀದಿಗೆ ಮುದ್ರಾಂಕ ಶುಲ್ಕ ಇಲ್ಲ
- ಬ್ಯಾಡಗಿ ಮೆಣಸಿನಕಾಯಿಗಾಗಿ ಗುಣ ವಿಶ್ಲೇಷಣಾ ಘಟಕ ಸ್ಥಾಪನೆ
- ಸಾವಯವ ಕೃಷಿಗೆ ₹500 ಕೋಟಿ ರೂಪಾಯಿ
- ₹75 ಕೋಟಿ ರು ವೆಚ್ಚದಲ್ಲಿ ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ
- ಒಕ್ಕಲಿಗರ ಸರ್ವತೋಮುಖ ಅಭಿವೃದ್ಧಿಗೆ ನಿಗಮ ಸ್ಥಾಪನೆ, ₹500 ಕೋಟಿ ಅನುದಾನ.
- ಸರ್ಕಾರಿ ಶಾಲೆಗಳ ಪೀಠೋಪಕರಣಕ್ಕೆ ₹50 ಕೋಟಿ ಮೀಸಲು
- ಸ್ಮಾರ್ಟ್ ಕ್ಲಾಸ್ ರೂಂಗಳಿಗಾಗಿ ₹50 ಕೋಟಿ ಅನುದಾನ
- ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಶೇ.40-50 ರಷ್ಟು ಮೀಸಲಾತಿ
- 19 ಜಿಲ್ಲೆಗಳಲ್ಲಿ 25 ಹಾಸಿಗೆಗಳ ಐಸಿಯು ನಿರ್ಮಾಣ
- 100 ತಾಲೂಕುಗಳಲ್ಲಿ ಆರು ಹಾಸಿಗೆಯ ಐಸಿಯು ನಿರ್ಮಾಣ
- ರಾಜ್ಯದಲ್ಲಿ ಹೊಸ 52 ಬಸ್ ನಿಲ್ದಾಣಗಳ ನಿರ್ಮಾಣ
- ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ದಿಗೆ ₹5 ಕೋಟಿ.
- ಆದಿಚುಂಚನಗಿರಿ ಮಠಕ್ಕೆ ₹10 ಕೋಟಿ.
- ಕ್ರಿಶ್ಚಿಯನ್ ಸಮುದಾಯಕ್ಕೆ ₹200 ಕೋಟಿ.
- ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ ₹10 ಕೋಟಿ.
- ಜೈನ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ₹50 ಕೋಟಿ ಅನುದಾನ
- ವಿಜಯನಗರ ಜಿಲ್ಲೆಗೆ ವಿಶೇಷ ಅನುದಾನ
- ಶಿವಮೊಗ್ಗ ಮೈಸೂರಿನಲಿ ಕಿದ್ವಾಯಿ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕೆ ₹100 ಕೋಟಿ.
- ಶಿವಮೊಗ್ಗದ ಆಯುರ್ವೇದ ಕಾಲೇಜು ಆಯುಷ್ ವಿವಿಯಾಗಿ ಮೇಲ್ದರ್ಜೆಗೆ
- ಎಸ್ ಎಲ್ ಭೈರಪ್ಪನವರ ಪರ್ವ ನಾಟಕ ಪ್ರದರ್ಶನಕ್ಕೆ ಒಂದು ಕೋಟಿ ಅನುದಾನ
- ಪ್ರತಿ ಜಿಲ್ಲೆಗೆ ಒಂದು ಗೋ ಶಾಲೆ
- ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ಸಂವರ್ಧನ ಕೇಂದ್ರ
- ಚಾಮರಾಜನಗರದಲ್ಲಿ ಅರಿಶಿಣ ಮಾರುಕಟ್ಟೆ
- ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪನೆಗೆ ₹2.5 ಕೋಟಿ.
- ಮನೆ ಬಾಗಿಲಿಗೆ ಮಾಶಾಸನ ಅಭಿಯಾನ ಆರಂಭ
- ರಾಜ್ಯಾದಲ್ಲಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪನೆ
- ರೈಲ್ವೆ ಯೋಜನೆಗಳಿಗೆ ₹3,991 ಕೋಟಿ ಅನುದಾನ
- ರೈಲ್ವೆ ಯೋಜನೆಗಳ ಭೂಸ್ವಾಧಿನಕ್ಕಾಗಿ ₹ 2,260 ಕೋಟಿ.
- ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಗೆ ₹150 ಕೋಟಿ.
- ದತ್ತಾಂಶ ಕೇಂದ್ರ ಸೈಬರ್ ಸುರಕ್ಷತೆಗೆ ಆದ್ಯತೆ
- ಮುಂದಿನ 5 ವರ್ಷಗಳಲ್ಲಿ 43 ಸಾವಿರ ನೇರ ಉದ್ಯೋಗ ಸೃಷ್ಟಿ
- ಸಿದ್ದರಾಮಯ್ಯ ಸರ್ಕಾರದ ಅನುಗ್ರಹ ಯೋಜನೆ ಮುಂದುವರಿಕೆ
- ಗುಳೇದ ಗುಡ್ಡದಲ್ಲಿ ಜವಳಿ ಪಾರ್ಕ್ ನಿರ್ಮಾಣ
- ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ₹ 25 ಕೋಟಿ ಅನುದಾನ
- ಚಿತ್ರೀಕರಣ ಅನುಮತಿಗಾಗಿ ಸೇವಾ ಸಿಂಧೂ ಪೋರ್ಟಲ್ ಸ್ಥಾಪನೆ
- ಪ್ರವಾಸೋದ್ಯಮ ಇಲಾಖೆಗೆ ₹ 500 ಕೋಟಿ ಅನುದಾನ.