• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಪಂಚನಾರಾಯಾಣ ಕ್ಷೇತ್ರ ಎಲ್ಲೋಡು ಶ್ರೀ ಆದಿನಾರಾಯಣ ಬೆಟ್ಟದಲ್ಲಿ ಬೆಂಕಿ ದುರಂತ; ಅಗ್ನಿಗೆ ಆಹುತಿಯಾದ ಅರಣ್ಯವೆಷ್ಟು? ಜೀವ ಸಂಕುಲದ ಸ್ಥಿತಿ ಏನು? ಇಲ್ಲಿದೆ ಒಂದು ರೌಂಡಪ್

P K Channakrishna by P K Channakrishna
March 16, 2021
in CHIKKABALLAPUR, STATE
Reading Time: 2 mins read
0
ಪಂಚನಾರಾಯಾಣ ಕ್ಷೇತ್ರ ಎಲ್ಲೋಡು ಶ್ರೀ ಆದಿನಾರಾಯಣ ಬೆಟ್ಟದಲ್ಲಿ ಬೆಂಕಿ ದುರಂತ;  ಅಗ್ನಿಗೆ ಆಹುತಿಯಾದ ಅರಣ್ಯವೆಷ್ಟು? ಜೀವ ಸಂಕುಲದ ಸ್ಥಿತಿ ಏನು? ಇಲ್ಲಿದೆ ಒಂದು ರೌಂಡಪ್
916
VIEWS
FacebookTwitterWhatsuplinkedinEmail

ಬೇಸಿಗೆಗೆ ಮುನ್ನವೇ ಬೆಂಕಿ ಅವಘಢಕ್ಕೆ ತುತ್ತಾದ ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟಕ್ಕೆ ಆಗಿರುವ ಹಾನಿ ಎಷ್ಟು? ದೇವರ ಕಾಡಿನಲ್ಲಿ ಆಶ್ರಯ ಪಡೆದಿದ್ದ ಕೃಷ್ಣಮೃಗ, ನವಿಲು, ಪಶು-ಪಕ್ಷಿಗಳ ಸ್ಥಿತಿ ಏನಾಗಿದೆ? ಬೆಟ್ಟವನ್ನಾವರಿದ್ದ ಬೆಂಕಿ ಹತೋಟಿಗೆ ಬಂತಾ? ಇಲ್ಲಿದೆ ಪೂರ್ಣ ವರದಿ..


ಗುಡಿಬಂಡೆ: ಸೂಕ್ಷ್ಮ ಜೈವಿಕ ತಾಣ ಮತ್ತೂ ಇತಿಹಾಸ -ಪುರಾಣ ಪ್ರಸಿದ್ಧವೂ ಆಗಿರುವ, ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾಗಿರುವ ತಾಲ್ಲೂಕಿನ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ದುರಂತದಿಂದ ಸುಮಾರು 10ರಿಂದ 15 ಎಕರೆಯಷ್ಟು ಅರಣ್ಯ ಅಗ್ನಿಗೆ ಆಹುತಿಯಾಗಿದೆ.

ಸಕಾಲಕ್ಕೆ ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಅದೃಷ್ಟವಶಾತ್‌, ಪ್ರಾಣಿಗಳ ಜೀವಹಾನಿ ಆಗಿಲ್ಲ. ಬೆಂಕಿ ಕಂಡೊಡನೆ ಪ್ರಾಣಿಗಳೆಲ್ಲ ಸುರಕ್ಷಿತ ಪ್ರದೇಶಗಳಿಗೆ ಹೋಗಿ ಜೀವ ಉಳಿಸಿಕೊಂಡಿವೆ. ಇನ್ನು ದೊಡ್ಡ ದೊಡ್ಡ ಮರಗಳಿಗೆ ಹಾನಿ ತಪ್ಪಿದ್ದು, ಸಣ್ಣಪುಟ್ಟ ಗಿಡಗಳು ಭಸ್ಮವಾಗಿವೆ.

  • ಬೆಟ್ಟದಲ್ಲಿ ಬೆಂಕಿ ಆವರಿಸಿಕೊಂಡಿರುವ ದೃಶ್ಯ.

ದೇವಸ್ಥಾನಕ್ಕೆ ಹಾನಿಯಾಗಿಲ್ಲ

ಹಾಗೆಯೇ ಆದಿನಾರಾಯಣ ಸ್ವಾಮಿ ದೇವಾಲಯಕ್ಕೆ ಬೆಂಕಿ ತಾಕಿಲ್ಲ. ದೇವಸ್ಥಾನದ ಹಿಂಭಾಗದವರೆಗೂ ಬೆಂಕಿ ಬಂದಿತ್ತು. ಅಷ್ಟರಲ್ಲಿ ನಾವು ಬೆಂಕಿಯನ್ನು ತಡೆದೆವು. ಹತ್ತಿರ ಬರುವುದಕ್ಕೆ ಮೊದಲೇ ನಂದಿಸಿದೆವು ಎಂದು ಉಪ ವಲಯ ಅರಣ್ಯಾಧಿಕಾರಿ ಜಾವೆದ್‌ ಅವರು ಸಿಕೆನ್ಯೂಸ್‌ ನೌ ಜತೆ ಮಾತನಾಡುತ್ತಾ ತಿಳಿಸಿದರು.

ಸೋಮವಾರ ರಾತ್ರಿ 7 ಗಂಟೆ ಹೊತ್ತಿಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಮಾಹಿತಿ ಗೊತ್ತಾಯಿತು. ರಾತ್ರಿ 7.30-8 ಗಂಟೆಗೆಲ್ಲ ನಮ್ಮ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದೆವು. ಅಪರಾತ್ರಿ 2 ಗಂಟೆ ಹೊತ್ತಿಗೆ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಲಾಯಿತು. ತದ ನಂತರ ಬೆಂಕಿ ಎಲ್ಲಾದರೂ ಕಾಣಿಸಿಕೊಳ್ಳುತ್ತಾ ಅಂತೆಲ್ಲ ಪರಿಶೀಲನೆ ನಡೆಸಿ ವಾಪಸ್‌ ಬಂದೆವು ಎಂದು ಅವರು ವಿವರ ನೀಡಿದರು.

ಬೆಂಕಿ ಕಾಣಿಸಿಕೊಂಡಿದ್ದು ಎಲ್ಲಿ?

ಬೆಟ್ಟದ ಹಿಂಭಾಗ, ಅಂದರೆ; ಆಂಧ್ರ ಪ್ರದೇಶದ ಗಡಿ ಪ್ರದೇಶದಿಂದ ಬೆಂಕಿ ಹಾಕಲಾಗಿದೆ. ವೀರಾಪುರ ಗ್ರಾಮದ ಕಡೆಯಿಂದ ಬೆಂಕಿ ಅಂಟಿಕೊಂಡಿರುವ ಅನುಮಾನವಿದೆ. ತನಿಖೆ ಮಾಡುತ್ತಿದ್ದೇವೆ. ಈ ಗ್ರಾಮ ಆಂಧ್ರದಲ್ಲಿಯೇ ಇದೆ. ಆದಿನಾರಾಯಣ ಸ್ವಾಮಿ ಬೆಟ್ಟವು ಆಂಧ್ರ ಗಡಿಗಿಂತ ಒಳಗಿದೆ ಎಂದ ಅವರು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ 20 ಸಿಬ್ಬಂದಿ ಪಾಲ್ಗೊಂಡಿದ್ದೆವು. ಇವತ್ತು (ಮಂಗಳವಾರ) ಕೂಡ ಹಗಲಲ್ಲೂ ಬೆಂಕಿ ಬಿದ್ದಿದೆ. ಅದನ್ನು ನಂದಿಸಿದ್ದೇವೆ ಎಂದು ಜಾವೆದ್‌ ಅವರು ಮಾಹಿತಿ ನೀಡಿದರು.

“ಕಾಡಿನಲ್ಲಿ ಆಕಸ್ಮಿಕವಾಗಿಯೂ ಬೀಳುತ್ತದೆ. ರೈತರು ಅರಣ್ಯದ ಪಕ್ಕದ ತಮ್ಮ ಹೊಲಗಳ ಬದುಗಳಲ್ಲಿ ಹುಲ್ಲು ಚೆನ್ನಾಗಿ ಬೆಳೆಯಲಿ ಎಂದು ಬೆಂಕಿ ಹಚ್ಚುತ್ತಾರೆ. ಅಂಥ ಬೆಂಕಿ ಕಾಡಿಗೂ ಹಬ್ಬುತ್ತದೆ. ಇನ್ನು ಕೆಲವರು ಬೇಜಾಬ್ದಾರಿಯಿಂದ ಬೀಡಿ ಸಿಗರೇಟ್‌ ಸೇದಿ ಹಾಕಿದ್ರೂ ಬೆಂಕಿ ಅವಘಡ ಆಗುತ್ತದೆ. ಜತೆಗೆ; ಕಾಡಿನೊಳಗೆ ಗಾಜಿನ ಚೂರುಗಳು ಬಿದ್ದಿದ್ದರೆ ಅವು ಬಿಸಿಲಿನ ತಾಪಕ್ಕೆ ಬೆಂಕಿಯಾಗಿ ಪರಿವರ್ತನೆ ಆಗುವ ಅಪಾಯವಿದೆ” ಎನ್ನುತ್ತಾರೆ ಜಾವೆದ್.

ಅರಣ್ಯದಲ್ಲಿ ಏನೇನಿದೆ?

ಶ್ರೀಗಂಧ, ಉಲುಬೆ, ಕಚೆರಿ, ಮತ್ತಿ, ಬೇವು ಸೇರಿ ಎಲ್ಲ ಜಾತಿಯ ಮರಗಳೂ ಇವೆ. ನೈಸರ್ಗಿಕವಾಗಿ ಶ್ರೀಗಂಧ, ಕಾಡು ಜಾತಿ ಮರಗಿಡಗಳು ಜಾತಿ ಮರಗಳು‌ ಬಯಲು ಸೀಮೆಯಲ್ಲಿ ಕಾಣುವ ಎಲ್ಲ ರೀತಿಯ ಮರಗಳೂ ಬೆಟ್ದ ಪ್ರದೇಶದಲ್ಲಿವೆ. ಜತೆಗೆ; ಇಲ್ಲಿ ಅಪರೂಪದ ಕೃಷ್ಣಮೃಗಗಳಿವೆ, ಕರಡಿಗಳಿವೆ. ಮಂಗಗಳಿವೆ. ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ಅಪಾರ ಸಂಖ್ಯೆಯಲ್ಲಿ ನವಿಲುಗಳೂ ಇವೆ.

ಸಾಮಾನ್ಯವಾಗಿ ಈ ಬೆಟ್ಟದಲ್ಲಿ ಯಾರೂ ಮರ-ಗಿಡಗಳನ್ನು ಕಡಿಯಲ್ಲ. ಅಷ್ಟೇ ಅಲ್ಲ, ಒಣಗಿಯೋ ಅಥವಾ ಮರದಿಂದ ಮುರಿದು ಬಿದ್ದಿರುವ ಕಡ್ಡಿಗಳನ್ನು ಯಾರೂ ತೆಗೆದುಕೊಂಡು ಹೋಗುವುದಿಲ್ಲ. ಹೀಗಾಗಿ ಈ ಬೆಟ್ಟ ಸುರಕ್ಷಿತ. ಇದನ್ನು ಎಲ್ಲರೂ ದೇವರ ಕಾಡು ಎಂದು ನಂಬುತ್ತಾರೆ. ಹೀಗಾಗಿ ಇಲ್ಲಿ ಕಾಡು ಚೆನ್ನಾಗಿದೆ. ಯಾವಾಗಲೂ ಹಸಿರು ಇರುತ್ತದೆ. ಅದೇ ಆದಿನಾರಾಯಣ ಬೆಟ್ಟದ ಅಕ್ಕಪಕ್ಕದ ಬೆಟ್ಟಗುಡ್ಡಗಳಲ್ಲಿ ಜನರು ಮರಗಿಡ ಕಡಿಯುತ್ತಾರೆ.

-ಜಾವೆದ್‌, ಉಪ ವಲಯ ಅರಣ್ಯಾಧಿಕಾರಿ

ಕಟ್ಟೆಚ್ಚರ ವಹಿಸಲಾಗಿದೆ

ಮುಂದೆ ಈ ರೀತಿಯ ಅವಘಢ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ನೀರಿನ ಕ್ಯಾನುಗಳನ್ನು ಸಿದ್ದ ಮಾಡಿಟ್ಟುಕೊಂಡಿದ್ದೇವೆ. ಅರಣ್ಯ ಪ್ರದೇಶದಲ್ಲಿ ಫೈರ್‌ ಲೇನುಗಳನ್ನು ಮಾಡಿದ್ದೇವೆ. ಅದೆಲ್ಲವನ್ನೂ ಪರಿಶೀಲನೆ ಮಾಡಿದ್ದೇವೆ. ಈ ಲೇನುಗಳು ಬೆಂಕಿ ಹರಡುವುದನ್ನು ತಡೆಯುತ್ತವೆ. ನಿರಂತರ ಪರಿವೇಕ್ಷಣೆ, ತಪಾಸಣೆ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಜಾವೆದ್‌ ಹೇಳಿದರು.

  • ಈ ಸುದ್ದಿ ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ…
ಸೂಕ್ಷ್ಮ ಜೈವಿಕ ತಾಣ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಭಾರೀ ಬೆಂಕಿ; ಅಪಾರ ಜೀವ ಸಂಕುಲ, ವೃಕ್ಷ ಸಂಪತ್ತು ಅಗ್ನಿಗೆ ಆಹುತಿ
Tags: chikkaballapurfire at forestgudibandeyelloduYellodu Lakshmi Aadinarayana Swami Temple
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಇರುಮುಡಿ ಸಮರ್ಪಿಸಿದ ಡಿಸಿಎಂ; ಮಣಿಕಂಠ ಸ್ವಾಮಿ ಆಡಿ ಬೆಳೆದ ಪಂದಳಂ ಅರಮನೆಗೂ ಭೇಟಿ, ತಿರುವಾಭರಣಗಳ ಸಂದರ್ಶನ

ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಇರುಮುಡಿ ಸಮರ್ಪಿಸಿದ ಡಿಸಿಎಂ; ಮಣಿಕಂಠ ಸ್ವಾಮಿ ಆಡಿ ಬೆಳೆದ ಪಂದಳಂ ಅರಮನೆಗೂ ಭೇಟಿ, ತಿರುವಾಭರಣಗಳ ಸಂದರ್ಶನ

Leave a Reply Cancel reply

Your email address will not be published. Required fields are marked *

Recommended

ಒಂಟಿ ಸಲಗದಂತೆ ಹೋರಾಡಿ ಗೆದ್ದ ಭಾರತ

ಒಂಟಿ ಸಲಗದಂತೆ ಹೋರಾಡಿ ಗೆದ್ದ ಭಾರತ

4 years ago
ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ 7 ದಶಕದ ಆಡಳಿತದಿಂದ  ಭ್ರಮನಿರಸನಗೊಂಡ ಕೇರಳದಲ್ಲಿ ಬಿಜೆಪಿಯತ್ತ ಒಲವು; ದೇವರ ನಾಡಿನಲ್ಲಿ ಬದಲಾವಣೆಯ ಗಾಳಿ ಎಂದ ಡಿಸಿಎಂ

ಬಾಕಿ ಇರುವ ಪದವಿ, ಡಿಪ್ಲೊಮೊ ಪರೀಕ್ಷೆಗೆ ಡೇಟ್‌ ಫಿಕ್ಸ್

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ