ಚಿಕ್ಕಬಳ್ಳಾಪುರ: ಕ್ರೀಡಾ ಸ್ಪರ್ಧೆಗಳು ಸೋಲು-ಗೆಲುವಿನ ಸೋಪಾನ ಎಂಬುದನ್ನು ಮನಗಂಡು ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸುವ ಆಶಾಭಾವನೆ ಹೊಂದಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.
ಅವರು ಪೊಲೀಸ್ ವಾರ್ಷಿಕ ಕ್ರಿಡಾಕೂಟ ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಪತ್ರಕರ್ತರು ಹಾಗೂ ಪೊಲೀಸರ ಕ್ರಿಕೇಟ್ ಟೂರ್ನಿಗೆ ಚಾಲನೆ ನೀಡಿ; ಕ್ರೀಡೆ ಮನಸ್ಸಿಗೆ ಅಹ್ಲಾದ ಮತ್ತು ದೇಹದಾಡ್ಯಕ್ಕೆ ಉತ್ತಮ ಮಜಲುಗಳನ್ನು ಒದಗಿಸುತ್ತದೆ. ಆರೋಗ್ಯವಂತ ಸ್ಥಿತಿ ಕಾಣಬೇಕಿದ್ದರೆ ಇಂಥಹ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯನ್ನು ರೂಢಿಸಿಕೊಳ್ಳಬೇಕು ಎಂದರು.
ಪತ್ರಕರ್ತರು ಹಾಗೂ ಪೊಲೀಸರ ನಡುವೆ ಭಾಂದವ್ಯ ಗುಣಾತ್ಮಕವಾಗಿರಬೇಕು. ನಿತ್ಯ ಒತ್ತಡಗಳಲ್ಲಿಯೇ ಕಾರ್ಯನಿರ್ವಹಿಸುವವರಿಗೆ ಇದೊಂದು ಸುವರ್ಣಾವಕಾಶ. ಹೀಗಾಗಿ ಸೋಲು ಗೆಲುವಿಗಿಂತ ಬಹು ಮುಖ್ಯವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದರು ಅವರು.
ಸೋತ ಪತ್ರಕರ್ತರು
ಈ ಕ್ರಿಕೆಟ್ ಟೂರ್ನಿಯ ಪತ್ರಕರ್ತರ ತಂಡದ ನಾಯಕನಾಗಿ ಸುವರ್ಣ ರವಿಕುಮಾರ್ ನೇತೃತ್ವ ವಹಿಸಿದ್ದರೆ, ಪೊಲೀಸ್ ತಂಡದ ನಾಯಕರಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನಾಯಕತ್ವ ವಹಿಸಿದ್ದರು. ಪೊಲೀಸ್ ಹಾಗೂ ಪತ್ರಕರ್ತರ ನಡುವಿನ ಕ್ರಿಕೆಟ್ ಪಂದ್ಯಾವಳಿಯು ರೋಚಕವಾಗಿತ್ತು.
ಇನ್ನು ಪಂದ್ಯದಲ್ಲಿ 10 ಓವರ್‌ಗಳಿಗೆ 123 ರನ್ ಭಾರಿಸಿದ ಪೊಲೀಸರು ಗೆಲುವಿನ ನಗೆ ಬೀರಿದರೆ, ಕೇವಲ 80 ರನ್ ಗಳಿಗಷ್ಟೆ ಪತ್ರಕರ್ತರು ತೃಪ್ತಿಪಡೆದುಕೊಂಡು ಸೋಲನುಭವಿಸಿದರು. ಟೂರ್ನಿಯ ಪತ್ರಕರ್ತರ ತಂಡದಲ್ಲಿ ರವಿಕುಮಾರ್ ವಿ. ಮುದ್ದುಕೃಷ್ಣ, ಆಕಾಶ್, ಚರಣ್, ಶಶಿಕುಮಾರ್, ಅಶ್ವತ್ಥ್, ಗಂಗಾಧರ್ ರಮೇಶ್, ಸುಧಾಕರ್, ವಸಲಾವುದ್ದೀನ್, ಮುರಳಿ ಭಾಗವಹಿಸಿದ್ದರೆ; ಪೊಲೀಸರ ತಂಡದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಬಾಗೇಪಲ್ಲಿ ಸರ್ಕಲ್ ಇನಸ್ಪೆಕ್ಟರ್ ನಯಾಜ್ ಬೇಗ್ ಸೇರಿದಂತೆ ಇನ್ನಿತರೆ ಪೊಲೀಸ್ ಸಿಬ್ಬಂದಿ ಇದ್ದರು.