ಬೆಂಗಳೂರು: ಮಹತ್ತ್ವದ ನಿರ್ಧಾರಗಳನ್ನು ಕೈಗೊಳ್ಳುವ ರಾಜ್ಯ ಬಿಜೆಪಿ ಕೋರ್ ಕಮಿಟಿಯನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಚನೆ ಮಾಡಿದ್ದಾರೆ.
ನೂತನ ಕೋರ್ ಕಮಿಟಿಯಲ್ಲಿ ಸದಸ್ಯರಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಹಾಗೂ ಹಿರಿಯ ಸಚಿವರಾದ ಆರ್.ಅಶೋಕ್, ಬಿ.ಶ್ರೀರಾಮುಲು ನೇಮಕವಾಗಿದ್ದಾರೆ.
ಇನ್ನು; ಎನ್.ರವಿಕುಮಾರ್, ಅರವಿಂದ ಲಿಂಬಾವಳಿ, ಸಿ.ಎಂ.ಉದಾಸಿ, ಸಿ.ಟಿ.ರವಿ ಅವರಿಗೆ ಕೊಕ್ ಕೊಡಲಾಗಿದ್ದು, ಅದವ ಬದಲಿಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ನಿರ್ಮಲ ಕುಮಾರ್ ಸುರಾನಾ, ಆರ್.ಅಶೋಕ್ ಹಾಗೂ ಬಿ.ಶ್ರೀರಾಮುಲು ಅವರನ್ನು ನೇಮಿಸಲಾಗಿದೆ.
ಉಳಿದಂತೆ, ತಮಿಳುನಾಡು ಉಸ್ತುವಾರಿ ಆಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಸದಸ್ಯ ಸ್ಥಾನದ ಬದಲಾಗಿ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಸ್ಥಾನ ಕೊಡಲಾಗಿದೆ.
ನೂತನ ಕೋರ್ ಕಮಿಟಿ ಪಟ್ಟಿ
- ನಳೀನ್‌ಕುಮಾರ್ ಕಟೀಲ್
- ಬಿ.ಎಸ್.ಯಡಿಯೂರಪ್ಪ
- ಪ್ರಹ್ಲಾದ್ ಜೋಶಿ
- ಡಿ.ವಿ.ಸದಾನಂದಗೌಡ
- ಜಗದೀಶ್ ಶೆಟ್ಟರ್
- ಕೆ.ಎಸ್.ಈಶ್ವರಪ್ಪ
- ಗೋವಿಂದ ಕಾರಜೋಳ
- ಡಾ.ಸಿ.ಎನ್.ಅಶ್ವತ್ಥನಾರಾಯಣ
- ಲಕ್ಷ್ಮಣ ಸವದಿ
- ಆರ್.ಅಶೋಕ
- ಬಿ.ಶ್ರೀರಾಮುಲು.
- ನಿರ್ಮಲಕುಮಾರ್ ಸುರಾನಾ
- ಬಿ.ಪಿ.ಅರುಣ್‌ಕುಮಾರ್
ವಿಶೇಷ ಆಹ್ವಾನಿತರು
- ಅರುಣ್‌ಸಿಂಗ್
- ಡಿ.ಕೆ.ಅರುಣಾ
- ಸಿ.ಟಿ.ರವಿ