ಬಾಗೇಪಲ್ಲಿ ಟೋಲ್ ಸಮೀಪ ಗಾರ್ಮೆಂಟ್ಸ್ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ
Ra Na Gopala Reddy Bagepalli
ಬಾಗೇಪಲ್ಲಿ: ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುನ್ನು ಕಲ್ಪಿಸಿದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸ ಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಪ್ರತಿಪಾದಿಸಿದರು.
ಪಟ್ಟಣದ ಹೊರವಲಯದ ನಾಗೇಪಲ್ಲಿ ಟೋಲ್ ಬಳಿ ಮಯೂರಿ ಪತ್ತಿನ ಸಹಕಾರ ಸಂಘ
ನಿಯಮಿತ ಹಾಗೂ ನೂತನ ಗಾರ್ಮೆಂಟ್ಸ್ ಶಾಖೆ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು; ಯಾವುದೇ ಪಕ್ಷಿ ರೆಕ್ಕೆ ಇಲ್ಲದಿದ್ದರೆ ಹಾರಲು ಸಾಧ್ಯವಿಲ್ಲ, ಅದೇ ರೀತಿ ಮಹಿಳೆಯರನ್ನು ಮನೆಗೇ ಸೀಮಿತಗೊಳಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಒಬ್ಬ ಮಹಿಳೆ ಅಕ್ಷರ ಕಲಿತರೆ ಒಂದು ಶಾಲೆ ತೆರೆದಂತೆಯೇ ಸರಿ ಎಂದರು.
ಬಹುತೇಕ ಉದ್ಯಮಿಗಳು ನಗರ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು ಸಹಜ,
ಆದರೇ ಈ ಭಾಗದ ಉದ್ಯಮಿ ವೆಂಕಟಶಿವಾರೆಡ್ಡಿ ಅವರು ಬಾಗೇಪಲ್ಲಿಯಂತಹ ಗಡಿ ಭಾಗದಲಿ
ಗಾರ್ಮೆಂಟ್ಸ್ ತೆರೆದು 2 ಸಾವಿರ ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಸಿ, ಗೌರವದ ಬದುಕುನ್ನು
ಕಟ್ಟಿಕೊಟ್ಟಿರುವುದು ಶ್ಲಾಘನೀಯ ಎಂಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ ಸಚಿವರು
ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಚಿಕ್ಕ ನರಸಿಂಹಯ್ಯ, ಮಾಜಿ ಅಧ್ಯಕ್ಷ ಕೇಶವರೆಡ್ಡಿ, ಮಾವು ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಕೆ.ವಿ.ನಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಬಾಗೇಪಲ್ಲಿ ತಾಲ್ಲೂಕು ಮಂಡಲಾಧ್ಯಕ್ಷ ಆರ್.ಪ್ರತಾಪ್ ಎಸ್ಟಿ ಮೊರ್ಚಾ ವೆಂಕಟೇಶ್ ಇನ್ನೂ ಮುಂತಾದವರು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.