• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

CEN ಪೊಲೀಸರ ಭರ್ಜರಿ ಭೇಟೆ; ಚಿಕ್ಕಬಳ್ಳಾಪುರ, ಕೋಲಾರ ಕಡೆಯ ಮುಗ್ಧ ಯುವತಿಯರನ್ನು ಯಾಮಾರಿಸಿ ದಿಲ್ಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಂಗಾರಪೇಟೆ ಖತರ್ನಾಕ್‌ ಮಹಿಳೆ ಕೊನೆಗೂ ಅಂದರ್‌

cknewsnow desk by cknewsnow desk
April 18, 2021
in CHIKKABALLAPUR, CRIME, KOLAR, STATE
Reading Time: 1 min read
0
CEN ಪೊಲೀಸರ ಭರ್ಜರಿ ಭೇಟೆ; ಚಿಕ್ಕಬಳ್ಳಾಪುರ, ಕೋಲಾರ ಕಡೆಯ ಮುಗ್ಧ ಯುವತಿಯರನ್ನು ಯಾಮಾರಿಸಿ ದಿಲ್ಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಂಗಾರಪೇಟೆ  ಖತರ್ನಾಕ್‌ ಮಹಿಳೆ ಕೊನೆಗೂ ಅಂದರ್‌
917
VIEWS
FacebookTwitterWhatsuplinkedinEmail

ದೇಶದ ಹಲವು ಭಾಗಗಳಲ್ಲಿ ಭಾರೀ ನೆಟ್ವರ್ಕ್‌ ಹೊಂದಿರುವ ಈ ಮಹಿಳೆ, ಕೆಲ ಯುವತಿಯರನ್ನು ದೇಶದ ವಿವಿಧೆಡೆ ವೇಶ್ಯಾವಾಟಿಕೆಗೆ ತಳ್ಳಿದರೆ, ಇನ್ನು ಕೆಲವರನ್ನು ಅರಬ್‌ ದೇಶಗಳಿಗೆ ರವಾನಿಸಿರುವ ಅನುಮಾನವೂ ಇದೆ.


M Krishnappa Chikkaballapura

ಚಿಕ್ಕಬಳ್ಳಾಪುರ/ಬಂಗಾರಪೇಟೆ: ಮುಗ್ಧ ಬಾಲಕಿಯರು ಹಾಗೂ ಯುವತಿಯರನ್ನು ಬಣ್ಣದ ಮಾತುಗಳಿಂದ ನಂಬಿಸಿ, ವಂಚಿಸಿ ದೆಹಲಿ ಮತ್ತಿತರೆ ಕಡೆಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುತ್ತಿದ್ದ ಖತರ್ನಾಕ್‌ ಮಹಿಳೆಯೊಬ್ಬಳು ಚಿಕ್ಕಬಳ್ಳಾಪುರ ಸೆನ್‌ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

2016-17ರಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ಬಂಗಾರಪೇಟೆ ರಾಮಕೃಷ್ಣ ಹೆಗಡೆ ಕಾಲೋನಿ ನಿವಾಸಿ ಶ್ಯಾಮಲಾ (60-62) ಎಂಬ ಮಹಿಳೆ ಕೊನೆಗೂ ನಾಲ್ಕು ವರ್ಷಗಳ ನಂತರ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಶನಿವಾರ (ಏಪ್ರಿಲ್‌ 17) ಬೆಳಗ್ಗೆಯೇ ಆ ಮಹಿಳೆಯ ಮನೆಗೆ ಲಗ್ಗೆ ಇಟ್ಟ ಪೊಲೀಸರು, ಅಕ್ಕಪಕ್ಕದವರಿಗೂ ಗೊತ್ತಾಗದಂತೆ ಬಲೆಗೆ ಬೀಳಿಸಿಕೊಂಡಿದ್ದಾರೆ. ಶುಕ್ರವಾರವೇ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯಕ್ಕೆ ಶ್ಯಾಮಲಾ ಚಿಂತಾಮಣಿಯ ಮಹಿಳಾ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾಳೆ.

ಚಿಕ್ಕಬಳ್ಳಾಪುರ, ಕೋಲಾರ, ಬಂಗಾರಪೇಟೆ ಮುಂತಾದ ಕಡೆಗಳಲ್ಲಿ ಬಡತನದಲ್ಲಿರುವ ಹೆಣ್ಣು ಮಕ್ಕಳಿಗೆ ಹಣದ ಆಮಿಷವೊಡ್ಡಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಶ್ಯಾಮಲಾ; ಆ ಯುವತಿಯರನ್ನು ಮುಂಬಯಿ, ದೆಹಲಿ ಸೇರಿದಂತೆ ದೇಶದ ನಾನಾ ಕಡೆಗಳಿಗೆ ಕರೆದುಕೊಂಡು ಹೋಗಿ ಅವರನ್ನು ವೇಶ್ಯಾವಾಟಿಕೆಗೆ ಬಲವಂತವಾಗಿ ತಳ್ಳುತ್ತಿದ್ದಳು. ಅನೇಕ ಯುವತಿಯರು ಈಕೆಯ ಬಲೆಗೆ ಬಿದ್ದು ಬದುಕು ಹಾಳು ಮಾಡಿಕೊಂಡಿದ್ದು, ಅದೆಲ್ಲ ವಿಷಯವನ್ನೂ ಚಿಕ್ಕಬಳ್ಳಾಪುರ ಪೊಲೀಸರು ಹೊರಗೆಳೆಯುವುದು ಪಕ್ಕಾ.

ದೇಶದ ಹಲವು ಭಾಗಗಳಲ್ಲಿ ಭಾರೀ ನೆಟ್ವರ್ಕ್‌ ಹೊಂದಿರುವ ಈ ಕಿಲಾಡಿ ಮಹಿಳೆ ಕೆಲ ಯುವತಿಯರನ್ನು ದೇಶದ ವಿವಿಧೆಡೆ ವೇಶ್ಯಾವಾಟಿಕೆಗೆ ತಳ್ಳಿದರೆ, ಇನ್ನು ಕೆಲವರನ್ನು ಅರಬ್‌ ದೇಶಗಳಿಗೆ ರವಾನಿಸಿರುವ ಅನುಮಾನವೂ ಇದೆ. ಮಾನವ ಕಳ್ಳಸಾಗಾಣಿಕೆಯ ಆಯಾಮದಲ್ಲೂ ಆಕೆಯ ವಿರುದ್ಧ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ.

ಬಲೆಗೆ ಬಿದ್ದಿದ್ದು ಹೇಗೆ?

ಕೆಲ ದಶಕಗಳಿಂದಲೂ ಇದೇ ದಂಧೆ ಮಾಡುತ್ತಿದ್ದ ಈಕೆಯ ಬಗ್ಗೆ ಬಂಗಾರಪೇಟೆಯಲ್ಲಿ ಅಲ್ಲಲ್ಲಿ ಗುಸುಗುಸು ಇತ್ತು. ಸದ್ದಿಲ್ಲದೆ ನಡೆಸುತ್ತಿದ್ದ ಈ ಕತ್ತಲ ದಂಧೆ ಸ್ಥಳೀಯ ಪೊಲೀಸರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಈ ನಡುವೆ 2017ರಲ್ಲೇ ಈಕೆಯ ಗ್ಯಾಂಗ್‌ನ ಕೆಲವರನ್ನು ಸೆರೆ ಹಿಡಿದಿದ್ದ ಪೋಲೀಸರಿಂದ ಶ್ಯಾಮಲಾ ಕೂದಲೆಳೆಯಂತರದಲ್ಲಿ ತಪ್ಪಿಸಿಕೊಂಡಿದ್ದಳು. ಆಗಿನಿಂದಲೂ ಪೊಲೀಸರು ಆಕೆಗಾಗಿ ಬಲೆ ಬೀಸಿ ಕಾಯುತ್ತಿದ್ದರು. ಬಂಗಾರಪೇಟೆಯಲ್ಲಿ ಆಕೆಯ ಮನೆಯ ಆಸುಪಾಸಿನಲ್ಲಿ ಮಫ್ತಿ ರೌಂಡ್ಸ್‌ ಕೂಡ ಹೊಡೆದಿದ್ದರು. ಕೊನೆಗೂ ಶನಿವಾರ ಬೆಳಗ್ಗೆ ಪೊಲೀಸರು ಶ್ಯಾಮಲಾ ಮನೆ ಬಾಗಿಲು ಬಡಿದಿದ್ದಾರೆ.

ದೂರು ಕೊಟ್ಟಿದ್ದ ಸಂತ್ರಸ್ಥ ಯುವತಿ

ಕೆಲ ವರ್ಷಗಳಿಂದ ಚಿಕ್ಕಬಳ್ಳಾಪುರ ಮೂಲದ ಯುವತಿಯೊಬ್ಬರು ನಾಪತ್ತೆಯಾಗಿದ್ದರು. ಆಕೆಯ ಪೋಷಕರು ಮಗಳಿಗಾಗಿ ಹುಡುಕಾಡಿ ಸುಸ್ತಾಗಿದ್ದರು. ಆದರೆ, ಈ ದುಷ್ಟ ಹೆಣ್ಣು ಆ ಮುಗ್ಧ ಬಾಲಕಿಗೆ ಬಣ್ಣದ ಮಾತುಗಳನ್ನು ಹೇಳಿ ಕರೆದುಕೊಂಡು ಹೋಗಿದ್ದಳು. ಪಾಪಿ ಮಹಿಳೆಯ ಜತೆ ಮುಂಬಯಿ, ದೆಹಲಿ ಸುತ್ತಿದ್ದ ಆ ಯುವತಿಗೆ ಅಲ್ಲಿನ ಕರಾಳತೆಯ ದರ್ಶನವಾಗಿತ್ತು. ಪೋಷಕರನ್ನು ಸೇರಿಕೊಳ್ಳಲು ಆ ಯುವತಿ ಮಾಡಿದ್ದ ಎಲ್ಲ ಪ್ರಯತ್ನಗಳನ್ನು ದುಷ್ಟ ಮಹಿಳೆ ವಿಫಲಗೊಳಿಸಿ ಅಮಾನುಷವಾಗಿ ನಡೆದುಕೊಂಡಿದ್ದಳು. ರಕ್ಕಸರೂಪಿಯಾಗಿ ಆಕೆಗೆ ಕಾಟ ಕೊಟ್ಟಿದ್ದಳೆಂಬ ಮಾಹಿತಿ ಸಿಕ್ಕಿದೆ. ಕೆಲ ತಿಂಗಳ ಹಿಂದೆ ಹೇಗೋ ತಪ್ಪಿಕೊಂಡು ಬಂದ ಯುವತಿ ಚಿಕ್ಕಬಳ್ಳಾಪುರದಲ್ಲಿ ತನ್ನ ಪೋಷಕರ ಮಡಿಲು ಸೇರಿಕೊಂಡಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೋಷಕರು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಯುವತಿಯು ಪೊಲೀಸರಿಗೆ ಶ್ಯಾಮಲಾಳ ಫೊಟೋ ನೀಡಿದ್ದಾಳೆ. ಹಳೆಯ ಚೆರಿತ್ರೆಯನ್ನೆಲ್ಲ ಕೆದಕಿದ ಮೇಲೆ ಆ ಖತರ್ನಾಕ್‌ ಲೇಡಿ ಶ್ಯಾಮಲಾ ಎನ್ನುವುದು ಖಾಕಿಗಳಿಗೆ ಕನ್‌ಫರ್ಮ್‌ ಆಗಿದೆ. ಅಲ್ಲಿಗೆ ಪೊಲೀಸರ ಭರ್ಜರಿ ಸ್ಕೆಚ್‌ ರೆಡಿಯಾಯಿತಲ್ಲದೆ, ಬಂಗಾರಪೇಟೆಗೆ ಸೆನ್‌ ಪೊಲೀಸರ ಪ್ರವೇಶವೂ ಆಯಿತು.

ಬಂಗಾರಪೇಟೆಯಲ್ಲಿ ದಾದಾಗಿರಿ ಮಾಡಿದ್ದಳು!!

ಪೊಲೀಸರು ಸಂತ್ರಸ್ಥ ಯುವತಿಯಿಂದ ಎಲ್ಲ ಮಾಹಿತಿ ಕಲೆಹಾಕಿದ ಮೇಲೆ ಬಹಳ ದಿನದ ಹಿಂದೆ ಒಂದು ದಿನ ಶ್ಯಾಮಲಾ ಮನೆಯ ಬಾಗಿಲು ಬಡಿದಿದ್ದಾರೆ. ಆದರೆ, ಪೊಲೀಸರ ಜತೆ ಬರಲು ನಿರಾಕರಿಸಿದ ಆಕೆ ಖಾಕಿಗಳ ಮೇಲೆಯೇ ದಾದಾಗಿರಿ ಮಾಡಿದ್ದಳು. ಮನೆಯಲ್ಲಿ ರಂಪಾಟ ಮಾಡಿ, ವಾರಂಟ್‌ ಇಲ್ಲದೆ ನನ್ನ ಮನೆಗೆ ಬರಲು ನಿಮಗೆಷ್ಟು ಧೈರ್ಯ ಎಂದು ಧಮ್ಕಿ ಬೇರೆ ಹಾಕಿದ್ದಳು. ಆದರೆ, ಆಕೆಯ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆವತ್ತು ಸೈಲಂಟಾಗಿಯೇ ಮನೆಯಿಂದ ಹೊರಬಂದು ಬರೋಬ್ಬರಿ ಕೆಲ ತಿಂಗಳ ಕಾಲ ಸ್ಕೆಚ್‌ ಹಾಕಿ ಪಕ್ಕಾ ಆಪರೇಷನ್‌ಗೆ ಇಳಿದಿದ್ದರು.

ಚಿಕ್ಕಬಳ್ಳಾಪುರಕ್ಕೆ ಬಂದಿದ್ದಳಾ ಖತರ್ನಾಕ್‌ ಲೇಡಿ

ಸಂತ್ರಸ್ಥ ಯುವತಿ ತಪ್ಪಿಸಿಕೊಂಡ ಮೇಲೆ ಚಿಕ್ಕಬಳ್ಳಾಪುರಕ್ಕೂ ಎಡತಾಕಿದ್ದ ಶ್ಯಾಮಲಾ ಇಡೀ ನಗರದಲ್ಲಿ ಯುವತಿಯನ್ನು ಶೋಧಿಸಿರಬಹುದು ಎಂಬ ಅನುಮಾನವೂ ಕಾಡುತ್ತಿದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯ ಗ್ಯಾಂಗ್‌ ಚಿಕ್ಕಬಳ್ಳಾಪುರದಲ್ಲಿ ಯುವತಿಗಾಗಿ ಹೆಜ್ಜೆ ಹೆಜ್ಜೆಗೂ ಶೋಧ ನಡೆಸಿರಬಹದು ಎನ್ನಲಾಗಿದೆ. ಈ ಕಾರಣದಿಂದ ಪೊಲೀಸರ ಬಲೆಗೆ ಬೀಳಬಹುದು ಎಂದು ಹೆದರಿದ್ದ ಶ್ಯಾಮಲಾ, ತನ್ನ ಕಾರ್ಯಕ್ಷೇತ್ರ ದೆಹಲಿಯಿಂದ ಬಂಗಾರಪೇಟೆಗೆ ಶಿಫ್ಟ್‌ ಆಗಿದ್ದಳು. ಅದೇ ಆಕೆಗೆ ಮುಳುವಾಯಿತು.

ದೆಹಲಿಯಲ್ಲೂ ಈಕೆ ವಿರುದ್ಧ ಕೇಸುಗಳಿವೆ!

ಕತ್ತಲ ದಂಧೆಯಲ್ಲಿ ಮುಳುಗೇಳುತ್ತಿದ್ದ ಶ್ಯಾಮಲಾ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಸಿಕೆನ್ಯೂಸ್‌ ನೌಗೆ ಸಿಕ್ಕಿದೆ. ಮುಖ್ಯವಾಗಿ ದಿಲ್ಲಿಯ ಕೆಲ ಠಾಣೆಗಳಲ್ಲಿ ಈಕೆಯ ವಿರುದ್ಧ ಕೇಸುಗಳಿದ್ದು, ಆಗಾಗ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾಳೆ ಎನ್ನಲಾಗಿದೆ. ಇವಳ ಇನ್ನೊಬ್ಬ ಸಹಚರ ಕುಖ್ಯಾತ ಅಪರಾಧಿ ಎಂಬ ಮಾಹಿತಿಯೂ ಇದೆ. ಉತ್ತರ ಭಾರತದಲ್ಲಿ ದೊಡ್ಡ ನೆಟ್‌ವರ್ಕ್‌ ಹೊಂದಿರುವ ಶ್ಯಾಮಲಾ ಅಲ್ಲಿಗೆಲ್ಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಬಡ ಯುವತಿರನ್ನೇ ಕಳಿಸುತ್ತಿದ್ದಳೆಂದು ಗೊತ್ತಾಗಿದೆ. ತನ್ನ ಸಂಬಂಧಿಕರಲ್ಲಿ ಕೆಲ ಹೆಣ್ಣು ಮಕ್ಕಳನ್ನೇ ಈ ಪಾಪಕೂಪಕ್ಕೆ ತಳ್ಳಿದ್ದಳೆನ್ನಲಾದ ಈ ಹೆಂಗಸು, ಬಂಗಾರಪೇಟೆಯಲ್ಲೂ ತನ್ನ ಕಬಂಧಬಾಹುಗಳನ್ನು ಚಾಚಿದ್ದಳು ಎಂದು ಗೊತ್ತಾಗಿದೆ. ವಿಚಿತ್ರವೆಂದರೆ, ಬಂಗಾರಪೇಟೆ ಠಾಣೆಯಲ್ಲಿ ಈಕೆಯ ಬಗ್ಗೆ ಒಂದು ಪ್ರಕರಣವೂ ದಾಖಲಾಗಿಲ್ಲ!!

****

Lead Photo by lalesh aldarwish from Pexels / ಈ ಚಿತ್ರವನ್ನು ಕೇವಲ ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ.

Tags: cen policechikkaballapuracrimehuman traffickingkolaroperation bangarpetpolice
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಅಕ್ಷರಲೋಕದ ಅಮರ ಜೀವಿ, ನೂರೆಂಟು ವರ್ಷಗಳ ಪಯಣ ಮುಗಿಸಿದ ಸಾರ್ಥಕ GV; ಕನ್ನಡ ಶಬ್ದಬ್ರಹ್ಮ, ನಡೆದಾಡುವ ನಿಘಂಟು,   ಪ್ರೊ.ಜಿ.ವೆಂಕಟಸುಬ್ಬಯ್ಯ ಇನ್ನಿಲ್ಲ

ಅಕ್ಷರಲೋಕದ ಅಮರ ಜೀವಿ, ನೂರೆಂಟು ವರ್ಷಗಳ ಪಯಣ ಮುಗಿಸಿದ ಸಾರ್ಥಕ GV; ಕನ್ನಡ ಶಬ್ದಬ್ರಹ್ಮ, ನಡೆದಾಡುವ ನಿಘಂಟು, ಪ್ರೊ.ಜಿ.ವೆಂಕಟಸುಬ್ಬಯ್ಯ ಇನ್ನಿಲ್ಲ

Leave a Reply Cancel reply

Your email address will not be published. Required fields are marked *

Recommended

ದಾಖಲೆ ಸಲ್ಲಿಸಲು ಪೂರೈಕೆ ಕಂಪನಿಗಳ ಮೀನಾ-ಮೇಷ; ತಯಾರಿಕೆ ಕಂಪನಿಗಳಿಂದಲೇ ನೇರವಾಗಿ ವ್ಯಾಕ್ಸಿನ್  ಖರೀದಿಗೆ ಮುಂದಾದ ಸರಕಾರ

ಕಾಲೇಜು ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಲಸಿಕೆ: ಶೀಘ್ರ ತರಗತಿಗಳ ಆರಂಭಕ್ಕೆ ಚಿಂತನೆ ಎಂದ ಡಿಸಿಎಂ

5 years ago
ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ ಕೇಸ್ ತೆಗೆದುಕೊಂಡಿರಿ ಸಿದ್ದರಾಮಯ್ಯ?

ಮೇಲ್ಮನೆ ಚುನಾವಣೆ ಮೈತ್ರಿ ವಿಚಾರ, ಭಾನುವಾರದೊಳಗೆ ನಿರ್ಧಾರ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ