• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಲಾಕ್‌ಡೌನ್‌ ಇಲ್ಲ; ರಾಜ್ಯದಲ್ಲಿ ವೀಕೆಂಡ್‌ನಲ್ಲಿ ಟೈಟ್ ನೈಟ್ ಕರ್ಫ್ಯೂ ಮಾತ್ರ, ಶ್ರೀರಾಮನವಮಿ ಮುಗಿದ ಮೇಲೆ ಬುಧವಾರ ರಾತ್ರಿಯಿಂದಲೇ ಹದಿನಾಲ್ಕು ದಿನ 144 ಸೆಕ್ಷನ್ ಜಾರಿ

cknewsnow desk by cknewsnow desk
April 20, 2021
in COVID-19, NEWS IN USE, STATE
Reading Time: 1 min read
0
ಲಾಕ್‌ಡೌನ್‌ ಇಲ್ಲ;  ರಾಜ್ಯದಲ್ಲಿ ವೀಕೆಂಡ್‌ನಲ್ಲಿ  ಟೈಟ್ ನೈಟ್ ಕರ್ಫ್ಯೂ ಮಾತ್ರ, ಶ್ರೀರಾಮನವಮಿ ಮುಗಿದ ಮೇಲೆ ಬುಧವಾರ  ರಾತ್ರಿಯಿಂದಲೇ ಹದಿನಾಲ್ಕು ದಿನ 144 ಸೆಕ್ಷನ್ ಜಾರಿ

photo by @ckphotographi

915
VIEWS
FacebookTwitterWhatsuplinkedinEmail

Lead photo from @ckphotographihi / ಬೆಂಗಳೂರು ನಗರದ ಚರ್ಚ್‌ ಸ್ಟ್ರೀಟ್‌ನ ಸಂಜೆ ನೋಟ.

ಲಾಕ್‌ಡೌನ್‌ ಆಗುತ್ತಾ? ಇಲ್ಲವಾ? ಎಂದು ಬೆಳಗ್ಗೆಯಿಂದ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಧಾನಿಯೇ ಲಾಕ್‌ಡೌನ್‌ ಕೊನೆ ಆಯ್ಕೆ ಎಂದ ಮೇಲೆ ರಾಜ್ಯ ಸರಕಾರವು ತನ್ನ ಕಾರ್ಯತಂತ್ರ ಬದಲಿಸಿತು. ಹಾಗಾದರೆ, ನಾಳೆ ರಾತ್ರಿಯಿಂದ ಏನಿರುತ್ತದೆ? ಏನಿರಲ್ಲ?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯನ್ನು ಕಟ್ಟಿಹಾಕಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ರಾಜ್ಯ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಿದೆ.

ಈ ಸಂಬಂಧ ಹೊಸ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಹಾಗೂ ರಾಜ್ಯಪಾಲ ವಜೂಭಾಯ್‌ ವಾಲ ಅವರ ಜತೆ ಚರ್ಚೆ ನಡೆಸಿದ ನಂತರ ಈ ನಿರ್ಧಾರಗಳನ್ನು ಕೈಗೊಂಡಿದೆ. ಮಂಗಳವಾರ ಬೆಳಗ್ಗೆಯಿಂದ ಲಾಕ್‌ಡೌನ್‌ ಬಗ್ಗೆಯೇ ಯೋಚಿಸುತ್ತಿದ್ದ ಸರಕಾರ ರಾತ್ರಿ ಪ್ರಧಾನಿ ಭಾಷಣದ ನಂತರ ಬಿಗಿ ಕ್ರಮಗಳತ್ತ ಹೊರಳಿತು.

ಸರ್ವಪಕ್ಷ ಮುಖಂಡರು, ಬೆಂಗಳೂರು ನಗರದ ಎಲ್ಲ ಶಾಸಕರು ಹಾಗೂ ತಜ್ಞರ ಸಮಿತಿಯ ವರದಿ ಪಡೆದ ನಂತರ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಜತೆಯಲ್ಲಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರು ನೂತನ ಮಾರ್ಗಸೂಚಿಯ ಮಾಹಿತಿ ನೀಡಿದರು. ಈ ಮಾರ್ಗಸೂಚಿ ನಾಳೆ, ಅಂದರೆ; ಬುಧವಾರ ರಾತ್ರಿ 9 ಗಂಟೆಯಿಂದಲೇ ಜಾರಿಯಾಗಲಿದೆ.

’ಕರ್ನಾಟಕದಲ್ಲಿ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಸೇರಿದಂತೆ ಸಾರ್ವಜನಿಕರ ಸುರಕ್ಷತೆಗಾಗಿ ವಿಧಿಸಲಾಗಿರುವ ಎಲ್ಲಾ ನಿರ್ಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸರ್ಕಾರದೊಂದಿಗೆ ಸಹಕರಿಸಿ ಎಂದು ಕೋರುತ್ತೇನೆ' : ಸಿಎಂ @BSYBJP

— CM of Karnataka (@CMofKarnataka) April 20, 2021

ಹಾಗಾದರೆ, ಮುಂದಿನ 14 ದಿನ ರಾಜ್ಯದಲ್ಲಿ ಜಾರಿಯಲ್ಲಿರುವ ಈ ಮಾರ್ಗಸೂಚಿಯಲ್ಲಿ ಏನಿದೆ?

  • ಮುಂದಿನ 14 ದಿನಗಳವರೆಗೆ, ಅಂದರೆ; ಮೇ 4ರವರೆಗೆ ಹೊಸ ಮಾರ್ಗಸೂಚಿ ಜಾರಿಯಲ್ಲಿ ಇರುತ್ತದೆ.
  • ರಾತ್ರಿ 9 ಗಂಟೆಯಿಂದ ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಇರುತ್ತದೆ.
  • ವೀಕೆಂಡ್‌ನಲ್ಲಿ, ಅಂದರೆ; ಶನಿವಾರ & ಭಾನುವಾರ ಇಡೀ ರಾಜ್ಯದಲ್ಲಿ ಸಂಪೂರ್ಣವಾಗಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ.
  • ಸಿನಿಮಾ ಪ್ರದರ್ಶನ ಸಂಪೂರ್ಣ ಬಂದ್.‌
  • ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳಗಳಿಗೂ ಅವಕಾಶ ಇಲ್ಲ.
  • ಸ್ವಿಮಿಂಗ್ ಫೆಡರೇಶನ್ ಪ್ರಾಕ್ಟೀಸ್ ಇದೆ ಅವರಿಗೆ ಮಾತ್ರ ಅವಕಾಶ
  • ಎಲ್ಲೆಡೆ ದೇವಸ್ಥಾನಗಳು ತೆರೆದಿರುತ್ತವೆ, ಆದರೆ ಪ್ರವೇಶ ಅರ್ಚಕರಿಗೆ ಮಾತ್ರ. ಚರ್ಚ್, ಮಸೀದಿ ಸೇರಿ ಎಲ್ಲಾ ಧಾರ್ಮಿಕ ಸ್ಥಳಗಳು ಬಂದ್
  • ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೂತು ತಿನ್ನಲು ಅವಕಾಶ ಇಲ್ಲ. ಕೇವಲ ಪಾರ್ಸೆಲ್‌​ಗೆ ಮಾತ್ರ ಅವಕಾಶ.
  • ಶಾಪಿಂಗ್‌ ಮಾಲ್‌ಗಳು ಸಂಪೂರ್ಣ ಬಂದ್.
  • ಕೈಗಾರಿಕೆಗಳನ್ನು ತೆರೆಯಲು ನಿರ್ಬಂಧ ಇಲ್ಲ. ಕೈಗಾರಿಕೆಗಳ ರಾತ್ರಿಪಾಳಿಗೂ ಅವಕಾಶ.
  • ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ.
  • ದಿನಸಿ, ತರಕಾರಿ ಅಂಗಡಿ, ಮಾರುಕಟ್ಟೆ ಅವಕಾಶ. ಮಾರುಕಟ್ಟೆಗಳನ್ನು ಏ.23ರಿಂದ ತೆರೆದ ಪ್ರದೇಶಕ್ಕೆ ಶಿಫ್ಟ್.
  • ಕಟ್ಟಡ ಮತ್ತು ಇನ್ನಿತರೆ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ.
  • ಲಿಕ್ಕರ್ ಶಾಪ್, ‌ಬಾರ್‌ʼಗಳಲ್ಲಿ ಕೂತು ಕುಡಯಲು ಅವಕಾಶ ಇಲ್ಲ. ಅಲ್ಲೂ ಪಾರ್ಸೆಲ್‌ಗಷ್ಟೇ ಚಾನ್ಸ್.‌
  • ಇ-ಕಾಮರ್ಸ್ ಚಟುವಿಟಕೆಗಳಿಗೆ ನಿರ್ಬಂಧವಿಲ್ಲ. ಐಟಿ-ಬಿಟಿ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್.
  • ಸರಕಾರಿ ಕಚೇರಿಗಳ ಹಾಜರಾತಿ 50%ಗೆ ಅವಕಾಶ.
  • ಅಂತಾರಾಜ್ಯ ಸಂಚಾರಕ್ಕೆ ಸಮಸ್ಯೆ ಇಲ್ಲ.
  • ಪ್ರಯಾಣಿಕರ ಸಾರಿಗೆ ಬಸ್ಸುಗಳಲ್ಲಿ 50% ಜನರಿಗೆ ಮಾತ್ರ ಅವಕಾಶ.
  • ಮದುವೆಗಳಲ್ಲಿ 50 ಜನರಿಗೆ ಮಾತ್ರ ಅವಕಾಶ.
  • ಶವ ಸಂಸ್ಕಾರದಲ್ಲಿ 20 ಜನಕ್ಕಿಂತ ಹೆಚ್ಚು ಪಾಲ್ಗೊಳ್ಳುವಂತಿಲ್ಲ.
  • ಸೆಕ್ಷನ್ 144 ಇಡೀ ರಾಜ್ಯದಲ್ಲಿ ಜಾರಿ
  • ದೂರ ಪ್ರಯಾಣ ಮಾಡುವವರು ಟಿಕೆಟ್ ತೋರಿಸಿ ಹೋಗುವುದು ಕಡ್ಡಾಯ.

ಶ್ರೀರಾಮನವಮಿ ಅಬಾಧಿತ

ಅಲ್ಲಿಗೆ ಎರಡು ವಾರ ರಾಜ್ಯ ಲಾಕ್‌ಡೌನ್‌ ಆಗುತ್ತದೆ ಎಂಬ ಆತಂಕ ದೂರವಾಗಿದೆ. ಉತ್ಸಾಹದಲ್ಲಿ ಯುಗಾದಿ ಹಬ್ಬ ಆಚರಿಸಿದ್ದ ಜನ ಬುಧವಾರ ನಿಶ್ಚಿಂತೆಯಿಂದ ಶ್ರೀರಾಮನವಮಿ ಆಚರಿಸಬಹುದು. ಆದರೆ, ಹೊರಗೆಲ್ಲೂ ಶ್ರೀರಾಮ ದೇವಾಲಯಕ್ಕೆ ಹೋಗುವ ಬದಲು ಮನೆಯಲ್ಲೇ ಶ್ರೀರಾಮನಿಗೆ ನಮಿಸಿದರೆ ಉತ್ತಮ. ಕೋವಿಡ್‌ ವೈರಸ್‌ ಗಾಳಿಯಲ್ಲೇ ತೇಲಾಡುತ್ತಿದೆ ಎಂಬ ಭೀತಿ ಇದ್ದು, ಜನರು ದೇವಾಲಯಗಳಿಗೆ ಹೋಗುವುದು ಬೇಡ ಎಂದು ತಜ್ಞರು ಮನವಿ ಮಾಡಿದ್ದಾರೆ.

ರಾಜ್ಯದ ಕೋವಿಡ್-19 ಪ್ರಕರಣಗಳ ಕುರಿತಂತೆ ರಾಜ್ಯಪಾಲ ಶ್ರೀ ವಜುಭಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ಇಂದು ಏರ್ಪಡಿಸಿದ್ದ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ @BSYBJP ಅವರು ಭಾಗವಹಿಸಿದ್ದರು. (1/2)#KarnatakaFightsCorona #Unite2FightCorona pic.twitter.com/TIrauBhBES

— CM of Karnataka (@CMofKarnataka) April 20, 2021
Tags: covid 19 bangalorekarnatakano lockdown in bangaloreweekend curfew
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಪ್ರಕ್ಷಬ್ಧ ಮನಸ್ಸನ್ನು ತಿಳಿಗೊಳಿಸಿ ಮರಗಟ್ಟಿ ಕೂತ ಅಹಂ ನಾಶ ಮಾಡಿ ನಮ್ಮೊಳಗೇ ನಡೆಯುತ್ತಿರುವ ಯುದ್ಧಗಳಿಗೆ ಇತಿಶ್ರೀ ಹಾಡುವ ಶ್ರೀರಾಮನವಮಿ

ಪ್ರಕ್ಷಬ್ಧ ಮನಸ್ಸನ್ನು ತಿಳಿಗೊಳಿಸಿ ಮರಗಟ್ಟಿ ಕೂತ ಅಹಂ ನಾಶ ಮಾಡಿ ನಮ್ಮೊಳಗೇ ನಡೆಯುತ್ತಿರುವ ಯುದ್ಧಗಳಿಗೆ ಇತಿಶ್ರೀ ಹಾಡುವ ಶ್ರೀರಾಮನವಮಿ

Leave a Reply Cancel reply

Your email address will not be published. Required fields are marked *

Recommended

ನನ್ನ ತಂದೆಯನ್ನು ಹತ್ತಿಕ್ಕಲು ನನ್ನ ವಿರುದ್ಧ ಆರೋಪ: ಹೆಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ

ನನ್ನ ತಂದೆಯನ್ನು ಹತ್ತಿಕ್ಕಲು ನನ್ನ ವಿರುದ್ಧ ಆರೋಪ: ಹೆಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ

5 years ago
ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಾಧ್ಯಮದ ಜವಾಬ್ದಾರಿ ಹೆಚ್ಚು: ಎಚ್. ಬಿ.ದಿನೇಶ್

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಾಧ್ಯಮದ ಜವಾಬ್ದಾರಿ ಹೆಚ್ಚು: ಎಚ್. ಬಿ.ದಿನೇಶ್

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ