• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಗಡಿನಾಡಿನಲ್ಲೊಬ್ಬ ಫುಕುವೋಕಾ! ಅರತ್ತೈದರ ಪ್ರಾಯದಲ್ಲೂ ಸಾವಯವ ಕೃಷಿ ಮೇಲೆ ವ್ಯಾಮೋಹ; ಬರಪೀಡಿತ ಗಡಿ ಪ್ರದೇಶದಲ್ಲಿ ವರ್ಷಕ್ಕೆರಡು ಭತ್ತದ ಬೆಳೆ

cknewsnow desk by cknewsnow desk
May 13, 2021
in EDITORS'S PICKS, NEWS & VIEWS, STATE
Reading Time: 2 mins read
0
ಗಡಿನಾಡಿನಲ್ಲೊಬ್ಬ ಫುಕುವೋಕಾ! ಅರತ್ತೈದರ ಪ್ರಾಯದಲ್ಲೂ ಸಾವಯವ ಕೃಷಿ ಮೇಲೆ ವ್ಯಾಮೋಹ; ಬರಪೀಡಿತ ಗಡಿ ಪ್ರದೇಶದಲ್ಲಿ ವರ್ಷಕ್ಕೆರಡು ಭತ್ತದ ಬೆಳೆ
938
VIEWS
FacebookTwitterWhatsuplinkedinEmail

Special Report

ಯುವ ರೈತರಿಗೆ ಮಾದರಿಯಾದ ಬಾಗೇಪಲ್ಲಿ ತಾಲೂಕಿನ ಹಿರಿಯ ರೈತ I ರಸಗೊಬ್ಬರ & ರಾಸಾಯನಿಕಗಳ ಬಳಕೆ ಇಲ್ಲ

by Ra Na Gopala Reddy Bagepalli

ಬಾಗೇಪಲ್ಲಿ: ಬಯಲುಸೀಮೆ ಮತ್ತು ಬರದ ನಾಡಿನಲ್ಲಿ ಭತ್ತವನ್ನು ಬೆಳೆಯುವುದು ಕಷ್ಟದ ಕೆಲಸ. ಅದರಲ್ಲಿಯೂ ಕುಡಿಯುವುದಕ್ಕೂ ನೀರಿನ ತತ್ವಾರ ಇರುವ ಈ ಭಾಗದಲ್ಲಿ ಯಾರಾದರೂ ಭತ್ತ ಬೆಳೆಯುತ್ತಾರೆ ಎಂದರೆ ಜನ ಹುಬ್ಬೇರಿಸುವುದು ಸಹಜ.

ಸಹಜ ಕೃಷಿಯಲ್ಲಿ ಜಗತ್ತಿನ ಗಮನ ಸೆಳೆದಿದ್ದ ಜಪಾನಿನ ಫುಕುವೋಕಾ ಅವರಂತೆಯೇ ಇಲ್ಲೊಬ್ಬ ಹಿರಿಯ ರೈತರೊಬ್ಬರು ವರ್ಷಕ್ಕೆ ಎರಡು ಬಾರಿ ತಮ್ಮ ಜಮೀನನ ಬಳಿ ನೀರಿನ ಹೊಂಡದ ಸಹಾಯ ಮೂಲಕ ಭತ್ತದ ಫಸಲನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಸಮೃದ್ಧ ಭತ್ತ ಬೆಳೆಯುವಲ್ಲಿ ಯಶಸ್ವಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಎಲ್ಲಿ ಈ ಭತ್ತದ ಬೆಳೆ?

ಬಾಗೇಪಲ್ಲಿ ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಿಕುಂಟೆ ಗ್ರಾಮದ ಡಿ.ಪಿ.ಗೋಪಾಲ್ ಎಂಬ ರೈತ ಭತ್ತವನ್ನು ಎರಡು ಕಾಲಘಟ್ಟದಲ್ಲಿ ಬೆಳೆಯುತ್ತಾರೆ. ಒಂದು ಮುಂಗಾರಿನ ಜುಲೈ ತಿಂಗಳ ಮೂರನೇ ವಾರದಲ್ಲಿ ಮಾಡಿದ ಸಸಿಯನ್ನು ಗದ್ದೆಯಲ್ಲಿ ನಾಟಿ ಮಾಡಲಾಗುತ್ತದೆ. ಮೊದಲು ಹಾಕಿದ ಭತ್ತ ಡಿಸೆಂಬರ್ ಹೊತ್ತಿಗೆ ಫಸಲಾಗಿ ಬರುತ್ತದೆ. ಬೇಸಿಗೆಯ ಭತ್ತದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಬೇಕೆಂದರೆ ಪುನಾ ಡಿಸೆಂಬರ್ ಮೂರನೇ ವಾರದೊಳಗೆ ಸಸಿ ಮಾಡಿ ಗದ್ದೆಯಲ್ಲಿ ಬಿತ್ತನೆ ಮಾಡುವುದು ಅಗತ್ಯ. ತಡವಾದಂತೆ ಇಳುವರಿ ಕಡಿಮೆಯಾಗುತ್ತದೆ. ಎರಡನೇ ಭತ್ತದ ಪಸಲನ್ನು ಮೇ ತಿಂಗಳ ಮೊದಲ ವಾರದಲ್ಲಿ ಕೊಯ್ಲು ಮಾಡಬಹುದು.

ಈ ಭಾಗದ ಕೃಷಿಕರು ಖುಷ್ಕಿ ಬೇಸಾಯನ್ನು ಮಾಡುತ್ತಾರೆ. ಸಕಾಲಕ್ಕೆ ಮಳೆ ಸರಿಯಾಗಿ ಆಗುತ್ತಿಲ್ಲ. ಆದರೂ ಇಲ್ಲಿ ತಮ್ಮ ಹಸುಗಳ ಸೆಗಣಿ ಗೊಬ್ಬರವನ್ನು ಮತ್ತು ಒಣಗಿದ ಎಲೆಗಳನ್ನು ತಂದು ಭೂಮಿಯಲ್ಲಿ ಫಲವತ್ತತೆಯ ಮೂಲಕ ವ್ಯವಸಾಯವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಹೆಚ್ಚೂಕಮ್ಮಿ ಒಂದು ಎಕರೆಗೆ ಸುಮಾರು 26ರಿಂದ 28 ಕ್ವಿಂಟಲ್‌ಗಳವರೆಗೆ ಇಳುವರಿಯನ್ನು ಪಡೆಯುತ್ತಿದ್ದಾರೆ.

ಕೃಷಿ ಹೊಂಡದ ಮೂಲಕ ಬೇಸಾಯ

ದೇವಿಕುಂಟೆ ಗ್ರಾಮದ ಕೆರೆಯ ಕೆಳಗೆ ಬಾವಿ ಇದ್ದ ಕಾರಣ ನೀರಿನ ಸಮಸ್ಯೆ ಇಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಹೊಂಡದ ಸೌಲಭ್ಯ ಇರುತ್ತದೆ. ರೈತರು ಇಂತಹ ನೀರಿನ ಮೂಲಗಳಿಂದ ರಾಸಾಯನಿಕ ರಹಿತ ಬೆಳೆಗಳನ್ನು ಬೆಳೆದು ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು. ಇಂದು ರಾಸಾಯನಿಕ ರಸಗೊಬ್ಬರಗಳನ್ನು ಬಳಸಿ ಬೆಳೆಸಲಾಗುತ್ತಿರುವ ಬೆಳೆಗಳಿಂದ ಅನೇಕ ರೋಗಗಳು ಬರುತ್ತಿವೆ. ಹೀಗಾಗಿ ಗೋವುಗಳ ಗೊಬ್ಬರದ ಮೂಲಕ ಬೇಸಾಯ ಮಾಡಿದರೆ ಹಲವಾರು ರೋಗಗಳನ್ನು ತಡೆಯಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಗಳು.

ಕೊರೊನಾದಿಂದ ಸಿಟಿಯಲ್ಲಿದ್ದ ಜನರು ಗ್ರಾಮಗಳಿಗೆ ಮರಳಿದ್ದಾರೆ. ವ್ಯವಸಾಯದ ಕಡೆ ಗಮನ ಕೊಡುತ್ತಿದ್ದಾರೆ. ಇಂಥವರೆಲ್ಲ ಗ್ರಾಮ ಪಂಚಾಯತಿಯಲ್ಲಿ ದೊರೆಯುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಬಳಸಿಕೊಂಡರೆ ಮಾದರಿ ಬೇಸಾಯ ಮಾಡಬಹುದು. ಉತ್ತಮ ಆರೋಗ್ಯ ಎಲ್ಲರಿಗೂ ಸಿಗುತ್ತದೆ ಎಂದು ಹೇಳುತ್ತಾರೆ ಎನ್ನುತ್ತಾರೆ ಯುವ ಕೃಷಿಕ ಡಿ.ಜಿ.ಪವನ್ ಕಲ್ಯಾಣ್.

ಚಿಟ್ಟೆಗಳ ಗೊಬ್ಬರ ಹಾಕಿ ರೋಗವನ್ನು ತಡೆಗಟ್ಟಿದ ರೈತ

ಮೊದಲಿನಿಂದಲೂ ಫಸಲಿಗೆ ರೋಗಗಳು ಬಂದರೆ ಗ್ರಾಮಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಕಾಡಿನಲ್ಲಿ ದೊರೆಯುವ ಚಿಟ್ಟೆಗಳ ಗೊಬ್ಬರ ತಂದು ಹಾಕುತ್ತಾರೆ. ಆಗ ರೋಗ ಬಂದಿದ್ದರೆ ಸಂಪೂರ್ಣ ಸರಿ ಹೋಗುತ್ತದೆ ಎಂದು ಕೃಷಿಕ ಗೋಪಾಲ್‌ ಹೇಳುತ್ತಾರೆ.

ಸಾವಯವದಲ್ಲಿ ಸಂತೋಷವಿದೆ

ತಮ್ಮ ಭತ್ತದ ಬೇಸಾಯದ ಬಗ್ಗೆ ಸಂತೋಷದಿಂದ ಮಾತನಾಡಿದ ಆರವತ್ತೈದು ವರ್ಷದ ಹಿರಿಯ ಜೀವ ಗೋಪಾಲ್‌ ಅವರು, ರಾಸಾಯನಿಕ ಗೊಬ್ಬರಗಳ ಗೊಡವೆಯೇ ಇಲ್ಲದ ಸಾವಯವ ಕೃಷಿಯ ಬಗ್ಗೆ ನನಗೆ ಬಹಳ ಸಂತೋಷವಿದೆ. ನಮ್ಮ ಪರಂಪರಾಗತವಾಗಿ ಬಂದ ಕೃಷಿ ಪದ್ಧತಿ ಇದು. ಆದರೆ, ನಾವು ಹೆಚ್ಚೆಚ್ಚು ರಸಗೊಬ್ಬರಗಳನ್ನು ಬಳಸುತ್ತಾ ಭೂಮಿಯನ್ನು ಹಾಳು ಮಾಡುತ್ತಿದ್ದೇವೆ. ಹಾಗೆ ಆಗಬಾರದು. ನಮ್ಮ ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಲು ನಮ್ಮ ಹಿರಿಯರು ಹಾಕಿಕೊಟ್ಟ ಸಾಂಪ್ರದಾಯಿಕ ಮತ್ತು ಸಾವಯವ ಕೃಷಿ ಪದ್ಧತಿ ಬಹಳ ಒಳ್ಳೆಯದು ಎನ್ನುತ್ತಾರೆ.

Tags: bagepallichikkaballapurakarnatakamasanobu fukuokaorganic farmingorganic paddy farmingpaddy farming
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
#COVID19KARNATAKA‌ : ಕೋಲಾರ ಕೋವಿಡ್‌ ಪರಿಸ್ಥಿತಿ ಪರಿಶೀಲಿಸಿದ ಉಪ ಮುಖ್ಯಮಂತ್ರಿ: ಜಿಲ್ಲೆಗೆ 300 ಆಕ್ಸಿಜನ್‌ ‍& 150 ICU ಬೆಡ್‌; 10 ದಿನದಲ್ಲಿ SNR ಆಸ್ಪತ್ರೆಯಲ್ಲಿ 1,000 ಕೆಎಲ್ ಆಮ್ಲಜನಕ ಪೂರೈಕೆ ವ್ಯವಸ್ಥೆ

ಮೇ 15ರಿಂದ ಕೋವಿಡ್‌ ಪಾಸಿಟೀವ್‌ ಬಂದ 1 ಗಂಟೆಯೊಳಗೇ ಹೋಂ ಐಸೋಲೇಷನ್‌ ಆದವರಿಗೆ ಮೆಡಿಕಲ್‌ ಕಿಟ್‌; 5 ಲಕ್ಷ ಕಿಟ್‌ ಖರೀದಿಗೆ ನಿರ್ಧಾರ

Leave a Reply Cancel reply

Your email address will not be published. Required fields are marked *

Recommended

ಚಿಕ್ಕಬಳ್ಳಾಪುರ, ಕೋಲಾರ ಸೇರಿ 15 ಜಿಲ್ಲೆಗಳಿಗೆ ಬೋರ್‌ವೆಲ್‌ ಶಾಕ್‌ ಕೊಟ್ಟ ಸರಕಾರ !

ಚಿಕ್ಕಬಳ್ಳಾಪುರ, ಕೋಲಾರ ಸೇರಿ 15 ಜಿಲ್ಲೆಗಳಿಗೆ ಬೋರ್‌ವೆಲ್‌ ಶಾಕ್‌ ಕೊಟ್ಟ ಸರಕಾರ !

6 years ago
ಕಾಂಗ್ರೆಸ್‌ ಸೋತರೆ ಸಿದ್ದು ಕುರ್ಚಿಗೆ ಸಂಚಕಾರ: ಭೈರತಿ ಸುರೇಶ್

ಕಾಂಗ್ರೆಸ್‌ ಸೋತರೆ ಸಿದ್ದು ಕುರ್ಚಿಗೆ ಸಂಚಕಾರ: ಭೈರತಿ ಸುರೇಶ್

2 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ