• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home POLITICS

ಅಧಿಕಾರದ ಕುರ್ಚಿಗೆ ವಿದಾಯ ಹೇಳಲು ಸಿದ್ಧರಾದರಾ ʼಬಲಶಾಲಿʼ ಯಡಿಯೂರಪ್ಪ! ಟೆಂಪಲ್‌ ರನ್‌ ಶುರುವಿಟ್ಟುಕೊಂಡ ಪುತ್ರ ವಿಜಯೇಂದ್ರ: ಹಾಗಾದರೆ, NEXT ಸಿಎಂ ಯಾರಪ್ಪ?

cknewsnow desk by cknewsnow desk
May 19, 2021
in POLITICS, STATE
Reading Time: 2 mins read
0
ಅಧಿಕಾರದ ಕುರ್ಚಿಗೆ ವಿದಾಯ ಹೇಳಲು ಸಿದ್ಧರಾದರಾ ʼಬಲಶಾಲಿʼ ಯಡಿಯೂರಪ್ಪ! ಟೆಂಪಲ್‌ ರನ್‌ ಶುರುವಿಟ್ಟುಕೊಂಡ ಪುತ್ರ ವಿಜಯೇಂದ್ರ: ಹಾಗಾದರೆ, NEXT ಸಿಎಂ ಯಾರಪ್ಪ?
930
VIEWS
FacebookTwitterWhatsuplinkedinEmail

ನಂಜನಗೂಡು ತಾಲೂಕಿನ‌ ಮಹದೇವ ತಾತ ಅವರ ಐಕ್ಯಸ್ಥಳಕ್ಕೆ ಬಿ.ವೈ.ವಿಜಯೇಂದ್ರ ಬೇಟಿ ನೀಡಿದ್ದು ಯಾಕೆ? ಇಷ್ಟಕ್ಕೂ ಅಪ್ಪ ಅಧಿಕಾರ ಕಳೆದುಕೊಂಡರೆ ಮಗನ ಭವಿಷ್ಯವೇನು?

ಬೆಂಗಳೂರು: ರಾಜ್ಯ ರಾಜಕಾರಣದ ಚಿತ್ರ ಬದಲಾಗುವ ಸೂಚನೆಗಳು ಕಾಣುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಅವರು ಟೆಂಪಲ್ ರನ್ ಆರಂಭಿಸಿದ್ದಾರೆ.

ಸೋಮವಾರ ಕುಟುಂಬ ಸಮೇತ ನಂಜನಗೂಡು ತಾಲೂಕಿನ‌ ಮಹದೇವ ತಾತ ಅವರ ಐಕ್ಯಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ ವಿಜಯೇಂದ್ರ ಅವರು ಮಂಗಳವಾರ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮಹದೇವ ತಾತ ಅವರು ಸಿದ್ಧಿಪುರುಷರಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ನಂಜನಗೂಡು ತಾಲ್ಲೂಕಿನ ಹುಲ್ಲಳ್ಳಿ ಸಮೀಪ ಕಪಿಲಾ ನದಿ ದಂಡೆಯ ಮೇಲಿರುವ ಮಹದೇವ ತಾತ ಅವರ ಐಕ್ಯಸ್ಥಳ‌ಕ್ಕೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರನೇಕರು ಭೇಟಿ ನೀಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಬಹುತೇಕ ನಾಯಕರಿಗೆ ಮಹದೇವ ತಾತ ಅವರ ಐಕ್ಯಸ್ಥಳ ಎಂದರೆ ನಂಬಿಕೆಯ ತಾಣ. ಮಾಜಿ‌ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಈ ಕ್ಷೇತ್ರಕ್ಕೆ ಪ್ರತಿವರ್ಷ ತಪ್ಪದೇ ಭೇಟಿ ನೀಡುತ್ತಿದ್ದರು.

ಇದೀಗ ಬಿ.ವೈ.ವಿಜಯೇಂದ್ರ ಅವರು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಮಹದೇವ ತಾತ ಅವರ ಐಕ್ಯಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜತೆಗೆ, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕರ್ನಾಟಕದಲ್ಲಿ ನಾಯಕತ್ವ ಬದಲಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಅದು ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ವಿಜಯೇಂದ್ತ ಅವರ ಟೆಂಪಲ್ ರನ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಒಕ್ಕಲಿಗ ನಾಯಕರೊಬ್ಬರು ಸಿಎಂ ಆದರೆ ವಿಜಯೇಂದ್ರ ಅವರನ್ನು ಡಿಸಿಎಂ ಮಾಡಬೇಕು.
ಒಂದು ವೇಳೆ ಲಿಂಗಾಯತರಿಗೇ ಸಿಎಂ‌ ಹುದ್ದೆ ನೀಡಿದರೆ ವಿಜಯೇಂದ್ರ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಬೇಕು ಎಂದು ಯಡಿಯೂರಪ್ಪ ಅವರು ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ ಎಂದು ಗೊತ್ತಾಗಿದೆ.

ಹೀಗೆ ಉಪಮುಖ್ಯಮಂತ್ರಿ ಇಲ್ಲವೇ ಮಂತ್ರಿಯಾಗುವ ವಿಜಯೇಂದ್ರ ಅವರಿಗೆ ಜಲಸಂಪನ್ಮೂಲ‌ ಹಾಗೂ ಬೆಂಗಳೂರು ಅಭಿವೃದ್ದಿ ಖಾತೆ ನೀಡಬೇಕು ಎಂದು ಅವರು ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ಈ ಮುಂಚೆ ನಾಯಕತ್ವ ಬದಲಾವಣೆಯ ವಿಷಯ ಬಂದರೆ ಶತಾಯಗತಾಯ ವಿರೋಧಿಸುತ್ತಿದ್ದ ಯಡಿಯೂರಪ್ಪ ಇದೀಗ ಮಗನ ಭವಿಷ್ಯ ಸುಗಮವಾಗಿರಬೇಕು ಎಂಬ ಕಾರಣಕ್ಕಾಗಿ ನಾಯಕತ್ವ ಬಿಟ್ಟುಕೊಡಲು ಮಾನಸಿಕವಾಗಿ ಸಜ್ಜಾಗಿದ್ದಾರೆ ಎಂಬುದು ಮೂಲಗಳ ಹೇಳಿಕೆ.

ಇಂತಹ ಸುದ್ದಿಗಳ‌ ನಡುವೆಯೇ ಅವರ ಪುತ್ರ ವಿಜಯೇಂದ್ರ ಅವರು ಆರಂಭಿಸಿರುವ ಟೆಂಪಲ್ ರನ್ ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಜವಾಬ್ದಾರಿ ವಹಿಸಿಕೊಳ್ಳಲು ತಮಗೆ ಶಕ್ತಿ ನೀಡುವಂತೆ ಈ ಟೆಂಪಲ್ ರನ್ ಸಮಯದಲ್ಲಿ ಮಹದೇವ ತಾತ ಹಾಗೂ ಶ್ರೀಕಂಠೇಶ್ವರ ಸ್ವಾಮಿಯನ್ನು ಅವರು ಪ್ರಾರ್ಥಿಸಿದ್ದಾರೆ ಎಂಬುದು ಅವರ ಸಮೀಪವರ್ತಿಗಳಿಂದ ಸಿಕ್ಕಿರುವ ಮಾಹಿತಿ.

ಮುಂದಿನ ಸಿಎಂ ಯಾರು?

ಸದ್ಯಕ್ಕೆ ಈ ಗುಟ್ಟು ರಟ್ಟಾಗಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬರುತ್ತಾರೆನ್ನುತ್ತಿದೆ ಒಂದು ಮೂಲ. ಆದರೆ, ರಾಜ್ಯದಲ್ಲಿ ಆಳದಲ್ಲಿ ಆವರಿಸಿಕೊಂಡಿರುವ ಜಾತಿ ಸಮೀಕರಣದಿಂದ ಅವರ ಸಾಧ್ಯತೆ ಕಡಿಮೆ. ಇನ್ನೊಬ್ಬರು ರಾಜ್ಯ ಗಣಿ ಮಂತ್ರಿ ಮುರುಗೇಶ್‌ ನಿರಾಣಿ. ಕಷ್ಟಪಟ್ಟು, ಒತ್ತಡ ಹಾಕಿ ಹೇಗೋ ಮಂತ್ರಿಯಾದ ನಿರಾಣಿ, ದಿಲ್ಲಿಯ ಒಂದಿಬ್ಬರು ಬಿಜೆಪಿ ನಾಯಕರ ಜತೆ ಹಾಗೂ ಮುಂಬಯಿಯ ಬಿಸ್ನೆಸ್‌ ಕುಳಗಳ ಜತೆ ಭರ್ತಿ ವ್ಯವಹಾರ ಇಟ್ಟುಕೊಂಡಿದ್ದಾರೆಂಬ ಮಾಹಿತಿ ಇದೆ.

ಜಾತಿಯಲ್ಲಿ ಲಿಂಗಾಯಿತರೂ, ಅದರಲ್ಲೂ ಪಂಚಸಾಲಿಗಳೂ ಆಗಿರುವ ಅವರಿಗೆ ಜಾಕ್‌ಪಾಟ್‌ ಹೊಡೆದರೂ ಹೊಡೆಯಬಹುದು ಎನ್ನುತ್ತಾರೆ ಹಿರಿಯ ಪತ್ರಕರ್ತ & ರಾಜಕೀಯ ವಿಶ್ಲೇಷಕ ಆರ್.ಟಿ.ವಿಠ್ಠಲಮೂರ್ತಿ.

ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒಲವು ಬಹುತೇಕ ಬಸವರಾಜ ಬೊಮ್ಮಾಯಿ ಮೇಲೆಯೇ ಇದೆ. ಈಗಾಗಲೇ ಯಡಿಯೂರಪ್ಪ ಫ್ಯಾಮಿಲಿ ಜತೆ ಸಿಕ್ಕಾಪಟ್ಟೆ ಅಂತರ ಕಾಯ್ದುಕೊಂಡಿರುವ ವರಿಷ್ಠರು, ಸಿಎಂ ಹೇಳಿದ ಮಾತು ಕೇಳುವುವುದು ಕಷ್ಟಸಾಧ್ಯ. ಹೀಗಾಗಿ ಬೊಮ್ಮಾಯಿ ಹೆಸರು ಸೈಡಿಗೆ ಹೋದರೆ ಅಚ್ಚರಿಯೇನೂ ಇಲ್ಲ.

ಉಳಿದಂತೆ ವಿಜಯೇಂದ್ರ ಡಿಸಿಎಂ ಆಗಬೇಕಾದರೆ ಒಕ್ಕಲಿಗರೊಬ್ಬರು ಸಿಎಂ ಆಗಬೇಕು. ಸದ್ಯಕ್ಕೆ ಆ ಕುರ್ಚಿಗೆ ಹೈಕಮಾಂಡ್‌ ಮುಂದೆ ಇರುವ ಏಕೈಕ ಒಕ್ಕಲಿಗ ಹೆಸರೆಂದರೆ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮಾತ್ರ. ಪುತ್ರ ಡಿಸಿಎಂ ಆಗುವುದು ಸುಲಭವಾದರೆ, ಅಶ್ವತ್ಥನಾರಾಯಣ ಸಿಎಂ ಆಗಲು ಅಭ್ಯಂತರವೇನಿಲ್ಲ ಎಂಬ ಸಂದೇಶವನ್ನೂ ಯಡಿಯೂರಪ್ಪ ದಿಲ್ಲಿಗೆ ದಾಟಿಸಿದ್ದಾರೆಂಬ ಮಾಹಿತಿ ಇದೆ.

ಆಡಳಿತಾರೂಢ ಪಕ್ಷದ ಮೂಲಗಳೇ ಹೇಳುವಂತೆ, ನಾಯಕತ್ವ ಬದಲಾವಣೆ ಪ್ರಕ್ರಿಯೆಗಳು ತುರುಸಾಗಿ ಶುರುವಾಗಿವೆ. ದಿನ ನಿಗದಿಯೊಂದೇ ಬಾಕಿ. ಬಹುಶಃ ಒಂದು ತಿಂಗೊಳಗೆ ಈ ಅಂಕಕ್ಕೆ ತೆರೆ ಬೀಳಬಹುದು ಎನ್ನಲಾಗಿದೆ.


ಸಂತೋಷ್‌ ಸಸಿಹಿತ್ಲು


ಕನ್ನಡದ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ರಾಜಕೀಯ-ವಿಡಂಬನಾತ್ಮಕ ವ್ಯಂಗ್ಯಚಿತ್ರಗಳನ್ನು ಬಿಡಿಸುವುದರಲ್ಲಿ ಸಸಿಹಿತ್ಲು ಅವರದ್ದು ಎತ್ತಿದ ಕೈ. ರಾಜ್ಯ ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ.

Tags: Basavaraj S Bommaibjpbs yediyurappaBY Vijayendradr cn ashwathnarayanindiakarnataka politicsmurugesh niraniPrahlad joshiVijayendra Yeddyurappa
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಜೀರ್ಣೋದ್ಧಾರಗೊಂಡ 140 ವರ್ಷಗಳ KGF  ಐತಿಹಾಸಿಕ ಬಿಜಿಎಂಎಲ್‌ ಆಸ್ಪತ್ರೆ ಲೋಕಾರ್ಪಣೆ; 20 ಲಕ್ಷ ಅನುದಾನ ಜತೆಗೆ 1,000 KL ಆಕ್ಸಿಜನ್‌ ಘಟಕ ಮಂಜೂರು ಮಾಡಿದ ಕೇಂದ್ರ

ಜೀರ್ಣೋದ್ಧಾರಗೊಂಡ 140 ವರ್ಷಗಳ KGF ಐತಿಹಾಸಿಕ ಬಿಜಿಎಂಎಲ್‌ ಆಸ್ಪತ್ರೆ ಲೋಕಾರ್ಪಣೆ; 20 ಲಕ್ಷ ಅನುದಾನ ಜತೆಗೆ 1,000 KL ಆಕ್ಸಿಜನ್‌ ಘಟಕ ಮಂಜೂರು ಮಾಡಿದ ಕೇಂದ್ರ

Leave a Reply Cancel reply

Your email address will not be published. Required fields are marked *

Recommended

ದಾಖಲೆ ಸಲ್ಲಿಸಲು ಪೂರೈಕೆ ಕಂಪನಿಗಳ ಮೀನಾ-ಮೇಷ; ತಯಾರಿಕೆ ಕಂಪನಿಗಳಿಂದಲೇ ನೇರವಾಗಿ ವ್ಯಾಕ್ಸಿನ್  ಖರೀದಿಗೆ ಮುಂದಾದ ಸರಕಾರ

ಕಾಲೇಜು ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ಲಸಿಕೆ: ಶೀಘ್ರ ತರಗತಿಗಳ ಆರಂಭಕ್ಕೆ ಚಿಂತನೆ ಎಂದ ಡಿಸಿಎಂ

5 years ago
ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ ಕೇಸ್ ತೆಗೆದುಕೊಂಡಿರಿ ಸಿದ್ದರಾಮಯ್ಯ?

ಮೇಲ್ಮನೆ ಚುನಾವಣೆ ಮೈತ್ರಿ ವಿಚಾರ, ಭಾನುವಾರದೊಳಗೆ ನಿರ್ಧಾರ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ