• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಸುಂದರಲಾಲ ಬಹುಗುಣ: ಗಿರಿಶಿಖರ, ಮಣ್ಣು, ನೀರು, ಕಾಡುಮೇಡಿನ ಮೇಲೆ ಎಣಿ ಇಲ್ಲದ ಪ್ರೀತಿ ಮೂಡಿಸಿದ ಹಿರಿಯಜ್ಜ, ಹೃದಯದಿಂದ ಹಸಿರನ್ನು ನೋಡಿದ ದಾರ್ಶನಿಕ

cknewsnow desk by cknewsnow desk
May 21, 2021
in GUEST COLUMN, NATION, STATE
Reading Time: 2 mins read
0
ಸುಂದರಲಾಲ ಬಹುಗುಣ: ಗಿರಿಶಿಖರ, ಮಣ್ಣು, ನೀರು, ಕಾಡುಮೇಡಿನ ಮೇಲೆ ಎಣಿ ಇಲ್ಲದ ಪ್ರೀತಿ ಮೂಡಿಸಿದ ಹಿರಿಯಜ್ಜ, ಹೃದಯದಿಂದ ಹಸಿರನ್ನು ನೋಡಿದ ದಾರ್ಶನಿಕ
945
VIEWS
FacebookTwitterWhatsuplinkedinEmail

Sunderlal Bahuguna photos courtesy: Right Livelihood Foundation

ಕೋವಿಡ್‌ ಮಮಾಮಾರಿ ಸಾವಿನ ದಾಹಕ್ಕೆ ಸಾಲು ಸಾಲು ಬಲಿಯಾಗುತ್ತಿರುವ ಹೊತ್ತಿನಲ್ಲೇ ಪರಿಸರವನ್ನು ಉಳಿಸಿಕೊಂಡೇ ನಾವು ಉಸಿರಾಡುವುದನ್ನು ಕಲಿಯಬೇಕೆಂದು ಗಟ್ಟಿದನಿಯಲ್ಲಿ ಹೇಳುತ್ತಿದ್ದ ಸುಂದರಲಾಲ ಬಹುಗುಣರು ಉಸಿರು ಚೆಲ್ಲಿದ್ದಾರೆ. ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌ ಹವಲ್ದಾರ್‌ ಇಲ್ಲಿ ಬಹುಗುಣಗೊಂದು ಅಕ್ಷರ ನಮನ ಸಲ್ಲಿಸಿದ್ದಾರೆ.

Chipko movement photo courtesy: Wikipedia


ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಖ್ಯಾತ ಪರಿಸರವಾದಿ ಮತ್ತು ಹಾಗೂ ʼಚಿಪ್ಕೊ ಚಳವಳಿʼ ಪ್ರವರ್ತಕ ಸುಂದರಲಾಲ್‌ ಬಹುಗುಣ ಅವರು ಕೋವಿಡ್‌–19ನಿಂದಾಗಿ ರಿಷಿಕೇಶದ ಏಮ್ಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಬಹುಗುಣ ಅವರು ಹುಟ್ಟಿದ್ದು ಹಿಮಾಲಯದ ತಪ್ಪಲಿನಲ್ಲಿ, ಉತ್ತರಾಖಂಡದ ತೇಹ್ರಿ ಸಮೀಪದ ಮರೋಡ ಎಂಬ ಹಳ್ಳಿಯಲ್ಲಿ 1927 ಜನವರಿ 9ರಂದು ಜನಿಸಿದ ಸುಂದರಲಾಲ್ ಬಹುಗುಣ ದೇಶದ ಆರಂಭಿಕ ಹಂತದ ಪರಿಸರವಾದಿಗಳಲ್ಲಿ ಒಬ್ಬರು.

ತಮ್ಮ 13ರ ವಯಸ್ಸಿನಲ್ಲೇ ಶ್ರೀದೇವಿ ಸುಮನ್ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಆರಂಭಿಸಿದ ಬಹುಗುಣ, ತಮ್ಮ ಜೀವನದಲ್ಲಿ ಗಾಂಧಿ ತತ್ತ್ವಗಳನ್ನು ಅಳವಡಿಸಿಕೊಂಡಿದ್ದರು. ಗಾಂಧೀಜಿ ಜೀವನದಿಂದ ಪ್ರೇರಣೆಗೊಂಡು ಸ್ವಾತಂತ್ರ್ಯಪೂರ್ವದಲ್ಲೇ ವಸಾಹತುಶಾಹಿ ಆಡಳಿತದ ವಿರುದ್ಧ ಜನರನ್ನು ಜಾಗೃತಗೊಳಿಸಿದ್ದರು.

ಚಿಪ್ಕೊ ಚಳುವಳಿ

ಬೃಹತ್‌ ಅಣೆಕಟ್ಟು, ಕೈಗಾರಿಕೆ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶ ಆಗುತ್ತಿರುವುದನ್ನು ತಡೆಯಲೆಂದು 1973ರಲ್ಲಿ ಚಿಪ್ಕೊ ಚಳವಳಿ ಆರಂಭವಾಗಿತ್ತು. ಹಿಮಾಲಯದ ಕಾಡುಗಳಿಗೆ ಹಾನಿ ಸಂಭವಿಸುತ್ತಿದ್ದುದನ್ನು ಗಮನಿಸಿದ ಸುಂದಲಲಾಲ್ ಬಹುಗುಣ ಅವರು ಬೆಟ್ಟಗಳು-ಹಳ್ಳಿಗಳ ನಡುವೆ ಸುಮಾರು 4,700 ಕಿ.ಮೀಟರ್ʼಗಳಷ್ಟು ದೂರ ಪಾದಯಾತ್ರೆ ಮಾಡಿ ಜನರನ್ನು ಎಚ್ಚರಿಸಿ ಹೋರಾಟ ನಡೆಸಿದರು. ಚಿಪ್ಕೋ ಚಳವಳಿಯ ನೇತೃತ್ವ ವಹಿಸಿ ಜನರ ದನಿಯಾದರು.

ಅರಣ್ಯಗಳು ಹಿಮಾಲಯದ ತಪ್ಪಲಿನ ಜನ-ಜೀವನದ ಪ್ರಮುಖ ಅಂಗವಾಗಿವೆ. ಚಿಪ್ಕೋ ಚಳವಳಿಗೆ ನಾಂದಿ ಹಾಡಿದ್ದು 1973ರ ಸುಮಾರಿಗೆ ಮಂಡಲ್ ಎಂಬ ಹಳ್ಳಿ. ತಮ್ಮ ಕೃಷಿ ಸಲಕರಣೆಗಳ ತಯಾರಿಗಾಗಿ ಮುರಿದು ಬಿದ್ದ ಮರಗಳನ್ನು ಜನ ಉಪಯೋಗಿಸುವುದಕ್ಕೆ ಸರಕಾರ ನಿರ್ಬಂಧ ಹೇರಿತ್ತು. ಸರಕಾರದ ನಿರ್ಧಾರ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದೇ ಸಂದರ್ಭ ಬಂಡವಾಳಶಾಹಿಗಳಗೆ ಮಣಿದ ಸರಕಾರ ಇದೇ ಪ್ರದೇಶದಲ್ಲಿ ಕ್ರೀಡಾ ಉಪಕರಣಗಳನ್ನು ತಯಾರಿಸುವ ಕಂಪನಿಯೊಂದಕ್ಕೆ ಮರಗಳನ್ನು ಕಡಿಯಲು ಅನುಮತಿ ನೀಡಿತು.

ಕಾಡಿನ ನಾಶದ ಮುನ್ಸೂಚನೆ ಅರಿತ ಸ್ಥಳೀಯ ಮಹಿಳೆಯರು ಮರಗಳ ಸುತ್ತ ವೃತ್ತಾಕಾರದಲ್ಲಿ ನಿಂತು ಮರ ಕಡಿಯಲು ತಡೆಯೊಡ್ಡಿದರು. ಹಗಲು-ರಾತ್ರಿಯೆನ್ನದೆ ಮರಗಳನ್ನು ಅಪ್ಪಿಕೊಂಡು ನಿಂತ ಪರಿಣಾಮ ಮರಕಟುಕರು ಹಿಂತಿರುಗಬೇಕಾಯಿತು. ಸುಂದರಲಾಲ್ ಬಹುಗುಣ ಚಳವಳಿಯ ನೇತೃತ್ವ ವಹಿಸಿದರು. ಮರ ಕಡಿಯುವುದರ ವಿರುದ್ಧ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರಲ್ಲಿ ಮನವಿ ಮಾಡಿ, ಸರಕಾರದ ಕ್ರಮದ ವಿರುದ್ಧ ಸತತ ಹೋರಾಟ ನಡೆಸಿದರು.

ಚಳವಳಿ ಹೊರ ಪ್ರದೇಶಗಳಿಗೂ ಹರಡಿತು. ಜನ ಜಾಗೃತರಾಗಿ ಹೋರಾಟ ತೀವ್ರಗೊಂಡಿತು. ಪರಿಣಾಮ ಆ ಪ್ರದೇಶದಲ್ಲಿ 15 ವರ್ಷಗಳ ಕಾಲ ಯಾವುದೇ ಮರ ಕಡಿಯದಂತೆ 1981ರಲ್ಲಿ ಕಾನೂನು ಹೊರಬಂದಿತು. ಸರಕಾರ ಅದೇ ವರ್ಷ ಬಹುಗುಣರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಆದರೆ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಸರಕಾರದ ಧೋರಣೆಯನ್ನು ಸಹಿಸದ ಬಹುಗುಣ ಪ್ರಶಸ್ತಿಯನ್ನು ತಿರಸ್ಕರಿಸಿದರು.

ಚಿಪ್ಕೋ ಚಳವಳಿಯ ನಂತರ ಬಹುಗುಣ ಹಿಮಾಲಯದ ಪ್ರದೇಶಗಳಿಗೆ ಪಾದಯಾತ್ರೆ ಕೈಗೊಂಡು ಜನರಿಗ ಚಳವಳಿಯ ಸಂದೇಶವನ್ನು ತಲುಪಿಸಿದ ಪರಿಣಾಮ ಅವರಿಗೆ ಬೆಂಬಲ ದೊರೆಯಿತು. ಜತೆಗೆ ಸ್ಥಳೀಯರಿಗೆ ಕಡಿಮೆ ದರದಲ್ಲಿ ಮೇವು ಉತ್ಪಾದಿಸಲು ವ್ಯವಸ್ಥೆ ಮಾಡಿ, ಕಡಿಮೆ ಉತ್ಪಾದನೆ ಕೊಡುವ ಭೂಮಿಯಲ್ಲಿ ಗಿಡ ನೆಡಲು ಸಹಾಯ ಮಾಡಿದರು. ತೇಹ್ರಿ ಅಣೆಕಟ್ಟಿನ ವಿರುದ್ಧ ತೀವ್ರ ಹೋರಾಟ ಮಾಡಿ ಅದನ್ನು ತಡೆಗಟ್ಟಿ ಭಾಗೀರಥಿ ನದಿಯನ್ನು ರಕ್ಷಿಸಿದ ಹಿರಿಮೆ ಅವರದು. ಸಸ್ಯಗಳ ಮಡಿಗಳನ್ನು ಕಾಪಾಡಲು ಮಾಡಿದ ʼಬೀಚ್ ಬಚಾವೋʼ ಆಂದೋಲನ ಇಂದಿಗೂ ನಡೆಯುತ್ತಿದೆ.

ಚಿಪ್ಕೋ ಚಳವಳಿಯ ಪ್ರಭಾವದಿಂದಾಗಿ ಪಶ್ಚಿಮ ಘಟ್ಟದಲ್ಲಿನ ಅರಣ್ಯ ನಾಶದ ವಿರುದ್ಧದ ಅಪ್ಪಿಕೋ ಚಳವಳಿ ಕೂಡ ಕಾವೇರಿತು. ಸುಂದರಲಾಲ್ ಬಹುಗುಣ ತಮ್ಮ ಹೋರಾಟದ ಫಲವಾಗಿ ಅಧಿಕಾರಿಶಾಹಿಗಳಿಂದ ತಮ್ಮ ಸಂಪನ್ಮೂಲಗಳನ್ನು ರಕ್ಷಿಸಲು ಹಿಮಾಲಯ ತಪ್ಪಲಿನ ಜನರಿಗೆ ಪರೋಕ್ಷವಾಗಿ ಕಾರಣರಾದರು.

  • ‌ಬಹುಗುಣ ಅವರ ನೇತೃತ್ವದಲ್ಲಿ ನಡೆದ ತೆಹ್ರಿ ಅಣೆಕಟ್ಟು ವಿರೋಧಿ ಪೋಸ್ಟರ್./ photo courtesy: Wikipedia

ಅಪ್ಪಿಕೋ ಚಳವಳಿ

1983ರ ಸೆಪ್ಟೆಂಬರ್ 8ರಂದು ಶಿರಸಿ ತಾಲೂಕಿನ ಕಳಾಸೆ ಕುದ್ರಗೋಡ ಅರಣ್ಯದಲ್ಲಿ ಚಳುವಳಿ ಪ್ರಾರಂಭವಾದ ʼಅಪ್ಪಿಕೋʼ ಚಳವಳಿಯು ಇಡಿ ಕರ್ನಾಟಕದ ಮಲೆನಾಡಿನ ಪ್ರದೇಶದಲ್ಲಿ ವ್ಯಾಪಿಸಿತು. ಅದಕ್ಕೂ ಮುನ್ನ ರಾಷ್ಟ್ರೀಯ ಖ್ಯಾತಿಯ ಪರಿಸರ ಚಳವಳಿಯ ನೇತಾರ ಸುಂದರಲಾಲ್ ಬಹುಗುಣರು ಬಾಳೆಗದ್ದೆಯ ಬಿಳಗಲ್ ಅಡವಿಗೆ ಭೇಟಿಯಿತ್ತು ಹಳ್ಳಿಗರೊಡನೆ ಚರ್ಚೆ ನಡೆಸಿದ್ದು, ಮರಗಳನ್ನು ಉಳಿಸಲು ಅಹಿಂಸಾತ್ಮಕ ಹೋರಾಟದ ಪ್ರತಿಜ್ಞೆ ಮಾಡಿದ್ದು ಕರ್ನಾಟಕ ಹೋರಾಟಗಳ ಇತಿಹಾಸದಲ್ಲೊಂದು ಮೈಲುಗಲ್ಲು.

ಮಲೆನಾಡಿನ ಹಳ್ಳಿಗಳಲ್ಲಿ ಹಸಿ ಮರಗಳ ನಾಶದ ವಿರುದ್ಧದ ವಿಶಿಷ್ಟ ಪ್ರತಿಭಟನೆಯಾಗಿ ಹೋರಾಟಕ್ಕೆ ಹೊಸ ಸ್ವರೂಪ ನೀಡಿದ್ದ ʼಅಪ್ಪಿಕೋʼ ಚಳವಳಿಗೆ ನಡೆದು ಮೂರು ದಶಕಗಳು ಸಂದಿವೆ. ಹೊರ ರಾಜ್ಯಗಲಲ್ಲಿಯೂ ಇಂಥ ಆಂದೋಲನಕ್ಕೆ ಪ್ರೇರಣೆಯಾದ ಚಳವಳಿಯ ನೆನಪು ಪರಿಸರ ಆಂದೋಲನದ ಕ್ಷೇತ್ರದಲ್ಲಿ ಇಂದಿಗೂ ಹಸಿರಾಗಿದೆ.

ದೆಹಲಿ ರೈತ ಹೋರಾಟಕ್ಕೆ ಬೆಂಬಲ

ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೇಶದ ರೈತರು ದೆಹಲಿಯಲ್ಲಿ ನೆಡೆಸಿದ ಹೋರಾಟಕ್ಕೆ ಸುಂದರ​ಲಾಲ್​ ಬಹುಗುಣ ಅವರು ಸಹ ಬೆಂಬಲ ಸೂಚಿಸಿದ್ದರು, ಈ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮಹತ್ತ್ವ ಪಡೆದುಕೊಂಡಿತು.

ಇಡೀ ಬದುಕನ್ನು ಜನರಿಗೆ ಮತ್ತು ಪರಿಸರಕ್ಕೆ ಮೀಸಲಿಟ್ಟ ಸುಂದರಲಾಲ್ ಬಹುಗುಣರಿಗೆ ಅನೇಕ ಸಮ್ಮಾನ, ಪ್ರಶಸ್ತಿ ಗಳು ಸಂದಿವೆ. ಅದರಲ್ಲಿ ಮೊದಲನೆಯದು, 1981ರಲ್ಲಿ ಭಾರತ ಸರಕಾರ ಘೋಷಸಿದ ಪದ್ಮಶ್ರೀ ಪ್ರಶಸ್ತಿ. ಅದನ್ನು ಅವರು ನಿರಾಕರಿಸಿದರು. 1987ರಲ್ಲಿ ನೊಬೆಲ್‌ಗೆ ಪರ್ಯಾಯವಾದ ʼರೈಟ್ ಲೈವ್ಲಿಹುಡ್ʼ (ಚಿಪ್ಕೊ ಚಳುವಳಿ), 1986ರಲ್ಲಿ ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ, 1989ರಲ್ಲಿ ಐಐಟಿ ರೂರ್ಕಿ ಅವರು ಕೊಡುವ ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ ಪದವಿ, 2009ರಲ್ಲಿ ಪರಿಸರ ಸಂರಕ್ಷಣೆಗಾಗಿ ಭಾರತ ಸರಕಾರವು ʼಪದ್ಮ ವಿಭೂಷಣʼ ಪ್ರಶಸ್ತಿ ಪುರಸ್ಕರಿಸಿತ್ತು. ʼಭಾರತರತ್ನʼಕ್ಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇತ್ತು.

ಕಾಡಿನ ವಿನಾಶದ ಪರಿಣಾಮವನ್ನು ಒಂದಿಡೀ ಸಮುದಾಯಕ್ಕೆ ಅರ್ಥೈಸಿದ ಸುಂದರಲಾಲ್ ಬಹುಗುಣರು ಬಹುದೊಡ್ಡ ಜನ-ಜಾಗೃತಿಗೆ ಕಾರಣರಾದರು. ಎಚ್ಚತ್ತುಕೊಂಡ ಜನ-ಸಮುದಾಯ ಅನಾಹುತವನ್ನು ಎದುರಿಸುವಲ್ಲಿ ಯಶಸ್ವಿಯಾಯಿತು. ಇಂದಿಗೆ ಚಿಪ್ಕೋ ಚಳವಳಿ ನಡೆದು ನಾಲ್ಕು ದಶಕಗಳು ಮತ್ತು ಅಪ್ಪಿಕೋ ಚಳುವಳಿ ನಡೆದು ಮೂರು ದಶಕಗಳೇ ಉರುಳಿವೆ. ಪರಿಸರದ ಮೇಲಿನ ಹಾನಿಯನ್ನು ಅಂದಿಗಿಂತಲೂ ಹೆಚ್ಚಾಗಿಯೇ ಇಂದು ಅನುಭವಿಸುತ್ತಿರುವ ಮನುಷ್ಯ ಇನ್ನೂ ಎಚ್ಚತ್ತುಕೊಳ್ಳದಿರುವುದು ದೌರ್ಭಾಗ್ಯ. ತಾನೇ ಸೃಷ್ಟಿಸಿಕೊಂಡ ವಿಷವರ್ತುಲದೊಳಗೆ ಸಿಲುಕಿಕೊಂಡು ಒದ್ದಾಡುತ್ತಿದ್ದರೂ ಇನ್ನೂ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧನಾಗದ ಮಾನವ ತಾನು ಪರಿಸರದ ಮೇಲೆ ಮಾಡಿದ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾನೆ. ಬಹುಗುಣರಂಥ ಹೋರಾಟಗಾರರು ಪರಿಸರ ಉಳಿವಿಗಾಗಿ ಮತ್ತೆ ಮತ್ತೆ ಹೋರಾಡುತ್ತಲೇ ಇದ್ದಾರೆ.


ಡಾ.ಗುರುಪ್ರಸಾದ ಹವಲ್ದಾರ್

ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: Chipko Movementcovid19Environmentalistindiasundarlal bahugunaUttarakhand
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
#COVID19KARNATAKA‌ : ಕೋಲಾರ ಕೋವಿಡ್‌ ಪರಿಸ್ಥಿತಿ ಪರಿಶೀಲಿಸಿದ ಉಪ ಮುಖ್ಯಮಂತ್ರಿ: ಜಿಲ್ಲೆಗೆ 300 ಆಕ್ಸಿಜನ್‌ ‍& 150 ICU ಬೆಡ್‌; 10 ದಿನದಲ್ಲಿ SNR ಆಸ್ಪತ್ರೆಯಲ್ಲಿ 1,000 ಕೆಎಲ್ ಆಮ್ಲಜನಕ ಪೂರೈಕೆ ವ್ಯವಸ್ಥೆ

ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ I ಪರೀಕ್ಷೆ ತಡವಾದರೂ ಆನ್‌ಲೈನ್‌ ಕ್ಲಾಸ್‌ ಮುಂದುವರಿಕೆ: ಡಿಸಿಎಂ

Leave a Reply Cancel reply

Your email address will not be published. Required fields are marked *

Recommended

ಬಾಗೇಪಲ್ಲಿಯಲ್ಲಿ ವೀಕೆಂಡ್‌ ಲಾಕ್‌ಡೌನ್‌ ಸಕ್ಸಸ್;‌ ಪಟ್ಟಣ ಸೇರಿ ತಾಲೂಕಿನಾದ್ಯಂತ ಜನಜೀವನ ಬಹತೇಕ ಸ್ತಬ್ಧ

ಇವತ್ತು ಸೂರ್ಯೋದಯದಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ದಿನ ಫುಲ್‌ ಲಾಕ್‌ಡೌನ್;‌ ಆಂಧ್ರ ಪ್ರದೇಶದವರಿಗೆ ಅವಕಾಶ ಇಲ್ಲ & ಕೋಲಾರ, ಬೆಂಗಳೂರು ಸೇರಿ ಹೊರಗಿನವರಿಗೆ ನೋ ಎಂಟ್ರಿ

4 years ago
ಬ್ರಾಹ್ಮಣರಿಗೆ ನೋವುಂಟು ಮಾಡಿದ 6ನೇ ತರಗತಿಯ ಸಮಾಜ ವಿಜ್ಞಾನದ 7ನೇ ಪಾಠದ ಆಕ್ಷೇಪಾರ್ಹ ಪಠ್ಯ ಡಿಲೀಟ್‌

ಬ್ರಾಹ್ಮಣರಿಗೆ ನೋವುಂಟು ಮಾಡಿದ 6ನೇ ತರಗತಿಯ ಸಮಾಜ ವಿಜ್ಞಾನದ 7ನೇ ಪಾಠದ ಆಕ್ಷೇಪಾರ್ಹ ಪಠ್ಯ ಡಿಲೀಟ್‌

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ