ಗ್ರಾಮ ಕಾರ್ಯಪಡೆ ಕರ್ತವ್ಯ ನಿಷ್ಠೆಗೆ ಜನರ ಮೆಚ್ಚುಗೆ; ಫಲ ಕೊಟ್ಟ ಟೀಮ್ ವರ್ಕ್
by Rajesh Gudibande
ಗುಡಿಬಂಡೆ: ಕೊರೋನಾ ಮೊದಲನೇ ಅಲೆಯಲ್ಲಿ ಕೇವಲ ನಗರ ಹಾಗೂ ಪಟ್ಟಣಗಳಲ್ಲಿ ಹೆಚ್ಚು ಕಾಣಿಸಿಕೊಂಡ ಕೊರೊನ ವೈರಸ್ ಈಗ ಅದರ ಪ್ರಭಾವ ಹಳ್ಳಿಗಳ ಮೇಲೆ ತೀವ್ರವಾಗಿ ಬಿದ್ದಿದ್ದು ಅದಕ್ಕೆ ಹಳ್ಳಿಗರು ಬೆಚ್ಚಿಬಿದಿದ್ದಾರೆ.
ದೀನೇದಿನೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಅದಕ್ಕೆ ಕಡಿವಾಣ ಹಾಕಲು ವಿಲೇಜ್ ಟಾಸ್ಕ್‌ಫೋರ್ಸ್ ಸಮಿತಿಗಳು ಹಗಲಿರಳು ಶ್ರಮ ವಹಿಸಿಸುತ್ತಿದ್ದು, ಮುಖ್ಯವಾಗಿ ತಾಲೂಕಿನ ಉಲ್ಲೋಡು ಪಂಚಾಯತಿ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ಶೂನ್ಯದತ್ತ ಸಾಗಿದೆ.
ಉಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫ್ರಂಟ್‌ಲೈನ್ ವಾರಿಯರ್ಸ್ ಆದ ಶಿಕ್ಷಕರು, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ತಾಲೂಕು ಪಂಚಾಯತಿ, ತಾಲೂಕು ಆಡಳಿತ ಇವರೆಲ್ಲರ ಶ್ರಮಕ್ಕೆ ಈಗ 100% ರಷ್ಟು ಪ್ರತಿಫಲ ಸಿಕ್ಕಂತಾಗಿದೆ ಹಾಗೂ ಈ ಗ್ರಾಮ ಪಂಚಾಯಿತಿಯಲ್ಲಿ ಇವರೆಲ್ಲರ ಶ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಜನಜಾಗೃತಿ ಆಂದೋಲನ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕೊರೋನಾ ಸೋಂಕಿನ ಬಗ್ಗೆ ಜನಜಾಗೃತಿ ಆಂದೋಲನ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿ, ಮಾಸ್ಕ್ ಬಳಸುವಿಕೆ, ದೈಹಿಕ ಅಂತರ, ಸ್ಯಾನಿಟೈಸರ್ ಬಳಿಸಿ ಕೈ ತೊಳೆದು ಕೊಳ್ಳುವ ವಿಧಾನ ಸೇರಿದಂತೆ ವಿವಿಧ ಅರಿವು ಕಾರ್ಯಕ್ರಮಗಳನ್ನು ಉಲ್ಲೋಡು ಕಂದಾಯ ವೃತ್ತದಲ್ಲಿ ಮಾಡಲಾಗಿದೆ.
ಮಾಸ್ಕ್ ಮತ್ತು ದೈಹಿಕ ಅಂತರ ನಿರಂತರ
ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖಗೊಂಡಿದೆ ಎಂಬ ಕಾರಣಕ್ಕೆ ಕೊರೋನಾ ನಿಯಮಾವಳಿಗಳನ್ನು ಮರೆಯಬಾರದು, ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲಿಸುವುದು, ಸ್ಯಾನಿಟೈಸ್ ಮಾಡಿಕೊಂಡು ಎಚ್ಚರಿಕೆಯಿಂದ ಇರಬೇಕು ಎಂದು ಡಾ.ವಿಜಯಲಕ್ಷ್ಮಿಸಲಹೆ ನೀಡಿದ್ದಾರೆ.
ಶೀಘ್ರದಲ್ಲಿ ಕೊರೋನಾ ಮುಕ್ತಗೊಳಿಸುತ್ತೇವೆ
ಸದ್ಯದ ಬೆಳವಣಿಗೆಗಳಿಂದ ಉತ್ಸಾಹಗೊಂಡಿರುವ ವಿಲೇಜ್ ಟಾಸ್ಕ್ ಫೋರ್ಸ್ ಕಮಿಟಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ತಾಲೂಕು ಆಡಳಿತ, ಆಶಾ ಕಾರ್ಯಕರ್ತೆಯರು ಶೀಘ್ರದಲ್ಲಿ ಉಲ್ಲೋಡು ಗ್ರಾಮ ಪಂಚಾಯತಿಯನ್ನು ಕೊರೋನಾ ಮುಕ್ತಗೊಳಿಸಲು ಸಕಲ ಪ್ರಯತ್ನಗಳನ್ನು ಮಾಡಿದ್ದಾರೆ. ಒಂದು ವಾರದಿಂದ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ ಹಾಗೂ ಐಸೋಲೇಷನ್ʼನಲ್ಲಿರುವವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
95% ಲಸಿಕೆ ಅಭಿಯಾನ ಯಶಸ್ವಿ
ಗ್ರಾಮ ಪಡೆ ಸಮಿತಿಯು ತಹಶೀಲ್ದಾರ್ ಸಿಬ್ಗತ್‌ವುಲ್ಲಾ, ತಾ.ಪಂ. ಕಾರ್ಯ ನಿರ್ವಣಾಧಿಕಾರಿ ರವೀಂದ್ರ ಹಾಗೂ ಉಲ್ಲೋಡು ಗ್ರಾಮ ಪಂಚಾಯತಿ ಅಧ್ಯಕ್ಷ ಬೈರರೆಡ್ಡಿ ಸಹಕಾರದೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ 19 ಹಳ್ಳಿಗಳಲ್ಲಿ ವಾರಕ್ಕೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತಿತ್ತು, ಮತ್ತು 95% ಲಸಿಕೆ ಅಭಿಯಾನ ಯಶಸ್ವಿಗೊಳಿಸಲಾಗಿದೆ ಹಾಗೂ ಎಲ್ಲಾ ಕೊರೋನಾ ಸೋಂಕಿತರ ಮನೆಗೆ ಬೇಟಿ ನೀಡಿ ಅವರ ಯೋಗ ಕ್ಷೇಮ ವಿಚಾರಿ ಸೌಲಭ್ಯ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ.
ವಿ.ಲಕ್ಷ್ಮೀನಾರಾಯಣ ಗ್ರಾಮ ಲೆಕ್ಕಾಧಿಕಾರಿ ಉಲ್ಲೋಡು ಪಂಚಾಯತಿ
ಎಲ್ಲರ ಸಹಕಾರವಿದೆ
ಕೊರೋನಾದಿಂದ ಭಯಗೊಂಡ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬಿ, ಪ್ರತಿವಾರ ಸ್ಯಾನಿಟೈಸ್ ಮಾಡಿ ಉತ್ತಮ ಕೆಲಸ ಮಾಡಲಾಗುತ್ತಿತ್ತು, ಈ ವೇಳೆ ನಮಗೆ ಆಶಾ ಕಾರ್ಯಕರ್ತೆರು, ಪಿಡಿಓ, ವಿಶೇಷವಾಗಿ ಗ್ರಾಮಲೆಕ್ಕಾಧಿಕಾರಿ ವಿ.ಲಕ್ಷ್ಮೀನಾರಾಯಣ ಅವರ ಸಹಕಾರ ನಾವು ಸ್ಮರಿಸಲೇಬೇಕು.
ಬೈರಾರೆಡ್ಡಿ ಅಧ್ಯಕ್ಷ, ಉಲ್ಲೋಡು ಗ್ರಾಮ ಪಂಚಾಯತಿ