ಚಿಕ್ಕಬಳ್ಳಾಪುರ: 108 ಆರೋಗ್ಯ ಕವಚಕ್ಕೆ ಸಂಬಂಧಿಸಿದಂತೆ ಕೋವಿಡ್ ರೋಗಕ್ಕೆ ಸಿಲುಕಿದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಒಂದರಂತೆ 5 ತಾಲೂಕುಗಳಲ್ಲಿ ಜಿವಿಕೆ & ಇ.ಎಮ್.ಅರ್.ಐ (ತುರ್ತು ನಿರ್ವಹಣಾ ಸಂಶೋಧನಾ ಸಂಸ್ಥೆ) ವತಿಯಿಂದ ಒಟ್ಟು 5 ಅಂಬುಲೆನ್ಸ್ʼಗಳನ್ನು ಮೀಸಲು ಇಡಲಾಗಿದೆ ಎಂದು ಜಿವಿಕೆ ಮತ್ತು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಉಳಿದ 11 ಅಂಬುಲೆನ್ಸ್ʼಗಳನ್ನು ಕೋವಿಡ್‌ಯೇತರ ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ನಿರ್ಮಲಿಕರಣ ಮಾಡಿ ಮೀಸಲು ಇಡಲಾಗಿದೆ. ಸಾರ್ವಜನಿಕರು ಯಾವುದೆ ಸಮಯದಲ್ಲಿ ಹಾಗೂ ತುರ್ತು ಸಂದರ್ಬದಲ್ಲಿ 108 ಸೇವೆಗೆ ಉಚಿತ ಕರೆ ಮಾಡಿ ಉಚಿತ ಸೇವೆಯನ್ನು ಸದುಪಯೊಗಪಡಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.
ಕೋವಿಡ್ ಮಾರ್ಗಸೂಚಿಯಂತೆ ಈ ಅಂಬುಲೆನ್ಸ್ʼಗಳನ್ನು ಸ್ವಚ್ಛವಾಗಿರಿಸಲಾಗಿದ್ದು, ನಿಯಮಿತವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ ಹಾಗೂ ಚಾಲಕ ಸೇರಿ ನರ್ಸಿಂಗ್ ಸಿಬ್ಬಂದಿಗೆ ಪಿಪಿಇ ಕಿಟ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಜಿವಿಕೆ ಸಂಸ್ಥೆಯ ಕರ್ನಾಟಕ ರಾಜ್ಯದ ಮುಖ್ಯ ನಿರ್ವಹಣಾ ಅಧಿಕಾರಿ ಹನುಮಂತ್ ಅರ್.ಜಿ., ಪಶ್ಚಿಮ ಭಾಗದ ಪ್ರಾದೇಶಿಕ ವ್ಯವಸ್ಥಾಪಕ ಯತಿಶ್, ಚಿಕ್ಕಬಳ್ಳಾಪುರ ಜಿಲ್ಲೆ ವ್ಯವಸ್ಥಾಪಕ ಕಪಿಲ್ ಕುಮಾರ್, ಜಿಲ್ಲೆ ಕಾರ್ಯನಿರ್ವಾಹಕ ವ್ಯವಸ್ಥಾಪಕ ಗೋವಿಂದರಾಜ ಅವರು ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
- ಪಿಪಿಇ ಕಿಟ್ ಧರಿಸಿರುವ ಸಿಬ್ಬಂದಿ: ಮುರಳಿ ಡಿ.ವಿ., ರಾಜೇಶ್, ಸೋಮಶೇಖರ್, ನರಸಿಂಹಮೂರ್ತಿ, ಸೀನಪ್ಪ ಜಿ.,