ಆಕಾಂಕ್ಷಾ ಇಂಟಿಗ್ರೇಟೆಡ್ ಸಂಸ್ಥೆ ಹಾಗೂ ಗಿವ್ ಇಂಡಿಯಾ ಫೌಂಡೇಶನ್ ವತಿಯಿಂದ ದಾನ
ಬಾಗೇಪಲ್ಲಿ: ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲು ಸಹಕಾರಿಯಾಗುವ 25 ಆಮ್ಲಜನಕ ಸಾಂದ್ರಕಗಳನ್ನು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕು ಆಸ್ಪತ್ರೆಗಳಿಗೆ ದಾನಿಗಳು ನೀಡಿದ್ದಾರೆ.
ಆಕಾಂಕ್ಷಾ ಇಂಟಿಗ್ರೇಟೆಡ್ ಸಂಸ್ಥೆ ಹಾಗೂ ಗಿವ್ ಇಂಡಿಯಾ ಫೌಂಡೇಶನ್ ವತಿಯಿಂದ ನೀಡಲಾದ ಈ ಸಾಂದ್ರಕಗಳನ್ನು ಭಾನುವಾರದಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ನೇತೃತ್ವದಲ್ಲಿ ಬಾಗೇಪಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಸತ್ಯನಾರಾಯಣ ರೆಡ್ಡಿ ಅವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ನೀತಿ ಆಯೋಗ ಮತ್ತು ಯೋಜನಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಆಕಾಂಕ್ಷಾ ಇಂಟಿಗ್ರೇಟೆಡ್ ಸಿಎಸ್ಆರ್ ಸೌಲಭ್ಯ ವೇದಿಕೆಯ ಕನ್ಸಲ್ಟೆಂಟ್ ಮಹೇಶ್, ಬಾಗೇಪಲ್ಲಿ ತಹಸೀಲ್ದಾರ್ ಡಿ.ಎ.ದಿವಾಕರ್, ತಾಲ್ಲೂಕು ಬಿಜೆಪಿ ಮಂಡಲಾಧ್ಯಕ್ಷ ಪಿ.ಪ್ರತಾಪ್, ಬಾಗೇಪಲ್ಲಿ ಬಿಜೆಪಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.