• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ನಿಜ, ಸಂಚಾರಿ ವಿಜಯ್‌ ಪಾತ್ರಗಳಲ್ಲಿ ಜೀವಿಸಿದ್ದರು; ಇನ್ನು ಮುಂದೆ ನಮ್ಮ ಹೃದಯಗಳಲ್ಲಿ ನೆಲೆಸಲಿದ್ದಾರೆ..

P K Channakrishna by P K Channakrishna
June 14, 2021
in NATION, STATE
Reading Time: 1 min read
0
ನಿಜ, ಸಂಚಾರಿ ವಿಜಯ್‌ ಪಾತ್ರಗಳಲ್ಲಿ ಜೀವಿಸಿದ್ದರು; ಇನ್ನು ಮುಂದೆ ನಮ್ಮ ಹೃದಯಗಳಲ್ಲಿ ನೆಲೆಸಲಿದ್ದಾರೆ..
952
VIEWS
FacebookTwitterWhatsuplinkedinEmail

Lead photo courtesy: ps express

ವಿನಮ್ರತೆ, ಸರಳತೆ, ಸಜ್ಜನಿಕೆಯ ಮೇರು / ನಟನೆ ಅಷ್ಟೇ ಎತ್ತರ

ಬೆಂಗಳೂರು: ಶನಿವಾರ ತಡರಾತ್ರಿಯಿಂದ ವೆಂಟಿಲೇಟರ್‌ ಮೇಲೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕನ್ನಡದ ʼಸಹಜ ನಟʼ ಸಂಚಾರಿ ವಿಜಯ್‌ ಹೊಸ ದಿಗಂತದತ್ತ ತಮ್ಮ ಸಂಚಾರ ಶುರು ಮಾಡಿದ್ದಾರೆ..

ಕೊನೆ ಕ್ಷಣದಲ್ಲೇನಾದರೂ ದೇವರ ಕರುಣೆ, ಅಭಿಮಾನಿಗಳ ಪ್ರಾರ್ಥನೆ ಹಾಗೂ ವೈದ್ಯರ ಪರಿಶ್ರಮದಿಂದ ಏನಾದರೂ ಪವಾಡ ನಡೆದು ವಿಜಯ್ ಅವರ ಮಿದುಳು ಕೆಲಸ ಮಾಡಲು ಆರಂಭಿಸುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸಹಸ್ರಾರು ಅಭಿಮಾನಿಗಳ ಆಶಯ, ಪ್ರಾರ್ಥನೆ ಫಲಿಸಲಿಲ್ಲ. ಅವರು ಉಳಿದು ಹೊರಬರುತ್ತಾರೆಂಬ ನಿರೀಕ್ಷೆಯೂ ಈಡೇರಲಿಲ್ಲ.

ಈ ವರದಿ ಬರೆಯುವುದಕ್ಕೆ ಸ್ವಲ್ಪ ಹೊತ್ತಿಗೆ ಮುನ್ನ ಮತ್ತೊಮ್ಮೆ ಪರೀಕ್ಷೆ ನಡೆಸಿದ ವೈದ್ಯರ ತಂಡವು ಮಿದುಳು ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬ ಸಂಗತಿಯನ್ನು ಖಚಿತಪಡಿಸಿದೆ. ಹೀಗಾಗಿ ಅವರ ಕುಟುಂಬದ ಆಶಯದಂತೆ ಸಂಚಾರಿ ವಿಜಯ್ ಅವರ ಅಂಗಾಂಗ ದಾನಕ್ಕೆ ಎಲ್ಲವೂ ಸಿದ್ಧವಾಗಿದೆ. ರಾಜ್ಯ ಸರಕಾರದ ʼಜೀವನ ಸಾರ್ಥಕತೆ ತಂಡʼ ಅಂಗಾಗಗಳನ್ನು ತೆಗೆಯುವ ಕೆಲಸವನ್ನು ಆರಂಭಿಸಿದೆ. ವಿಜಯ್‌ ಅವರು ಅಗಲಿದ ನಂತರವೂ ಅವರ ಅಂಗಾಂಗಳು ಅನ್ಯರ ಬಾಳಿಗೆ ಬೆಳಕು ತುಂಬಲಿವೆ.

ಆಸ್ಪತ್ರೆಯೊಳಗೆ ವೈದ್ಯರು ಅಂಗಾಂಗಳನ್ನು ತೆಗೆಯುತ್ತಿದ್ದರೆ, ಹೊರಗೆ ಮಾಧ್ಯಮಗಳ ನೂರಾರು ಕ್ಯಾಮೆರಾಗಳು ಉಸಿರು ಬಿಗಿಹಿಡಿದು ಕೂತಿವೆ. ವಿಜಯ್‌ ಉಸಿರು ಚೆಲ್ಲದೆ, ಆ ವೆಂಟಿಲೇಟರ್‌ ಮೇಲೆ ಒಮ್ಮೆಯಾದರೂ ಅಲುಗಾಡಬಾರದೆ? ಹಾಗೆ ಅಲುಗಾಡಿದ್ದನ್ನು ವೈದ್ಯರು ಬಂದು ಹೇಳಬಾರದೆ? ಎಂದು ಆಶಿಸಿ ಕಾಯುತ್ತಿವೆ.

ಬೆಳಗ್ಗೆ ದೇಹ ಹಸ್ತಾಂತರ

ಮಂಗಳವಾರ ಬೆಳಗ್ಗೆ ಹೊತ್ತಿಗೆ ವಿಜಯ್ ಅವರ ಪಾರ್ಥೀವ ಶರೀರವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗುವುದು. ಬಳಿಕ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ವಿನಮ್ರತೆ, ಸರಳತೆ, ಸಜ್ಜನಿಕೆಯ ಮೇರು

ಕನ್ನಡದ ಹೊಸ ತಲೆಮಾರಿನ ನಾಯಕ ನಟರ ಪೈಕಿ ಬಹಳ ವಿಭಿನ್ನರಾಗಿದ್ದ ಸಂಚಾರಿ ವಿಜಯ್‌ ಅವರು ವಿನಮ್ರತೆ, ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ. ಸಂಕೋಚ ಸ್ವಭಾವದ ಅವರು ನಟನೆಗೆ ಬಂದರೆ ವಿರಾಟ್‌ ಸ್ವರೂಪವಾಗುತ್ತಿದ್ದರು.

ಅಪ್ಪಟ ರಂಗ ಕಲಾವಿದ, ನರನಾಡಿಗಳಲ್ಲೂ ನಟನೆಯನ್ನೇ ಉಸಿರಾಡುತ್ತಿದ್ದ ಪರಿ ಸಂಚಾರಿ ವಿಜಯ್‌ಗೆ ಮಾತ್ರ ಸಿದ್ದಿಸಿದ್ದು. ಬೆಳ್ಳಿತೆರೆಯ ಮೇಲೆ ಅವರು ಅಬ್ಬರಿಸಿದವರಲ್ಲ, ಬದಲಿಗೆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕನ ಮುಂದೆ ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದರು.

ಲಿಂಗದೇವರು ನಿರ್ದೇಶನದ ʼನಾನು ಅವನಲ್ಲ-ಅವಳುʼ ಸಿನಿಮಾ ಸಂಚಾರಿ ವಿಜಯ್‌ ಅವರ ನಟನೆಯ ಪರಾಕಾಷ್ಠೆ. ನಂತರ ಬಂದ ʼನಾತಿಚರಾಮಿʼ ಅವರ ನಟನೆಯ ಅಪ್ಪಟ್ಟ ಅರಬ್ಬಿ ಸಮುದ್ರ. ಬಳಿಕ ʼಕೃಷ್ಣ ತುಳಸಿʼ ಆ ತುಳಸೀದಳದಷ್ಟೇ ಪರಿಶುದ್ಧತೆಯ ತಾದ್ಯಾತ್ಮ. ಇಂಥ ವಿಜಯ್‌ ಈಗ ತಮ್ಮ ಸಂಚಾರ ಮುಗಿಸುತ್ತಿದ್ದಾರೆ. ಬೆಳಗಿನ ಹೊತ್ತಿಗೆ ಬೇರೆಯದೇ ಸುದ್ದಿ ಕೇಳಲೇಬೇಕಾದ ಅನಿವಾರ್ಯತೆ.

ತೃತೀಯ ಲಿಂಗಿ ಪಾತ್ರವೆಂದರೆ ಅಬ್ಬರಿಸುವ, ಕಿರುಚುವ ʼಜಾನರ್‌ʼಗೆ ಸೇರಿರುವ ಈ ಕಾಲದಲ್ಲಿ ವಿಜಯ್‌ ಆ ಪಾತ್ರದೊಳಕ್ಕೆ ಸರ್ವವನ್ನೂ ಮರೆತು ಪರಕಾಯ ಪ್ರವೇಶ ಮಾಡಿದ್ದರು. ಲಿಂಗದೇವರು ಅತ್ಯಂತ ಸೂಕ್ಷ್ಮವಾಗಿ ಕಟ್ಟಿದ ದೃಶ್ಯಗಳಲ್ಲಿ ಅಷ್ಟೇ ಸೂಕ್ಷ್ಮವಾಗಿ ಆವರಿಸಿಕೊಂಡು ಅಭಿನಯ ದಿಗಂತವನ್ನು ದಾಟಿದ್ದರು. 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇವರಿಗೆ ʼನಾನು ಅವನಲ್ಲ…ಅವಳುʼ ಪಾತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಂದಾಗ ಇಡೀ ಕನ್ನಡಚಿತ್ರ ಒಮ್ಮೆ ಮೈಕೊಡವಿಕೊಂಡಿತ್ತು. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಹಿರಿಯ ಸಚಿವ ಅರುಣ್‌ ಜೇಟ್ಲಿ ಅವರಿದ್ದ ವೇದಿಕೆಗೆ ಸಂಕೋಚದಿಂದಲೇ ಏರಿಬಂದ ವಿಜಯ್‌ ಪ್ರಶಸ್ತಿ ಸ್ವೀಕರಿಸಿದ ದೃಶ್ಯಗಳು ಈಗಲೂ ಕಣ್‌ ಪಾಪೆಯಲ್ಲಿ ಹೊರಳಾಡುತ್ತಿವೆ.

ಪಾತ್ರಗಳು ಒಂದಲ್ಲ, ಎರಡಲ್ಲ.. ಎಲ್ಲದರಲ್ಲೂ ವಿಜಯ್‌ ಜೀವಿಸಿದ್ದರು. ಇನ್ನೂ ನಮ್ಮ ಹೃದಯಗಳಲ್ಲಿ ಜೀವಿಸಲಿದ್ದಾರೆ..

Tags: Apollo hospitalkannada actorkannada cinemaroad accidentsanchari vijaysandalwood
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಬಿಜೆಪಿ ಬೆಳವಣಿಗೆ ಹೈಡ್ರಾಮ & ಎಲ್ಲ ಯಡಿಯೂರಪ್ಪ ತಂತ್ರಗಾರಿಕೆ, ಸಹಿ ಸಂಗ್ರಹವೂ ಅವರದ್ದೇ ಕೆಲಸ ಎಂದು ಹೇಳಿದ ಸಿದ್ದರಾಮಯ್ಯ

ಸಂಬಳವಿಲ್ಲದೆ ಸಂಕಷ್ಟದಲ್ಲಿರುವ ಶಿಕ್ಷಕರು ನರೇಗಾ ಕೂಲಿ ಕಾರ್ಮಿಕರಾದರಾ? ಶಾಲಾ ಶುಲ್ಕ ಸಂಘರ್ಷಕ್ಕೆ ಸಿದ್ದರಾಮಯ್ಯ ಸಿಟ್ಟು

Leave a Reply Cancel reply

Your email address will not be published. Required fields are marked *

Recommended

ಪ್ರಯತ್ನದಿಂದ ದೊರೆಯುವ ಸಿದ್ಧಿಯೇ ಪರಮ ಸತ್ಯ, ಪ್ರಯತ್ನ ಮಾಡದೆ ಉದಾಸೀನತೆಯಿಂದ ಉಳಿದು ಬಿಡುವುದೇ ಅಜ್ಞಾನ: ಸದ್ಗುರು ಮಧುಸೂದನ ಸಾಯಿ

ಪ್ರಯತ್ನದಿಂದ ದೊರೆಯುವ ಸಿದ್ಧಿಯೇ ಪರಮ ಸತ್ಯ, ಪ್ರಯತ್ನ ಮಾಡದೆ ಉದಾಸೀನತೆಯಿಂದ ಉಳಿದು ಬಿಡುವುದೇ ಅಜ್ಞಾನ: ಸದ್ಗುರು ಮಧುಸೂದನ ಸಾಯಿ

4 years ago
ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬಿಜೆಪಿ ಅತಿರಥಮಹಾರಥರ ಡೇ ಔಟ್‌

ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬಿಜೆಪಿ ಅತಿರಥಮಹಾರಥರ ಡೇ ಔಟ್‌

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ