• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home POLITICS

ಯಡಿಯೂರಪ್ಪ ಬದಲಾಗಲೇಬೇಕು ಅನ್ನುತ್ತಿದ್ದ ಬಿಜೆಪಿ ಹೈಕಮಾಂಡ್‌ ಯು ಟರ್ನ್‌ ಹೊಡೆದಿದ್ದೇಕೆ?

P K Channakrishna by P K Channakrishna
June 16, 2021
in POLITICS, STATE
Reading Time: 2 mins read
0
ಯಡಿಯೂರಪ್ಪ ಬದಲಾಗಲೇಬೇಕು ಅನ್ನುತ್ತಿದ್ದ ಬಿಜೆಪಿ ಹೈಕಮಾಂಡ್‌ ಯು ಟರ್ನ್‌ ಹೊಡೆದಿದ್ದೇಕೆ?
916
VIEWS
FacebookTwitterWhatsuplinkedinEmail

ನಾಯಕತ್ವ ಬದಲಾವಣೆ ಅನುಮಾನ I ಖಾತೆಗಳಲ್ಲಿ ಹಸ್ತಕ್ಷೇಪಕ್ಕೆ ನಿಗಾ ವ್ಯವಸ್ಥೆ I ಸಂಪುಟದಿಂದ ಕೆಲ ಹಳಬರು ಆಚೆಗೆ; ಹೊಸಬರಿಗೆ ಅವಕಾಶ

  • ಅರುಣ್‌ ಸಿಂಗ್‌

ಬೆಂಗಳೂರು: ನಾಯಕತ್ವ ಬಿಕ್ಕಟ್ಟು ಬಗೆಹರಿಸಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬೆಂಗಳೂರಿಗೆ ಬಂದಾಗಿದೆ.ಮೇಲ್ನೋಟಕ್ಕೆ ಮೊದಲ ದಿನಕ್ಕೆ ಸಿಕ್ಕಿರುವ ಆರಂಭಿಕ ರಿಸಲ್ಟ್‌ ಇಷ್ಟು;

ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಇಲ್ಲ.

  • ಎಲ್ಲರ ಖಾತೆಗಳಲ್ಲೂ ಕೈಯ್ಯಾಡಿಸುತ್ತಿರುವ ಸಿಎಂ ಪುತ್ರ ವಿಜಯೇಂದ್ರಗೆ ಲಕ್ಷ್ಮಣ ರೇಖೆ.
  • ಪಕ್ಷದಲ್ಲಿ ಕೆಲ ಬದಲಾವಣೆಗಳು ಆಗುತ್ತವೆ, ಜತೆಗೆ ಸಂಪುಟದಲ್ಲಿ ಕೆಲವರಿಗೆ ಕೊಕ್-ಹೊಸಬರಿಗೆ ಅವಕಾಶ.
  • ಇವತ್ತು, ನಾಳೆ ಮತ್ತು ನಾಡಿದ್ದು ಪಕ್ಷಸಂಧಾನ ಕೈಂಕರ್ಯವನ್ನು ಮುಗಿಸಿದ ಮೇಲೆ ದಿಲ್ಲಿಗೆ ಹೋಗಿ ಇಡೀ ಬೆಳವಣಿಗೆಗಳ, ನಾಯಕರು ಸಚಿವರ & ಶಾಸಕರ ಅಭಿಪ್ರಾಯಗಳ, ಬೇಸರ-ಸಿಟ್ಟುಗಳ ಗಿಣಿಪಾಠವನ್ನು ಅಗ್ರನಾಯಕರಿಗೆ ಒಪ್ಪಿಸಲಿದ್ದಾರೆ.

ಶುಕ್ರವಾರ ಸಂಜೆ ದಿಲ್ಲಿಗೆ ಹೋದ ಮೇಲೆ ರಾಜ್ಯ ಬಿಜೆಪಿಗೆ ಸೂಚನೆಗಳು ರವಾನೆಯಾಗಲಿದ್ದು, ಅದರಲ್ಲಿ ಮುಖ್ಯಮಂತ್ರಿ ಬಣ ಹಾಗೂ ವಿರೋಧಿ ಬಣಕ್ಕೂ ಚುರುಕು ಮುಟ್ಟಿಸುವ ಅಂಶಗಳು ಇದ್ದೇ ಇರುತ್ತವೆ ಎನ್ನುವುದು ಖಚಿತ.

ಸದ್ಯಕ್ಕೆ ಬಿಜೆಪಿ ಬಿಕ್ಕಟ್ಟು ಶಮನ ಪ್ರಯತ್ನ ಕೈಗೂಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಬಿಕ್ಕಟ್ಟಿನಿಂದ ಸಿಎಂ ಯಡಿಯೂರಪ್ಪ ಪಾರಾಗುವುದು ಖಚಿತ. ಆದರೆ, ಸರಕಾರಕ್ಕೆ ಹೈಕಮಾಂಡ್‌ ಸರ್ಜರಿ ಮಾಡುವುದಂತೂ ಗ್ಯಾರಂಟಿ.

ಸಂಪುಟದಲ್ಲಿ ಕೆಲವರನ್ನು ಬದಲಾಯಿಸುವ ಹಾಗೂ ಕೆಲ ಆಯ್ದ ಹೊಸ ಮುಖಗಳಿಗೆ ಅವಕಾಶ ನೀಡುವ ಕೆಲಸ ನಡೆಯಲಿದೆ. ಸಚಿವರ ಖಾತೆಗಳಲ್ಲಿ ಮುಖ್ಯಮಂತ್ರಿ ಕುಟುಂಬದ ಯಾರೂ ಹಸ್ತಕ್ಷೇಪ ಮಾಡದಂತೆ ನಿಗಾ ಇರಿಸಲು ಹೈಕಮಾಂಡ್‌ ಹೊಸ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.

ಬುಧವಾರದಂದು ಕೆಲವರನ್ನಷ್ಟೇ ಹೊರತುಪಡಿಸಿದರೆ ಬಹುತೇಕ ಶಾಸಕರು ಮತ್ತು ಸಚಿವರು ಯಡಿಯೂರಪ್ಪ ಅವರಲ್ಲಿ ʼಪರಮ ನಿಷ್ಠೆʼ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಅರುಣ್‌ ಸಿಂಗ್‌ ನಡೆಸುವ ಮಾತುಕತೆ ಕೇವಲ ಔಪಚಾರಿಕ ಎನ್ನಲಾಗಿದೆ.

ಇದೇ ವೇಳೆ, ವೀರಶೈವ ಲಿಂಗಾಯತ ಮಹಾಸಭೆ ಬಿಕ್ಕಟ್ಟಿನೊಳಕ್ಕೆ ನೇರವಾಗಿ ಎಂಟ್ರಿ ಕೊಟ್ಟಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಪದವಿಯಲ್ಲಿ ಕೂತಿರುವ ಯಡಿಯೂರಪ್ಪ ಅವರನ್ನು ಟಚ್‌ ಮಾಡಬಾರದು ಎಂದು ಹೇಳಿದೆ.

ಜತೆಗೆ, ರಾಜ್ಯದ ವೀರಶೈವ ಲಿಂಗಾಯತ ಸಮುದಾಯದ ಅನೇಕ ಸ್ವಾಮೀಜಿಗಳು ಈಗಾಗಲೇ ಯಡಿಯೂರಪ್ಪ ಪರ ಹೇಳಿಕೆಗಳನ್ನು ಕೊಟ್ಟು, ಸಮುದಾಯದ ಅಗ್ರನಾಯಕನಿಗೆ ಅನ್ಯಾಯವಾದರೆ ಸಹಿಸುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಹೈಕಮಾಂಡ್‌ ಸದರಿ ಬಿಕ್ಕಟ್ಟನ್ನು ಹಾಗೆಯೇ ʼಜೀವಂತʼ ಇಟ್ಟು ತಾತ್ಕಾಲಿಕವಾಗಿ ತೇಪೆ ಹಚ್ಚುವ ಕೆಲಸ ಮಾಡಲಿದೆ ಎನ್ನುತ್ತಿದೆ ಪಕ್ಷದ ಉನ್ನತ ಮೂಲವೊಂದು.

ಇವೆಲ್ಲ ಅಂಶಗಳನ್ನು ಬಿಜೆಪಿ ವರಿಷ್ಠರು ಪಟ್ಟಿ ಮಾಡಿದ್ದಾರೆ. ಈ ಪಟ್ಟಿ ಇಟ್ಟುಕೊಂಡೇ ಸಿಂಗ್‌ ಬೆಂಗಳೂರಿಗೆ ಧಾವಿಸಿದ್ದು, ಸದ್ಯಕ್ಕೆ ಆತುರದ ಕ್ರಮ ಬೇಡ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್‌ ಬಂದಿದೆ. ಎಲ್ಲಾ ಸಚಿವರಿಂದ ಅರುಣ್‌ ಸಿಂಗ್‌ ಮಾಹಿತಿ ಸಂಗ್ರಹ ಮಾಡಲಿದ್ದಾರೆ, ನಿಜ. ಪ್ರತ್ಯೇಕವಾಗಿ ಅಥವಾ ಸಿಎಂ ಸಮ್ಮುಖದಲ್ಲೇ ಸಚಿವರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಗುರುವಾರ ಬೆಳಗ್ಗೆಯಿಂದ ಈ ಸರ್ಕಸ್‌ ಶುರುವಾಗಲಿದೆ. ಹೀಗಾಗಿ ಅಭಿಪ್ರಾಯ ಸಂಗ್ರಹ ಕಣ್ಣೊರೆಸುವ ತಂತ್ರವಷ್ಟೇ ಎನ್ನುತ್ತಾರೆ ಪಕ್ಷದ ಹಿರಿಯ ನಾಯಕರೊಬ್ಬರು.

ಇದಕ್ಕೆ ಪೂರಕ ಎನ್ನುವಂತೆ, ಬಂದ ದಿನವೇ ಅರುಣ್‌ ಸಿಂಗ್‌ ಕೊಟ್ಟ ಹೇಳಿಕೆ ಇದಕ್ಕೆ ಪುಷ್ಠಿ ನೀಡುತ್ತಿದೆ. “ನಾಯಕತ್ವದ ಬಗ್ಗೆ ಈಗಾಗಲೇ ಹೇಳಿದ್ದೇನೆ. ಹೊಸದಾಗಿ ಹೇಳುವುದೇನೂ ಇಲ್ಲ. ಇನ್ನು, ಯಡಿಯೂರಪ್ಪ ಅವರು ಕೋವಿಡ್‌ ಬಿಕ್ಕಟ್ಟನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಕುಟುಂಬದ ಒಬ್ಬರಿಗೆ ಒಂದು ಲಕ್ಷ ಪರಿಹಾರವನ್ನೂ ಸಿಎಂ ಘೋಷಣೆ ಮಾಡಿದ್ದಾರೆ” ಎಂದು ಹೇಳಿದ್ದಾರೆ ಅರುಣ್‌ ಸಿಂಗ್.‌ ಈ ಹೇಳಿಕೆ ವಿರೋಧಿ ಪಾಳಯದಲ್ಲಿ ನಿರಾಶೆಯ ಕಾರ್ಮೋಡ ಕವಿಯುವಂತೆ ಮಾಡಿದೆ. ಮೊದಲ ದಿನವೇ ಹೀಗಾದರೆ, ನಾಳೆ, ನಾಡಿದ್ದರ ಕಾರ್ಯತಂತ್ರದ ಕಥೆಯೇನು ಎನ್ನುವ ಗೊಂದಲದಲ್ಲಿದ್ದಾರೆ ಭಿನ್ನಮತೀಯರು.

ಅರುಣ್‌ ಸಿಂಗ್‌ ಕೊಟ್ಟ ಹೇಳಿಕೆ

ನಗರಕ್ಕೆ ಬಂದ ಮೇಲೆ ಔಪಚಾರಿಕವಾಗಿ ಮಾಧ್ಯಮಗಳ ಮುಂದೆ ನಿರೀಕ್ಷಿತ ರೀತಿಯಲ್ಲೇ ಮಾತನಾಡಿದ ಅರುಣ್‌ ಸಿಂಗ್‌ ಹೇಳದ್ದಿಷ್ಟು;

  • ಪಕ್ಷ ಸಂಘಟನೆ ಮತ್ತು ಕೋವಿಡ್ ಸಂಬಂಧ ನಾನು ಇಲ್ಲಿ ಚರ್ಚೆ ಮಾಡಲು ಬಂದಿದ್ದೇನೆ. ರಾಜ್ಯ ಸರಕಾರವು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
  • ಎರಡು ಪ್ಯಾಕೇಜ್‍ಗಳ ಮೂಲಕ ಸಂಕಷ್ಟದಲ್ಲಿರುವವರಿಗೆ ಸರಕಾರ ನೆರವಾಗಿದೆ. 1,250 ಕೋಟಿ ರೂಪಾಯಿ ಮತ್ತು 500 ಕೋಟಿ ರೂಪಾಯಿಯ ಎರಡು ಪ್ಯಾಕೇಜ್ ಪ್ರಕಟಿಸಲಾಗಿದೆ. ಅಲ್ಲದೆ, ಕೋವಿಡ್‍ನಿಂದ ಮೃತಪಟ್ಟ ಬಡವರಿಗೆ ತಲಾ ಒಂದು ಲಕ್ಷ ನೀಡಲು 300 ಕೋಟಿ ನೀಡುವುದಾಗಿ ರಾಜ್ಯ ಸರಕಾರ ಪ್ರಕಟಿಸಿದ್ದು, ಇವೆಲ್ಲವೂ ಉತ್ತಮ ಕ್ರಮಗಳು.
  • ಮುಖ್ಯಮಂತ್ರಿ, ಸಚಿವರು, ಸರಕಾರ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಉತ್ತಮ ಕೆಲಸ ಮಾಡ್ತಿದ್ದಾರೆ. ಜೆಡಿಎಸ್ ಕ್ವಾರಂಟೈನ್‍ನಲ್ಲಿ ಇದೆ. ಕಾಂಗ್ರೆಸ್‍ನವರು ಕಚ್ಚಾಟದಲ್ಲಿ ನಿರತರಾಗಿದ್ದಾರೆ ಎಂದರು ಕೋವಿಡ್ ಸಂಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಪಕ್ಷವು “ಸೇವಾ ಹೀ ಸಂಘಟನ್” ಮೂಲಕ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ.
  • ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಅತ್ಯುತ್ತಮ ರೀತಿಯಲ್ಲಿ ಸೇವೆ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷದವರು ಜನಸೇವೆ ಮಾಡಿಲ್ಲ. ಜನರು ಕಾಂಗ್ರೆಸ್‍ನ ಕಾರ್ಯವೈಖರಿಯನ್ನು ಗಮನಿಸುತ್ತಾರೆ. ಸೇವೆಯೇ ಸಂಘಟನೆ ಎಂಬ ಮಾದರಿಯಲ್ಲಿ ಪಕ್ಷ ಮತ್ತು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಸಸಿ ನೆಡುವ ಕಾರ್ಯ ನಡೆಯುತ್ತಿದೆ. ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಿದ್ಧತೆತಗಳು ನಡೆದಿವೆ.

ಉಸ್ತುವಾರಿ ಕೊಟ್ಟ ಏಕಪಕ್ಷೀಯ ಹೇಳಿಕೆ ಭಿನ್ನಮತೀಯರನ್ನು ಕೆರಳಿಸಿವೆ. ಅವರೆಲ್ಲ ಪ್ರತ್ಯೇಕವಾಗಿ ಈಗಾಗಲೇ ಸಭೆ ನಡೆಸಿ ಮುಂದಿನ ಕಾರ್ಯವ್ಯೂಹ ರಚನೆ ಮಾಡುತ್ತಿದ್ದಾರೆ. ಈ ಮಧ್ಯ ಅರುಣ್‌ ಸಿಂಗ್‌ ನಡೆಸಿದ ಕೋವಿಡ್‌ ಹೆಸರಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂಗಳಾದ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಈಶ್ವರಪ್ಪ, ಅಶೋಕ್‌, ಬಸವರಾಜ ಬೊಮ್ಮಾಯಿ ಮುಂತಾದವರು ಭಾಗಿಯಾಗಿದ್ದರು.

ವಿಜಯೇಂದ್ರಗೆ ಸ್ಪಷ್ಟ ಎಚ್ಚರಿಕೆ

ಮೂರು ದಿನಗಳ ಅರುಣ್‌ ಸಿಂಗ್‌ ರಾಯಭಾರದಲ್ಲಿ ಹೊರಬೀಳುವ ಪ್ರಮುಖ ಫಲಿತಾಂಶವೆಂದರೆ, ಎಲ್ಲರ ಖಾತೆಗಳಲ್ಲಿ ಕೈಯ್ಯಾಡಿಸುತ್ತಿರುವ ಸಿಎಂ ಮಗ ವಿಜಯೇಂದ್ರಗೆ ಮೂಗುದಾರ ಬೀಳುವ ಸಾಧ್ಯತೆ ಇದೆ. ಅವರಿಗೆ ಖಡಕ್‌ ಎಚ್ಚರಿಕೆ ಅಥವಾ ಅದಕ್ಕೂ ಕೊಂಚ ಮುಂದೆ ಹೋಗಿ ವಾರ್ನಿಂಗ್‌ ಕೊಡುವ ಸಾಧ್ಯತೆಯೂ ಇಲ್ಲದಿಲ್ಲ. ಗುರುವಾರ ಬೆಳಗ್ಗೆಯಿಂದ ಕುಮಾರಕೃಪ ವಸತಿ ಗೃಹದಲ್ಲಿ ನಡೆಯಲಿರುವ ಶಾಸಕರ ಸಭೆಯಲ್ಲಿ ಬಹಳಷ್ಟು ನಾಯಕರ ʼದೂರು ಕ್ಷಿಪಣಿಗಳುʼ ವಿಜಯೇಂದ್ರ ವಿರುದ್ಧವೇ ಸಿಡಿಯಲಿವೆ.

ಅರುಣ್‌ ಸಿಂಗ್‌ ಜತೆ ಮುಖ್ಯಮಂತ್ರಿ ಎದುರಿಗೇ ಕೂತಿರಲಿ, ಬಿಡಲಿ; ಯೋಗೇಶ್ವರ್‌, ಬಸನಗೌಡ ಪಾಟೀಲ್‌ ಯತ್ನಾಳ್‌, ವಿಶ್ವನಾಥ್‌, ಅರವಿಂದ ಬೆಲ್ಲದ್‌, ಸುನೀಲ್‌ ಕುಮಾರ್‌ ಮುಂತಾದವರು ನೇರವಾಗಿ ಹೇಳಬೇಕಾದ್ದನ್ನು ಹೇಳದೇ ಬಿಡುವುದಿಲ್ಲ. ಇನ್ನು ಜೂ.18ರಂದು ರಾಜ್ಯ ಪದಾಧಿಕಾರಿಗಳ ಸಭೆಯೂ ಇದೆ.

  • ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಕೆಲ ದಿನಗಳ ಹಿಂದೆ ಭೇಟಿಯಾಗಿದ್ದ ವಿಜಯೇಂದ್ರ.

ಎಚ್ಚರ! ಲಿಂಗಾಯಿತರು ಒಗ್ಗಟ್ಟಾಗಿದ್ದಾರೆ..

ಯಡಿಯೂರಪ್ಪ ಅವರ ಕುರ್ಚಿ ಅಲ್ಲಾಡುತ್ತಿರುವ ಬಗ್ಗೆ ಸಿಟ್ಟಾಗಿರುವ ವೀರಶೈವ ಲಿಂಗಾಯಿತ ಸಮುದಾಯ ಪುನಾ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ. ಹಿಂದೆ, ವೀರೇಂದ್ರ ಪಾಟೀಲರಿಗೆ ಆಗಿರುವ ಅನ್ಯಾಯವನ್ನೇ ಮರೆಯದ ಸಮುದಾಯ, ಈಗ ನಡೆಯುತ್ತಿರುವ ಬೆಳವಣಿಗೆಗಳಿಂದ ಕೊತ ಕೊತ ಕುದಿಯುತ್ತಿದೆ. ಜತೆಗೆ, ಅಧಿಕಾರದಲ್ಲಿರುವ ಯಡಿಯೂರಪ್ಪ ಅವರನ್ನೇ ಉಳಿಸಿಕೊಳ್ಳುವುದು ಅತ್ಯಂತ ಜಾಣ ನಡೆ ಎಂಬ ಲೆಕ್ಕಾಚಾರಕ್ಕೂ ಬಂದು ಇಡೀ ಸಮುದಾಯ ಪಕ್ಷಾತೀತವಾಗಿ ಒಗ್ಗಟ್ಟಿಗೆ ಬಂದಿದೆ. ವಿವಿಧ ಮಠಾಧೀಶರು ಈಗಿರುವ ನಾಯಕತ್ವವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಹಾಗೆ ಆಗಲು ಬಿಡುವಂತಿಲ್ಲ ಎಂದು ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಪರಿಸ್ಥಿತಿಯನ್ನು ಮೊದಲೇ ಊಹಿಸಿದ್ದ ವಿಜಯೇಂದ್ರ ವಾರಕ್ಕೆ ಮೊದಲೇ ಇಡೀ ರಾಜ್ಯವನ್ನು ಮಿಂಚಿನಂತೆ ರೌಂಡ್‌ ಹಾಕಿ ಬಂದಿದ್ದರು. ಬಿಕ್ಕಟ್ಟು ಕಾಲದಲ್ಲೇ ಬಹುತೇಕ ಮಠಗಳಿಗೆ ಭೇಟಿ ನೀಡಿದ್ದರು. ಸಮುದಾಯದ ವಿವಿಧ ಶ್ರೀಗಳ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದರು. ಸುಮಾರು ಐವತ್ತಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮಠಗಳ ಶ್ರೀಗಳೆಲ್ಲರೂ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆಂಬ ಮಾಹಿತಿ ವಿಜಯೇಂದ್ರ ಕ್ಯಾಂಪಿನಿಂದಲೇ ಹೊರಬಿದ್ದಿದೆ.

ಫೈನಲಿ, ಏನಾಗುತ್ತದೆ?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ.‌ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಅಸಮರ್ಥ ಸಚಿವರನ್ನು ಕೈಬಿಟ್ಟು ಪಕ್ಷನಿಷ್ಠ ಹೊಸ ಮುಖಗಳಿಗೆ ಅವಕಾಶ ನೀಡಲು ಹೈಕಮಾಂಡ್ ನಿರ್ಧರಿಸಿರುವುದು ಪಕ್ಕ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಬದಲಾವಣೆ ಮಾಡುವುದು ರಿಸ್ಕ್‌ ಎನ್ನುವುದನ್ನು ವರಿಷ್ಠರು ಮನಗಂಡಿದ್ದಾರೆ. ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆ ಬಳಿಕ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡಿದೆ ಹೈಕಮಾಂಡ್. ಈಗ ಅಭಿಪ್ರಾಯ ಸಂಗ್ರಹಕ್ಕೆ ಮಾತ್ರ ಅರುಣ್‌ ಸಿಂಗ್‌ ಭೇಟಿ ಸೀಮಿತ.

ಯಡಿಯೂರಪ್ಪ ಬದಲಾವಣೆ‌ ಬದಲು ಪಕ್ಷಕ್ಕೆ-ಸರಕಾರಕ್ಕೆ ಚಿಕಿತ್ಸೆ ನೀಡುವುದು ಹೈಕಮಾಂಡ್‌ ಲೆಕ್ಕಾಚಾರ. ‌ಕೆಲ ಹಿರಿಯ ಸಚಿವರನ್ನು ಸಂಘಟನೆಗೆ ನಿಯೋಜಿಸಿ ಯುವಮುಖಗಳಿಗೆ ಸಂಪುಟದಲ್ಲಿ ಆದ್ಯತೆ ನೀಡಲಿದೆ. ರಾಮದಾಸ್, ತಿಪ್ಪಾರೆಡ್ಡಿ, ಸುನೀಲ್ ಕುಮಾರ್ ಅವರಂಥ ಪಕ್ಷ‌ನಿಷ್ಠರಿಗೆ ಅವಕಾಶ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಬಸನಗೌಡ ಪಾಟೀಲ್‌ ಯತ್ನಾಳ್‌, ರೇಣುಕಾಚಾರ್ಯರಂಥವರಿಗೆ ಚಾನ್ಸ್‌ ಕಡಿಮೆ. ಯೋಗೇಶ್ವರ್‌ ಬಗ್ಗೆ ಏನಾಗುತ್ತದೋ ಸದ್ಯಕ್ಕೆ ಗೊತ್ತಿಲ್ಲ. ಆದರೆ, ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಬಗ್ಗೆ ಪಕ್ಷಕ್ಕೆ ನಂಬಿಕೆ- ಸಿಂಪಥಿ ಇದೆ.

ಈ ಯು-ಟರ್ನ್‌ಗೆ ಕಾರಣವೇನು?

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ನಂತರ ಒಳ್ಳೆಯ ಕ್ಯಾಂಡಿಡೇಟುಗಳೇನೋ ಇದ್ದಾರೆ. ಅವರೆಲ್ಲರೂ ಎರಡ್ಮೂರು ಅವಧಿಯಿಂದ ಗೆಲ್ಲುತ್ತಲೇ ಇದ್ದಾರೆ, ಸರಿ. ಆದರೆ ಅವರು ಕೇವಲ ʼಮ್ಯಾನೇಜರುʼಗಳಷ್ಟೇ. ಯಾವುದಾದರೂ ನಿರ್ದಿಷ್ಟ ಜವಾಬ್ದಾರಿಯನ್ನು ವಹಿಸಿದರೆ, ಅವರ ಶಕ್ತಿ ಅಷ್ಟಕ್ಕೆ ಸೀಮಿತ. ಅವರಲ್ಲಿ ಹಣಬಲ ಇರಬಹುದು, ಆದರೆ ಪಕ್ಷದ ವೋಟ್‌ ಬ್ಯಾಂಕ್‌ ಕಾಪಾಡಿಕೊಳ್ಳುವ ಅಥವಾ ಹೊಸ ವೋಟ್‌ ಬ್ಯಾಂಕ್‌ ಸೃಷ್ಟಿ ಮಾಡುವ ಶಕ್ತಿ ಇಲ್ಲ. ಎಂಥ ರಾಜಕೀಯ ಬಿಕ್ಕಟ್ಟು ಎದುರಾದರೂ ಬಂಡೆಯಂತೆ ಎದುರಿಸಿ ನಿಲ್ಲಬಲ್ಲ ಅಚಲ ಶಕ್ತಿ ಯಡಿಯೂರಪ್ಪ ಅವರಿಗೆ ಮಾತ್ರ ಸಿದ್ಧಿಸಿದೆ. ಅಂಥ ತಾಕತ್ತು ಉಳ್ಳ ಇನ್ನೊಬ್ಬ ನಾಯಕ ಇನ್ನೊಬ್ಬರಿಲ್ಲ. ಯಾರನ್ನೇ ಭವಿಷ್ಯದ ನಾಯಕಕನ್ನಾಗಿ ಮುನ್ನೆಲೆಗೆ ತಂದರೂ ಅವರಿಗೆ ಹೈಕಮಾಂಡ್‌ ಆಸರೆ ಇರಲೇಬೇಕು. ಸ್ಪೂನ್‌ ಫೀಡಿಂಗ್‌ ತಪ್ಪುವುದಿಲ್ಲ. ಡಿ.ವಿ.ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌, ಅಶೋಕ್, ಈಶ್ವರಪ್ಪ ಮುಂತಾದವರ‌ನ್ನು ಪ್ರಯೋಗಕ್ಕೆ ಒಡ್ಡಿ ಈ ಸತ್ಯವನ್ನು ಪಕ್ಷ ಕಂಡುಕೊಂಡಿದೆ.

ಹೀಗಾಗಿ ಪಕ್ಷಕ್ಕೆ ಸದ್ಯಕ್ಕೆ ರಿಸ್ಕ್‌ ಬೇಕಿಲ್ಲ, ಇಷ್ಟವೂ ಇಲ್ಲ. ಕಬ್ಬಿಣ ಕಾದು ಬೆಂಡಾಗುವ ತನಕ ಬಿಜೆಪಿ ವರಿಷ್ಠರಿಗೆ ಕಾಯದೆ ಬೇರೆ ದಾರಿ ಇಲ್ಲ. ಸದ್ಯಕ್ಕೆ ಹೈಕಮಾಂಡ್‌ ಮುಂದೆ Target 2024 ಬಿಟ್ಟರೆ ಬೇರೆ ಏನೂ ಇಲ್ಲ.

Tags: Arun singhbs yediyurappaBY Vijayendracovid19karnataka bjp politicsleadership disputeಕರ್ನಾಟಕಬಿಜೆಪಿ ರಾಜಕೀಯ
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕೋಲಾರದ ಮಾವಿಗೆ ಬರಲಿದೆ ಒಳ್ಳೆಯ ಕಾಲ; ಶ್ರೀನಿವಾಸಪುರದ ರುಚಿಕರ ಮ್ಯಾಂಗೋಗೆ ಶಕ್ತಿ ತುಂಬಲಿದೆ ಇಸ್ರೇಲ್

ಕೋಲಾರದ ಮಾವಿಗೆ ಬರಲಿದೆ ಒಳ್ಳೆಯ ಕಾಲ; ಶ್ರೀನಿವಾಸಪುರದ ರುಚಿಕರ ಮ್ಯಾಂಗೋಗೆ ಶಕ್ತಿ ತುಂಬಲಿದೆ ಇಸ್ರೇಲ್

Leave a Reply Cancel reply

Your email address will not be published. Required fields are marked *

Recommended

ಐಪಿಎಸ್‌ ಹುದ್ದೆಗೆ ಭಾಸ್ಕರ್‌ ರಾವ್‌ ವಿದಾಯ; ಬಿಜೆಪಿ ಸೇರಲಿದ್ದಾರಾ ಎಡಿಜಿಪಿ?

ಐಪಿಎಸ್‌ ಹುದ್ದೆಗೆ ಭಾಸ್ಕರ್‌ ರಾವ್‌ ವಿದಾಯ; ಬಿಜೆಪಿ ಸೇರಲಿದ್ದಾರಾ ಎಡಿಜಿಪಿ?

4 years ago
ತಾಯಿಗೆ ತಕ್ಕ ಮಗ

ತಾಯಿಗೆ ತಕ್ಕ ಮಗ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ