• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಅಂಗಾಂಗಗಳಿಗೆ ಹಾಹಾಕಾರ: ಸಾವಿನ ನಂತರವೂ ಬದುಕುವುದನ್ನು ಕಲಿಸಿದ ಸಂಚಾರಿ ವಿಜಯ್

cknewsnow desk by cknewsnow desk
June 28, 2021
in GUEST COLUMN, STATE
Reading Time: 2 mins read
0
ನಿಜ, ಸಂಚಾರಿ ವಿಜಯ್‌ ಪಾತ್ರಗಳಲ್ಲಿ ಜೀವಿಸಿದ್ದರು; ಇನ್ನು ಮುಂದೆ ನಮ್ಮ ಹೃದಯಗಳಲ್ಲಿ ನೆಲೆಸಲಿದ್ದಾರೆ..
1k
VIEWS
FacebookTwitterWhatsuplinkedinEmail

ಜೂನ್‌ 15ರಂದು ನಮ್ಮನ್ನಗಲಿದ ನಟ ಸಂಚಾರಿ ವಿಜಯ್‌ ಅವರು ಬಿಟ್ಟುಹೋದ ಮೌಲ್ಯಗಳು, ಕೆಲ ಜನರಿಗೆ ಕೊಟ್ಟುಹೋದ ಪ್ರಾಣಕ್ಕೆ ಪ್ರತಿಯಾಗಿ ಎಲ್ಲರೂ ಒಮ್ಮೆ ಯೋಚನೆ ಮಾಡಬೇಕಿದೆ. ಸಾವಿನ ನಂತರ ನಮ್ಮಲ್ಲಿನ ಕೆಲವಾದರೂ ಅಂಗಗಳು ಬದುಕಬಲ್ಲವು. ಆ ಬಗ್ಗೆ ದೇಶದಲ್ಲಿ ಬೃಹತ್‌ ಅಭಿಯಾನವೇ ಅಗತ್ಯವಿದೆ. ಅಗಸ್ಟ್‌ 13ರಂದು ʼವಿಶ್ವ ಅಂಗಾಂಗ ದಾನ ದಿನʼಕ್ಕೆ ಮೊದಲೇ ಅಂಗಾಂಗ ದಾನದ ಬಗ್ಗೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌ ರಾವ್‌ ಹವಲ್ದಾರ್‌ ಬರೆದಿರುವ ಲೇಖನ ಈ ನಿಟ್ಟಿನಲ್ಲಿ ಒಂದು ಹೃದಯ ಉಕ್ಕಿಸುವಂಥ ಪ್ರೇರಣೆ.

Photo by DESIGNECOLOGIST on Unsplash


ಕಳೆದ ಜನವರಿಯಲ್ಲಿ ದೆಹಲಿಯ 20 ತಿಂಗಳ ಮಗು ಧನಿಷ್ಥಾ ಆಟವಾಡುವಾಗ ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದ ಮಗುವನ್ನು ತಕ್ಷಣವೇ ದೆಹಲಿಯ ಶ್ರೀ ಗಂಗಾರಾಂ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ, ಕೊನೆಯುಸಿರೆಳೆದಳು. ಅವಳ ಮಿದುಳು ಸ್ಥಗಿತಗೊಂಡಿದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದಾಗ ಆ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಮತ್ತು ಇತರರ ಜೀವ ಉಳಿಸಲು ಹೆತ್ತವರು ನಿರ್ಧರಿಸಿದರು. ಧನಿಷ್ಥಾಳ ಅಂಗಾಂಗಗಳು ಉತ್ತಮ ಸ್ಥಿತಿಯಲ್ಲಿದ್ದದ್ದರಿಂದ ಅಂಗಾಂಗ ಕಸಿಗೆ ಮುಂದಾದರು.

ಧನಿಷ್ಥಾಳ ಹೃದಯ, ಯಕೃತ್ತು, ಎರಡೂ ಮೂತ್ರಪಿಂಡಗಳು ಮತ್ತು ಎರಡೂ ಕಾರ್ನಿಯಾಗಳನ್ನು ತೆಗೆದು ಐವರು ರೋಗಿಗಳಿಗೆ ಕಸಿ ಮಾಡಲಾಯಿತು.

ಈ ರೋಗಿಗಳಲ್ಲಿ ಮೂತ್ರಪಿಂಡ ವಯಸ್ಕರರಿಗೆ ಹೋದರೆ, ಹೃದಯ ಮತ್ತು ಯಕೃತ್ತು ಇಬ್ಬರು ಮಕ್ಕಳಿಗೆ ಸಿಕ್ಕಿದೆ. ಕಾರ್ನಿಯಾ ಅನ್ನು ಸಂಗ್ರಹಿಸಿಡಲಾಗಿದೆ. ಈ ಅಂಗಾಂಗ ದಾನದಿಂದ ಮಗು ಧನಿಷ್ಥಾ ಭಾರತದ ಮೊದಲ ಕಿರಿಯ ಕ್ಯಾಡಾವೆರ್‌ ಡೊನರ್‌ ಆದಳು.

“ನಾವು ಆಸ್ಪತ್ರೆಯಲ್ಲಿರಬೇಕಾದರೆ ಅಂಗಾಂಗಗಳ ಅವಶ್ಯಕತೆ ಇದ್ದ ಹಲವರನ್ನು ಭೇಟಿಯಾದೆವು. ನಮ್ಮ ಮಗಳು ಈಗ ಬದುಕಿರದಿದ್ದರೂ ಅವಳು ಇನ್ನೊಬ್ಬರಿಗೆ ಜೀವ ನೀಡಿ ಅವರಲ್ಲಿ ಜೀವಿಸುತ್ತಿದ್ದಾಳೆ” ಎಂಬ ಮಾತು ಮಗುವಿನ ತಂದೆ ಆಶಿಶ್‌ ಕುಮಾರ್‌ ಅವರದು. ಅದೇ ರೀತಿ
ನಮ್ಮ ಕನ್ನಡದ ಹೆಮ್ಮೆಯ ನಟ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಇದ್ದಾಗ ಅವರ ಮಿದುಳು ನಿಷ್ಕ್ರಿಯವಾಗಿತ್ತು. ಆಗ ಕುಟುಂಬದವರು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಸಂಚಾರಿ ವಿಜಯ್ ಸಾವಿನ ನಂತರವೂ ಉಳಿಸಿದ್ದಾರೆ.

ಅವರ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಹಾಗೂ ಹೃದಯದ ವಾಲ್ವ್ಸ್ ದಾನ ಮಾಡಲಾಯಿತು. ಆ ಮೂಲಕ ಏಳು ಜನರ ಬಾಳಿನಲ್ಲಿ ಸೇರಿಕೊಳ್ಳುವ ಮೂಲಕ ಸಂಚಾರಿ ವಿಜಯ್ ಬೆಳಕಾದರು ಎನ್ನುವುದಕ್ಕಿಂತ ಅಮರರಾದರು ಎನ್ನಬಹುದು.

ಮೇಲಿನ ಎರಡು ಘಟನೆ ಹೇಳಲು ಕಾರಣ ಅಂಗಾಂಗ ದಾನ ಅನ್ನುವ ಪರಿಕಲ್ಪನೆ. ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಈ ಬಗ್ಗೆ ತಿಳಿವಳಿಕೆಯೇ ಇಲ್ಲ. ನಮ್ಮಲ್ಲಿ ಮನುಷ್ಯ ಸತ್ತ ಮೇಲೆ ಆ ದೇಹವನ್ನು ಮಣ್ಣಿನಲ್ಲಿ ಹೂಳುವುದು ಅಥವಾ ಬೆಂಕಿಯಲ್ಲಿ ಸುಟ್ಟುಬಿಡುತ್ತೇವೆ. ಆದರೆ, ಅಂಗಾಂಗ ದಾನ ಮಾಡಿದರೆ ನಮ್ಮ ದೇಹದಿಂದ ಕೆಲ ಜನರಿಗಾದರೂ ಹೊಸ ಬದುಕು ಸಿಗುತ್ತದೆ. ಈ ಮೂಲಕ ನಾವು ಸತ್ತರೂ ಮತ್ತೊಬ್ಬರಿಗೆ ಬದುಕು ನೀಡಬಹುದು ಎಂಬುದನ್ನು ಅರಿಯಬೇಕಿದೆ.

ಸಮೀಕ್ಷೆ ಮತ್ತು ಅಧ್ಯಯನಗಳ ಪ್ರಕಾರ ಭಾರತ ದೇಶದಲ್ಲಿ ಪ್ರತಿ ವರ್ಷ ಸುಮಾರು 5,00,000 ಜನ ರೋಗಿಗಳು ಅಂಗಾಂಗಗಳ ಲಭ್ಯತೆ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ. 1,50,000 ಮೂತ್ರಕೋಶಗಳ ದಾನದ ಅಗತ್ಯವಿದ್ದು, ಲಭ್ಯವಿರುವುದು ಕೇವಲ 6,000 ಮಾತ್ರ. 50,000 ಯಕೃತ್ತುಗಳಿಗೆ ಬೇಡಿಕೆ ಇದ್ದು, 1,500 ಮಾತ್ರ ಸಿಗುತ್ತಿದೆ. ಸರಿಸುಮಾರು 50,000 ಹೃದಯಗಳ ಅಗತ್ಯವಿದ್ದಲ್ಲಿ ಲಭ್ಯವಿರುವುದು ಕೇವಲ 15 ಮಾತ್ರ. 11,00,000 ಜನರು ವಿಶ್ವದಾದ್ಯಂತ ಹೊಸ ಕಣ್ಣಿನ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಕೆಲ ಅಂಕಿ–ಅಂಶಗಳು ಇದನ್ನು ದೃಢೀಕರಿಸುತ್ತಿವೆ. ದೇಶದಲ್ಲಿ ಸುಮಾರು 5 ಲಕ್ಷ ಜನರು ಅಂಗಾಂಗಕ್ಕಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಅಗತ್ಯ ಅಂಗಾಂಗ ಲಭ್ಯವಾಗದೆ ಪ್ರತಿ ವರ್ಷ ಲಕ್ಷಾಂತರ ಜನ ಪ್ರಾಣ ಬಿಡುತ್ತಿದ್ದಾರೆ. ಪ್ರತಿ 12 ನಿಮಿಷಕ್ಕೆ ಅಂಗಾಂಗ ಅಗತ್ಯವಿರುವವರ ಪಟ್ಟಿಗೆ ಒಬ್ಬ ರೋಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ!

ಅಂಕಿ–ಅಂಶಗಳ ಪ್ರಕಾರ ದೇಶದಲ್ಲಿ ವರ್ಷಕ್ಕೆ 1.5 ಲಕ್ಷ ಜನರು ಮೂತ್ರಪಿಂಡ (ಕಿಡ್ನಿ) ಕಸಿಗಾಗಿ ಕಾಯುತ್ತಿದ್ದಾರೆ. ಆದರೆ ಈ ಪೈಕಿ 5 ಸಾವಿರ ಜನರಿಗೆ ಮಾತ್ರ ಬದಲಿ ಮೂತ್ರಪಿಂಡ ಸಿಗುತ್ತಿದೆ ಎಂಬ ಅಂಶವು ಅಂಗಾಂಗಗಳ ಅವಶ್ಯಕತೆ ಎಷ್ಟಿದೆ ಎಂಬುದನ್ನು ಹೇಳುತ್ತದೆ.

ಮಿದುಳು ನಿಷ್ಕ್ರಿಯತೆ, ಅಪಘಾತ ಮೊದಲಾದ ಕಾರಣದಿಂದ ಮೃತಪಡುವವರ ಪೈಕಿ ಪ್ರತಿ ವರ್ಷ ಸಾವಿರ ಜನರ ಅಂಗಾಂಗಗಳನ್ನು ಮಾತ್ರ ದಾನ ಮಾಡಲಾಗುತ್ತಿದೆ. ದಾನ ಮಾಡಲು ಮುಂದಾಗುವವರ ಪ್ರಮಾಣ ಏರಿಕೆಯಾಗುತ್ತಿದ್ದರೂ, ಅದರ ವೇಗ ನಿಧಾನಗತಿಯಲ್ಲಿದೆ.

ಅಂಗಾಂಗ ದಾನ ಹೇಗೆ? ಎತ್ತ?

ಒಂದು ನಿರ್ದಿಷ್ಟ ಕಾರ್ಯನಿರ್ವಹಣೆ ಮಾಡುವ ದೇಹದ ಭಾಗವನ್ನು ಅಂಗ ಎನ್ನಬಹುದು. ಉದಾಹರಣೆಗೆ ಹೃದಯ, ಶ್ವಾಸಕೋಶ, ಕಿಡ್ನಿ, ಯಕೃತ್ ಮುಂತಾದವು. ಕೊನೆಯ ಹಂತದಲ್ಲಿರುವ ವ್ಯಕ್ತಿಯೊಬ್ಬನಿಂದ ಅಂಗ ಕಸಿ ಅಗತ್ಯವಿರುವ ವ್ಯಕ್ತಿಯೊಬ್ಬನಿಗೆ ಅಂಗವನ್ನು ಉಡುಗೊರೆಯಾಗಿ ನೀಡಬಹುದು.

ಒಬ್ಬ ವ್ಯಕ್ತಿ ಕನಿಷ್ಠ ಎಂಟು ಜನರ ಜೀವ ಉಳಿಸಬಹುದು. ಬದುಕಿದ್ದಾಗ ರಕ್ತ, ವೀರ್ಯ, ಚರ್ಮ, ಮೂಳೆಮಜ್ಜೆ ದಾನ, ಜೀವಕೋಶ, ದ್ರವ್ಯ ದಾನ ಮಾಡಬಹುದು. ಜತೆಗೆ
ಮೂತ್ರಪಿಂಡ (ಕಿಡ್ನಿ), ಯಕೃತ್ (ಲಿವರ್), ರಕ್ತನಾಳ, ಗರ್ಭಕೋಶ, ಸಣ್ಣ ಕರುಳು, ಮೇದೋಜೀರಕ ಗ್ರಂಥಿ, ಹೃದಯ, ಅಂಡಾಣು.. ಇತ್ಯಾದಿಗಳನ್ನು ದಾನ ಮಾಡಬಹುದು.
ನೇತ್ರದಾನ, ದೇಹದಾನಕ್ಕೆ ಬದುಕಿದ್ದಾಗಲೇ ನೋಂದಾಯಿಸಿಕೊಳ್ಳಬಹುದು. ಇದೇ ರೀತಿ ಅಂಗಾಂಗ ದಾನಕ್ಕೂ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ಮಕ್ಕಳು, ವೃದ್ಧರು ಯಾರೂ ಬೇಕಾದರೂ ಅಂಗಾಂಗ ದಾನ ಮಾಡಬಹುದು. ಬ್ರೈನ್ ಡೆಡ್ ಆದ ಸಂದರ್ಭದಲ್ಲಿ ಕುಟುಂಬಸ್ಥರ ಅನುಮತಿ ಪಡೆದ ಬಳಿಕ ಆಸ್ಪತ್ರೆಯವರು ಪ್ರಕ್ರಿಯೆ ಮುಂದುವರಿಸಬಹುದು. ಅದಕ್ಕೊಂದು ಪ್ರತ್ಯೇಕ ನಿಯಮಾವಳಿಗಳಿವೆ.

ಬ್ರೈನ್ ಡೆಡ್ ಎಂದರೇನು?

ಒಬ್ಬ ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡರೆ ಅಥವಾ ಕ್ಲಿನಿಕಲಿ ಡೆಡ್ ಎಂದು ಘೋಷಿಸಿದರೆ, ಅಂಥ ವ್ಯಕ್ತಿ ಅಥವಾ ಮಿದುಳು ನಿಷ್ಕ್ರಿಯ (brain stem death)ವಾದ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಬಹುದು. ಇದಕ್ಕೆ 5-6 ಗಂಟೆಗಳ ಅವಧಿ ಇರುತ್ತದೆ. ತಡವಾದರೆ ಅಂಗಾಂಗಗಳು ಪ್ರಯೋಜನಕ್ಕೆ ಬರುವುದಿಲ್ಲ. ಅಂಗಾಂಗ ದಾನಕ್ಕೆ ಬಂಧು ಮಿತ್ರರ ಸಮ್ಮತಿ ಅಗತ್ಯ. ವೆಂಟಿಲೇಟರ್ ತೆಗೆಯುವುದಕ್ಕೂ ಅನುಮತಿ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ. ಇದಾದ ಬಳಿಕವಷ್ಟೇ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ.

ಅಂಗಾಂಗ ದಾನಕ್ಕೆ ಒಪ್ಪಿಗೆ ಅಗತ್ಯ

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಪೂರ್ವಾನುಮತಿ ಪತ್ರ ಇದ್ದರೆ ಅಥವಾ ಪ್ರಸ್ತುತ ಪರಿಸ್ಥಿತಿಯಲ್ಲಿ ಕುಟುಂಬಸ್ಥರ ಸಮ್ಮತಿ ದೊರತ ಬಳಿಕ ಅಂಗಾಂಗ ದಾನ ಪ್ರಕ್ರಿಯೆ ಆರಂಭಿಸಬಹುದು. ಮಕ್ಕಳ ಸಹಿತ ವೃದ್ಧರ ತನಕ ಆರೋಗ್ಯವಂಥ ಅಂಗಾಂಗಗಳನ್ನು ಕಸಿ ಮಾಡುವ ಮೂಲಕ ಮತ್ತೊಬ್ಬರಿಗೆ ನೀಡಬಹುದು. ಸಂಚಾರಿ ವಿಜಯ್‌ ಪ್ರಕರಣದಲ್ಲಿ ನಡೆದ ಪ್ರಕ್ರಿಯೆಗಳನ್ನು ಎಲ್ಲರೂ ಒಮ್ಮೆ ನೆನಪು ಮಾಡಿಕೊಳ್ಳಬಹುದು.

ಒಬ್ಬ ವ್ಯಕ್ತಿ ಬದುಕಿದ್ದಾಗಲೇ ತನ್ನ ಮರಣ ನಂತರ ಅಂಗಾಂಗ ದಾನ ಮಾಡಲು ಬಯಸಿ ಆರ್ಗನ್ ಡೋನರ್ ಕಾರ್ಡ್ ಪಡೆಯಬಹುದು. ಈ ಬಗ್ಗೆ ತನ್ನ ಬಂಧುಮಿತ್ರರಿಗೆ ತಿಳಿಸಬೇಕಾಗುತ್ತದೆ. ಈ ಬಗ್ಗೆ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ಆಸ್ಪತ್ರೆಯವರು ಮುಂದಿನ ಕಾರ್ಯ ನೆರವೇರಿಸುತ್ತಾರೆ.

ಮಾನವ ಅಂಗಾಂಗಗಳ ಕಸಿ ಕಾಯ್ದೆಯೂ ಇದೆ

ಮಾನವ ಅಂಗಾಂಗಗಳ ಕಸಿ ಕಾಯ್ದೆ-1994ರ ಅಡಿಯಲ್ಲಿ ‘ಮಿದುಳು ಸಾವನ್ನು’ ಸಾವು ಎಂದು ಒಪ್ಪಲಾಗಿದೆ. ಮಿದುಳಿನ ಕಾಂಡದ ಎಲ್ಲಾ ಕಾರ್ಯಗಳನ್ನು ಶಾಶ್ವತವಾಗಿ ಮತ್ತು ಮಾರ್ಪಡಿಸಲಾಗದ ಹಂತದ ಸ್ಥಿತಿ ವಿಭಾಗ 3ರ ಉಪ ಪರಿಚ್ಛೇದ (6) ಅಡಿಯಲ್ಲಿ ಪ್ರಮಾಣೀಕರಿಸಿದೆ. ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಾಂಗ ದಾನ ನಿರ್ವಹಣೆ ನಡೆಸುವ ಜೀವನ ಸಾರ್ಥಕತೆ ವಿಭಾಗದಲ್ಲಿ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ ತಾಣದಲ್ಲಿ ಪಡೆದುಕೊಳ್ಳಬಹುದು. ಜತೆಗೆ ಅಂಗಾಂಗ ದಾನದ ಬಗ್ಗೆ ಇರುವ ಪ್ರಶ್ನೆಗಳಿಗೂ ಉತ್ತರ ಇಲ್ಲಿ ಸಿಗುತ್ತದೆ. ಮಾಹಿತಿ ಬೆಕಿದ್ದವರು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಬಹುದು. (https://www.jeevasarthakathe.karnataka.gov.in/Website/Faqs3.html)

ನುರಿತ ತಜ್ಞರು ಪರಿಶೀಲಿಸಿ ಅನುಮತಿ ನೀಡಿದ ಬಳಿಕ ಸಂಬಂಧಪಟ್ಟ ಆಸ್ಪತ್ರೆ ವೈದ್ಯರು ಮುಂದಿನ ಪ್ರಕ್ರಿಯೆ (ಅಂಗಾಂಗ ಬೇರ್ಪಡಿಸಿ, ಕಸಿಗೆ ಲಭ್ಯವಾಗಿಸುವುದು)ಗೆ ಚಾಲನೆ ನೀಡಬಹುದು. ದಾನ ಪಡೆಯುವವರ ಆದ್ಯತಾ ಪಟ್ಟಿ ಮೇರೆಗೆ ಅಂಗಾಂಗಗಳು ಲಭ್ಯವಾಗುತ್ತದೆ.

ಅಂಗಾಂಗ ದಾನದ ಮಹತ್ವದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ಅಗಸ್ಟ್‌ 13ರಂದು ವಿಶ್ವ ಅಂಗಾಂಗ ದಾನ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ. ದೇಹದಾನ ಮತ್ತು ನೇತ್ರದಾನ ಜತೆಗೆ ಅಂಗಾಂಗ ದಾನದ ಬಗ್ಗೆ ಕೂಡ ಜಾಗೃತಿ ಹೆಚ್ಚಾಗಬೇಕಾಗಿದೆ,‌ ಭಾರತದಂತಹ ಅತ್ಯಧಿಕ ಜನಸಂಖ್ಯೆ ಇರುವ ದೇಶದಲ್ಲಿ ಅಂಗಾಂಗಳಿಗೆ ಇರುವ ಪರದಾಟವನ್ನು ಗಮನಿಸಿದರೆ ಜಾಗೃತಿಯ ಕೊರತೆ ಎದ್ದು ಕಾಣುತ್ತಿದೆ. ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಅಂಗಾಂಗ ದಾನ ಘೋಷಣೆ ಮಾಡುವ ಅಗತ್ಯವಿದೆ. ದೇಶದಲ್ಲಿ ನಿತ್ಯ 400 ಜನರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಪೈಕಿ ಮಿದುಳು ನಿಷ್ಕ್ರಿಯಗೊಂಡವರ ದೇಹದ ಇತರೆ ಅಂಗಗಳನ್ನು ದಾನ ಮಾಡಲು ಅವಕಾಶವಿದೆ.

‘ಪ್ರತಿ ಒಂದು ಮಿಲಿಯನ್ ಜನಸಂಖ್ಯೆಯಲ್ಲಿ ಅಂಗಾಂಗ ದಾನದ ಪ್ರಮಾಣ ಕೇವಲ ಶೇ.0.26ರಷ್ಟಿದೆ. ವರ್ಷದಿಂದ ವರ್ಷಕ್ಕೆ ಅಂಗಾಂಗ ದಾನ ಬಯಸುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅರ್ಧ ಮಿಲಿಯನ್‌ನಷ್ಟು ಭಾರತೀಯರು ಅಂಗಾಂಗ ದಾನದ ಅಗತ್ಯವನ್ನು ಎದುರಿಸುತ್ತಿದ್ದಾರೆ. ಮಾನವನ ಅಂಗಗಳು ಅತ್ಯಂತ ಅಮೂಲ್ಯವಾದದ್ದು ಮತ್ತು ಯಾರಾದರೂ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರೆ ಅವರು ನಿಜವಾಗಿಯೂ ತಮ್ಮ ಜೀವನವನ್ನು ಇನ್ನೊಂದು ಜೀವಕ್ಕೆ ವರ್ಗಾಯಿಸಿ ತಮ್ಮ ಜೀವನವನ್ನೇ ವಿಸ್ತರಿಸಿಕೊಂಡಂತೆ’ ಆಗುತ್ತದೆ. ಅದರೆ ಭಯ, ಸಾಮಾಜಿಕ ಕಳಂಕಕ್ಕೆ ಹೆದರಿ ಜನರು ಇದರಿಂದ ಹಿಂದೆ ಸರಿಯುತ್ತಿದ್ದಾರೆ. ಇನ್ನಾದರೂ ಜನರು ಸಂಚಾರಿ ವಿಜಯ್ ಹಾದಿಯನ್ನು ಅನುಸರಿಸಲಿ ಎಂಬುದೇ ನಮ್ಮ ಆಶಯ.

ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.

Tags: 13th of augustindiakannada actor sanchari vijaykannada cinemakarnatakaorgan donationorgans donatesachari vijayWorldworld organ day
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಎತ್ತಿನಹೊಳೆ ಎತ್ತ? ಈವರೆಗೆ 9003.86 ಕೋಟಿ ರೂ. ಖರ್ಚು!!

ಎತ್ತಿನಹೊಳೆ ಎತ್ತ? ಈವರೆಗೆ 9003.86 ಕೋಟಿ ರೂ. ಖರ್ಚು!!

Leave a Reply Cancel reply

Your email address will not be published. Required fields are marked *

Recommended

ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ 7 ದಶಕದ ಆಡಳಿತದಿಂದ  ಭ್ರಮನಿರಸನಗೊಂಡ ಕೇರಳದಲ್ಲಿ ಬಿಜೆಪಿಯತ್ತ ಒಲವು; ದೇವರ ನಾಡಿನಲ್ಲಿ ಬದಲಾವಣೆಯ ಗಾಳಿ ಎಂದ ಡಿಸಿಎಂ

ಬಾಕಿ ಇರುವ ಪದವಿ, ಡಿಪ್ಲೊಮೊ ಪರೀಕ್ಷೆಗೆ ಡೇಟ್‌ ಫಿಕ್ಸ್

4 years ago
ಮಾವು ಅಭಿವೃದ್ಧಿ-ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜು ಪದಗ್ರಹಣ

ಮಾವು ಅಭಿವೃದ್ಧಿ-ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜು ಪದಗ್ರಹಣ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ