ಹಿತವಾದ ಓದು, ಹಾಯಾದ ನೋಟ
ಆತ್ಮೀಯ ಓದುಗರೇ,
ಬದಲಾವಣೆ ಜಗದ ನಿಯಮ. ಎಲ್ಲರೂ ಹೇಳುವ ಮಾತಿದು. ಅದು ಸರಿ. ಅದನ್ನೇ ಬಲವಂತವಾಗಿ ಹೇರಿಕೊಂಡರೆ? ಅದೂ ಕೋವಿಡ್‌ನಂಥ ಸಂಕಷ್ಟದ ಹೊತ್ತಿನಲ್ಲಿ, ರಿಸ್ಕು ಹೆಚ್ಚಾಗಿರುವ ಕಾಲಘಟ್ಟದಲ್ಲಿ.
ಹೌದು. ನಿಮ್ಮ ವಿಶ್ವಸನೀಯ https://cknewsnow.com ಮತ್ತೊಮ್ಮೆ ಬದಲಾಗಿದೆ. ʼಪ್ಯೂರ್ ಜರ್ನಲಿಸಂ’ ಅಥವಾ ʼಪರಿಶುದ್ಧ ಪತ್ರಿಕೋದ್ಯಮʼ (Pure Journalism) ಎಂಬ ಭರವಸೆಯೊಂದಿಗೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ, ನಿಮ್ಮೆಲ್ಲರ ಅಭಿಮಾನದಿಂದ.
ಇದಕ್ಕೆ ಪೂರಕವಾಗಿ ಆರಂಭವಾದ ವರ್ಷದ ಹೊತ್ತಿಗೆ ಸರಿಯಾಗಿ ಮೂರನೇ ಬಾರಿಗೆ ಮುದ್ದಾಗಿ ಬದಲಾಗಿ ತನ್ನ ಅಸ್ತಿತ್ವವನ್ನು ಮರು ರೂಪಿಸಿಕೊಂಡಿದೆ. ಮೊದಲ ವಾರ್ಷಿಕೋತ್ಸವಕ್ಕೆ ಮುನ್ನ ಮೂರು ಸಲ ಬದಲಾಗಿದ್ದು ರಿಸ್ಕೋ, ಹುಚ್ಚಾಟವೋ ಗೊತ್ತಿಲ್ಲ. ಇನ್ನೇನಾದರೂ ಹೊಸತು, ಬರವಣೆಗೆಗೆ ನೂತನ ಚೌಕಟ್ಟು ಎಂದೆಲ್ಲ ಯೋಚಿಸಿದಾಗ ಹೊಳೆದದ್ದೇ ರೀ ಲಾಂಚ್. ಓದುಗನಿಗೆ ಪ್ರಾಮಾಣಿಕ ಓದಿನೌತಣ ಉಣಬಡಿಸಬೇಕು ಎಂಬ ಅಂಶ ಒಂದನ್ನು ಹೊರತುಪಡಿಸಿದರೆ ಈ ಪ್ರಯತ್ನದಲ್ಲಿ ಹುಡುಕುವಂಥ ನಿಗೂಢ ಉದ್ದೇಶವೇನೂ ಇಲ್ಲ.
ಬರವಣಿಗೆಯಲ್ಲಿ ಶುದ್ಧತೆ ಹಾಗೂ ಸರಳತೆ https://cknewsnow.com ಹೆಗ್ಗುರುತು. ಅದನ್ನು ಮತ್ತೂ ವಿಸ್ತರಿಸುವ ಪ್ರಯತ್ನ ಇನ್ನೊಮ್ಮೆ ಆಗಿದೆಯಷ್ಟೇ. ಕಳೆದ 2021 ಜೂನ್ 20ಕ್ಕೆ https://cknewsnow.com ಒಂದು ವರ್ಷ ಪೂರೈಸಿದೆ. ಆದರೆ ಒಂದು ವಾರ ಕಾಲ ನಡೆದ ರೀ ಲಾಂಚ್ ಪ್ರಕ್ರಿಯೆ ಹಾಗೂ ಟೆಕ್ನಿಕಲ್ ಕೆಲಸದಿಂದ ವೆಬ್‌ತಾಣ ಹೊಸ ರೂಪಕ್ಕಿಳಿಯುವುದು ತುಸು ತಡವಾಯಿತು.
ನಿಮ್ಮ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಅಥವಾ ಡೆಸ್ಟಾಪ್ ಮೇಲೆ ತೆರೆದುಕೊಂಡಿರುವ https://cknewsnow.com ಮೊದಲಿಗಿಂತ ಸಿಂಪಲ್ಲಾಗಿ ಕಾಣಲಿದೆ. ನೋಡಲು ಹಿತವಾಗಿ, ಓದಲು ಹಾಯಾಗಿರಲಿ ಎಂಬ ಭಾವ ನಮ್ಮದು. ಬಣ್ಣಬಣ್ಣಗಳ ರಾಡಿ, ಯಾವ ಸುದ್ದಿ ಎಲ್ಲಿದೆ ಎಂಬ ಗೋಜಲಿಗೆ ಅವಕಾಶವೇ ಇಲ್ಲ. ಪ್ರತಿ ಬರವಣಿಗೆಯ ನ್ಯಾವಿಗೇಷನ್ ಸುಲಭ. ಕ್ಯಾಟಗೋರಿಗಳು ಕಣ್ಣಳತೆಯಲ್ಲೇ ಬರಮಾಡಿಕೊಳ್ಳುತ್ತವೆ. ಜತೆಗೆ, ನೋಟದೊಂದಿಗೆ ಕಂಟೆಂಟ್ ಕೂಡ ಮತ್ತೂ ಗಟ್ಟಿಯಾಗಿದೆ.
ದೀರ್ಘ ಓದು ಬಯಸುವ ಹಿರಿಯರು, ಫಟಾಫಟ್ ಕಣ್ಣಾಡಿಸುವ ಕಿರಿಯರನ್ನು ಅನುಸಂಧಾನಗೊಳಿಸಿಕೊಂಡು ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡುವ ಪ್ರಯತ್ನ ಮತ್ತೊಮ್ಮೆ ಶ್ರದ್ಧೆಯಿಂದ ನಡೆದಿದೆ. ಕಂಟೆಂಟ್‌ಗೆ ಆಪ್ತವಾಗುವ ಕ್ವಾಲಿಟಿ ಫೊಟೋಗಳು ಮುಂದೆಯೂ ಆಕರ್ಷಕವಾಗಿರುತ್ತವೆ. ಕೇವಲ ಒಂದು ಬ್ಲಾಗ್‌ನಂತೆ ಹುಟ್ಟಿಕೊಂಡ https://cknewsnow.com/ ಎರಡನೇ ವರ್ಷಕ್ಕೆ ಆಶಾದಾಯಕವಾಗಿ ಹೆಜ್ಜೆ ಇಟ್ಟಿದೆ. ಬೆಳವಣಿಗೆಗೆ ವೇಗ ಬಂದಿದೆ, ಅದು ಓದುಗರ ಪ್ರೀತಿಯಿಂದ ಸಾಧ್ಯವಾಗಿದೆ.
ಈಗ https://cknewsnow.com/ ಅನ್ನು ಓದುವುದು ಸುಲಭ. ಇಷ್ಟಬಂದ ಬರಹಗಳು ಕಣ್ಣಳತೆಯಲ್ಲೇ ಇರುತ್ತವೆ. ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್, ಡೆಸ್ಕ್‌ಟಾಪ್ ಮೇಲೆ ಸುಲಭವಾಗಿ, ಕಂಗಳಿಗೆ ಶ್ರಮವಿಲ್ಲದೆ ಓದಬಹುದು. ಈಗಿನ ಸಂದರ್ಭದಲ್ಲಿ ಮೊಬೈಲ್ ಪರದೆಯಲ್ಲೇ ಹೆಚ್ಚು ಸುದ್ದಿಗಳನ್ನು ಓದುವುದು ರೂಢಿ. ಹೀಗಾಗಿ https://cknewsnow.com/ ಮೊಬೈಲ್ ಪರದೆಯ ಮೇಲೆ ಅತ್ಯಂತ ಹಿತವಾಗಿರುತ್ತದೆ. ಫಾಂಟ್ ಕೂಡ ನಿಮ್ಮ ಓದಿನ ಸುಖವನ್ನು ಇಮ್ಮಿಡಿಗೊಳಿಸುತ್ತದೆ. ಅತ್ಯಂತ ವೈಜ್ಞಾನಿಕ ಹಾಗೂ ಎಲ್ಲ ವಯೋಮಾನದ ಓದುಗರಿಗೆ ಒಗ್ಗಿಕೊಳ್ಳುವ ರೀತಿಯಲ್ಲಿ https://cknewsnow.com/ ಮರುರೂಪಗೊಂಡು ನಿಮ್ಮ ಮುಂದೆ ಬಂದಿದೆ.
https://cknewsnow.com/ ; ಇದು ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ʼಪ್ಯೂರ್ ಜರ್ನಲಿಸಂ’ ಅಥವಾ ʼಪರಿಶುದ್ಧ ಪತ್ರಿಕೋದ್ಯಮʼ (Pure Journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಧ್ಯೇಯವಾಕ್ಯ. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು https://cknewsnow.com/ ಹೊಂದಿರುವ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆಗೆ ಅವಕಾಶವಿಲ್ಲ. ಆದರೆ, ಗೆಸ್ಟ್ ಕಾಲಂ (ಅತಿಥಿ ಅಂಕಣ) ವಿಭಾಗದಲ್ಲಿ ಪ್ರಕಟವಾಗುವ ಲೇಖನಗಳಿಗೆ ಆಯಾ ಲೇಖಕರೇ ಉತ್ತರದಾಯಿಗಳು.
’ಸಿಕೆ ಪ್ರೆಸ್’ (CK PRESS) ಎಂಬುದು https://cknewsnow.com/ ವೆಬ್ʼತಾಣದ ಮಾತೃಸಂಸ್ಥೆ.
ಇಡೀ ಜಗತ್ತೇ ಡಿಜಿಟಲ್‌ನತ್ತ ವೇಗದಿಂದ ಹೊರಳುತ್ತಿರುವ ಈ ಹೊತ್ತಿನಲ್ಲಿ ನಾವೂ ಡಿಜಿಟಲ್‌ನತ್ತ ಪ್ರಯಾಣ ಆರಂಭಿಸಿದ್ದೇವೆ. ಏನೇ ಆದರೂ ಬದಲಾವಣೆಗೆ ಒಗ್ಗಿಕೊಳ್ಳುವುದು ಪ್ರಗತಿಯ ಮೂಲಭೂತ ತತ್ತ್ವ. ಅಷ್ಟೇ ರಿಸ್ಕ್ ಕೂಡ. ಆದರೂ https://cknewsnow.com/ ಹೊಸ ಸವಾಲು, ಬದಲಾವಣೆಗಳಿಗೆ ಮುಕ್ತವಾಗಿ ತೆರೆದುಕೊಂಡು ಹೆಜ್ಜೆ ಇಟ್ಟಿದೆ. ನಿಮ್ಮೆಲ್ಲರ ಹಾರೈಕೆ, ಪ್ರೋತ್ಸಾಹ ಇರಲಿ.
ಕೋವಿಡ್ ನಂತರ ಉಳ್ಳವರ ಊಳಿಗ ಮಾಡುತ್ತಿರುವ ಮುಖ್ಯವಾಹಿನಿಯ ಪತ್ರಿಕೋದ್ಯಮ ಎಲ್ಲರಿಗೂ ಸಲ್ಲುತ್ತಿಲ್ಲ. ಸಾಮಾನ್ಯದಿಂದ ಸದ್ದಿಲ್ಲದೆ ದೂರ ಸರಿದುಬಿಟ್ಟಿದೆ. ಈಗ https://cknewsnow.com/ ನಂಥ ಸ್ವತಂತ್ರ ಪತ್ರಿಕೊದ್ಯಮದ ಕಿಡಿಗಳು ಆಮ್ ಆದ್ಮಿಗಳ ದನಿಯಾಗುತ್ತಿವೆ.
ಇಂಥ ಸಂದಿಗ್ಧ ಸಂದರ್ಭದಲ್ಲಿ ‘ಪರಿಶುದ್ಧ ಪತ್ರಿಕೋದ್ಯಮ’ವನ್ನು ಎಲ್ಲರೂ ಕರ್ತವ್ಯವೆಂದು ಭಾವಿಸಿ ಬೆಂಬಲಿಸಬೇಕು. ಇದು ನಮ್ಮ ವಿನಮ್ರ ಪ್ರಾರ್ಥನೆ.
ಎಲ್ಲರ ಅಭಿಪ್ರಾಯಗಳಗೂ ಸ್ವಾಗತ.
ನಮಸ್ಕಾರ.
-ಪಿ.ಕೆ.ಚನ್ನಕೃಷ್ಣ
ಸಂಸ್ಥಾಪಕ & ಪ್ರಧಾನ ಸಂಪಾದಕ
ಸಿಕೆನ್ಯೂಸ್ ನೌ.ಕಾಂ
ಓದುವುದು ಸುಲಭ
ಸಿಕೆನ್ಯೂಸ್ ನೌ ವೆಬ್‌ತಾಣದಲ್ಲಿ ಅಬ್ಬರವಿಲ್ಲ, ಆಡಂಬರ ಮೊದಲೇ ಇಲ್ಲ. ಕ್ಷಣಮಾತ್ರದಲ್ಲಿ ಹೆಚ್ಚು ಜನರಿಗೆ ಮುಟ್ಟಿಸಬೇಕು ಎಂಬ ಧಾವಂತವೂ ಇಲ್ಲ. ಹೀಗಾಗಿ ನಮ್ಮ ವೆಬ್ ತಾಣ ಕೂಲ್ ಕೂಲ್, ಒಮ್ಮೆ ಓದಲು ಶುರು ಮಾಡಿದರೆ ಕಣ್ಣಿಗೆ ಕಷ್ಟವಾಗುವುದಿಲ್ಲ.
ಅನುಕೂಲಕ್ಕೆ ನೈಟ್ ಮೋಡ್‌ನಲ್ಲೂ ನಿರಾಳವಾಗಿ ಓದಬಹುದು. ಅದಕ್ಕೆ ವೆಬ್‌ನ ಬಲಗಡೆ ಇರುವ ಅರ್ಧ ಚಂದ್ರಾಕೃತಿ ಐಕಾನ್ ಒತ್ತಿದರೆ ಸಾಕು. ಡೇ ಮೋಡ್ ಅಥವಾ ನೈಟ್ ಮೋಡ್ ಆಯ್ಕೆ ಮಾಡಿಕೊಳ್ಳಬಹುದು ಓದಬಹುದು.
ಇನ್ನು, ವೆಬ್ ತಾಣದಲ್ಲಿ ರಾಚುವ ಬಣ್ಣಗಳಿಲ್ಲ, ನಿರುಯುಕ್ತ ಎನ್ನುವಂಥ ಸುದ್ದಿಯೂ ಇರುವುದಿಲ್ಲ. ಸಿಕ್ಕಸಿಕ್ಕದ್ದನ್ನೆಲ್ಲ ತುಂಬಿ ಕಂಡೋರ ಮೇಲೆ ಹೇರುವ ಉದ್ದೇಶ ಅಸಲೇ ಇಲ್ಲ.. ಆದಷ್ಟೂ ಉಪಯುಕ್ತವಾದ, ಸಮಾಜಕ್ಕೆ ಪೂರಕ ಎನಿಸುವ ವಸ್ತುನಿಷ್ಠ ಬರಹವೇ ಇರುತ್ತದೆ. ದೀರ್ಘ ಓದಿನ ಪ್ರಿಯರಿಗೆ ʼಗೆಸ್ಟ್ ಕಾಲಂʼ ಪ್ರಿಯವಾಗುತ್ತದೆ. ಸುದ್ದಿ ಜತೆಗೆ ಇನ್ನಷ್ಟು ವಿಚಾರ ಇರಲಿ ಎನ್ನುವವರಿಗೆ ʼನ್ಯೂಸ್ ಅಂಡ್ ವ್ಯೂವ್ಸ್ʼ. ಜತೆಗೆ ಎಡಿಟರ್ ಪಿಕ್ಸ್, ʼಸಿಕೆ ಪ್ಲಸ್ʼ ವಿಭಾಗಗಳಲ್ಲಿ ಮನತಣಿಸುವ ಓದು ತುಂಬಿರುತ್ತದೆ. ಹೊಸ ಸುದ್ದಿ, ಲೇಖನ, ಅಂಕಣಗಳಿಗೆ ಬೇಗ ರೀಚ್ ಆಗಬೇಕಾದರೆ ʼಸಿಕೆ ಲೇಟೆಸ್ಟ್ʼ ಕ್ಲಿಕ್ ಮಾಡಿದರೆ ಸಾಕು. ʼಕೋವಿಡ್‌೧೯ʼ ಕ್ಯಾಟಗೋರಿಯಲ್ಲಿ ಕೊರೊನಾ ಸುದ್ದಿಗಳಿರುತ್ತವೆ. ಉಳಿದಂತೆ ಸಿನಿಮಾ ʼಇಟಿʼಯಲ್ಲಿದ್ದರೆ ರಾಜ್ಯ, ದೇಶ, ಜಗತ್ತಿನ ಸುದ್ದಿಗಳೆಲ್ಲ ಆಯಾ ವಿಭಾಗದಲ್ಲೇ ಲಭ್ಯ. ವಿಚಾರಪೂರ್ಣ ವಿಡಿಯೋಗಳಿಗಾಗಿ ʼಸಿಕೆನ್ಯೂಸ್ ನೌ ಟೀವಿʼ ನೋಡಿ.