• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಕನ್ನಡಿಗರು ಕೇಳಲೇಬೇಕಾದ ಕೊಡಿಕೊಂಡ ಕಥೆಗಳು

cknewsnow desk by cknewsnow desk
July 4, 2021
in CKPLUS, NEWS & VIEWS, STATE
Reading Time: 3 mins read
2
ಕನ್ನಡಿಗರು ಕೇಳಲೇಬೇಕಾದ ಕೊಡಿಕೊಂಡ ಕಥೆಗಳು
1.2k
VIEWS
FacebookTwitterWhatsuplinkedinEmail

ಉಳಿದುಕೊಳ್ಳಲೇಬೇಕೆಂದು ಉಸಿರಾಡುತ್ತಿದೆ ಇತಿಹಾಸ; ಗುಡಿಬಂಡೆ, ಬಾಗೇಪಲ್ಲಿಗೆ ನೇರ ಸಂಬಂಧವುಳ್ಳ ವಿಜಯನಗರದ ಅರಸರ ಸಾಮಂತಿಕೆಯಲ್ಲಿದ್ದ ಆಂಧ್ರದ ಪಾಳೇಯಪಟ್ಟಿನ ರೋಚಕ ಕಥನ

ಕರ್ನಾಟಕದ ಗಡಿಗೆ ಕೇವಲ ಹತ್ತಕ್ಕೂ ಕಡಿಮೆ ಕಿ.ಮೀ ಅಂತರದಲ್ಲಿರುವ ಕೊಡಿಕೊಂಡ ಪಟ್ಟಣದ ಕೋಟೆ ಹೇಳುವ ಕಥೆಗಳು ನೂರೆಂಟು. ಕೋಟೆಯ ಇತಿಹಾಸದ ಜತೆಗೆ, ಆ ಊರಿನಲ್ಲೊಬ್ಬ ಪೆದರಾಯುಡು* ಶೈಲಿಯ ನ್ಯಾಯನಿಷ್ಠ ವ್ಯಕ್ತಿ, ಅವರಿಗೂ ಮೊದಲು ಯುವಕನೊಬ್ಬನ ರಾಬಿನ್‌ವುಡ್‌ ಅವತಾರ… ಹೀಗೆ ಅನೇಕ ಸ್ವಾರಸ್ಯಕರ ಅಂಶಗಳು ಈ ಲೇಖನದಲ್ಲಿವೆ.

by DG Pavan Kalyan Bagepalli

ಬಾಗೇಪಲ್ಲಿ ತಾಲೂಕಿನ ಹಲವಾರು ಐತಿಹಾಸಿಕ ಕೋಟೆಗಳು ಸರಿಯಾಗಿ ಸಂರಕ್ಷಣೆ ಇಲ್ಲದೇ ಪಾಳು ಬಿದ್ದಿವೆ. ಗುಮ್ಮನಾಯಕನ ಪಾಳ್ಯದ ಕೋಟೆ, ದೇವಿಕುಂಟೆಯ ಇಟ್ಟಿಗೆರಾಯನ ದುರ್ಗ ಕೋಟೆ ಸೇರಿದಂತೆ ಹತ್ತಾರು ಐತಿಹಾಸಿಕ ಸ್ಮಾರಕಗಳು ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯದಿಂದ ವಿನಾಶದ ಅಂಚಿನಲ್ಲಿವೆ ಹಾಗೂ ಅಭಿವೃದ್ಧಿ ನಿರೀಕ್ಷೆಯಲ್ಲಿವೆ. ಕರ್ನಾಟಕ-ಆಂಧ್ರ ಪ್ರದೇಶದ ಗಡಿ ಗ್ರಾಮ ಕೊಡಿಕೊಂಡ ಕೋಟೆಯದ್ದೂ ಇದೇ ಸ್ಥಿತಿ.

ಕರ್ನಾಟಕದ ಬಹುದೊಡ್ಡ ಸಾಮ್ರಾಜ್ಯ ವಿಜಯನಗರವನ್ನು ಆಳಿದ ಶ್ರೀ ಕೃಷ್ಣದೇವರಾಯ ಇಲ್ಲಿ ಸೋತ ಮೇಲೆ ಆಂಧ್ರ ಪ್ರದೇಶದ ಪೇನುಗೊಂಡವನ್ನು ತನ್ನ ಎರಡನೇ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದಾನೆ. ಕೃಷ್ಣದೇವರಾಯರ ಸಾಮಂತರಾಗಿ ಕೆಲ ಪಾಳೇಯಗಾರರು ಈ ಭಾಗದಲ್ಲಿ ಆಡಳಿತ ಮಾಡಿದ್ದಾರೆ. ಇವುಗಳಲ್ಲಿ ಈ ಕೊಂಡಿಕೊಂಡ ಪಾಳೇಯಗಾರರೂ ಸೇರಿದ್ದಾರೆ.

ಇಲ್ಲಿ ಕೋಟೆಯನ್ನು ಕಟ್ಟಲು ಕಾರಣ ಈ ಬೆಟ್ಟ ಎತ್ತರವಾಗಿರುವುದು. ದೊಡ್ಡ ದೊಡ್ಡ ಕಲ್ಲುಗಳಿಂದ ಕೂಡಿದೆ. ವಿಶೇಷವಾಗಿ ಬೆಟ್ಟದ ಬಂಡೆಗಳ ಮೇಲೆ ನೀರಿನ ಸಂಗ್ರಹಣೆಗೆ ದೊಣೆಗಳೆವೆ. ಈ ಬೆಟ್ಟದ ಮೇಲಿನಿಂದ ಸುತ್ತಮುತ್ತ ಬಹಳಷ್ಟು ದೂರ ಪರಿವೀಕ್ಷಣೆ ಮಾಡಲು ಸಾಧ್ಯವಿತ್ತು. ಬಾಳಪ್ಪ ನಾಯಕ ಎಂಬ ಪಾಳೇಯಗಾರ ಇಲ್ಲಿ ಶಿವಾಲಯ ಕಟ್ಟಿಸಿದ್ದಾನೆ.

ಕೊಡಿಕೊಂಡ ಬೆಟ್ಟದ ಮೇಲೆ ಸುಮಾರು 20 ಬುರುಜುಗಳನ್ನು ವೃತ್ತಕಾರ ಹಾಗೂ ಚೌಕಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೆಯೇ 4 ನೀರಿನ ಮೂಲಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಬೆಟ್ಟದ ತುದಿಯಲ್ಲಿ ದೇವರ ಪಾದಗಳ ಕೆತ್ತನೆ ನೋಡಬಹುದು.

ಪೆನುಗೊಂಡ ಪಾಳೇಯಗಾರರ ಸಾಮಂತ ರಾಜರಾಗಿ ಕೊಡಿಕೊಂಡ ಕೋಟೆ, ಗುಡಿಬಂಡೆ ಕೋಟೆ, ದೇವಿಕುಂಟೆ ಕೋಟೆ, ಗುಮ್ಮನಾಯಕನ ಪಾಳ್ಯ ಕೋಟೆ, ತುಮ್ಮಲ ಹೊಸಕೋಟೆಗಳು ಇದ್ದವು. ಇವರೆಲ್ಲರೂ ಕೃಷ್ಣದೇವರಾಯರ ಸಾಮಂತರಾಗಿದ್ದರು. ಗುಮ್ಮನಾಯಕನ ಪಾಳ್ಯದ ಪಾಳೇಯಗಾರರು ಶ್ರೀ ನಿಡುಮಾಮಿಡಿ ಜಗದ್ಗುರು ಮಹಾಸಂಸ್ಥಾನದ ಮಾರ್ಗದರ್ಶನದಲ್ಲಿ ಆಡಳಿತ ನಡೆಸುತ್ತಿದ್ದರು.

ಕೊಡಿಕೊಂಡ ಕೋಟೆ ಬಹಳ ವಿಶೇಷವಾಗಿದೆ. ಒಳಗೆ ಅಕ್ಕಮ್ಮ ದೇವರ ಮುಂದೆ ಕೋಟೆಯ ಗೋಡೆಯ ಮೇಲೆ ಚಾರ್‌ಮಿನಾರ್ ಆಕಾರದ ಬುರುಜನ್ನು ನಿರ್ಮಾಣ ಮಾಡಲಾಗಿದೆ. ಚಿತ್ರಾವತಿ ನದಿ ಆ ಕೋಟೆಯ ಪಕ್ಕದಲ್ಲೇ ಹರಿಯುತ್ತದೆ. ಕೋಟೆ, ದ್ವಾರ, ಬುರುಜು, ದೇಗುಲ, ಮನೆಗಳನ್ನು ಕಟ್ಟಲು ಕೊಡಿಕೊಂಡ ಬಳಿ ದೊಡ್ಡ ಕಲ್ಯಾಣಿ ಹಾಗೂ ಸಂಜೀವಮ್ಮ ಕೆರೆಯ ಜತೆಗೆ ಹಲವು ಕೆರೆ-ಕುಂಟೆ, ಬಾವಿಗಳನ್ನು ನಿರ್ಮಿಸಲಾಗಿದೆ.

ಕೊಡಿಕೊಂಡ ಕೋಟೆ ಮತ್ತು ಅಕ್ಕಮ್ಮ ದೇವರನ್ನು ದರ್ಶನ ಮಾಡಿಕೊಳ್ಳಲು ಭಕ್ತರು ಮತ್ತು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಸ್ಥಳವು ಸಾಮಾನ್ಯವಾಗಿ ಅಕ್ಕಮ್ಮ ತಾಯಿ ಎಂದು ಕರೆಯಲ್ಪಡುವ ದೇವತೆಯಿಂದ ಬಹಳ ಪ್ರಸಿದ್ಧವಾಗಿದೆ. ಅಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ಬಂದು ಅಮ್ಮನವರನ್ನು ಪೂಜಿಸುತ್ತಾರೆ. ಈ ದೇವಾಲಯವು ಬೆಟ್ಟದ ಮೇಲೆ ರಾಜರು ಮೊದಲು ವಾಸಿಸುತ್ತಿದ್ದ ಸ್ಥಳದಲ್ಲಿದೆ.

ಇಲ್ಲಿ ಪ್ರತಿವರ್ಷ ಅಕ್ಕಮ್ಮ ದೇವತೆಯ ಹೆಸರಿನಲ್ಲಿ ಸಾವಿರಾರು ಭಕ್ತರ ನಡುವೆ ಅದ್ಧೂರಿಯಾಗಿ ಜಾತ್ರೆ ನಡೆಯುತ್ತದೆ. ಎರಡು ದಿನ ಜಾತ್ರೆ ನಡೆಯುತ್ತದೆ.

ಕೋತಿ ಕಲ್ಲು ಉಲ್ಲೇಖಗಳು

ಕೊಡಿಕೊಂಡ ಕೋಟೆಯ ಬೆಟ್ಟದ ಮೇಲೆ ಕೋತಿ ಕಲ್ಲು ಎಂಬುದು ಎತ್ತರಕ್ಕೆ ಇದೆ. ಇದಕ್ಕೆ ಅದರದ್ದೇ ಆದ ಇತಿಹಾಸವೂ ಇದೆ.

ಈ ಕಲ್ಲಿನ ಮೇಲೆ ಹತ್ತಿದ ಮಂಗವೊಂದು ಕೆಳಕ್ಕೆ ಇಳಿದು ಬರಲಾಗದೇ ಅಲ್ಲಿಯೇ ಸತ್ತು ಹೋಗಿತ್ತಂತೆ ಎಂದು ಗ್ರಾಮದ ಹಿರಿಯರೊಬ್ಬರು ಹೇಳುತ್ತಾರೆ. ಕೋತಿ ಕಲ್ಲಿನ ನೆರಳು ಎಲ್ಲಿ ಬೀಳುತ್ತದೆಯೋ ಅಲ್ಲಿ ಏಳು ಕೊಪ್ಪರಿಗೆಯಷ್ಟು ಬಂಗಾರವನ್ನು ಭೂಮಿಯಲ್ಲಿ ಭದ್ರವಾಗಿ ಹೂತಿಟ್ಟಿದ್ದಾರೆ ಎಂಬ ಮಾತುಗಳು ಸಹ ಹಿರಿಯರಿಂದ ಕೇಳಿ ಬರುತ್ತಿವೆ. ಇದು ನಿಜವಾದ ಮಾಹಿತಿಯೋ ಅಲ್ಲವೋ ಗೊತ್ತಿಲ್ಲ. ಆದರೆ, ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್ ಈ ಕೊಡಕೊಂಡದ ಮೇಲೆಯೂ ದಾಳಿ ನಡೆಸಿ ಖಜಾನೆ ದೋಚಿದ್ದಾನೆ ಎಂಬ ಉಲ್ಲೇಖಗಳು ಇವೆ.

ಅನ್ನಾ ರಾಮಕೃಷ್ಣಯ್ಯ ಎಂಬ ಆಪದ್ಬಾಂಧವ

ಪಾಳೇಯಗಾರರು ಕೋಟೆಯ ಮೇಲೆ ನಿರ್ಮಾಣ ಮಾಡಿರುವ ಅಕ್ಕಮ್ಮ ಗುಡಿಯನ್ನು ದೇವಸ್ಥಾನವಾಗಿ ನಿರ್ಮಿಸುವುದರ ಜತೆಗೆ ಕೊಡಿಕೊಂಡ ಪಟ್ಟಣದ ಅಭಿವೃದ್ಧಿಗೆ ಮುಖ್ಯ ಕಾರಣವಾದ ಇನ್ನೊಬ್ಬ ವ್ಯಕ್ತಿ ದಿವಂಗತ ಅನ್ನಾ ರಾಮಕೃಷ್ಣಯ್ಯ. ಊರಿಗೆ ದೂರವಾಣಿ ಸಂಪರ್ಕ ತಂದ ಮುವ್ಯಕ್ತಿ ಅವರು. ರೈತರ ಸಹಾಯಕ್ಕಾಗಿ ನೆಲಗಡಲೆ ಕಾರ್ಖಾನೆ ನಿರ್ಮಿಸಿದವರು ಇವರು. ಜತೆಗೆ ಶಾಲೆ, ಮತ್ತಿತರೆ ಸಮಾಜಮುಖಿ ಕೆಲಸಗಳನ್ನೂ ಇವರು ಮಾಡಿದ್ದಾರೆ. ಇವತ್ತಿಗೂ ಕೊಡಿಕೊಂಡ ಜನರು ರಾಮಕೃಷ್ಣಯ್ಯ ಅವರ ಬಗ್ಗೆ ಕಥೆ ಕಥೆಗಳಾಗಿ ಮಾತನಾಡಿಕೊಳ್ಳುತ್ತಾರೆ. ಸ್ಥಳೀಯ ಪಂಚಾಯತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಅವರು, ಸುಮಾರು 35 ವರ್ಷ ಆಡಳಿತ ನಡೆಸಿದ್ದಾರೆಂದು ಜನ ಹೇಳುತ್ತಾರೆ.

ಇನ್ನು, ಜನರಿಗೆ ಅನ್ನಾ ರಾಮಕೃಷ್ಣಯ್ಯ ಅವರ ನ್ಯಾಯನಿಷ್ಠತೆ, ಹಿರಿತನದ ಮೇಲೆ ಅಪಾರ ಗೌರವ ಇತ್ತು. ಗ್ರಾಮಸ್ಥರು ಅವರ ಬಳಿ ನ್ಯಾಯ ಕೇಳುತ್ತಿದ್ದರು. ಪೊಲೀಸರು ಊರಿಗೆ ಬರಬಾರದು, ಎಲ್ಲಾ ಸಮಸ್ಯೆಗಳೂ ಜನರೇ ಇತ್ಯರ್ಥ ಮಾಡಿಕೊಳ್ಳಬೇಕೆಂಬ ಆಶಯವಿತ್ತು. ಅಂಥ ಸಮಯದಲ್ಲಿ ರಾಮಕೃಷ್ಣಯ್ಯ ಎಲ್ಲರೂ ಒಪ್ಪುವಂಥ ನ್ಯಾಯ ಹೇಳುತ್ತಿದ್ದರು. ಕೆಲ ಕೈ ಮೀರಿದ ಸಂದರ್ಭಗಳಲ್ಲಿ ಪೊಲೀಸರಿಗೆ ಬರುತ್ತಿದ್ದರು.

ಇನ್ನೂ ರಾಮಕೃಷ್ಣಯ್ಯ ಅವರ ವಂಶಜರು, ಮುಖ್ಯವಾಗಿ ತಮ್ಮ ತಂದೆಯ ಕೆಲಸವನ್ನು ಮುಂದುವರಿಸಿದ್ದಾರೆ. ಅವರ ಮಕ್ಕಳಾದ ಸುಂದರ ರಾಜು, ಒಮಿ ಕೊಡಿಕೊಂಡದ ಪ್ರಾಚೀನ ಐತಿಹಾಸಿಕ ಕೋಟೆಯ ಆಸ್ತಿ ರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ. ಈಗ ಕೊಡಿಕೊಂಡ ಬೆಟ್ಟಕ್ಕೆ ಸಂಪರ್ಕ ಬಂದಿದೆ. ಬೆಟ್ಟಕ್ಕೆ ಹೊಸ ಮೆಟ್ಟಿಲುಗಳು ಮತ್ತು ದ್ವಾರಗಳನ್ನು ಮಾಡಿಸಿದ್ದಾರೆ. ವಿಶೇಷವಾಗಿ ಕೋಟೆಯ ಮೇಲೆಗೆ ಅಕ್ಕಮ್ಮ ದೇವಿಯ ಭಕ್ತರಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನೂ ಅನೇಕ ಕೆಲಸಗಳನ್ನು ಅವರು ಉತ್ಸಾಹದಿಂದ ಮಾಡುತ್ತಿದ್ದಾರೆ.

ಕೊಡಿಕೊಂಡಕ್ಕೊಬ್ಬ ರಾಬಿನ್‌ವುಡ್

ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ ಅವರು ನಟಿಸಿದ್ದ ʼಕೊಂಡವೀಟಿ ದೊಂಗʼ ಎಂಬ ಸಿನಿಮಾ ಇದೆ. ಅದರಲ್ಲಿ ಚಿರಂಜೀವಿ ಅವರದ್ದು ರಾಬಿನ್‌ವುಡ್‌ ಶೈಲಿಯ ಪಾತ್ರ. ಉಳ್ಳವರ ಬಳಿ ಕಿತ್ತು ಇಲ್ಲದವರಿಗೆ ಕೊಡುವ ಕೊಡುವ ಕಾರ್ಯ. ಅದೇ ಸಿನಿಮಾ ಸ್ಟೈಲ್‌ನಂತೆ ಕೊಡಿಕೊಂಡ ಗ್ರಾಮದ ಒಬ್ಬ ಯುವಕ ರಾಬಿನ್‌ವುಡ್ ರೀತಿಯಲ್ಲಿಯೇ ಹೆಸರಾಗಿದ್ದನಂತೆ.

ಇದು ಸ್ವಾತಂತ್ರ್ಯಪೂರ್ವದ ಕಥೆ. ಕೊಡಿಕೊಂಡ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ಬಡತನದಿಂದ ಊಟಕ್ಕಿಲ್ಲದೆ ನರಳುತ್ತಿದ್ದರು. ಆ ಆ ಸಂದರ್ಭದಲ್ಲಿ ಊರಿನ ಯುವಕನೊಬ್ಬ ರಾಬಿನ್‌ವುಡ್‌ನಂತೆ ಕುದುರೆ ಮೇಲೆ ಒಂದು ನಾಯಿಯ ಜೊತೆಗೆ ಪಕ್ಕದ ಕರ್ನಾಟಕದಲ್ಲಿದ್ದ ಜಮೀನುದಾರರ ಮನೆಗಳ ಮೇಲೆ ದಾಳಿ ಮಾಡಿ ಹಣವನ್ನು ಲೂಟಿ ಮಾಡಿ ಜನರಿಗೆ ಹಂಚುತ್ತಿದ್ದ ಎಂದು ಜನ ಮಾತನಾಡಿಕೊಳ್ಳುತ್ತಾರೆ.

ಬಾಗೇಪಲ್ಲಿ ದಾಟಿ ಬರುತ್ತಿದ್ದ ಆ ಯುವ ಗುಡಿಬಂಡೆ, ಬೀಚಗಾನಹಳ್ಳಿ, ವರ್ಲಕೊಂಡೆ, ಪೇರೇಸಂದ್ರ, ಚಿಕ್ಕಬಳ್ಳಾಪುರದ ವರೆಗೂ ಹೋಗಿ ಹಣವಿದ್ದವರ ಮನೆಗಳನ್ನು ಕೊಳ್ಳೆ ಹೊಡೆದು ಕೊಡಿಕೊಂಡಕ್ಕೆ ವಾಪಸ್‌ ಆಗುತ್ತಿದ್ದ ಎಂದು ಜನ ಹೇಳುತ್ತಾರೆ.

  • (*ಪೆದರಾಯುಡು: ಟಾಲಿವುಡ್‌ ನಟ ಮೋಹನ್‌ ಬಾಬು ಹಾಗೂ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ನಟಿಸಿದ ಸೂಪರ್‌ ಹಿಟ್‌ ಸಿನಿಮಾ.)

ಡಿ.ಜಿ ಪವನ್ ಕಲ್ಯಾಣ್

  • ಓದಿದ್ದು ಇಂಗ್ಲೀಷ್‌ ಲಿಟರೇಚರ್.‌ ಆಸಕ್ತಿ ಇತಿಹಾಸ ಮತ್ತು ಪ್ರವೃತ್ತಿ ಇತಿಹಾಸ ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ, ಗುಮ್ಮನಾಯಕನ ಪಾಳ್ಯ ಕೋಟೆಗಳ ಕುರಿತು ಆಳ ಶೋಧ ಮಾಡುತ್ತಿರುವ ಲೇಖಕರು, ರಾಜ್ಯದ ಗಡಿಭಾಗವನ್ನು ಆಳಿದ ವಿವಿಧ ಪಾಳೇಯಗಾರರ ಆಡಳಿತದ ಮೇಲೆ ಬೆಳಕು ಚೆಲುವ ಕೆಲಸ ಮಾಡುತ್ತಿದ್ದಾರೆ.

Tags: andhra pradeshbagepallichikkaballapurahistorykarnatakakodikondakodikonda fortvijayanagar empire
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
100 ನಾಟೌಟ್!!  ಬೆಂಗಳೂರಿನಲ್ಲಿ ಪೆಟ್ರೋಲ್‌ ರೇಟು ಲೀಟರ್‌ಗೆ 103.26 ರೂ.

100 ನಾಟೌಟ್!! ಬೆಂಗಳೂರಿನಲ್ಲಿ ಪೆಟ್ರೋಲ್‌ ರೇಟು ಲೀಟರ್‌ಗೆ 103.26 ರೂ.

Comments 2

  1. Pavan kalyan D.G says:
    5 years ago

    ತೂಕ ತುಂಬಿದ ಇತಿಹಾಸ,ಸೇವೆ,ಧಾನ ವಿಷಯಗಳ ಬಗ್ಗೆ ಸರಳವಾಗಿ ತಿಳಿಸುವ ಲೇಖನ. ಧನ್ಯವಾದಗಳು ಸರ್

    Reply
  2. Raghavendra Hari N says:
    5 years ago

    Excellent information. Appreciate efforts to revive the ancient historic Places.

    Reply

Leave a Reply Cancel reply

Your email address will not be published. Required fields are marked *

Recommended

ದೇವರಾಜ ಅರಸು ಆಶಯ ಉಲ್ಟಾ ಮಾಡಿದ ಬಿಜೆಪಿ!!

ಸಂಕಷ್ಟ ಸೂತ್ರ ಇಲ್ಲದಿರುವುದೇ ಸಂಕಷ್ಟಕ್ಕೆ ಕಾರಣ ಎಂದು ಕೈಚೆಲ್ಲಿದ ಸಿದ್ದರಾಮಯ್ಯ

3 years ago
ಲಾಕ್ ಡೌನ್ ಇಲ್ಲ

ವೈಫಲ್ಯ ಮುಚ್ಚಿಕೊಳ್ಳಲು ಬೊಮ್ಮಾಯಿ ಬುಲ್ಡೋಜರ್ ಜಪ

4 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ