• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಗುಮ್ಮನಾಯಕನ ಪಾಳ್ಯದ ಮೇಲೆ ಟಿಪ್ಪು ಪೈಶಾಚಿಕ ದಾಳಿ; ಸುಲ್ತಾನನ ಆಕ್ರಮಣಕ್ಕೆ ಮುನ್ನ ಪಾಳೇಯಗಾರರು ಸಂಪತ್ತು ಸಾಗಿಸಿದ್ದು ಎಲ್ಲಿಗೆ?

cknewsnow desk by cknewsnow desk
July 11, 2021
in EDITORS'S PICKS, GUEST COLUMN, STATE
Reading Time: 3 mins read
2
5000 ವರ್ಷದ ಬಾಗೇಪಲ್ಲಿ ಪಟ್ಟಣ ಭಾಗ್ಯನಗರ ಆಗಬೇಕು ಎಂದರೆ ಹೇಗೆ? ಹೆಸರಷ್ಟೇ ಬದಲಿಸಿಬಿಟ್ಟರೆ ಸಾಕೆ?
1.2k
VIEWS
FacebookTwitterWhatsuplinkedinEmail

ಕೋಟೆಗಳ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಕೋಟೆಗಳ ಕಥೆಗಳನ್ನು ಈಗಾಗಲೇ ಸಿಕೆನ್ಯೂಸ್‌ ನೌ ನಲ್ಲಿ ಓದಿದ್ದೀರಿ. ಆದರೆ, ಕರ್ನಾಟಕ-ಅಂಧ್ರದ ಗಡಿಯಲ್ಲಿರುವ ಗುಮ್ಮನಾಯಕನ ಪಾಳ್ಯದ ಮೇಲೆ ಟಿಪ್ಪು ಸುಲ್ತಾನ್‌ ನಡೆಸಿದ ಪೈಶಾಚಿಕ ದಾಳಿ, ಆ ದುರಾಕ್ರಮಣದ ಕಾಲದಲ್ಲಿ ಬುದ್ಧಿವಂತ ಪಾಳೇಗಾರರು ತಮ್ಮಲ್ಲಿದ್ದ ಅಪಾರ ಸಂಪತ್ತನ್ನೆಲ್ಲ ರಕ್ಷಣೆ ಮಾಡಿಕೊಂಡಿದ್ದು ಹೇಗೆ? ಈಗ ಎಲ್ಲಿದೆ ಆ ಸಂಪತ್ತು? ಈ ವಾರಾಂತ್ಯಕ್ಕೆ ಒಂದು ಐತಿಹಾಸಿಕ ರೋಚಕ ಕಥನ..

  • ಶಿಥಿಲವಾಗಿರುವ ಕೋಟೆಯ ಒಂದು ಭಾಗ.

by DG Pavan Kalyan Bagepalli

ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಥಮ ಏಳುಸುತ್ತಿನ ಕೋಟೆ ಗುಮ್ಮನಾಯಕನ ಪಾಳ್ಯದ ಕೋಟೆ. ವಿಜಯನಗರ ಸಾಮ್ರಾಜ್ಯಕ್ಕಿಂತ ಹಿಂದಿನ ಸಂಸ್ಥಾನ. ಇದನ್ನು ಆಳಿದ ಪ್ರಸಿದ್ದ ದೊರೆ ಗುಮ್ಮನಾಯಕ. ಈತನ ನಂತರ ಕದ್ರಿಪತಿ ನಾಯಕ, ನರಸಿಂಹ ನಾಯಕ ಸೇರಿ ಇನ್ನೂ ಹಲವರು ಸುಮಾರು 560 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಇಲ್ಲಿನ ರಾಜವಂಶದ ಪಾರಂಪರಿಕ ಸಂಪತ್ತು ಆಗ ಕೋಟೆಯಲ್ಲಿ ಇತ್ತು.

ಕೇರಳದ ತಿರುವುನಂತಪುರದ ತಿರುವಾಂಕೂರು ರಾಜಮನೆತನದ ಆರಾಧ್ಯದೈವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದ ನಿಯಂತ್ರಣದ ರಾಜಮನತನದ ಟ್ರಸ್ಟ್‌ನಲ್ಲಿನ ತ್ರಿಜೋರಿಯು ದಕ್ಷಿಣ ಭಾರತದ ಅತ್ಯಂತ ಸುರಕ್ಷತಾ ರಕ್ಷಣಾ ಬ್ಯಾಂಕ್‌ ಆಗಿತ್ತು. ಇತರೆ ರಾಜ್ಯಗಳ ರಾಜರು, ಪಾಳೇಯಗಾರರು ಯುದ್ಧಗಳ ಸಮಯದಲ್ಲಿ ಶತ್ರುಗಳಿಂದ ತಮ್ಮ ಸಂಪತ್ತನ್ನು ಕಾಪಾಡಿಕೊಳ್ಳಲು ರಕ್ಷಣಾ ಬ್ಯಾಂಕ್‌ನಲ್ಲಿ ಇಡುತ್ತಿದ್ದರು. ಇದಕ್ಕೆ ರಕ್ಷಣಾ ತೆರಿಗೆ ಕಟ್ಟಿಸಿಕೊಳ್ಳುವ ಮೂಲಕ ವ್ಯವಹಾರ ನಡೆಸಲಾಗುತ್ತಿತ್ತು. ಅಂದಿನ ದಿನಗಳಲ್ಲಿ ಕೆಲ ಕೋಟೆಗಳು ಐಶ್ವರ್ಯ ರಕ್ಷಣಾ ಬ್ಯಾಂಕುಗಳ ಹಾಗೆ ಕೆಲಸ ಮಾಡುತ್ತಿದ್ದವು.

ಇಡೀ ದಕ್ಷಿಣ ಭಾರತದಲ್ಲಿ ಟಿಪ್ಪು ಸುಲ್ತಾನ್ ಆಕ್ರಮಣಗಳು ಹೆಚ್ಚಾಗಿದ್ದ ಕಾಲವದು. ಇದರಲ್ಲಿ ಮೈಸೂರು ಸಂಸ್ಥಾನದ ದೇವನಹಳ್ಳಿ ಕೋಟೆಯೇ ಟಿಪ್ಪುವಿನ ಜನ್ಮಸ್ಥಳ. ನಂದಿಕೋಟೆಯಲ್ಲಿ ಟಿಪ್ಪು ಮೊಕ್ಕಾಂ ಹೂಡಿ ಅಕ್ಕಪಕ್ಕದ, ದಕ್ಷಿಣ ಭಾರತದ ಇತರೆ ಕೋಟೆಗಳ ಮೇಲೆ ದಾಳಿ ನಡೆಸುತ್ತಿದ್ದ ಎಂದು ಇತಿಹಾಸ ಹೇಳುತ್ತದೆ.

ಹಾಗೆಯೇ ನಂದಿಕೋಟೆಗೆ ಸ್ವಲ್ಪ ದೂರದಲ್ಲಿರುವ (60 ಕಿ.ಮೀ.) ಗುಮ್ಮನಾಯಕನ ಪಾಳ್ಯ ಕೋಟೆ, ದೇವಿಕುಂಟೆ ಇಟ್ಟಿಗೆದುರ್ಗದ ಕೋಟೆಯ ಮೇಲೆ ಟಿಪ್ಪು ಸುಲ್ತಾನ್ ದಾಳಿ ಮಾಡುವ ಮಾಹಿತಿ ತಿಳಿದ ಗುಮ್ಮನಾಯಕನ ಕೋಟೆಯ ಕೊನೆಯ ಪಾಳೇಯಗಾರ ಎಚ್ಚರಿಕೆ ವಹಿಸಿದ್ದಾನೆ.

ಗುಮ್ಮನಾಯಕನ ಪಾಳ್ಯ ಕೋಟೆಯು ವಿಜಯನಗರ ಸಾಮ್ರಾಜ್ಯಕ್ಕಿಂತ ಪ್ರಾಚೀನ ಕೋಟೆಯಾಗಿತ್ತು. ಕರ್ನಾಟಕ (ಮೈಸೂರು ಸಂಸ್ಥಾನ) ಮತ್ತು ಆಂಧ್ರ ಪ್ರದೇಶ (ಕಾಕತೀಯ ಸಂಸ್ಥಾನ) ಸೇರಿ ಅನೇಕ ಪಾಳೇಯಗಾರರು, ಅರಸರು ತಮ್ಮ ಸಂಪತ್ತನ್ನು ಇಲ್ಲಿನ ಖಜಾನೆಯಲ್ಲೇ ಇಟ್ಟಿದ್ದರು. ಟಿಪ್ಪು ದಾಳಿ ಭೀತಿಯ ಹಿನ್ನೆಲೆಯಲ್ಲಿ ಪಾಳೇಯಗಾರ ಅಷ್ಟೂ ಸಂಪತ್ತನ್ನೂ ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ ಖಜಾನೆಗೆ ಸಾಗಿಸುತ್ತಾನೆ ಎಂದು ಇತಿಹಾಸ ಹೇಳುತ್ತದೆ. ಈಗ ಅನಂತ ಪದ್ಮನಾಭ ಸ್ವಾಮಿ ತ್ರಿಜೋರಿಯಲ್ಲಿರುವ ಸಂಪತ್ತಿನಲ್ಲಿ ಗುಮ್ಮನಾಯಕನ ಪಾಳ್ಯದ ಸಂಪತ್ತೂ ಇದೆ ಎಂದು ಇತಿಹಾಸ ಹೇಳುತ್ತಿದೆ.

  • ಟಿಪ್ಪು ಸುಲ್ತಾನ್. courtesy: Wikipedia

ಟಿಪ್ಪು ದಾಳಿಯಿಂದ ಉಂಟಾದ ದುರಂತಗಳು

ಗುಮ್ಮನಾಯಕನ ಪಾಳ್ಯ ಕೋಟೆಯ ಮೇಲೆ ನಡೆದ ಟಿಪ್ಪು ದಾಳಿಯಿಂದ ಕೋಟೆ ಧ್ವಂಸವಾಯಿತು. ಕೋಟೆಯ ಗಾರಡಿ ದೊಣೆಗೆ ರಾಣಿ ಮತ್ತು ಮಕ್ಕಳು ಹಾರಿ ಪ್ರಾಣ ಬಿಟ್ಟರು. ಬಳಿಕ ಟಿಪ್ಪು ತನ್ನ ಸಾಮಂತನಾಗಿ ಮೀರ್ ಸಾಹೇಬ್‌ನನ್ನು ನೇಮಕ ಮಾಡಿದ ನಂತರ ರಾಜ್ಯವನ್ನು ಕಳೆದುಕೊಂಡ ಕಟ್ಟಕಡೆಯ ಪಾಳೇಯಗಾರ ನರಸಿಂಹನಾಯಕ ಹುಚ್ಚನಾಗಿ ಕೋಟೆಗೋಸ್ಕರವೇ ಪ್ರಾಣ ಬಿಟ್ಟ ಎಂಬ ಅಂಶ ಇತಿಹಾಸದಲ್ಲಿ ದಾಖಲಾಗಿದೆ.

  • ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯ, ತಿರುವನಂತಪುರ. courtesy: Wikipedia

ತಿರುವಾಂಕೂರು ಮನೆತನದ ಮೇಲೆ ನಂಬಿಕೆ

ಪಾಳೇಯಗಾರರ ಕಾಲದಲ್ಲಿ ತಿರುವನಂತಪುರವನ್ನು ಕೇಂದ್ರವಾಗಿಸಿಕೊಂಡು ಆಡಳಿತ ನಡೆಸುತ್ತಿದ್ದ ತಿರುವಾಂಕೂರು ಮನೆತನದ ಮೇಲೆ ಅಕ್ಕಪಕ್ಕದ ಅರಸರಿಗೆ, ಪಾಳೇಗಾರರಿಗೆ ಬಹಳ ನಂಬಿಕೆ ಇತ್ತು. ಯಾರೇ ತಂದು ಇಲ್ಲಿ ಸಂಪತ್ತನ್ನು ಇಟ್ಟರೂ ಅದನ್ನು ಭದ್ರವಾಗಿ ನೋಡಿಕೊಳ್ಳುತ್ತಿದ್ದರಂತೆ. ಹೀಗಾಗಿ ಪದ್ಮನಾಭಸ್ವಾಮಿ ದೇಗುಲ ಅಂದಿನ ದಿನಗಳಲ್ಲಿ ತುಂಬಾ ವಿಶ್ವಾಸದ ಖಜಾನೆಯಾಗಿತ್ತು. ಅಲ್ಲಿ ಯಾರೇ ತಮ್ಮ ಸಂಪತ್ತನ್ನು ಇಟ್ಟರೂ ಅದಕ್ಕೆ ಪ್ರತಿಯಾಗಿ ರಕ್ಷಣಾ ಶುಲ್ಕವನ್ನು ಪಡೆಯಲಾಗುತ್ತಿತ್ತು.

ಅಲ್ಲಿನ ಗರ್ಭಗುಡಿಯಲ್ಲಿರುವ ಪದ್ಮನಾಭಸ್ವಾಮಿಯ ಕಿರುಬೆರಳು ನೆಲದ ಕಡೆ ತೋರುವಂತಿರುತ್ತದೆ. ನೆಲಮಾಳಿಗೆಯಲ್ಲಿ ಸಂಪತ್ತು ಇದೆ ಎಂಬುದನ್ನು ಈ ಕಿರುಬೆರಳೇ ಸಾಕ್ಷಿ ಎಂಬುದು ಎನ್ನುತ್ತಾರೆ ಇತಿಹಾಸಕಾರರು. ಈ ಕಾರಣ ಆ ಐಶ್ವರ್ಯವನ್ನು ಆ ರಾಜರೂ ಬಳಸಲಿಲ್ಲ. ತಿರುವನಂತಪುರದ ಈ ಅಪರೂಪದ ಸಂಪತ್ತನ್ನು ರಕ್ಷಣೆ ಮಾಡಲು ಅಮೆರಿಕದ ರಕ್ಷಕರನ್ನು ನಿಯೋಜನೆ ಮಾಡಲಾಗುತ್ತಿತ್ತು. ಅಂಥಹ ಒಬ್ಬ ರಕ್ಷಣಾಧಿಕಾರಿಯ ಮೊಮ್ಮಗನೇ ಅಮೆರಿಕದ ಅಧ್ಯಕ್ಷರಾಗಿದ್ದ ರೂಸವೆಲ್ಟ್ ಎಂಬುದು ಈ ಇತಿಹಾಸದ ಸ್ವಾರಸ್ಯದ ಅಂಶ.

ಗುಮ್ಮನಾಯಕನ ಪಾಳ್ಯದ ಪಾಳೇಯಗಾರರು ಶ್ರೀ ಅನಂತ ಪದ್ಮನಾಭಸ್ವಾಮಿಯ ಆರಾಧಕಾರಾಗಿದ್ದರೂ ತಾವು ಕಟ್ಟಿದ ದೇವಾಲಯಗಳಲ್ಲಿ ಶ್ರೀ ಅನಂತ ಪದ್ಮನಾಭಸ್ವಾಮಿಯ ದೇವಾಲಯವೂ ಇದೆ. ಈ ಕಾರಣಕ್ಕಾಗಿಗೆ ಅವರು ತಮ್ಮ ಐಶ್ವರ್ಯವನ್ನು ರಾಜಮನತನದ ಟ್ರಸ್ಟ್‌ʼನಲ್ಲಿನ ರಕ್ಷಣಾ ಬ್ಯಾಂಕ್‌ನಲ್ಲಿ ಇಟ್ಟಿದ್ದರು. ಅಲ್ಲಿ ತಮ್ಮ ಸಂಪತ್ತು ಭದ್ರವಾಗಿರುತ್ತದೆ ಎಂಬ ನಂಬಿಕೆ ಪಾಳೇಯಗಾರರದ್ದಾಗಿತ್ತು.

ಟಿಪ್ಪುವಿನ ದಾಳಿಯಿಂದ ದೇವಾಲಯಗಳು ಧ್ವಂಸ

ಗುಮ್ಮನಾಯಕನ ಪಾಳ್ಯದಲ್ಲಿ ನೂರೊಂದು ದೇಗುಲಗಳು ಇದ್ದವು ಎಂಬುದನ್ನು ಗಮನಿಸಬಹುದು. ಇದರಲ್ಲಿ ಗುಮ್ಮನಾಯಕನ ಪಾಳ್ಯದ ಪಾಳೇಯಗಾರರು ಶ್ರೀ ಅನಂತ ಪದ್ಮನಾಭಸ್ವಾಮಿ ದೇಗುಲವನ್ನೂ ನಿರ್ಮಾಣ ಮಾಡಿದ್ದರು. ಕೋಟೆಯ ಸಂಪತ್ತನ್ನು ತಿರುವನಂತಪುರದ ರಕ್ಷಣಾ ಬ್ಯಾಂಕ್‌ಗೆ ಸಾಗಿಸಿದ ಮೇಲೆಯೂ ಕೋಟೆಯ ತ್ರಿಜೋರಿಯಲ್ಲಿ ಇನ್ನೂ ಸಾಕಷ್ಟು ಸಂಪತ್ತು ಇತ್ತಂತೆ. ಅದೆಲ್ಲವನ್ನೂ ಟಿಪ್ಪು ಸುಲ್ತಾನ್ ದೋಚಿದ್ದಾನೆ. ಜತೆಗೆ, ದಾಳಿಯ ವೇಳೆಯಲ್ಲಿ ಕೋಟೆಯಲ್ಲಿದ್ದ ಅನೇಕ ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ.

  • ಅಹೋರಾತ್ರ

ಗುಮ್ಮನಾಯಕನ ಪಾಳ್ಯದ ಪತನ ನಂತರ ಪಾತಪಾಳ್ಯ ಮುಖ್ಯ ವ್ಯಾಪಾರಿ ಕೇಂದ್ರವಾಯಿತು. ಅದೇ ಊರಿನ ನಿವಾಸಿಗಳು ನಮ್ಮ ಪೂರ್ವಿಕರು ಎಂದು ಅಹೋರಾತ್ರ ಅವರಿಗೆ ಅವರ ಅಜ್ಜ ಹೇಳುತ್ತಿದ್ದರಂತೆ. ಅಹೋರಾತ್ರ ಅವರು ಗುಮ್ಮನಾಯಕನ ಪಾಳ್ಯದ ಬಗ್ಗೆ ಬಹಳ ಆಳವಾಗಿ ಅರಿತಿದ್ದವರು.

ಇದೇ ವೇಳೆ ಶ್ರೀ ಅನಂತ ಪದ್ಮನಾಭಸ್ವಾಮಿ ತ್ರಿಜೋರಿಯಲ್ಲಿರುವ ಗುಮ್ಮನಾಯಕನ ಪಾಳ್ಯದ ಸಂಪತ್ತನ್ನು ವಾಪಸ್‌ ಪಡೆಯುವಂತೆ ಜನರೂ ಸರಕಾರವನ್ನೂ ಒತ್ತಾಯ ಮಾಡುತ್ತಿದ್ದಾರೆ. ಸರಕಾರ ಈ ನಿಟ್ಟಿನಲ್ಲಿ ತಡ ಮಾಡದೇ ಪ್ರಯತ್ನ ಮಾಡಬೇಕೆಂದು ಬಾಗೇಪಲ್ಲಿಯ ಜನ ಕೋರುತ್ತಿದ್ದಾರೆ.

“ದಕ್ಷಿಣ ಭಾರತದ ಪಾಳೇಯಪಟ್ಟುಗಳಲ್ಲಿ ಒಂದಾದ ಗುಮ್ಮನಾಯಕನ ಪಾಳ್ಯದ ಆಡಳಿತ ಬಹಳ ಮಹತ್ವವಾದದ್ದು. ನಮ್ಮ ರಾಜ್ಯದ ಪುರಾತನ ಸಂಪತ್ತನ್ನು ಕೇರಳದಿಂದ ವಾಪಸ್‌ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಿದೆ. ಈ ಬಗ್ಗೆ ಐತಿಹಾಸಿಕ ಅಧ್ಯಯನ ನಡೆಸಬೇಕಿದೆ.”

ಪಿ.ಎನ್.ಶಿವಣ್ಣ / ಪ್ರಾಂಶುಪಾಲ, ವಿಕಾಸ ಕಾಲೇಜ್ , ಬಾಗೇಪಲ್ಲಿ

ಡಿ.ಜಿ ಪವನ್ ಕಲ್ಯಾಣ್

  • ಓದಿದ್ದು ಇಂಗ್ಲೀಷ್‌ ಲಿಟರೇಚರ್.‌ ಆಸಕ್ತಿ ಇತಿಹಾಸ ಮತ್ತು ಪ್ರವೃತ್ತಿ ಇತಿಹಾಸ ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ, ಗುಮ್ಮನಾಯಕನ ಪಾಳ್ಯ ಕೋಟೆಗಳ ಕುರಿತು ಆಳ ಶೋಧ ಮಾಡುತ್ತಿರುವ ಲೇಖಕರು, ರಾಜ್ಯದ ಗಡಿಭಾಗವನ್ನು ಆಳಿದ ವಿವಿಧ ಪಾಳೇಯಗಾರರ ಆಡಳಿತದ ಮೇಲೆ ಬೆಳಕು ಚೆಲುವ ಕೆಲಸ ಮಾಡುತ್ತಿದ್ದಾರೆ.

Tags: anantha padmanabha templebagepallichikkaballapuragummanayaka fortgummanayakana palyakarnatakatippu attacktipu sultantrivandrum
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ವ್ಯಕ್ತಿಪೂಜೆಗಲ್ಲ, ಪಕ್ಷಪೂಜೆಗೆ ಮಾತ್ರ ಅವಕಾಶ: ಶಾಸಕ ಜಮೀರ್‌ ಅಹಮದ್‌ಗೆ ನೇರವಾಗಿ ಟಾಂಗ್‌ ಕೊಟ್ಟ ಡಿ.ಕೆ.ಶಿವಕುಮಾರ್

ಆತ ನಮ್ಮ ಮನೆ ಹುಡುಗ, ತಪ್ಪು ಮಾಡಿದಾಗ ಹೊಡೆದೆ, ಅದು ನಮ್ಮ ಪ್ರೀತಿಯ ಸಂಬಂಧ ಎಂದ ಡಿಕೆಶಿ

Comments 2

  1. HARISH V says:
    4 years ago

    Well done Mr. Pavan, Nijavaglu Pavan avru ondu adbhutha antha ne helbahudu yake antha andre itheechina dinagalalli navu nododadre Ithihasika Charithregala bagge hechu samshodhane kaigondirovru ivrene, Ivru egle alla modalanindalu aste, andre navibru “Angla Bhasheyalli” literature nalli MA padaviyannu maduthiddaga, Bengaluru Vishwa Vidyalayadalli, ibbaru sahapathigalu hagu onde hostelnalli eddoru, avru avaglene hechu thalamalagolluthiddru, inthaha sadhne enadru madbeku antha. Konegu avru adanna sadhisidru. Ene erali avarige nanna abhinandanegelu, avaru heegeye ennu hechagi namma Taluku, Jille, Rajya hagu Deshada keerthiyannu tamma amulyavada barahagalinda sarabeku antha shubha jaraisuthiddene. All the best my friend.

    Reply
  2. HARISH V says:
    4 years ago

    Well done Mr. Pavan, Nijavaglu Pavan avru ondu adbhutha antha ne helbahudu yake antha andre itheechina dinagalalli navu nododadre Ithihasika Charithregala bagge hechu samshodhane kaigondirovru ivrene, Ivru egle alla modalanindalu aste, andre navibru “Angla Bhasheyalli” literature nalli MA padaviyannu maduthiddaga, Bengaluru Vishwa Vidyalayadalli, ibbaru sahapathigalu hagu onde hostelnalli eddoru, avru avaglene hechu thalamalagolluthiddru, inthaha sadhne enadru madbeku antha. Konegu avru adanna sadhisidru. Ene erali avarige nanna abhinandanegelu, avaru heegeye ennu hechagi namma Taluku, Jille, Rajya hagu Deshada keerthiyannu tamma amulyavada barahagalinda sarabeku antha shubha haraisuthiddene. All the best my friend.

    Reply

Leave a Reply Cancel reply

Your email address will not be published. Required fields are marked *

Recommended

ಕಾಂಗ್ರೆಸ್ ವಶಕ್ಕೆ ಗುಡಿಬಂಡೆ ಪಟ್ಟಣ ಪಂಚಾಯತಿ: ಸಿಪಿಎಂ-ಬಿಜೆಪಿಗೆ ಭಾರೀ ಮುಖಭಂಗ! ಒಂದು ಮತದಲ್ಲಿ ಗೆದ್ದ ಹಸ್ತ ಅಭ್ಯರ್ಥಿ!! ಹೊಸ ಅಭ್ಯರ್ಥಿಗಳ ಕೈಹಿಡಿದ ಮತದಾರರು

ಸಿಕೆನ್ಯೂಸ್ ನೌ ವರದಿ ಫಲಶ್ರುತಿ: ಗುಡಿಬಂಡೆ ಪೌರ ಕಾರ್ಮಿಕರಿಗೆ ವೇತನ ಬಿಡುಗಡೆ

4 years ago
ಬರಪೀಡಿತ ಬಾಗೇಪಲ್ಲಿಯಲ್ಲಿ ವರುಣ ಅಬ್ಬರ

ಬರಪೀಡಿತ ಬಾಗೇಪಲ್ಲಿಯಲ್ಲಿ ವರುಣ ಅಬ್ಬರ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ