by Ra Na Gopala Reddy Bagepalli
ಬಾಗೇಪಲ್ಲಿ: ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ನಮ್ಮತನ ನಾವು ಕಾಪಾಡಿಕೊಳ್ಳಬೇಕು. ಯಾರ ಬಗ್ಗೆಯೂ ಕೀಳರಿಮೆ ಬೇಡ ಎಂದು ಬಾಗೇಪಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಸಿ.ಎನ್ ಸತ್ಯನಾರಾಯಣರೆಡ್ಡಿ ಕಿವಿಮಾತು ಹೇಳಿದರು.
ಪಟ್ಟಣದಲ್ಲಿ ಸೋಮವಾರ ಕೂರ್ ಸಂಸ್ಥೆ (ಕ್ರಿಶ್ಚಿಯನ್ ಕೌನ್ಸಿಲ್ ರೂರಲ್ ಡೆವಲಪ್ಮೆಂಟ್) ಹಾಗೂ ಎಫ್ಇಎಸ್ ಸಂಸ್ಥೆಯ (ಫೌಂಡೇಶನ್ ಫಾರ್ ಎಕಾಲಜಿಕಲ್ ಸೊಸೈಟಿ) ಸಹಯೋಗದಲ್ಲಿ ಕೊರೊನಾದಿಂದ ಸಂಕಷ್ಟದಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಎಚ್ಐವಿ ಸೋಂಕಿತರಿಗೆ, ನಿರ್ಗತಿಕರಿಗೆ ದಿನಸಿ ಕಿಟ್ಗಳು, ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾದಿಂದ ಸಾಕಷ್ಟು ಜನರ ಬದುಕನ್ನು ಕಷ್ಟಕ್ಕೆ ಸಿಲುಕಿದೆ. ಉಳ್ಳವರು ಮಾನವೀಯ ಮೌಲ್ಯವುಳ್ಳ ಸಂಸ್ಥೆಗಳ ಮೂಲಕ ದಿನಸಿ ಪದಾರ್ಥಗಳನ್ನು ನೀಡುತ್ತಿದ್ದಾರೆ. ಆಹಾರದಷ್ಟೆ ಆರೋಗ್ಯವೂ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳುವ ದಿಸೆಯಲ್ಲಿ ಆಗಾಗ್ಗೆ ವೈದ್ಯಕೀಯ ಸೌಲಭ್ಯ ಪಡೆಯಬೇಕು ಎಂದರು ಅವರು.
ಕೊರ್ ಸಂಸ್ಥೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎನ್.ಜಿ.ಶಿವಾರೆಡ್ಡಿ ಮಾತನಾಡಿ, ತಾಲೂಕಿನ ವಿವಿಧ ಭಾಗಗಳಿಂದ ಬಂದ 230ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ್ ಬಾಬು, ಶೋಭಾ, ಅರುಣ, ಜ್ಯೋತಿ, ನಾಗರತ್ನಮ್ಮ, ನಾಗರಾಜಪ್ಪ, ಸುಗುಣ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.