ಬೆಂಗಳೂರು: ರಾಜ್ಯ ಸರಕಾರ ಮಂಗಳವಾರ 20 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಬಿ.ಜೆ.ಪೂರ್ಣಿಮಾ ರಾಣಿ ಅವರನ್ನು ವರ್ಗ ಮಾಡಲಾಗಿದೆ.
ಈವರೆಗೂ ಪೂರ್ಣಿಮಾ ಅವರು ಚಿಕ್ಕಬಳ್ಳಾಪುರ ವಲಯ ಅರಣ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಬಾಗೇಪಲ್ಲಿಯಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದ ಚಿನ್ನಪ್ಪಯ್ಯ ಅವರ ನಿವೃತ್ತಿಯಿಂದ ಆ ಜಾಗ ತೆರವಾಗಿತ್ತಲ್ಲದೆ, ಅಲ್ಲಿಗೆ ಪೂರ್ಣಿಮಾ ಅವರು ಬಂದಿದ್ದಾರೆ.