• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಇಂದು ತಿಲಕರ ಜನ್ಮದಿನ; ತಿಲಕರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ

cknewsnow desk by cknewsnow desk
July 23, 2021
in GUEST COLUMN
Reading Time: 2 mins read
0
ಇಂದು ತಿಲಕರ ಜನ್ಮದಿನ; ತಿಲಕರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ

ಲೋಕಮಾನ್ಯ ಬಾಲಗಂಗಾಧರ ತಿಲಕರು

993
VIEWS
FacebookTwitterWhatsuplinkedinEmail

ಇಂದು ಲೋಕಮಾನ್ಯ ಬಾಲಗಂಗಾಧರ ತಿಲಕರ 165ನೇ ಜನ್ಮದಿನ. ಸ್ವಾತಂತ್ರ್ಯ ಚಳವಳಿಯನ್ನು ತೀವ್ರಗತಿಯಲ್ಲಿ ಮುನ್ನಡೆಸಿದ್ದ ತಿಲಕರ ಜೀವನವೇ ರೋಚಕ. ಸಾಟಿ ಇಲ್ಲದ ದೇಶಪ್ರೇಮ, ಸರಳತೆಯಿಂದಲೇ ಅವರು ಎಲ್ಲರಿಗೂ ಮಾನ್ಯರಾದವರು. ಆ ಮಹಾಪುರುಷರಿಗೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌‌ ರಾವ್‌ ಹವಲ್ದಾರ್ ಅಕ್ಷನ ನಮನ ಸಲ್ಲಿಸಿದ್ದಾರೆ.

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದವರು, ಲೇಖಕರಾಗಿ, ಶಿಕ್ಷಕರಾಗಿ, ತತ್ತ್ವಶಾಸ್ತ್ರಜ್ಞರಾಗಿ, ಗಣಿತಜ್ಞರಾಗಿ, ಶಿಕ್ಷಣತಜ್ಞರಾಗಿ, ವಕೀಲರಾಗಿ, ಪತ್ರಕರ್ತರಾಗಿ, ಸ್ವದೇಶಿ ಉದ್ಯಮಿಯಾಗಿ, ರಾಜಕೀಯ ನೇತಾರರಾಗಿ, ಹಿಂದೂ-ಮುಸ್ಲಿಂ ಐಕ್ಯತಾ ನೇತಾರರಾಗಿ, ಸಮಾಜ ಸುಧಾರಕರಾಗಿ, ರಾಷ್ಟ್ರ ನಾಯಕರಾಗಿ, ಬ್ರಿಟಿಷರ ಗುಲಾಮಗಿರಿ ಆಡಳಿತದಿಂದ ಹೊರಬಂದು ಭಾರತೀಯರು ಸ್ವತಂತ್ರರಾಗಬೇಕೆಂದು ಕನಸು ಕಂಡ ಧೀಮಂತ ವ್ಯಕ್ತಿ, ಸಮಸ್ತ ಭಾರತೀಯರ ಪಾಲಿಗೆ ಲೋಕಮಾನ್ಯರಾದ ಬಾಲಗಂಗಾಧರ ತಿಲಕರ ಜನ್ಮದಿನ ಇಂದು.

ತಿಲಕರು ಹುಟ್ಟಿದ್ದು 1856ರ ಜುಲೈ 22ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ. ಇವರ ತಂದೆ ಕೇಶವ ಗಂಗಾಧರ ತಿಲಕರು ಸಂಸ್ಕೃತ ವಿದ್ವಾಂಸರು. ಬಾಲಗಂಗಾಧರ ತಿಲಕರು ತಮ್ಮ ಸಾರ್ವಜನಿಕ, ರಾಜಕೀಯ ಜೀವನ ಆರಂಭಿಸಿದ್ದು ಸಮಾಜ ಸುಧಾರಕರಾಗಿ ಮತ್ತು ಸ್ವಾತಂತ್ರ್ಯ ಚಳವಳಿಕಾರರಾಗಿ. ಸ್ವರಾಜ್ಯ, ಸ್ವ ಆಡಳಿತ ಕಾನೂನನ್ನು ಪ್ರಚುರಪಡಿಸಿದರು. ಭಾರತದ ಸ್ವಾತಂತ್ರ್ಯ ಚಳವಳಿಯ ಕಿಚ್ಚನ್ನು ಹೆಚ್ಚಿಸುವ ʼಕೇಸರಿʼ ಎಂಬ ಮರಾಠಿ ಪತ್ರಿಕೆ ಹಾಗೂ ʼಮರಾಠಾʼ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಮುಂಬಯಿ ಮಹಾನಗರದಿಂದ ಪ್ರಕಟವಾಗುತ್ತಿದ್ದ ʼರಾಷ್ಟ್ರಮತʼ ಮರಾಠಿ ಪತ್ರಿಕೆಯ ಜತೆಗೂ ಒಡನಾಟ ಇಟ್ಟುಕೊಂಡಿದ್ದರು. ʼಕೇಸರಿʼ ಈಗ ದಿನಪತ್ರಿಕೆಯಾಗಿದೆ. ʼಮರಾಠʼ ಪತ್ರಿಕೆಯ ಪ್ರಕಟಣೆ ನಿಂತಿದೆ.

ʼಸ್ವರಾಜ್ಯ ನನ್ನ ಅಜನ್ಮ ಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆʼ ಎಂಬ ಘೋಷವಾಕ್ಯ ಲಕ್ಷಾಂತರ ಯುವಕರಲ್ಲಿ ಉತ್ಸಾಹ ತುಂಬಿಸಿತ್ತು.

ತಮ್ಮ ವಿರುದ್ಧ ಭಾರತದ ಪ್ರಜೆಗಳ ತೀವ್ರ ಆಕ್ರೋಶದ ಜನಕ ಎಂದೇ ಬ್ರಿಟಿಷರು ಇವರನ್ನು ಕರೆದರು. ಬ್ರಿಟಿಷರ ವಿರುದ್ಧ ಭಾರತದಲ್ಲಿ ಮಾತ್ರವಲ್ಲದೇ ಬ್ರಿಟನ್‌ನಲ್ಲಿಯೂ ತೀವ್ರ ಹೋರಾಟ ನಡೆಸಿದರು. ಇಂಗ್ಲೆಡ್‌ನ ಚಿರೋಲ್‌ ಎಂಬ ಪತ್ರಕರ್ತರು ಭಾರತಕ್ಕೆ ಭೇಟಿ ನೀಡಿದಾಗ ತಿಲಕರು ನಡೆಸುತ್ತಿದ್ದ ಹೋರಾಟವನ್ನು ಗಮನಿಸಿ, ತಿಲಕರ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಿದಾಗ ಚಿರೋಲ್‌ ಮೇಲೆ ಮಾನಹಾನಿಯ ಮೊಕದ್ದಮೆ ಹೂಡಿ, 13 ತಿಂಗಳುಗಳ ಕಾಲ ಇಂಗ್ಲೆಂಡ್‌ನಲ್ಲಿ ಮೊಕದ್ದಮೆ ನಡೆಸಿದರು. ಈ ಸಮಯದಲ್ಲಿ ಬ್ರಿಟಿಷ್‌ ಸರಕಾರಕ್ಕೆ ಭಾರತದ ಬ್ರಿಟಿಷ್‌ ಆಡಳಿತ ವೈಖರಿಯನ್ನು ತಿಳಿಸಿ ಹಲವು ಸುಧಾರಣೆಗಳನ್ನು ತರಲು ಕಠಿಣ ಪರಿಶ್ರಮಪಟ್ಟಿದ್ದರು.

ಇಂಗ್ಲೆಂಡಿನಾದ್ಯಂತ ನೂರಾರು ಸಭೆಗಳನ್ನು ನಡೆಸಿ, ಅಲ್ಲಿನ ರಾಜಕೀಯ ನೇತಾರರು ಮುತ್ಸದ್ಧಿಗಳು ನೀತಿ ನಿರೂಪಕರು, ಅಧಿಕಾರಿಗಳ, ಗಣ್ಯವ್ಯಕ್ತಿಗಳ ಸದಭಿಪ್ರಾಯವನ್ನು ಭಾರತದ ಪರವಾಗಿ ನಿರೂಪಿಸಿದರು. ಅಲ್ಲಿನ ವಿರೋಧ ಪಕ್ಷ ʼಕಾರ್ಮಿಕ ಪಕ್ಷʼದೊಡನೆಯೂ ಸ್ನೇಹ ಸಂಬಂಧ ಗಳಿಸಿದರು. ಕಾರ್ಮಿಕ ಪಕ್ಷಕ್ಕೆ 2,000 ಪೌಂಡ್‌ ದೇಣಿಗೆಯನ್ನೂ ನೀಡಿದರು.‌

ಸ್ವಾತಂತ್ರ್ಯ ಹೋರಾಟದ ಲಾಲ್‌, ಬಾಲ್‌, ಪಾಲ್‌ ಸುಪ್ರಸಿದ್ಧ ತ್ರಿಮೂರ್ತಿಗಳಲ್ಲಿ ಒಬ್ಬರಾಗಿದ್ದ ತೀವ್ರಗಾಮಿ ನಾಯಕ ತಿಲಕರು ಒಟ್ಟು 88 ತಿಂಗಳ ಕಾಲ ಕಾರಾಗೃಹದಲ್ಲಿದ್ದಾಗ ಕುಪ್ರಸಿದ್ಧ ಕರಿನೀರಿನ ಶಿಕ್ಷೆಗೆ ಗುರಿಯಾಗಿದ್ದರು. ಅಲ್ಲಿಯೇ ತಮ್ಮ ಪ್ರಖ್ಯಾತ ʼಗೀತಾ ರಹಸ್ಯʼ ಪುಸ್ತಕ ಬರೆದರು. ಅದಕ್ಕೂ ಮುನ್ನ ಪುಣೆ ಸಮೀಪದ ಯುರವಾಡಾ ಜೈಲಿನಲ್ಲಿ 18 ತಿಂಗಳ ಕಾರಾಗೃಹ ಶಿಕ್ಷೆಯ ಅವಧಿಯಲ್ಲಿ ʼಓರಿಯನ್‌ʼ ಮತ್ತು ʼವೇದ ಕಾಲ ನಿರ್ಣಯʼ ಎಂಬ ಎರಡು ಮಹೋನ್ನತ ಕೃತಿಗಳನ್ನು ರಚಿಸಿದರು. ತಿಲಕರ ಬಿಡುಗಡೆಗಾಗಿ ವಿದ್ವಾಂಸರು, ರಾಜಕಾರಣಿಗಳು ಭಾರತದ ಬ್ರಿಟಿಷ್‌ ಸರಕಾರಕ್ಕೆ ಮನವಿ ಮಾಡಿದ್ದು ಅವರ ವ್ಯಕ್ತಿತ್ವ ಎಂತಹದು ಎಂದು ತೋರಿಸುತ್ತದೆ.

ಶಿಕ್ಷಣ ಪಡೆದರೆ ಮಾತ್ರ ನಾವು ಪ್ರಗತಿಯ ದಾರಿಯಲ್ಲಿ ಸಾಗಬಹುದು. ಶಿಕ್ಷಣ ನಮ್ಮ ಭವಿಷ್ಯಕ್ಕೆ ಮಾತ್ರವಲ್ಲ ದೇಶದ ಪ್ರಗತಿಗೂ ಅಗತ್ಯ. ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು. ಪ್ರತಿಯೊಬ್ಬರೂ ತಮ್ಮ ಸ್ವ-ಹಿತದೃಷ್ಟಿಯಿಂದ ದೇಶದ ಪ್ರಗತಿ ಕಾಣಬೇಕು. ಇದರಿಂದ ಒಗ್ಗಟ್ಟು ಸಾಧ್ಯವಾಗುತ್ತದೆ ಎನ್ನುವುದು ತಿಲಕರ ವಾದವಾಗಿತ್ತು.

ಭಾರತೀಯರಿಗೆ ಆಧುನಿಕ ಶಿಕ್ಷಣ ದೊರಕಬೇಕು ಎಂಬ ಹಂಬಲದಿಂದ ಕೆಲ ಸಹಕಾರಿಗಳ ಜೊತೆಗೂಡಿ ತಿಲಕರು ʼನ್ಯೂ ಇಂಗ್ಲಿಷ್‌ ಸ್ಕೂಲ್‌ʼ ಪ್ರಾರಂಭಿಸಿದರು. ಕೆಲ ವರ್ಷಗಳ ನಂತರ ʼಡೆಕ್ಕನ್‌ ವಿದ್ಯಾ ಸಂಸ್ಥೆʼ ಪ್ರಾರಂಭಿಸಿದ ತಿಲಕರು, ಈ ಸಂಸ್ಥೆಯ ಅಡಿಯಲ್ಲಿ ಪುಣೆಯ ಸುಪ್ರಸಿದ್ಧ ʼಫರ್ಗುಸನ್‌ ಕಾಲೇಜುʼ ಪ್ರಾರಂಭಿಸಿದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದೇ ಇವರ ಉದ್ದೇಶವಾಗಿತ್ತು. ಶಿಕ್ಷಣ ಸಂಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ ಕಡಿಮೆಯಾದಾಗ ತಾವೇ ಪ್ರಾರಂಭಿಸಿದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿ ಹೊರ ಬಂದರೆ ಹೊರತು ತಾವು ನಂಬಿ ಅನುಸರಿಸಿದ ತತ್ತ್ವ ಆದರ್ಶದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ.

ದೇಶದ ಯುವಜನತೆಯಲ್ಲಿ ರಾಷ್ಟ್ರಭಕ್ತಿ, ಸ್ವದೇಶಿ, ಸ್ವಾಭಿಮಾನ ಮುಂತಾದ ಹಲವಾರು ಸಕಾರಾತ್ಮಕ ವಿಷಯಗಳನ್ನು ತುಂಬುತ್ತಿದ್ದ ತಿಲಕರು ಅವರಲ್ಲಿ ಕ್ರೀಡೆ, ಸಾಹಸ ಪ್ರವೃತ್ತಿಯನ್ನು ಬೆಳೆಸಲು ಪ್ರಯತ್ನ ನಡೆಸಿದರು. ಆ ನಿಟ್ಟಿನಲ್ಲಿ ʼಡೆಕ್ಕನ್‌ ಜಮಖಾನ ಸಂಸ್ಥೆʼಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯಲ್ಲಿ ಕ್ರಿಕೆಟ್‌, ಟೆನಿಸ್‌, ಟೇಬಲ್‌ ಟೆನಿಸ್‌ ಸಹಿತ ಹಲವಾರು ಕ್ರೀಡೆಗಳಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದ್ದಾರೆ.

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮತ್ತೊಮ್ಮೆ ಸಾರಿದ ಕೀರ್ತಿಯೂ ಬಾಲಗಂಗಾಧರ ತಿಲಕ್‌ ಅವರಿಗೇ ಸಲ್ಲಬೇಕು. ಸಾರ್ವಜನಿಕ ಗಣೇಶೋತ್ಸವದ ನೆಪದಲ್ಲಿ ದೇಶ ಪ್ರೇಮಿಗಳನ್ನು ಒಗ್ಗೂಡಿಸಿದ ಕೀರ್ತಿ ಅವರದ್ದು. ಧಾರ್ಮಿಕ ಕಾರ್ಯಕ್ರಮಗಳು ದೇಶದ ಉದ್ಧಾರಕ್ಕಾಗಿಯೇ ನಡೆಯಬೇಕು ಎಂಬುದನ್ನು ಅವರು ಈ ಮೂಲಕ ಸಾರಿದರು. ಸಮಾನ ಮನಸ್ಕರು, ಸಾಮಾನ್ಯ ಜನತೆ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಒಗ್ಗಟ್ಟಾಗಿದ್ದರೆ ಯಾರಿಂದಲೂ ದೇಶವನ್ನು ದೋಚಲು ಸಾಧ್ಯವಿಲ್ಲ. ಇದರಿಂದ ಒಂದಲ್ಲ ಒಂದು ದಿನ ಖಂಡಿತಾ ಜಯ ನಮ್ಮದಾಗುತ್ತದೆ ಎನ್ನುವುದನ್ನೂ ಸಾರಿದ್ದಾರೆ.

ಜನಸಾಮಾನ್ಯರಲ್ಲಿ ಪ್ರಖರ ದೇಶಪ್ರೇಮವನ್ನು ಬೆಳೆಸಿ ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸಲು ತಿಲಕರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವಕ್ಕೆ ಈಗ 128ನೇ ವರ್ಷದ ಸಂಭ್ರಮ. ಅಂತೆಯೇ ಬೆಳಗಾವಿ ಗಣೇಶೋತ್ಸವಕ್ಕೆ ಬಂದಿದ್ದ ಸಂದರ್ಭದಲ್ಲಿ ತಿಲಕರು ಕನ್ನಡದಲ್ಲಿಯೇ ಮಾತನಾಡಿದ್ದನ್ನು ನಾವು ಈ ವೇಳೆ ಸ್ಮರಿಸಲೇಬೇಕು.

ಪುಣೆ ನಗರಪಾಲಿಕೆ ಸದಸ್ಯ, ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿದ್ದ ತಿಲಕರು ಅಪಾರವಾದ ತಮ್ಮ ಪರಿಶ್ರಮದಿಂದ ಅನೇಕ ಜನೋಪಕಾರಿ ಕಾರ್ಯಗಳನ್ನು ಕಾರ್ಯಗತಗೊಳಿಸಿದರು. 19ನೇ ಶತಮಾನದ ಕೊನೆಯ ದಶಕದಲ್ಲಿ ಸಾಂಕ್ರಾಮಿಕ ರೋಗ ʼಪ್ಲೇಗ್‌ʼ ಪುಣೆ ನಗರವನ್ನು ಆವರಿಸಿಕೊಂಡಾಗ ತಿಲಕರು ಆಸ್ಪತ್ರೆಗಳನ್ನೂ ಪ್ರಾರಂಭಿಸಿ ತಮ್ಮ ಸಹಕಾರಿಗಳ ಜೊತೆ ರೋಗಿಗಳ ಶುಶ್ರೂಷೆ ಮಾಡಿದ್ದರು. ಈ ಸಂದರ್ಭದಲ್ಲಿ ಬ್ರಿಟೀಷ್‌ ಆಡಳಿತದ ಉದಾಸೀನ ಧೋರಣೆಯನ್ನು ʼಕೇಸರಿʼ, ʼಮರಾಠʼ ಪತ್ರಿಕೆಯಲ್ಲಿ ಖಂಡಿಸಿ ಜನಜಾಗೃತಿ ಮೂಡಿಸಿದ್ದು, ಪ್ಲೇಗ್‌ ಆಯುಕ್ತ ಬ್ರಿಟೀಷ್‌ ದುಷ್ಟ ಅಧಿಕಾರಿಯ ಅಟ್ಟಹಾಸ, ಅಮಾನವೀಯ ವರ್ತನೆಯಿಂದ ಪುಣೆಯ ಜನರಿಗೆ ಮುಕ್ತಿ ದೊರಕಿಸಿದ ಛಾಪೇಕಲ್‌ ಸಹೋದರರ ಪರವಾಗಿ ನಿಂತರು.

ಸಮಾಜ ಸುಧಾರಣೆಯ ಮಾರ್ಗದಲ್ಲಿ ಬಾಲ್ಯವಿವಾಹಕ್ಕೆ ನಿಷೇಧ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, 1891ರ ಒಪ್ಪಿಗೆ ಮಸೂದೆ (ಕನ್ಸೆಂಟ್ ಬಿಲ್)ನ್ನು ವಿರೋಧಿಸಿದರು ತಿಲಕರು. ಹಿಂದೂ ಧರ್ಮಕ್ಕೆ ವಿರುದ್ಧವಾದದ್ದು ಅಪಾಯಕಾರಿ ಎಂಬುದು ಅವರ ವಾದ. ಹಿಂದೂ ಧರ್ಮದ ಹೆಣ್ಣುಮಕ್ಕಳು 10ರಿಂದ 12ನೇ ವರ್ಷದಲ್ಲಿ ಮದುವೆಯಾಗಬಹುದು ಎಂಬ ನಿಯಮವನ್ನು ತಿಲಕರು ವಿರೋಧಿಸಿದ್ದರು.

ಸ್ವದೇಶಿ ಉದ್ಯಮಕ್ಕೆ ಪ್ರೋತ್ಸಾಹ ಮತ್ತು ಆದ್ಯತೆ ತಿಲಕರಿಂದ ಪ್ರೇರಣೆ ಪಡೆದ ಅವರ ಸಹಯೋಗಿ ಬಾಲಕೃಷ್ಣ ಶಿವರಾಮ ಮೂಂಜೆ ದೇಶದ ಮೊದಲನೆ ಸೈನಿಕ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಮದ್ಯಪಾನ ಸೇವನೆಯ ವಿರುದ್ಧ ಹೋರಾಟವನ್ನೇ ನಡೆಸಿದರು. ಈ ಮೂಲಕ ಇನ್ನೊಬ್ಬರನ್ನು ಟೀಕಿಸುವ ಮೊದಲು ನಾವು ದುಶ್ಚಟಗಳಿಂದ ದೂರವಿದ್ದು ನಮ್ಮ ಪರಿಸರವನ್ನು ಸ್ವಚ್ಛ ವಾಗಿಟ್ಟುಕೊಳ್ಳಬೇಕು ಎಂಬುದನ್ನು ಸಾರಿದರು.

1914 ಜೂನ್‌ 16ರಂದು ಕಠಿಣ ಕಾರಾಗೃಹ ಶಿಕ್ಷೆಯನ್ನು ಪೂರ್ಣಗೊಳಿಸಿ ಬರ್ಮಾದ ಮಂಡಾಲೆ ಜೈಲಿನಿಂದ ಪುಣೆಗೆ ವಾಪಸ್‌ ಬಂದ ತಿಲಕರಿಗೆ ಪುಣೆಯ ಜನತೆ, ಹಲವು ಸಂಘ ಸಂಸ್ಥೆಗಳು ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. 1916ರಲ್ಲಿ ತಿಲಕರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿ ಒಂದು ಲಕ್ಷ ರೂ.ಗಳ ನಿಧಿಯನ್ನು ಸಮರ್ಪಿಸಲಾಯಿತು. ವಿಜೃಂಭಣೆಯ ಸಾರ್ವಜನಿಕ ಸಮಾರಂಭದಲ್ಲಿ ತಿಲಕರು ಪೂರ್ಣ ಒಂದು ಲಕ್ಷ ಹಣವನ್ನು ರಾಷ್ಟ್ರೀಯ ಕಾರ್ಯಗಳಿಗೆ ಉಪಯೋಗಿಸಲು ಕೊಟ್ಟುಬಿಟ್ಟರು. ಬ್ರಿಟೀಷ್‌ ಶತ್ರು ರಾಷ್ಟ್ರಗಳ ಮಿತ್ರತ್ವ ಸಾಧಿಸಲು ತಿಲಕರು ಮಂಡಾಲೆ ಜೈಲಿನಲ್ಲಿದ್ದಾಗ ಜರ್ಮನ್‌ ಮತ್ತು ಫ್ರೆಂಚ್‌ ಭಾಷೆಯನ್ನು ಕಲಿತಿದ್ದು ಅವರ ದೂರದರ್ಶಿತ್ವದ ಚಿಂತನೆಗೆ ಸಾಕ್ಷಿ.

ಅಸ್ಪೃಶ್ಯತೆಯ ವಿರುದ್ಧವೂ ತಿಲಕರು ಹೋರಾಟ ನಡೆಸಿದ್ದರು, ತಿಲಕರ ಮಗ ಶ್ರೀಧರ ತಿಲಕ್‌ ಅಂಬೇಡ್ಕರ್‌ ಜತೆಯಲ್ಲಿ ಅಸ್ಪೃಶ್ಯತೆ ವಿರುದ್ಧ ದೀರ್ಘಕಾಲ ಆಂದೋಲನ ನಡೆಸಿದ್ದರು.

ಇಂಗ್ಲೆಡ್‌ನಲ್ಲಿ 1906ರ ಚುನಾವಣೆ ಗೆದ್ದ ಲೇಬರಲ್‌ ಪಾರ್ಟಿ ಭಾರತದ ಬ್ರಿಟೀಷರ ಆಡಳಿತದಲ್ಲಿ ಸುಧಾರಣೆ ತರಲು ಮುಂದಾಗಿ, ಭಾರತದ ಆಡಳಿತದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಂಡಿತು. ಜತೆಯಲ್ಲೇ ಮುಸ್ಮೀಮರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ನೀಡಿತು. ಹಿಂದೂ ಮುಸ್ಲೀಮರಲ್ಲಿ ಪ್ರತ್ಯೇಕತಾ ಮನೋಭಾವದ ಭಾವನೆಗಳನ್ನು ತೀವ್ರಗೊಳಿಸುವ ಈ ಕಾರ್ಯಸೂಚಿಯಿಂದ ಬ್ರಿಟೀಷ್‌ ಅಧಿಕಾರಶಾಹಿ ಭಾರತದ ಸಮಗ್ರತೆ ಮತ್ತು ಏಕತೆಯನ್ನು ದುರ್ಬಲಗೊಳಿಸಲು ದೀರ್ಘಕಾಲೀನ ಕಾರ್ಯತಂತ್ರ ರೂಪಿಸಿತ್ತು. ಇದನ್ನು ಸಮರ್ಥವಾಗಿ ಅನುಪಯುಕ್ತವಾಗಿಸುವ ರಾಷ್ಟ್ರೀಯತೆಯ ಕಾರ್ಯತಂತ್ರ ರೂಪಿಸಿದ ತಿಲಕರು, 1916ರಲ್ಲಿ ಲಖನೌ ನಗರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮುಸ್ಲಿಂಲೀಗ್‌ ಜತೆ ಕಾಂಗ್ರೆಸ್‌ ಒಪ್ಪಂದ ಮಾಡಿಕೊಳ್ಳುವಂತೆ ಮಾಡುತ್ತಾರೆ. ಇದ ಇತಿಹಾಸದಲ್ಲಿ ʼಲಖನೌ ಪಾಳ್ವೆʼ ಎಂದೇ ಪ್ರಸಿದ್ಧವಾಗಿದೆ.

ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ನೇಪಾಳದಲ್ಲಿ ಬಾಂಬ್‌ಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪಿಸಲು ತಮ್ಮ ಅನುಯಾಯಿ ಕೃಷ್ಣಾಜಿ ಪ್ರಭಾಕರ್‌ ಖಾಡಿಲೈರ್‌ ಅವರನ್ನು ಕಳುಹಿಸಿದ ತಿಲಕರು, ಇದೇ ಸಂದರ್ಭದಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ರಾಜಕೀಯ ಆಶ್ರಯ ಪಡೆದ ಲಾಲಾ ಲಜಪತ್‌ರಾಯರ ಹಣಕಾಸಿನ ತೊಂದರೆ ಗಮನಕ್ಕೆ ಬಂದಾಗ ಡಾ.ಅನಿಬೆಸೆಂಟರ ʼಥಿಯೋಸಫಿಕಲ್‌ ಸೊಸೈಟಿʼ ಮೂಲಕ ಒಟ್ಟು 6,500 ಡಾಲರ್‌ ಮೊತ್ತವನ್ನು ಲಾಲಾ ಲಜಪತ್‌ರಾಯರಿಗೆ ಕಳುಹಿಸಿದರು. ಇದೇ ಸಂದರ್ಭದಲ್ಲಿ ಅನಿಬೆಸೆಂಟ್, ಜಿನ್ನಾ ಮುಂತಾದವರ ಜತೆ ಸೇರಿ 1916ರ ಏಪ್ರಿಲ್‌ನಲ್ಲಿ ಬೆಳಗಾವಿಯಲ್ಲಿ ʼಭಾರತೀಯ ಹೋಮ್‌ ರೂಲ್‌ ಲೀಗ್‌ʼ ಪ್ರಾರಂಭಿಸಿದರು.

ಮಹಾತ್ಮ ಗಾಂಧೀಜಿ ಅವರ ಪೂರ್ಣ ಶಾಂತಿಯುತ ಹೋರಾಟವನ್ನು ಒಪ್ಪಿಕೊಳ್ಳದ ತಿಲಕರು ದೊಡ್ಡಮಟ್ಟದ ಪೂರ್ಣ ಪ್ರಮಾಣದ ಅಹಿಂಸಾತ್ಮಕ ಹೋರಾಟ ʼಅಸಹಕಾರ ಚಳವಳಿʼ ಪ್ರಾರಂಭವಾಗುವ ಮೊದಲೇ ತಮ್ಮ ರಾಷ್ಟ್ರಯಾತ್ರೆಯನ್ನು ಮುಗಿಸಿದರು.

ಗಾಂಧೀಜಿ ಅವರು 1914ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ ಬಂದಾಗ, ಮೊದಲಿಗೆ ತಿಲಕರನ್ನು ಭೇಟಿಯಾದಾಗ ʼತಿಲಕರು ಹಿಮಾಲಯದಷ್ಟು ವಿಶಾಲ ಎತ್ತರದ ವ್ಯಕ್ತಿತ್ವದ ಸಾಧಕರು. ಅವರಷ್ಟು ಎತ್ತರಕ್ಕೆ ಏರಲು ನನಗೆ ಸಾಧ್ಯವಾಗುವುದಿಲ್ಲʼ ಎಂದು ಹೇಳಿದ್ದರು.

ಹೀಗೆ ಬದುಕಿದ 64 ವರ್ಷಗಳಲ್ಲೂ ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ಆದರ್ಶವನ್ನು ಚಾಚೂತಪ್ಪದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನ ಮಾಡಿ ಹಲವು ಹತ್ತಾರು ಲಕ್ಷ ಜನಗಳಿಗೆ ಪ್ರೇರಣಾ ಸ್ವರೂಪದ ಪ್ರತಿರೂಪವೇ ಆಗಿದ್ದರು ತಿಲಕರು.

ಸ್ವದೇಶಿ, ಸ್ವರಾಜ್ಯ, ಬಹಿಷ್ಕಾರ ಎಂಬ ಮೂರು ಸೂತ್ರವನ್ನು ಭಾರತದ ಪುನರುತ್ಥಾನಕ್ಕಾಗಿ ನೀಡಿದ ತಿಲಕರು ಜೆಮ್‌ಶೆಡ್‌ ಜೀ ಟಾಟಾರವರ ಜತೆಯಾಗಿ ʼಬಾಂಬೆ ಸ್ವದೇಶಿ ಸ್ಟೋರ್ಸ್ ನಿಯಮಿತʼ ಎಂಬ ಕಂಪನಿಯನ್ನು ತೆರೆದು ಕಂಪನಿಯ ವ್ಯಾಪಾರ ಮಳಿಗೆಗಳ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಿದರು. ಪುಣೆಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಹಲವು ರಾಜ್ಯಗಳಲ್ಲಿ ತನ್ನ ಬ್ಯಾಂಕಿಂಗ್‌ ವ್ಯವಹಾರವನ್ನೂ ನಡೆಸುತ್ತಿರುವ ದೇಶದ ಅಗ್ರಗಾಮಿ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಕಾಸ್ಮೋಸ್‌ ಬ್ಯಾಂಕ್‌ನ ಸ್ಥಾಪನೆ, ಆಡಳಿತದಲ್ಲಿ ತಿಲಕರು ಸಕ್ರಿಯ ಪಾತ್ರ ವಹಿಸಿದ್ದರು.

ತಿಲಕರು ದೈಹಿಕವಾಗಿ ತುಂಬಾ ಜರ್ಝರಿತರಾಗಿದ್ದರು, ಆರೋಗ್ಯ ಕ್ಷೀಣಿಸಿ ಆಗಸ್ಟ್ 1, 1920ರಂದು ವಿಧಿವಶರಾದರು. ತಿಲಕರ ಧರ್ಮಪತ್ನಿ ಸತ್ಯಭಾಮಾ ತಿಲಕರ ಹೋರಾಟದ ಬದುಕಿನ ಪ್ರತಿ ಹೆಜ್ಜೆಯಲ್ಲೂ ತಮ್ಮ ಸಹಯೋಗ ನೀಡಿದದ್ದರು. ತಿಲಕರು ದೂರದ ಮಂಡಾಲೆ ಜೈಲಿನಲ್ಲಿ ಕರಿನೀರಿನ ಶಿಕ್ಷೆಗೆ ಒಳಗಾಗಿದ್ದಾಗ ಕೊನೆಯುಸಿರೆಳೆದರು. ಆಭರಣ, ರೇಷ್ಮೆ ಸೀರೆ ಸೇರಿದಂತೆ ಯಾವುದೇ ಐಹಿಕ ವಸ್ತುಗಳಿಗೆ ಆಸೆಪಡದ ಅವರು, ಆದರ್ಶಮಯ ಜೀವನ ನಡೆಸಿದವರು. ಅವರ ಕೊನೆ ಆಸೆ, ಆಗ ಜೈಲಿನಲ್ಲಿ ಇದ್ದ ತಮ್ಮ ಪತಿ ತಿಲಕರನ್ನು ಒಮ್ಮೆ ಭೇಟಿ ಮಾಡಬೇಕೆಂಬುದು ಆಗಿತ್ತು, ಅದರೆ ಅವರ ಕೊನೆ ಆಸೆ ನೆರವೇರಲಿಲ್ಲ.

ಅತ್ಯಂತ ಆದರ್ಶದ, ಸರಳ, ಸೌಜನ್ಯದ ಜೀವನ ನಡೆಸಿದ ತಿಲಕರು ತಮ್ಮ ಸ್ವಂತದ್ದೆಂದು ಯಾವ ಆಸ್ತಿಯನ್ನೂ ಮಾಡಿಕೊಳ್ಳಲಿಲ್ಲ. ಅಂತಹ ಲೋಕಮಾನ್ಯ ಬಾಲಗಂಗಾಧರ ತಿಲಕರು ನಮ್ಮೆಲ್ಲರ ಆದರ್ಶ ಪ್ರಾಯರಾಗಿದ್ದಾರೆ.


ಡಾ.ಗುರುಪ್ರಸಾದ ಹವಲ್ದಾರ್

ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Tags: 165th birth anniversaryBal Gangadhar TilakindiaIndian independence movementIndian nationalistLokmanya Tilakteacher
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ನಂದಿಬೆಟ್ಟ ಪರಿಸರಕ್ಕೆ ಹಾನಿ ಆಗದಂತೆ ಸಮಗ್ರ ಅಭಿವೃದ್ಧಿ: ಸಚಿವ ಸಿ ಪಿ ಯೋಗೇಶ್ವರ

ನಂದಿಬೆಟ್ಟ ಪರಿಸರಕ್ಕೆ ಹಾನಿ ಆಗದಂತೆ ಸಮಗ್ರ ಅಭಿವೃದ್ಧಿ: ಸಚಿವ ಸಿ ಪಿ ಯೋಗೇಶ್ವರ

Leave a Reply Cancel reply

Your email address will not be published. Required fields are marked *

Recommended

ಕೊನೆಗೂ ಎಕ್ಸಾಮ್‌ ಸುದ್ದಿ ಕೊಟ್ಟ ಸುರೇಶ್‌ ಕುಮಾರ್; ಸೆಕೆಂಡ್‌ ಪಿಯುಸಿ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ, ಎಸ್ಎಸ್ಎಲ್ಸಿ ಮಕ್ಕಳಿಗೆ ಜೂನ್‌ನಲ್ಲಿ ಪರೀಕ್ಷೆ

ಮಕ್ಕಳ ಉತ್ತಮ ಕಲಿಕೆಗೆ ಸೇತುಬಂಧ; ಜುಲೈನಿಂದಲೇ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಎಂದ ಪ್ರಾಥಮಿಕ & ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್‌ ಕುಮಾರ್

4 years ago
ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಭರಾಟೆ; ಮುನಿರತ್ನ ಹ್ಯಾಟ್ರಿಕ್‌, 70 ವರ್ಷಕ್ಕೆ ಶಿರಾದಲ್ಲಿ ಅರಳಿದ ಕಮಲ

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವಿರುದ್ಧ 40% ಕಮೀಷನ್‌ ಕಲೆಕ್ಷನ್‌ ಆರೋಪ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ