by GS Bharath Gudibande
ಗುಡಿಬಂಡೆ: ಸ್ಥಳೀಯ ಮಟ್ಟದಲ್ಲಿ ಜಾತ್ಯಾತೀತ ಜನತಾದಳವನ್ನು ಬಲಪಡಿಸುವ ಉದ್ದೇಶದಿಂದ ಗುಡಿಬಂಡೆ ತಾಲೂಕು ಜೆಡಿಎಸ್ ಘಟಕಕ್ಕೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ವಿವಿಧ ಪಧಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ನೇಮಕ ಮಾಡಿದ್ದಾರೆ. ಈ ವಿಷಯವನ್ನು ತಾಲೂಕಿನ ಜೆಡಿಎಸ್ʼನ ನೂತನ ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ಸಿಕೆನ್ಯೂಸ್ ನೌ ಗೆ ತಿಳಿಸಿದ್ದಾರೆ.
ಮುಂದಿನ ಚುನಾವಣೆಗೆ ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದಿಂದ ಸ್ಪರ್ದಿಸುವ ಅಭ್ಯರ್ಥಿಗೆ ಬೆಂಬಲ ನೀಡಿ ತಾಲ್ಲೂಕು ಮಟ್ಟದಲ್ಲಿ ಪಕ್ಷದ ಸಂಘಟನೆ, ಪಕ್ಷಾಂತರ ಹೋದವರನ್ನು ಮರಳಿ ಪಕ್ಷಕ್ಕೆ ಕರೆತಂದು ಬಲಿಷ್ಠಪಡಿಸುವ ತೀರ್ಮಾನದಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಹೊಸ ಪದಾಧಿಗಳು ಇವರು
1. ಅಧ್ಯಕ್ಷ: ಹೆಚ್.ಎನ್.ಮಂಜುನಾಥ್
2. ಕಾರ್ಯಾಧ್ಯಕ್ಷ: ಜಿ.ಎಲ್ ಮುರಳಿಕೃಷ್ಣ
3. ಉಪಾಧ್ಯಕ್ಷರು: ಚೌಡರೆಡ್ಡಿ ಮತ್ತು ಬಿ.ಸಿ ರವೀಂದ್ರನಾಥ
4. ಖಂಜಾಂಚಿ: ಮಹೇಶ್
5. ಮಹಾ ಪ್ರಧಾನ ಕಾರ್ಯದರ್ಶಿಗಳು: ಅಪ್ಸರ್ ಪಾಷ ಮತ್ತು ಎಂ.ಎನ್ ರಾಜಣ್ಣ
6. ಸಹ ಕಾರ್ಯದರ್ಶಿಗಳು: ಕೆ.ವಿ ಸುರೇಶ್ ಮತ್ತು ಪಿ.ಸಿ ದೇವರಾಜ್
7. ಸಂಘಟನಾ ಕಾರ್ಯದರ್ಶಿಗಳು: ಚಲಪತಿ ಮತ್ತು ಕೆ.ಶಿವಶಂಕರೆಡ್ಡಿ
ಜೆಡಿಎಸ್ ಜಿಲ್ಲಾ ಮುಖಂಡ ಹಾಗೂ ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಅವರು ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರವನ್ನು ನೀಡಿ ಶುಭ ಹಾರೈಸಿದರಲ್ಲದೆ, ತಾಲೂಕು ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕೆಂದು ಸೂಚಿಸಿದರು.