by GS Bharath Gudibande
ಗುಡಿಬಂಡೆ: ತಾಲೂಕು ಪೊಲೀಸ್ ಠಾಣೆಯನ್ನು ಜನಸ್ನೇಹಿಯಾಗಿ ರೂಪಿಸಿ, ಸುತ್ತಮುತ್ತ ಪರಿಸರಕ್ಕೆ ಹೆಚ್ಚು ಒತ್ತು ನೀಡಿರುವ ಇಲ್ಲಿನ ಆರಕ್ಷಕ ವೃತ್ತ ನೀರೀಕ್ಷಕ ಲಿಂಗರಾಜು ಅವರ ಕೆಲಸವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಪೊಲೀಸ್ ಠಾಣೆಯ ಗಾರ್ಡನ್ʼನಲ್ಲಿ ಓಡಾಡಿದ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡಿದರು.
ಠಾಣೆಯ ಸುತ್ತ ಹಚ್ಚ ಹಸಿರಿನಿಂದಿರುವ ಹುಲ್ಲಿನ ಹಾಸಿಗೆ, ನೆಮ್ಮದಿಯ ವಾತಾವರಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಹಾಸನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಸಿ ಠಾಣೆಯ ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಕಟ್ಟಡ ನವೀಕರಿಸಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಪೊಲೀಸರು ಎಂದರೆ ಬರೀ ಕೇಸು ದಾಖಲಿಸುವುದು, ಎಫ್‌ಐಆರ್ ಹಾಕುವುದು ಅಥವಾ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲ. ಇಂಥ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ನಮ್ಮ ಲಿಂಗರಾಜು ಅವರು ಗುಡಿಬಂಡೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇದು ಎಲ್ಲರಿಗೂ ಮಾದರಿ ಎಂದು ಶಾಸಕರು ಹೇಳಿದರು.
ಗುಡಿಬಂಡೆ ಪೊಲೀಸ್ ಠಾಣೆಯ ಹಳೆಯ ಚಿತ್ರಣ ಬದಲಿಸಿ, ನವೀಕರಿಸಿರುವುದು ಅತ್ಯಂತ ಸ್ವಾಗತಾರ್ಹ ಕೆಲಸ. ಇವರ ಸಮಾಜಮುಖಿ ಕಾರ್ಯಕ್ಕೆ ತಾಲೂಕಿನ ಜನತೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ.
-ನವೀನ್ ಕುಮಾರ್, ಸದಸ್ಯರು ಆರೋಗ್ಯ ರಕ್ಷಾಸಮಿತಿ ಗುಡಿಬಂಡೆ
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..