ಎಸ್.ಟಿ.ಸೋಮಶೇಖರ್, ಆನಂದ ಸಿಂಗ್ಗೆ ಎರಡೆರಡು ಜಿಲ್ಲೆಗಳ ಜಾಕ್ಪಾಟ್
ಬೆಂಗಳೂರು: ಸಚಿವರು ಪ್ರಮಾಣ ಸ್ವೀಕಾರ ಮಾಡಿದ ಮೇಲೆ ಖಾತೆ ಹಂಚಿಕೆ ಮಾಡುವ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಹೋದ್ಯೋಗಿಗಳಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ ಮಾಡಿದ್ದಾರೆ.
ಡಾ.ಕೆ.ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಉಸ್ತುವಾರಿಯನ್ನೇ ಪುನಾ ನೀಡಲಾಗಿದ್ದು, ನೂತನ ಸಚಿವ ಮುನಿರತ್ನ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಕೊಡಲಾಗಿದೆ. ಈ ನೇಕ ಪ್ರವಾಹ ಮತ್ತು ಕೋವಿಡ್ ಉಸ್ತುವಾರಿಗೆ ಮಾತ್ರ ಸೀಮಿತವಾ ಅಥವಾ ಮುಂದುವರಿಯುತ್ತದಾ ಎಂಬುದನ್ನು ತಿಳಿಸಲಾಗಿಲ್ಲ.
ಯಡಿಯೂರಪ್ಪ ಸರಕಾರದಲ್ಲಿ ಕೋಲಾರ ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ಕೆಲ ಕಾಲ ಅಂದು ಸಚಿವರಾಗಿದ್ದ ನಾಗೇಶ್ ಹೊಂದಿದ್ದರು. ಅವರ ನಂತರ ಸ್ವಲ್ಪ ದಿನ ಎಂಟಿಬಿ ನಾಗರಾಜ್ ಉಸ್ತುವಾರಿ ಸಚಿವರಾಗಿದ್ದರು. ಆದರೆ, ಕೋವಿಡ್ ಎರಡನೇ ಅಲೆ ಉಗ್ರರೂಪ ತಾಳಿ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದರೂ ಎಂಟಿಬಿ ಮಾತ್ರ ಜಿಲ್ಲೆಗೆ ಕಾಲಿಟ್ಟಿರಲಿಲ್ಲ. ಬಳಿಕ ಅರವಿಂದ ಲಿಂಬಾವಳಿ ಅವರಿಗೆ ಉಸ್ತುವಾರಿ ವಹಿಸಲಾಗಿತ್ತು. ಅವರೂ ಒಂದೆರಡು ಸಲವಷ್ಟೇ ಕೋಲಾರ ಜಿಲ್ಲೆಗೆ ಬಂದಿದ್ದರು. ಇನ್ನು, ಈಗ ಉಸ್ತುವಾರಿಯಾಗಿ ನೇಮಕವಾಗಿರುವ ಮುನಿರತ್ನ ಅವರು ಕೋಲಾರಕ್ಕೆ ಸಕ್ರಿಯವಾಗಿ ಬರುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಈ ಪಟ್ಟಿಯಲ್ಲಿ ವಿಶೇಷವೆಂದರೆ ಆನಂದ ಸಿಂಗ್ ಅವರಿಗೆ ಬಳ್ಳಾರಿ ಹಾಗೂ ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಅದೇ ರೀತಿ ಎಸ್.ಟಿ.ಸೋಮಶೇಖರ್ ಅವರಿಗೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಹೊಣೆ ಕೊಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ..
ಗೋವಿಂದ ಎಂ.ಕಾರಜೋಳ: ಬೆಳಗಾವಿ
ಕೆ.ಎಸ್. ಈಶ್ವರಪ್ಪ:ಶಿವಮೊಗ್ಗ
ಆರ್.ಅಶೋಕ್:ಬೆಂಗಳೂರು ನಗರ
ಬಿ.ಶ್ರೀರಾಮುಲು: ಚಿತ್ರದುರ್ಗ
ವಿ.ಸೋಮಣ್ಣ: ರಾಯಚೂರು
ಉಮೇಶ್ ಕತ್ತಿ: ಬಾಗಲಕೋಟೆ
ಎಸ್.ಅಂಗಾರ: ದಕ್ಷಿಣ ಕನ್ನಡ
ಜೆ.ಸಿ.ಮಾಧುಸ್ವಾಮಿ: ತುಮಕೂರು
ಅರಗ ಜ್ಞಾನೇಂದ್ರ: ಚಿಕ್ಕಮಗಳೂರು
ಡಾ.ಸಿ.ಎನ್.ಅಶ್ವತ್ಥನಾರಾಯಣ: ರಾಮನಗರ
ಸಿ.ಸಿ.ಪಾಟೀಲ: ಗದಗ
ಆನಂದ ಸಿಂಗ್: ಬಳ್ಳಾರಿ & ವಿಜಯನಗರ
ಕೋಟಾ ಶ್ರೀನಿವಾಸ ಪೂಜಾರಿ: ಕೊಡಗು
ಪ್ರಭು ಚೌಹಾಣ್: ಬೀದರ್
ಮುರುಗೇಶ್ ನಿರಾಣಿ: ಕಲಬುರಗಿ
ಶಿವರಾಮ್ ಹೆಬ್ಬಾರ್: ಉತ್ತರ ಕನ್ನಡ
ಎಸ್.ಟಿ.ಸೋಮಶೇಖರ್: ಮೈಸೂರು-ಚಾಮರಾಜನಗರ
ಬಿ.ಸಿ.ಪಾಟೀಲ್: ಹಾವೇರಿ
ಭೈರತಿ ಬಸವರಾಜ್: ದಾವಣಗೆರೆ
ಡಾ.ಕೆ.ಸುಧಾಕರ್: ಚಿಕ್ಕಬಳ್ಳಾಪುರ
ಕೆ.ಗೋಪಾಲಯ್ಯ: ಹಾಸನ
ಶಶಿಕಲಾ ಜೊಲ್ಲೆ: ವಿಜಯಪುರ
ಎಂಟಿಬಿ ನಾಗರಾಜ್: ಬೆಂಗಳೂರು ಗ್ರಾಮಾಂತರ
ಕೆ.ಸಿ.ನಾರಾಯಣ ಗೌಡ: ಮಂಡ್ಯ
ಬಿ.ಸಿ.ನಾಗೇಶ್: ಯಾದಗಿರಿ
ಸುನೀಲ್ ಕುಮಾರ್: ಉಡುಪಿ
ಹಾಲಪ್ಪ ಆಚಾರ್: ಕೊಪ್ಪಳ
ಶಂಕರ ಪಾಟೀಲ್ ಮುನೇನಕೊಪ್ಪ: ಧಾರವಾಡ
ಮುನಿರತ್ನ: ಕೋಲಾರ