• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಜಲ ಸಂಪನ್ಮೂಲದ ಸಿಕ್ಕು ಬಿಡಿಸಿ ಖಾತೆ ಹಂಚಿದ ಬೊಮ್ಮಾಯಿ

P K Channakrishna by P K Channakrishna
August 7, 2021
in STATE
Reading Time: 2 mins read
0
ದೇವರ ಹೆಸರಿನಲ್ಲಿ ಬೊಮ್ಮಾಯಿ ಪ್ರಮಾಣ
987
VIEWS
FacebookTwitterWhatsuplinkedinEmail

ಬೊಮ್ಮಾಯಿ ಬ್ರಿಗೇಡ್‌ನಲ್ಲಿ ಮೂಲನಿವಾಸಿಗಳಿಗೆ ಬಂಪರ್‌; ವಲಸಿಗರಿಗೆ ನಿರಾಶೆ ಇಲ್ಲ; ಹಳಬರಿಗೂ ಬೇಸರವಿಲ್ಲ

ಬೆಂಗಳೂರು: ಜಲ ಸಂಪನ್ಮೂಲ ಖಾತೆ ಕಾರಣಕ್ಕೆ ಜಟಿಲವಾಗಿದ್ದ ಖಾತೆ ಹಂಚಿಕೆ ಸಿಕ್ಕು ಬಗೆಹರಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊನೆಗೂ ಶನಿವಾರ ಮಧ್ಯಾಹ್ನಕ್ಕೆ ಮುನ್ನವೇ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ಜಲ ಸಂಪನ್ಮೂಲ, ಲೋಕೋಪಯೋಗಿ ಸೇರಿ ಬಂಪರ್‌ ಖಾತೆಗಳನ್ನು ತಮ್ಮ ಕಟ್ಟಾ ಬೆಂಬಲಿಗರಿಗೆ ಕೊಡಿಸುವಲ್ಲಿ ಬಿಜೆಪಿ ʼಸೂಪರ್‌ಪವರ್‌ʼ ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದು, ಅದೇ ರೀತಿ ಪ್ರಬಲ ಖಾತೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಸಂಘ ಪರಿವಾರವೂ ಸಕ್ಸಸ್‌ ಆಗಿದೆ.

ಖಾತೆಗಳ ಹಂಚಿಕೆಯಲ್ಲಿ ಹೈಕಮಾಂಡ್‌, ಸಂಘ ಪರಿವಾರ ಮತ್ತು ಸೂಪರ್‌ ಪವರ್‌ ಜತೆ ಹಗ್ಗಜಗ್ಗಾಟಕ್ಕೆ ಇಳಿಯದೇ ಜಾಣ್ಮೆಯಿಂದ ಬ್ಯಾಲೆನ್ಸ್‌ ಮಾಡಿರುವ ಬೊಮ್ಮಾಯಿ ಅವರು, ಎಲ್ಲ ಸಚಿವರಿಗೂ ʼಸಹಜ ಖಾತೆ ನ್ಯಾಯʼ ಮಾಡಿದ್ದಾರೆ. ಆದರೆ, ಪಕ್ಷದ ಹೊಸಬರಿಗೆ ಹೋಗಿರುವ ಪ್ರಬಲ ಖಾತೆಗಳ ಬಗ್ಗೆ ಕೆಲ ಸೀನಿಯರುಗಳಲ್ಲಿ ಅಪಸ್ವರ ಕೇಳಿಬರುತ್ತಿದೆ. ಇದಕ್ಕೆ ಕಿಮ್ಮತ್ತು ಸಿಗುವ ಸಾಧ್ಯತೆ ಕಡಿಮೆ.

ಇನ್ನು ಸಂಪುಟಕ್ಕೆ ಸೇರುವುದರಿಂದ ಮೊದಲುಗೊಂಡು ಬೇಕಾದ ಖಾತೆಗಳನ್ನೇ ಪಡೆಯುವ ತನಕ ಒತ್ತಡ ತಂತ್ರವನ್ನು ಅನುಸರಿಸಿದ್ದ ವಲಸಿಗರು, ಕೊನೆಗೂ ತಮ್ಮ ಪಟ್ಟು ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಯಡಿಯೂರಪ್ಪ ಸಂಪುಟದಲ್ಲಿದ್ದವರಿಗೆ ಬಹತೇಕ ಅದೇ ಖಾತೆಗಳನ್ನು ನೀಡಿದ್ದರೆ, ಹೊಸದಾಗಿ ಸಂಪುಟಕ್ಕೆ ಸೇರಿದ್ದವರಿಗೆ ಭರ್ಜರಿ ಲಾಟರಿ ಹೊಡೆದಿದೆ.

ಇದರಲ್ಲಿ ಪ್ರಮುಖವಾಗಿ ಕಾರ್ಕಳದ ವಿ.ಸುನೀಲ್‌ ಕುಮಾರ್‌ ಅವರಿಗೆ ಪ್ರಬಲವಾದ ಇಂಧನ ಖಾತೆಯ ಜತೆಗೆ ಕನ್ನಡ ಸಂಸ್ಕೃತಿಯನ್ನೂ ಕೊಡಲಾಗಿದೆ. ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ ಅವರಿಗೆ ಸಂಪುಟದಲ್ಲಿ ನಂ. 2 ಸ್ಥಾನದ ಖಾತೆಯಾದ ಗೃಹ ವಹಿಸಲಾಗಿದೆ. ಅಂದರೆ, ಸೀನಿಯರ್‌ಗಳನ್ನು ಬದಿಗಿಟ್ಟು ಹೊಸಬರಿಗೆ ಶಕ್ತಿ ತುಂಬಲಾಗಿದೆ.

ಇನ್ನು, ಒಟ್ಟು 29 ಸಚಿವರ ಪೈಕಿ 15 ಸಚಿವರಿಗೆ ಹಿಂದಿನ ಸಂಪುಟದಲ್ಲಿ ನಿರ್ವಹಿಸಿದ್ದ ಖಾತೆಗಳನ್ನೇ ನೀಡಲಾಗಿದ್ದು, 7 ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ, ಅರಗ ಜ್ಞಾನೇಂದ್ರ ಮತ್ತು ಸುನೀಲ್‌ ಕುಮಾರ್‌ ಅವರಿಬ್ಬರಿಗೆ ಹಂಚಿಕೆಯಾಗಿರುವ ಖಾತೆಗಳ ಬಗ್ಗೆ ಎಲ್ಲಡೆ ಅಚ್ಚರಿಯಾಗಿದ್ದು, ಅದರಲ್ಲೂ ಗೃಹ ಖಾತೆಯನ್ನು ಹಿರಿಯ, ಅನುಭವಿಗಳನ್ನು ಪಕ್ಕಕ್ಕಿಟ್ಟು ಅರಗ ಜ್ಞಾನೇಂದ್ರಗೆ ನೀಡಲಾಗಿದೆ.

ಉಳಿದಂತೆ ಸಂಪುಟದಲ್ಲಿ ವಲಸಿಗರಿಗೆ ಹಿಂದಿನ ಸಂಪುಟದಲ್ಲಿದ್ದ ಖಾತೆಗಳನ್ನೇ ನೀಡಲಾಗಿದೆ. ಅವರ ಮನವಿಯಂತೆ ಹಳೆಯ ಖಾತೆಗಳನ್ನೇ ಕೊಡಲಾಗಿದೆ ಎಂದು ಹೇಳಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಮತ್ತು ಗೃಹ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಆರ್.‌ಅಶೋಕ್‌ ಅವರಿಗೆ ಹಿಂದಿನ ಸಂಪುಟದಲ್ಲಿ ಹೊಂದಿದ್ದ ಕಂದಾಯ ಇಲಾಖೆಯನ್ನೇ ನೀಡಲಾಗಿದೆ.

ಇದ್ಲದೆ, ಹೊಸದಾಗಿ ಸಂಪುಟಕ್ಕೆ ಸೇರಿದ್ದ ಶಂಕರ ಮುನೇನಕೊಪ್ಪ, ಹಾಲಪ್ಪ ಆಚಾರ್‌, ಬಿ.ಸಿ.ನಾಗೇಶ್ ಅವರಿಗೂ‌ ಮಹತ್ವದ ಖಾತೆಗಳನ್ನೇ ಹಂಚಿಕೆ ಮಾಡಲಾಗಿದೆ.

ಅಲ್ಲದೆ, ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಜಲ ಸಂಪನ್ಮೂಲ ಖಾತೆಯನ್ನು ಹಿರಿಯರಾದ ಗೋವಿಂದ ಕಾರಜೋಳ ಅವರಿಗೇ ನೀಡಲಾಗಿದೆ. ಅವರು ಬಿಎಸ್‌ವೈ ಸಂಪುಟದಲ್ಲಿ ಲೊಕೋಪಯೋಗಿ ಇಲಾಖೆ ಹೊಂದಿದ್ದರು. ಇನ್ನು, ಹಿಂದಿನ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರಿಗೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಖಾತೆಗಳನ್ನೇ ಈ ಸಂಪುಟದಲ್ಲೂ ಮುಂದುವರಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಭಾರೀ ಡಿಮಾಂಡ್‌ ಇತ್ತು. ಅದಕ್ಕಾಗಿ ಬೆಂಗಳೂರು ಮೂಲದ ಸಚಿವರು ಭಾರೀ ಪೈಪೋಟಿ ನಡೆಸಿದ್ದರು. ರಗಳೆ ಬೇಡವೆಂಬ ನಿರ್ಧಾರಕ್ಕೆ ಬಂದ ಅವರು ಆ ಖಾತೆಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.

ಇನ್ನು, ಮುಖ್ಯಮಂತ್ರಿಯೇ ಹಣಕಾಸು ಇಲಾಖೆಯನ್ನು ಇಟ್ಟುಕೊಳ್ಳುವ ಕೆಟ್ಟ ಪರಂಪರೆ ಈ ಸಂಪುಟದಲ್ಲೂ ಮುಂದುವರಿದಿದೆ. ಎಸ್.‌ಎಂ.ಕೃಷ್ಣ ನಂತರದ ಕಾಲದಲ್ಲಿ ಹಣಕಾಸು ಇಲಾಖೆ ಸ್ವತಂತ್ರ ಸಚಿವರನ್ನು ನೋಡಿಲ್ಲ.ಇನ್ನು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊಂದಿದ್ದ ಸಾರಿಗೆ ಇಲಾಖೆಯನ್ನು ಈ ಬಾರಿ ಬಿ.ಶ್ರೀರಾಮುಲು ಅವರಿಗೆ ಕೊಡಲಾಗಿದೆ. ಭಾರೀ ಅನುದಾನವಿದ್ದ, ಅವರಿಗೆ ಬಹಳ ಇಷ್ಟವಾದ ಸಮಾಜ ಕಲ್ಯಾಣವನ್ನು ಕಿತ್ತುಕೊಳ್ಳಲಾಗಿದೆ.

ಖಾತೆಗಳ ಹಂಚಿಕೆಯಲ್ಲಿ ಸಂಘ ಪರಿವಾರ, ಯಡಿಯೂರಪ್ಪ, ವಲಸಿಗರು, ವರಿಷ್ಠರು ಸೇರಿ ಎಲ್ಲ ಅಂಶಗಳನ್ನು ಬ್ಯಾಲೆನ್ಸ್‌ ಮಾಡಿರುವ ಬಸವರಾಜ ಬೊಮ್ಮಾಯಿ ಅವರು ಜಾಣ ನಡೆ ಅನುಸರಿಸಿದ್ದಾರೆ ಎನ್ನಬಹುದು.

ಜಲ ಸಂಪನ್ಮೂಲ; ಹಲವು ಅನುಮಾನ

ಭಾರೀ ಅನುದಾನವುಳ್ಳ ಜಲ ಸಂಪನ್ಮೂಲ ಖಾತೆ ಹಿಂದಿನ ಸಂಪುಟದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿಯೇ ಇತ್ತು. ಕಾವೇರಿ ನೀರಾವರಿ ನಿಗಮ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಹಣಕಾಸು ಇಲಾಖೆಯ ಕ್ಲಿಯೆರೆನ್ಸ್‌ ಇಲ್ಲದೆ, ಬೋರ್ಡ್‌ ಮೀಟಿಂಗ್‌ಗಳನ್ನೂ ನಡೆಸದೇ ವಿಜಯೇಂದ್ರ ಸೂಚನೆ ಮೇರೆಗೆ 20,000 ಕೋಟಿ ರೂ. ಟೆಂಡರ್‌ ಅಂತಿಮಗೊಳಿಸಲಾಗಿದ್ದು, ಇದರಲ್ಲಿ ಸಾವಿರಾರು ಕೋಟಿ ರೂ. ಕಿಕ್‌ಬ್ಯಾಕ್‌ ವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಹೆಚ್.ವಿಶ್ವನಾಥ್‌ ಆರೋಪಿಸಿದ್ದರು.

ಈಗ ಈ ಖಾತೆ ಯಡಿಯೂರಪ್ಪ ಅವರ ನಿಷ್ಠರಾದ ಗೋವಿಂದ ಕಾರಜೋಳ ಅವರಿಗೆ ನೀಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ನಿರಾವರಿ ಟೆಂಡರ್‌ಗಳ ಬಗ್ಗೆ ವಿಶ್ವನಾಥ್‌ ಅವರು ದಾಖಲೆಗಳ ಸಮೇತ ಆರೋಪ ಮಾಡಿದ್ದರು. ಅಲ್ಲದೆ, ಕಾಂಗ್ರೆಸ್‌ ಕೂಡ ಆರೋಪಿಸಿ, ಆ ಟೆಂಡರ್‌ ಮೊತ್ತ 20,000 ಕೋಟಿ ರೂ.ಗಳಲ್ಲ, 21,764 ಕೋಟಿ ರೂ. ಟೆಂಡರ್‌ ಎಂದಿತ್ತು. ಅಂದರೆ, ವಿಶ್ವನಾಥ್‌ ಹೇಳಿದ್ದಕ್ಕಿಂತ 1,764 ಕೋಟಿ ರೂ. ಹೆಚ್ಚು ಎಂದು ಹೊಸ ಅಂಕಿ-ಅಂಶ ನೀಡಿತ್ತು.

ಇಡೀ ಟೆಂಡರ್‌ನಲ್ಲಿ 10% ಕಮೀಷನ್‌ ವ್ಯವಹಾರ ನಡೆದಿದೆ ಎಂದು ವಿಶ್ವನಾಥ್‌ ದೂರಿದ್ದರೆ, 2,100 ಕೋಟಿ ರೂ. ಬರೀ ಕಮೀಷನ್‌ ವ್ಯವಹಾರವೇ ನಡೆದಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು

ಇದೇ ವೇಳೆ ತಮಗೆ ಸಿಕ್ಕಿರುವ ಖಾತೆಗಳ ಬಗ್ಗೆ ಸಚಿವರಾದ ಗೋವಿಂದ ಕಾರಜೋಳ, ಸಿಸಿ ಪಾಟೀಲ್‌, ಅರಗ ಜ್ಞಾನೇಂದ್ರ, ಸುನೀಲ್‌ ಕುಮಾರ್‌ ಮುಂತಾದವರು ಹರ್ಷ ವ್ಯಕ್ತಪಡಿಸಿದ್ದಾರೆ.

  • ಜಲ ಸಂಪನ್ಮೂಲ ಜಟಿಲತೆ ಏನು? ವಿಶ್ವನಾಥ್‌ ಹೇಳಿದ್ದೇನು? ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ..
ನೀರಾವರಿ ಟೆಂಡರ್‌ ಮೊತ್ತ 20,000 ಕೋಟಿ ಅಲ್ಲ! 21,764 ಕೋಟಿ ರೂ. ಅಂತೆ!? ಹಾಗಾದರೆ ಟೋಟಲ್‌ ಕಮೀಷನ್‌ ಲೆಕ್ಕ ಎಷ್ಟು?

ಯಾರಿಗೆ ಯಾವ ಖಾತೆ?

1.ಬಸವರಾಜ ಬೊಮ್ಮಾಯಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ನಗರಾಭಿವೃದ್ಧಿ ಹಾಗೂ ಯಾರಿಗೂ ಹಂಚದಿರುವ ಎಲ್ಲ ಖಾತೆಗಳು

2.ಗೋವಿಂದ ಕಾರಜೋಳ: ಜಲ ಸಂಪನ್ಮೂಲ, ಭಾರೀ ಮತ್ತು ಮಧ್ಯಮ ನೀರಾವರಿ
3.ಕೆ.ಎಸ್.‌ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
4.ಆರ್.‌ಅಶೋಕ್:‌ ಕಂದಾಯ
5.ಬಿ.ಶ್ರೀರಾಮುಲು: ಸಾರಿಗೆ
6.ವಿ.ಸೋಮಣ್ಣ: ವಸತಿ, ಮೂಲಸೌಕರ್ಯ ಅಭಿವೃದ್ಧಿ
7.ಉಮೇಶ ಕತ್ತಿ: ಅರಣ್ಯ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ
8.ಎಸ್.‌ಅಂಗಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
9.ಜೆ.ಸಿ.ಮಾಧುಸ್ವಾಮಿ: ಸಣ್ಣ ನೀರಾವರಿ ಮತ್ತು ಕಾನೂನು-ಸಂಸದೀಯ ವ್ಯವಹಾರ
10.ಅರಗ ಜ್ಞಾನೇಂದ್ರ: ಗೃಹ
11.ಡಾ.ಸಿ.ಎನ್.‌ಅಶ್ವತ್ಥನಾರಾಯಣ: ಉನ್ನತ ಶೀಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ
12.ಸಿ.ಸಿ.ಪಾಟೀಲ್:‌ ಲೋಕೋಪಯೋಗಿ
13.ಆನಂದ್‌ ಸಿಂಗ್:‌ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ
14.ಕೋಟಾ ಶ್ರೀನಿವಾಸ ಪೂಜಾರಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ
15.ಪ್ರಭು ಚೌಹಾಣ್:‌ ಪಶು ಸಂಗೋಪನೆ
16.ಮುರುಗೇಶ್‌ ನಿರಾಣಿ: ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ
17.ಶಿವರಾಮ್‌ ಹೆಬ್ಬಾರ್:‌ ಕಾರ್ಮಿಕ
18.ಎಸ್.ಟಿ.ಸೋಮಶೇಖರ್:‌ ಸಹಕಾರ
19.ಬಿ.ಸಿ.ಪಾಟೀಲ್:‌ ಕೃಷಿ
20.ಭೈರತಿ ಬಸವರಾಜ್:‌ ನಗರಾಭಿವೃದ್ಧಿ (ಬೆಂಗಳೂರು ಹೊರತುಪಡಿಸಿ)
21.ಡಾ.ಕೆ.ಸುಧಾಕರ್:‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
22.ಕೆ.ಗೋಪಾಲಯ್ಯ: ಅಬಕಾರಿ
23.ಶಶಿಕಲಾ ಜೊಲ್ಲೆ: ಮುಜಾರಾಯಿ, ಹಜ್‌-ವಕ್ಫ್‌
24.ಎಂಟಿಬಿ ನಾಗರಾಜು: ಪೌರಾಡಳಿತ ಮತ್ತು ಸಣ್ಣ-ಸಾರ್ವಜನಿಕ ವಲಯದ ಕೈಗಾರಿಕೆ
25.ಡಾ.ಕೆ.ಸಿ.ನಾರಾಯಣ ಗೌಡ: ರೇಷ್ಮೆ, ಯುವಜನ ಸಬಲೀಕರಣ ಮತ್ತು ಕ್ರೀಡೆ
26.ಬಿ.ಸಿ.ನಾಗೇಶ್:‌ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ & ಸಕಾಲ
27.ವಿ.ಸುನೀಲ್‌ ಕುಮಾರ್:‌ ಇಂಧನ & ಕನ್ನಡ-ಸಂಸ್ಕೃತಿ
28.ಹಾಲಪ್ಪ ಆಚಾರ್:‌ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ
29.ಶಂಕರ ಪಾಟೀಲ್‌ ಮುನೇನಕೊಪ್ಪ: ಜವಳಿ,
30.ಮುನಿರತ್ನ: ತೋಟಗಾರಿಕೆ, ಯೋಜನೆ & ಸಾಂಖಿಕ

ರಾಜ್ಯ ಸರಕಾರದ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿ ಮಾನ್ಯ ರಾಜ್ಯಪಾಲರು ಆದೇಶಹೊರಡಿಸಿದ್ದು, ಎಲ್ಲ ಸಚಿವರುಗಳಿಗೆ ಅಭಿನಂದನೆಗಳು. pic.twitter.com/FoYuW5a1eQ

— Basavaraj S Bommai (Modi Ka Parivar) (@BSBommai) August 7, 2021
Tags: bjpbs yediyurappajp naddakarnatakanew ministersportfoliosrss
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಬಾಗೇಪಲ್ಲಿ ರೈತರ ಮೇಲಿನ ಗೋಲಿಬಾರ್‌ಗೆ 41 ವರ್ಷ; ಹುತಾತ್ಮರಿಗೆ ಅಶ್ರುತರ್ಪಣ

ಬಾಗೇಪಲ್ಲಿ ರೈತರ ಮೇಲಿನ ಗೋಲಿಬಾರ್‌ಗೆ 41 ವರ್ಷ; ಹುತಾತ್ಮರಿಗೆ ಅಶ್ರುತರ್ಪಣ

Leave a Reply Cancel reply

Your email address will not be published. Required fields are marked *

Recommended

ಕರ್ನಾಟಕ ಭಾರತದ ಬಯೋಟೆಕ್ನಾಲಜಿ ರಾಜಧಾನಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕರ್ನಾಟಕ ಭಾರತದ ಬಯೋಟೆಕ್ನಾಲಜಿ ರಾಜಧಾನಿ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

5 years ago
ದಿನ 2: ಸಿಇಟಿ ಪರೀಕ್ಷೆ ಸುಖಾಂತ್ಯ

ಸಿಇಟಿ ಕೌನ್ಸೆಲಿಂಗ್: ಜನವರಿ 15ರವರೆಗೆ ಕಾಲಾವಕಾಶ ನೀಡುವಂತೆ ಕೋರಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿಗೆ ಪತ್ರ ಬರೆದ ಸರಕಾರ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ