• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NEWS IN USE

ಈ ವರ್ಷವೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ; ಮೊದಲ ದಿನವೇ ಆದೇಶಕ್ಕೆ ಸಹಿ ಹಾಕಿದ ಡಾ.ಸಿ.ಎನ್.‌ಅಶ್ವತ್ಥನಾರಾಯಣ

cknewsnow desk by cknewsnow desk
August 7, 2021
in NEWS IN USE, STATE
Reading Time: 2 mins read
1
ಈ ವರ್ಷವೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ; ಮೊದಲ ದಿನವೇ ಆದೇಶಕ್ಕೆ ಸಹಿ ಹಾಕಿದ ಡಾ.ಸಿ.ಎನ್.‌ಅಶ್ವತ್ಥನಾರಾಯಣ
1k
VIEWS
FacebookTwitterWhatsuplinkedinEmail

ಕರ್ನಾಟಕದ ಶಿಕ್ಷಣದಲ್ಲಿ ಹೊಸ ಮನ್ವಂತರ ಆರಂಭ

ಬೆಂಗಳೂರು: ನೂತನ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ, ಐಟ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2021-22ನೇ ಸಾಲಿನಿಂದಲೇ ಜಾರಿ ಮಾಡುವ ಆದೇಶಕ್ಕೆ ಸಹಿ ಹಾಕಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ಹಾಗೂ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌ ಜತೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆದೇಶ ಹೊರಡಿಸುವ ಮುನ್ನ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಚರ್ಚೆ ನಡೆಸಿದರು.

ಇದು ದೇಶದಲ್ಲೇ ಕರ್ನಾಟಕ ರಾಜ್ಯವು ಮೊದಲನೆಯದಾಗಿ ಅನುಷ್ಠಾನಗೊಳಿಸುತ್ತಿರುವುದಾಗಿದೆ.

ತಮ್ಮ ಗೃಹ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್‌ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಮುಂತಾದ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಈ ಆದೇಶಕ್ಕೆ ಅಸ್ತು ಎಂದರು.

ಅಲ್ಲದೆ, ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿರುವ ಪಿಯುಸಿ ಕಾಲೇಜು ಆವರಣದಲ್ಲಿ ನೂತನ ಮಹಿಳಾ ಪದವಿ ಕಾಲೇಜು ಆರಂಭಿಸುವ ಮತ್ತೊಂದು ಆದೇಶಕ್ಕೂ ಡಾ.ಅಶ್ವತ್ಥನಾರಾಯಣ ಸಹಿ ಹಾಕಿದರು.

ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಅವರು, “ಉನ್ನತ ಶಿಕ್ಷಣ ಕೇತ್ರದಲ್ಲಿ ಈ ಹಿಂದೆ ಕೈಗೊಳ್ಳಲಾಗಿದ್ದ ಎಲ್ಲ ಸುಧಾರಣಾ ಕ್ರಮಗಳು ಮುಂದುವರಿಯುತ್ತವೆ ಹಾಗೂ ವೇಗವಾಗಿ ಅನುಷ್ಠಾನಕ್ಕೆ ಬರುತ್ತಿವೆ. ಅದರಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆದೇಶ ಹೊರಡಿಸಲಾಗಿದೆ” ಎಂದರು.

https://twitter.com/drashwathcn/status/1424030199927107585
  • ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಅವುಗಳ ಬಗ್ಗೆ ಡಾ.ಅಶ್ವತ್ಥನಾರಾಯಣ ಅವರು ವಿವರಿಸಿದ್ದು ಹೀಗೆ;
  1. ಪ್ರಸಕ್ತ ವರ್ಷಕ್ಕೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಿ.ಎ. ಅಥವಾ ಬಿ.ಎಸ್ಸಿ ಪದವಿ ಅಧ್ಯಯನಕ್ಕೆ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಎರಡು ವಿಷಯಗಳನ್ನು (Discipline Core)  ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೂರನೇ ವರ್ಷದ ಆರಂಭದಲ್ಲಿ ಒಂದು ವಿಷಯವನ್ನು ಮೇಜರ್‌ ಆಗಿಯೂ, ಇನ್ನೊಂದು ವಿಷಯವನ್ನು ಮೈನರ್‌ ವಿಷಯವನ್ನಾಗಿಯೂ ಅಥವಾ ಎರಡೂ ವಿಷಯಗಳನ್ನು ಮೇಜರ್‌ ಆಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ಅವಕಾಶವಿದೆ.
  2. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಎರಡು ವಿಷಯಗಳ (Discipline Core) ಜತೆಗೆ, ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯವನ್ನು, ಪ್ರೋಗ್ರಾಮ್‌ ವಿನ್ಯಾಸಕ್ಕೆ (Curriculum  Structure) ಅನುಗುಣವಾಗಿ ಮುಕ್ತ ಆಯ್ಕೆಗಳು (Open Electives) ಮತ್ತು ಬಹುಶಿಸ್ತೀಯ ಆಯ್ಕೆಗಳನ್ನು (Discipline Electives) ಮಾಡಿಕೊಳ್ಳಬೇಕು. ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ ಅಥವಾ ಕನ್ನಡ ಮಾತೃ ಭಾಷೆಯಲ್ಲದವರಿಗೆ ಕನ್ನಡದ ಬೇರೆ ಪಠ್ಯಕ್ರಮ ರೂಪಿಸಿ ಬೋಧಿಸಲು ಅವಕಾಶ ನೀಡಲಾಗಿದ್ದು, ಮಾತೃಭಾಷೆ ಕಲಿಕೆಗೆ ಹೆಚ್ಚು ಮಹತ್ವ ನೀಡಲಾಗಿದೆ.
  3. ವಿಷಯಾಧಾರಿತ ಪದವಿ ಅಧ್ಯಯನಗಳಿಗೆ (B.Com, BCA, BBA, BVA, BPA, etc.) ಸಂಬಂಧಪಟ್ಟ ಹಾಗೆ ವಿಷಯಗಳನ್ನು ಬಹಶಿಸ್ತೀಯ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ, ಅವರು ಕನ್ನಡ ಹಾಗೂ ಮತ್ತೊಂದು ಭಾಷೆ ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಮುಕ್ತ ಆಯ್ಕೆಗಳನ್ನು ಮತ್ತು ಬಹಶಿಸ್ತೀಯ ಆಯ್ಕೆಗಳನ್ನು ಮಾಡಿಕೊಳ್ಳಬೇಕು.
  4. ವಿದ್ಯಾರ್ಥಿಯು ಪ್ರಥಮ ವರ್ಷದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 5ನೇ ಹಂತದ (National Skills Qualifications Framework Level 5) ನಿಗಧಿತ ಪಠ್ಯವನ್ನು ಅಧ್ಯಯನ ಮಾಡಿ, ಅವಶ್ಯಕ ಅಂಕಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಪ್ರಮಾಣ ಪತ್ರವನ್ನು ನೀಡಬೇಕು.
  5. ವಿದ್ಯಾರ್ಥಿಯು ಎರಡನೇ ವರ್ಷದ ಅಧ್ಯಯನವನ್ನು ಮುಂದುವರೆಸಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 6ನೇ ಹಂತದ (National Skills Qualifications Framework Level 6) ನಿಗಧಿತ ಪಠ್ಯವನ್ನು ಅಧ್ಯಯನ ಮಾಡಿ ಅವಶ್ಯಕ ಅಂಕಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಡಿಪ್ಲೋಮಾ ನೀಡಬೇಕು.
  6. ವಿದ್ಯಾರ್ಥಿಯು ಮೂರನೇ ವರ್ಷದ ಅಧ್ಯಯನವನ್ನು ಮುಂದುವರೆಸಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 3ನೇ ಹಂತದ (National Skills Qualifications Framework Level 7) ನಿಗದಿತ ಪಠ್ಯವನ್ನು ಅಧ್ಯಯನ ಮಾಡಿ ಅವಶ್ಯಕ ಅಂಕಗಳನ್ನು ಗಳಿಸಿದರೆ ಪದವಿ ನೀಡುವುದು.
  7. ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ಅಧ್ಯಯನ ಲಭ್ಯವಿದ್ದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 8ನೇ ಹಂತದ (National Skills Qualifications Framework Level 8) ಅವರು ಆಯ್ಕೆ ಮಾಡಿದ ಐಚ್ಛಿಕ ವಿಷಯಗಳ ಅಧ್ಯಯನ ಮುಂದುವರೆಸಿ ಅಧ್ಯಯನ ಪೂರ್ಣಗೊಳಿಸಿದರೆ ಸ್ನಾತಕ ಹಾನರ್ಸ್‍ ಪದವಿ ನೀಡಲಾಗುವುದು. ನಾಲ್ಕನೇ ವರ್ಷದಲ್ಲಿ ಸಂಶೋಧನೆಯು ಅಧ್ಯಯನದ ಭಾಗವಾದರೆ, ಅಂತಹ ಸ್ನಾತಕ ಹಾನರ್ಸ್‍ ಪದವೀಧರರು ನೇರವಾಗಿ ಡಾಕ್ಟರೇಟ್‍ (Ph.D) ಪದವಿ ಅಧ್ಯಯನಕ್ಕೆ ಸೇರಲು ಅರ್ಹರು.
  8. ಒಂದು ವೇಳೆ ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ಸ್ನಾತಕ ಹಾನರ್ಸ್‌ ಪದವಿ ತರಗತಿ ಲಭ್ಯವಿಲ್ಲದಿದ್ದರೆ, ವಿದ್ಯಾರ್ಥಿಯು ನಾಲ್ಕನೇ ವರ್ಷದ ಸ್ನಾತಕ ಹಾನರ್ಸ್‌ ಪದವಿಗೆ ಬೇರೊಂದು ಮಹಾವಿದ್ಯಾಲಯ ಸೇರಲು ಅವಕಾಶವಿದೆ.
  9. ಮಹಾವಿದ್ಯಾಲಯಗಳು ನಾಲ್ಕನೇ ವರ್ಷದ ಸ್ನಾತಕ ಹಾನರ್ಸ್‌ ಪದವಿ ತರಗತಿಗಳನ್ನು ನಡೆಸಲೇಬೇಕೆಂಬ ಕಡ್ಡಾಯವಿಲ್ಲ.
  10. ವಿದ್ಯಾರ್ಥಿಯು ಅಧ್ಯಯನದ ಯಾವುದೇ ಹಂತದಲ್ಲಿ ಕಾರಣಾಂತರಗಳಿಂದ ಅಧ್ಯಯನವನ್ನು ನಿಲ್ಲಿಸಿದ್ದಲ್ಲಿ, ನಂತರ ಅದೇ ಹಂತದಿಂದ ಅಧ್ಯಯನವನ್ನು ಮುಂದುವರೆಸಬಹುದು.
  11. ವಿದ್ಯಾರ್ಥಿಯು ಯಾವುದೇ ಹಂತದಲ್ಲಿ ಗಳಿಸಬೇಕಾದ credit ಗಳ ಗರಿಷ್ಠ ಶೇಕಡಾ 40% ರಷ್ಟು credit ಗಳನ್ನು, ಅಧಿಕೃತ ಆನ್‍ಲೈನ್‍ ಕೋರ್ಸ್‍ಗಳ ಮುಖಾಂತರ ಗಳಿಸಿ ತನ್ನ ಶೈಕ್ಷಣಿಕ ಖಾತೆಯಲ್ಲಿ ಜಮಾ ಮಾಡಿಕೊಳ್ಳಬಹುದು.
  12. ವಿದ್ಯಾರ್ಥಿಯು ಯಾವ ವಿಶ್ವವಿದ್ಯಾಲಯದಿಂದ ಪದವಿಗಳನ್ನು ಪಡೆಯಲು ಬಯಸುತ್ತಾನೆಯೋ, ಆ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇಕಡ 50% credit ಗಳನ್ನು ಪಡೆದುಕೊಳ್ಳಬೇಕಾಗಿರುತ್ತದೆ.
  13. ವಿದ್ಯಾರ್ಥಿಯು Discipline Core, Open Electives ಮತ್ತು Discipline Electives ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆ ವಿಷಯದ ಅಧ್ಯಯನಕ್ಕೆ ನಿಗದಿತ ಪೂರಕ ಅವಶ್ಯಕತೆಗಳನ್ನು (Pre-Requisite) ಪೂರೈಸಬೇಕಾಗುತ್ತದೆ, ಉದಾಹರಣೆಗೆ: Physics ಅಥವಾ Mathematics ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ, PUC ಅಥವಾ (10+2) ನಲ್ಲಿ ಆ ವಿಷಯಗಳನ್ನು ಅಧ್ಯಯನ ಮಾಡಿರಬೇಕು. ಒಂದು ವೇಳೆ PUC ಅಥವಾ (10+2) ನಲ್ಲಿ ಆ ವಿಷಯವನ್ನು ಅಧ್ಯಯನ ಮಾಡಿರದಿದ್ದರೆ, ಆ ವಿಷಯದಲ್ಲಿ ಅಧಿಕೃತ Prerequisite Course ಗಳನ್ನು ಅಧ್ಯಯನ ಮಾಡಿರಬೇಕಾಗುತ್ತದೆ.
  14. ವಿದ್ಯಾರ್ಥಿಗಳು ಸಮ ಸಂಖ್ಯೆಯ ಸೆಮಿಸ್ಟರ್‌ ನಂತರ ನಿರ್ಗಮಿಸಬಹುದು, ಆಗ ಮಾತ್ರ ನಿಗದಿತ Certificate, Diploma, ಸ್ನಾತಕ ಪದವಿ ಅಥವಾ ಸ್ನಾತಕ ಹಾನರ್ಸ್‌ ಪದವಿ ನೀಡಲು ಸಾಧ್ಯವಾಗುತ್ತದೆ. ಪ್ರತಿಯೊಂದು ಹಂತಕ್ಕೆ ಎರಡು ಸೆಮಿಸ್ಟರ್ ಗಳಲ್ಲಿ ನಿಗದಿಪಡಿಸಿದ ಅಧ್ಯಯನವನ್ನು ಪೂರ್ಣಗೊಳಿಸಬೇಕಾಗುತ್ತದೆ.
  15. ಬೆಸ ಸಂಖ್ಯೆಯ ಸೆಮಿಸ್ಟರ್‌ಗಳಿಗೆ ಮಾತ್ರ ಪುನರ್‌ಪ್ರವೇಶ ಪಡೆಯಬಹುದು.
  16. ಮೂರು ವರ್ಷದ ಸ್ನಾತಕ ಪದವಿ ಅಥವಾ ನಾಲ್ಕು ವರ್ಷದ ಸ್ನಾತಕ ಹಾನರ್ಸ್‌ ಪದವಿ ಜೊತೆಗೆ ಅರ್ಹ ಮಹಾವಿದ್ಯಾಲಯಗಳು ಐದು ವರ್ಷದ ಏಕೀಕೃತ ಸ್ನಾತ್ತಕೋತ್ತರ ಪದವಿಗಳನ್ನು ನಡೆಸಬಹುದು. ಆ ಸಂದರ್ಭಗಳಲ್ಲಿ ಮೂರು ಮತ್ತು ನಾಲ್ಕನೇ ವರ್ಷದ ಅಧ್ಯಯನ ಮುಗಿಸಿ ಕಾರಣಾಂತರಗಳಿಂದ ನಿರ್ಗಮಿಸಿದರೆ ಅನುಕ್ರಮವಾಗಿ ಸ್ನಾತಕ ಮತ್ತು ಸ್ನಾತಕ ಹಾನರ್ಸ್‌ ಪದವಿಗಳನ್ನು ನೀಡಬಹುದು.
  17. ಸ್ನಾತಕೋತ್ತರ ಪದವಿಗಳು ಒಂದು ಅಥವಾ ಎರಡು ವರ್ಷಗಳ ಅವಧಿಯದ್ದಾಗಿರುತ್ತವೆ. ಒಂದು ವರ್ಷದ ಸ್ನಾತಕೋತ್ತರ ಪದವಿಗೆ ಸೇರಲು ನಾಲ್ಕು ವರ್ಷದ ಸ್ನಾತಕ ಹಾನರ್ಸ್‌ ಪದವಿ ಪಡೆದ ಪದವೀದರರು ಅರ್ಹರಾಗಿರುತ್ತಾರೆ, ಹಾಗೆಯೇ ಎರಡು ವರ್ಷದ ಸ್ನಾತಕೋತ್ತರ ಪದವಿಗೆ ಸೇರಲು ಮೂರು ವರ್ಷದ ಸ್ನಾತಕ ಪದವಿ ಪಡೆದವರು ಅರ್ಹರಾಗುತ್ತಾರೆ.
  18. ಎರಡು ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ಮೊದಲನೇ ವರ್ಷದ ಆಯ್ದ ವಿಷಯಗಳಲ್ಲಿ ನಿಗದಿತ credit ಗಳನ್ನು ಗಳಿಸಿ ನಿರ್ಗಮಿಸಿದರೆ, ಸ್ನಾತಕೋತ್ತರ ಡಿಪ್ಲೋಮಾ (Post-Graduate Diploma) ನೀಡಬಹುದು.

ಮಲ್ಲೇಶ್ವರದಲ್ಲಿ ಮಹಿಳಾ ಪದವಿ ಕಾಲೇಜು

ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿರುವ ಬಾಲಕಿಯರ ಪಿಯುಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಹೊಸ ಪದವಿ ಕಾಲೇಜು ಆರಂಭಕ್ಕೂ ಇಂದೇ ಆದೇಶ ಹೊರಡಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಇಲ್ಲದೆಯೇ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಆಗಿರುವುದರಿಂದ ಹೆಚ್ಚು ಪದವಿ ಕಾಲೇಜುಗಳ ಅಗತ್ಯವಿದೆ. ಹೀಗಾಗಿ ಮಲ್ಲೇಶ್ವರದಲ್ಲಿ ಹೊಸ ಡಿಗ್ರಿ ಕಾಲೇಜು ಆರಂಭಕ್ಕೆ ಕ್ರಮ ವಹಿಸಲಾಗಿದೆ ಎಂದರು ಅವರು.

ಈ ಕಾಲೇಜನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಅಡಿಯಲ್ಲಿ ಆರಂಭಿಸಲಾಗುತ್ತಿದ್ದು, ಅಲ್ಲಿನ ಪಿಯುಸಿ ಕಾಲೇಜಿನಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿನಿಯರಿಗೆ ಅದೇ ಕ್ಯಾಂಪಸ್‌ನಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

Tags: 2021-2022dr cn ashwathnarayanhigher educationIndian educationkarnatakanepnew education policy
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಸಿಎಂ

ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಸಿಎಂ

Comments 1

  1. Pingback: ರಾಷ್ಟ್ರೀಯ ಶಿಕ್ಷಣ ನೀತಿ: ಸರಕಾರದ ಆದೇಶದ ಬೆನ್ನಲ್ಲೇ ಸಿದ್ದರಾಮಯ್ಯ ಅಪಸ್ವರ - cknewsnow

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆಯಲ್ಲಿ ಯೂರಿಯಗಾಗಿ ರಸ್ತೆಗಿಳಿದ ರೈತರು

ಗುಡಿಬಂಡೆಯಲ್ಲಿ ಯೂರಿಯಗಾಗಿ ರಸ್ತೆಗಿಳಿದ ರೈತರು

4 years ago
ಅಭ್ಯರ್ಥಿಗಳಿಗೆ ಬರ; ಬಿಜೆಪಿ ಅತೃಪ್ತರಿಗೆ ಕಾಂಗ್ರೆಸ್ ಟಿಕೆಟ್ ಭಾಗ್ಯ!

ಅಭ್ಯರ್ಥಿಗಳಿಗೆ ಬರ; ಬಿಜೆಪಿ ಅತೃಪ್ತರಿಗೆ ಕಾಂಗ್ರೆಸ್ ಟಿಕೆಟ್ ಭಾಗ್ಯ!

1 year ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ