by GS Bharath Gudibande
ಗುಡಿಬಂಡೆ: ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕ್ಷೇತ್ರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದ ಸಂತೆ ಬೀದಿ ಹಾಗೂ 3ನೇ ವಾರ್ಡ್ ಗಳಲ್ಲಿನ ಶುದ್ಧ ಕುಡಿಯುನ ನೀರಿನ ಘಟಕಗಳನ್ನು ಉದ್ಘಾಟಸಿ ಮಾತನಾಡಿದರು.
ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಭೀರುತ್ತದೆ. ನಾವು ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಯನ್ನು ದೂರ ಮಾಡಬಹುದು, ಫ್ಲೋರೈಡ್ ಮುಕ್ತರಾಗಿ ಎಲ್ಲರಿಗೂ ಆರೋಗ್ಯ ಸಿಗಬೇಕು ಹಾಗಾಗಿ ಕ್ಷೇತ್ರದ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೋಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರಿನ ಬಳಕೆ, ಕುಡಿಯುವ ನೀರಿನ ಸಮಸ್ಯೆಗಳು ಇರುವ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಈ ವೇಳೆ ಪ.ಪಂ ಮುಖ್ಯಾಧಿಕಾರಿ ರಾಜಶೇಖರ್,ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜೇಶ್, ವಿಕಾಸ್, ಮಂಜುಳನಾಗರಾಜ್, ರಾಜು, ಬಷಿರಾ ರಿಜ್ವಾನ್, ವೀಣಾ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ದ್ವಾರಕನಾಥ್ ನಾಯ್ಡು, ಹಂಪಸಂದ್ರ ಗ್ರಾಮಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್, ಮುಖಂಡರಾದ ಬಾಲಕೃಷ್ಣಾರೆಡ್ಡಿ, ಪಾವಜೇನಹಳ್ಳಿ ನಾಗಾರಾಜ್ ರೆಡ್ಡಿ, ಕೆ.ಟಿ ಹರಿ, ಅಮರನಾಥ್ ರೆಡ್ಡಿ, ಕೃಷ್ಣೇಗೌಡ, ಅಂಬರೀಷ್, ರಾಜಾರೆಡ್ಡಿ, ಜಬೀವುಲ್ಲಾ, ಪರಿಸರವಾದಿ ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.