ಬೆಂಗಳೂರು: ಪ್ರಕ್ಷುಬ್ಧ ಆಫ್ಘಾನಿಸ್ತಾನದಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಿದ ಬೆನ್ನಲ್ಲಿಯೇ ಅಲ್ಲಿ ಸಿಲುಕಿಕೊಂಡಿರುವ ಕನ್ನಡಿರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ರಾಜ್ಯ ಸರಕಾರ ವಿಶೇಷ ನೋಡಲ್ ಅಧಿಕಾರಿಯಾಗಿ ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ಅವರನ್ನು ನೇಮಕ ಮಾಡಿದೆ.
ಕಾಬೂಲ್, ಕಂದಹಾರ್, ಜಲಲಾಬಾದ್ ಸೇರಿದಂತೆ ಆಫ್ಘಾನಿಸ್ತಾನದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆ ತರಲು ವಿದೇಶಾಂಗ ಸಚಿವಾಲಯ ಸಹಾಯವಾಣಿ (Helpline) ಹಾಗೂ ಇ-ಮೇಲ್ ಸೇವೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಆ ದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ಗುರುತಿಸಿ ಸುರಕ್ಷಿತವಾಗಿ ಕರೆ ತರಲು ಕೇಂದ್ರದ ಜತೆ ಸಮನ್ವಯತೆಯ ಕೆಲಸವನ್ನು ಉಮೇಶ್ ಕುಮಾರ್ ಮಾಡಲಿದ್ದಾರೆ.
ಸದ್ಯಕ್ಕೆ ಉಮೇಶ್ ಕುಮಾರ್ ಅವರು ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.