ಬರಬೇಕಾಗಿದ್ದು 3 ತಿಂಗಳ ವೇತನ; ಸಿಕ್ಕಿದ್ದು 1 ತಿಂಗಳ ಸಂಬಳ
by GS Bharath Gudibande
ಗುಡಿಬಂಡೆ: ಮೂರು ತಿಂಗಳಿಂದ ವೇತನಕ್ಕಾಗಿ ಕಾದುಕುಳಿತಿದ್ದ ಪೌರ ಕಾರ್ಮಿಕರ ವೇತನದ ಬಗ್ಗೆ ಸಿಕೆನ್ಯೂಸ್ ನೌ ವರದಿ ಮಾಡಿದ 24 ಗಂಟೆಗಳಲ್ಲಿಯೇ ವೇತನ ಬಿಡುಗಡೆ ಮಾಡಲು ಗುಡಿಬಂಡೆ ಪಟ್ಟಣ ಪಂಚಾಯಿತಿ ಮುಂದಾಗಿದೆ.
ಕೋವಿಡ್ ಸಂಕಷಗಟವನ್ನು ಲೆಕ್ಕಿಸದೆ, ಹಬ್ಬ-ಹರಿದಿನಗಳೆನ್ನದೆ ಪಟ್ಟಣದ ಪೌರ ಕಾರ್ಮಿಕರು ಪಟ್ಟಣದ ಸ್ವಚ್ಚತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಆದರೆ, ಅವರ ಆರೋಗ್ಯ ಹಾಗೂ ವೇತನದ ಬಗ್ಗೆ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ನಿಲುವು ತಾಳಿತ್ತು.
ಸಿಕೆನ್ಯೂಸ್ ನೌ ಜತೆ ಮಾತನಾಡಿದ್ದ ಪ.ಪಂ. ಮಾಜಿ ಸದಸ್ಯೆ ಆಶಾ ಜಯಪ್ಪ ಅವರು; ವೇತನ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಸಿಕೆನ್ಯೂಸ್ ನೌ ವರದಿಯನ್ನೂ ಪ್ರಕಟಿಸಿತು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಒಂದು ತಿಂಗಳ ವೇತನ ಬಿಡುಗಡೆ ಮಾಡಿದ್ದಾರೆ. ಬುಧವಾರ ಮೂರು ತಿಂಗಳಲ್ಲಿ ಒಂದು ತಿಂಗಳ ಬಾಕಿ ವೇತನ ಪೌರ ಕಾರ್ಮಿಕರ ಕೈ ಸೇರಿದೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
1 ತಿಂಗಳ ವೇತನಕ್ಕೆ ಅಸಮಾಧಾನ
ಮೂರು ತಿಂಗಳಿಂದ ವೇತನವಿಲ್ಲದೆ ರೇಷನ್ ಅಂಗಡಿಗಳಲ್ಲಿ ಸಾಲ ಪಾವತಿ ಮಾಡಿಲ್ಲ. ನಮಗೆ ರೇಷನ್ ಕೂಡ ಸಿಗುತ್ತಿಲ್ಲ. ಸಾಲದ ಕಂತು ಕಟ್ಟಲು ಹಣವಿಲ್ಲದೆ ತುಂಬಾ ತೊಂದರೆ ಆಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಕಷ್ಟವಾಗಿದೆ. ಈಗ ಒಂದು ಒಂದು ತಿಂಗಳ ವೇತನ ನೀಡಿದ್ದಾರೆ. ಇನ್ನೂ ಎರಡು ತಿಂಗಳ ವೇತನ ಬಾಕಿ ಇದೆ ಎಂದು ಕೆಲ ಪೌರ ಕಾರ್ಮಿಕರು ಅಳಲು ತೊಂಡಿಕೊಂಡರು.
ಉಳಿದೆರಡು ತಿಂಗಳ ವೇತನ ಯಾವಾಗ ಪಾವತಿ ಮಾಡುತ್ತಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸಂಬಳವನ್ನು ತಪ್ಪದೇ ನಿಯಮಿತವಾಗಿ ಕೊಡಬೇಕು. ನಮ್ಮ ಪರಿಸ್ಥಿತಿ ಬಹಳ ಕಷ್ಟವಾಗಿದೆ ಎಂದು ಅವರು ಕಣ್ಣೀರು ಹಾಕಿದರು.
ಮೂರು ತಿಂಗಳ ವೇತನದಲ್ಲಿ ಒಂದು ತಿಂಗಳ ವೇತನ ಬಿಡುಗಡೆ ಮಾಡಿ ಕಣ್ಣೊರೆಸುವ ಪ್ರಯತ್ನ ಮಾಡುತ್ತಿದ್ದಾರೆ ಅಧಿಕಾರಿಗಳು. ಉಳಿದ ವೇತನ ಬೃಏಗ ಬಿಡುಗಡೆ ಮಾಡಬೇಕು. ನಮಗೆ ತಿಂಗಳಿಗೆ 15,000 ಬರುತ್ತದೆ. ಬ್ಯಾಂಕ್ ಸಾಲದ ಕಂತು ಹಾಗೂ ಇತರೆ ಎಲ್ಲವೂ ಹೋಗಿ ನಮಗೆ 5,000 ಮಾತ್ರ ಉಳಿಯುತ್ತದೆ. ಅಷ್ಟರಲ್ಲಿಯೇ ಜೀವನ ಸಾಗಿಸುವುದು ಹೇಗೆ? ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ.. ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ನಮ್ಮ ಕಷ್ಟಕ್ಕೆ ಸ್ಪಂದಿಸಿದ ಸಿಕೆನ್ಯೂಸ್ ನೌ ಗೆ ಹಾಗೂ ಪ.ಪಂ. ಮುಖ್ಯಾಧಿಕಾರಿ ಅವರಿಗೆ ಧನ್ಯವಾದ.
ಹೆಸರು ಹೇಳಲು ಇಚ್ಚಿಸದ ಪೌರ ಕಾರ್ಮಿಕ
ನಮ್ಮ ಪೌರ ಕಾರ್ಮಿಕರಿಗೆ ಮೂರು ತಿಂಗಳ ವೇತನ ಮಾತ್ರ ಬಾಕಿ ಉಳಿದಿತ್ತು. ಅದರಲ್ಲಿ ಒಂದು ತಿಂಗಳ ವೇತನ ಇಂದು ಮಾಡಿದ್ದೇವೆ. ಕಾರ್ಮಿಕರ ವಿಮಾ ಹಣ ದುರುಪಯೋಗ ಮಾಡಿಲ್ಲ. ಎಲ್ಲವೂ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿದೆ. ಕೋವಿಡ್ʼನಿಂದ ಕಂದಾಯ ಸಂಗ್ರಹವಾಗಿಲ್ಲ. ಹೀಗಾಗಿ ಪೌರ ಕಾರ್ಮಿಕರಿಗೆ ತೊಂದರೆಯಾಗಿದೆ.
ರಾಜಶೇಖರ್ ಗುಡಿಬಂಡೆ ಪ.ಪಂ. ಮುಖ್ಯಾಧಿಕಾರಿ