by GS Bharath Gudibande
ಗುಡಿಬಂಡೆ: ಕೋವಿಡ್-19, ಲಾಕ್ಡೌನ್ ನಿಂದ ಬರಪೀಡಿತ ಪ್ರದೇಶವಾದ ಗುಡಿಬಂಡೆ ತಾಲೂಕಿನ ಹಳ್ಳಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಹಾಗಾಗಿ ಕ್ಷೇತ್ರದ ಪ್ರತಿ ಮನೆ ಬಾಗಿಲಿಗೇ ಆಹಾರ ಕಿಟ್ ವಿತರಿಸುತ್ತಿದ್ದೇವೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಪಂಚಾಯತಿಯ ನೂತನ ಗ್ರಾಮ ಪಂಚಾಯಿತಿ ಭವನ ಉದ್ಘಾಟಿಸಿದ ನಂತರ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನ ಪ್ರತಿ ಹಳ್ಳಿ-ಹಳ್ಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆಗಳು ಸೇರಿದಂತೆ 60 ವರ್ಷ ಮೇಲ್ಪಟ್ಟ ವೃದ್ದರಿಯಗೆ ಹಾಗೂ ಸರಕಾರದ ಸೌಲಭ್ಯಗಳಿಂದ ವಂಚಿತರಾದ ನಿರಾಶ್ರಿತರಿಗೆ ಕಂದಾಯ ಇಲಾಖೆಯವರು ಮನೆ ಮನೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚಿಸಿದ್ದೆ. ಅದರಂತೆ ತಾಲೂಕಿನಲ್ಲಿ 90% ಅರ್ಹ ಜನರು ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಪ್ಪರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಹರೀಶ್, ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಪ್ರಶಾಂತ್, ದಪ್ಪರ್ತಿ ಮುರಳಿ, ಲೋಕೇಶ್ ಗೌಡ, ಜ್ಯೋತಿ ಲೋಕೇಶ್, ಮುಖಂಡರಾದ ಶಿವರಾಮ್, ಪಾವಜೇನಹಳ್ಳಿ ನಾಗರಾಜ್, ಕೃಷ್ಣೇಗೌಡ, ಪ್ರಕಾಶ್, ಬಾಲೇನಹಳ್ಳಿ ರಮೇಶ್, ಮದ್ದಿರೆಡ್ಡಿ, ಕಡೇಹಳ್ಳಿ ಬಾಲಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ, ನಂಜುಂಡಪ್ಪ, ಚನ್ನಕೃಷ್ಣಾ ರೆಡ್ಡಿ, ವೇಣುಗೋಪಾಲ, ಶಿವಣ್ಣ, ಪ್ರೆಸ್ ಸುಬ್ಬರಾಯಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.