ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿರುವುದೇಕೆ? ಕಾರಣ ಕೊರಣ ಕೊಟ್ಟ ಜಿಟಿಡಿ
ಮೈಸೂರು: ಹಳೇ ಮೈಸೂರು ಭಾಗದ ಪ್ರಭಾವೀ ಮುಖಂಡ, ಮಾಜಿ ಸಚಿವ ಜಿ.ಟಿ.ದೇವೇಗೌಡರು ಜಾತ್ಯತೀತ ಜನತಾದಳ (ಜೆಡಿಎಸ್)ಕ್ಕೆ ಗುಡ್ ಬೈ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದಾಗಿ ಪ್ರಕಟಿಸಿದರು.
“ನನ್ನ ಕ್ಷಮಿಸಿ ಅಪ್ಪಾಜಿ. ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಮಾತಾಡಿದ್ದೇನೆ. ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಹೇಳಿದ್ದೇನೆ” ಎಂದು ಜಿಟಿಡಿ ತಿಳಿಸಿದರು.
“ನನಗೆ, ನನ್ನ ಮಗನಿಗೆ ಇಬ್ಬರಿಗೂ ಕಾಂಗ್ರೆಸ್ʼನಿಂದ ಟಿಕೆಟ್ ಕೇಳಿದ್ದೇನೆ. ಇಬ್ಬರಿಗೂ ಟಿಕೆಟ್ ಸಿಗುವ ವಿಶ್ವಾಸ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೀನು ಪಕ್ಷಕ್ಕೆ ಬಂದರೆ, ನಾನು ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿದ್ದಾರೆ” ಎಂದು ಅವರು ತಿಳಿಸಿದರು.
ಈ ಅವಧಿಯವರೆಗೂ ನಾನು ಜೆಡಿಎಸ್‍ನಲ್ಲಿ ಇರುತ್ತೇನೆ ಎಂದ ಅವರು, ಅಗಸ್ಟ್ 25ರಂದು ನಡೆಯುವ ಮೈಸೂರು ಪಾಳಿಕೆಯ ಮೇಯರ್ ಚುನಾವಣೆಗೆ ಹೋಗಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಜಿಟಿಡಿ ತಿಳಿಸಿದರು.