• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಬೂಟು ಬಿಚ್ಚದೆ ಗೋಶಾಲೆಗೆ ಭೂಮಿಪೂಜೆ! ಗಂಗಾಮಾತೆಗೂ ಆರತಿ!!

P K Channakrishna by P K Channakrishna
August 30, 2021
in EDITORS'S PICKS, STATE
Reading Time: 3 mins read
0
ಬೂಟು ಬಿಚ್ಚದೆ ಗೋಶಾಲೆಗೆ ಭೂಮಿಪೂಜೆ! ಗಂಗಾಮಾತೆಗೂ ಆರತಿ!!
2k
VIEWS
FacebookTwitterWhatsuplinkedinEmail

ಸಚಿವ ಡಾ.ಕೆ.ಸುಧಾಕರ್‌ ಕಾಟಾಚಾರದ ಪೂಜೆಗೆ ತೀವ್ರ ಟೀಕೆ; ಸಂಘದ ಕಾರ್ಯಕರ್ತರ ಬೇಸರ

ಚಿಕ್ಕಬಳ್ಳಾಪುರ: ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರು ಶೂಗಳನ್ನು ಕಳಚದೇ ಪೂಜಾ ಕಾರ್ಯಕ್ರಮಗಳನ್ನು ನೆರೆವೇರಿಸಿದ ಬಗ್ಗೆ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಶನಿವಾರದಂದು ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಹೋಬಳಿಯ ನಾಗರೆಡ್ಡಿಹಳ್ಳಿ ಬಳಿ ಆಶ್ರಯ ತಾಣ ನಿರ್ಮಿಸುವ ಗೋಶಾಲೆ ಭೂಮಿಪೂಜೆ ಹಾಗೂ ಅಬ್ಲೂಡು ಕೆರೆಗೆ ಬಾಗೀನ ಅರ್ಪಿಸಿ ಗಂಗಾ ಮಾತೆಗೆ ಪೂಜೆ ಸಲ್ಲಿಸುವ ವೇಳೆ ಅವರು ಶೂ ತೊಟ್ಟುಕೊಂಡೇ ಕಾಟಾಚಾರಕ್ಕೆ ಪೂಜೆ ನೆರೆವೇರಿಸಿದ್ದು, ಜನರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವರು ಮಾತ್ರವಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಾರೊಬ್ಬರೂ ದೈವಕ್ಕೆ ಗೌರವ ತೋರದೇ ಅಪಚಾರವೆಸಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತೀಯ ಪರಂಪರೆಯ ಪ್ರಕಾರ ದೇವರ ಪೂಜೆ ಮಾಡುವ ಸಂದರ್ಭದಲ್ಲಿ ಯಾರೂ ಪಾದರಕ್ಷೆ, ಶೂ ಧರಿಸುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ಇಂಥ ಸಂಪ್ರದಾಯವನ್ನು ಬಹಳ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದೆ. ಅಷ್ಟೇ ಏಕೆ, ಸಂಘದ ನಾಯಕರು ಗೋಶಾಲೆಗಳನ್ನು ಪ್ರವೇಶ ಮಾಡಬೇಕಾದರೂ ಚಪ್ಪಲಿ ಕಳಚಿಟ್ಟು ಪ್ರವೇಶ ಮಾಡುತ್ತಾರೆ.

ಆದರೆ, ಚಿಕ್ಕಬಳ್ಳಾಪುರದ ಜಿಲ್ಲಾ ಉಸ್ತುವಾರಿ ಸಚಿವರಂತು ಬಿಜೆಪಿ ಮತ್ತು ಸಂಘ ಪರಿವಾರ ಅಥವಾ ಸಮಸ್ತ ಹಿಂದೂ ಸಮಾಜ ನಂಬಿರುವ ಶ್ರದ್ಧೆಗೆ ವಿರುದ್ಧವಾಗಿ ವರ್ತಸಿದರಲ್ಲದೆ, ಬೂಟುಗಳನ್ನು ಧರಿಸಿಯೇ ಪೂಜೆ ನೆರೆವೇರಿಸಿದರು. ಕೊನೆಯ ಪಕ್ಷ ಅರ್ಚಕರೂ ಅವರಿಗೆ ಶೂ ಕಳಚುವಂತೆ ಹೇಳಲಿಲ್ಲ. ಆದರೆ, ಅಕ್ಕಪಕ್ಕದಲ್ಲಿ ನೆರೆದಿದ್ದ ಜನರು ಮಾತ್ರ, “ನಮ್ಮ ಸಾಹೇಬ್ರು ಬೂಟು ಬಿಚ್ಚದೇ ಪೂಜೆ ಮಾಡುತ್ತಿದ್ದಾರೆ” ಎಂದು ಗೊಣಗಿಕೊಂಡರು. ಸುಧಾಕರ್‌ ಇದಾವುದರ ಪರಿವೇ ಇಲ್ಲದೆ ಶೂ ಹಾಕಿಕೊಂಡೇ ಪೂಜೆ ಪೂರೈಸಿ ಆರತಿಯನ್ನೂ ಪಡೆದರು.

ಸಚಿವ ಸುಧಾಕರ್‌ ಮಾತ್ರವಲ್ಲ, ಅವರ ಪಕ್ಕದಲ್ಲೇ ಇದ್ದ ಮಾಜಿ ಸಚಿವ, ಶಾಸಕರು, ವಯೋವೃದ್ಧರೂ ಆದ ವಿ.ಮುನಿಯಪ್ಪನವರೂ ಚಪ್ಪಲಿ ಕಳಚಲಿಲ್ಲ. ಅವರ ಪಕ್ಕದಲ್ಲೇ ನಿಂತಿದ್ದ ಮಾಜಿ ಶಾಸಕ ರಾಜಣ್ಣ ಕೂಡ ಒಂದು ಚಪ್ಪಲಿ ಬಿಚ್ಚಿ ಅದರ ಮೇಲೆ ಕಾಲಿಟ್ಟುಕೊಂಡು ಇನ್ನೊಂದು ಚಪ್ಪಲಿ ಧರಿಸಿ ಭಕ್ತಿ ಪ್ರದರ್ಶಿಸಿದರು. ಉಳಿದಂತೆ ಅಲ್ಲಿ ನೆರೆದಿದ್ದ ಜಿಲ್ಲೆಯ ಅಧಿಕಾರಿಗಳೆಲ್ಲ ಠೀವಿಯಿಂದ ಚಪ್ಪಲಿ, ಶೂ ಧರಿಸಿಕೊಂಡಢೇ  ಪೂಜೆಯಲ್ಲಿ ಭಾಗಿಯಾಗಿ ಪುನೀತರಾದರು.

ಗಂಗಾ ಮಾತೆಗೂ ಶೂ ಹಾಕಿಕೊಂಡೇ ಪೂಜೆ!

ಗೋಶಾಲೆಯ ಭೂಮಿಪೂಜೆ ಕಥೆ ಹೀಗಾದರೆ, ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿಯ ಅಬ್ಲೂಡು ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಆ ಕೆರೆಗೆ ಬಾಗಿನ ಅರ್ಪಿಸಿ, ಗಂಗಾ ಪೂಜೆ ಸಲ್ಲಿಸಿದ ಕಾರ್ಯಕ್ರಮದಲ್ಲೂ ಅದೇ ದೃಶ್ಯವೇ ಮರುಕಳಿಸಿತು.

ಮಾಜಿ ಸಚಿವ ವಿ.ಮುನಿಯಪ್ಪ, ಮಾಜಿ ಶಾಸಕ ರಾಜಣ್ಣ ಜತೆಗೂಡಿ ಗಂಗಾ ಮಾತೆಗೆ ಬಾಗೀನ ಅರ್ಪಿಸಿ ಪೂಜೆ ಮಾಡುವಾಗಲೂ ಸಚಿವ ಡಾ.ಸುಧಾಕರ್‌ ಶೂ ಬಿಚ್ಚಲಿಲ್ಲ.

ಕರೆಗೆ ಬಾಗೀನ ಬಿಡುವಾಗಲಾಗಲಿ ಅಥವಾ ಕೆರೆಯಂಗಳದಲ್ಲಿ ಗಂಗೆಗೆ ಪೂಜೆ ಸಲ್ಲಿಸುವಾಗ ಆಗಲಿ ಸಚಿವರು ಶೂ ಕಳಚಿಡುವ ಗೋಜಿಗೇ ಹೋಗಲಿಲ್ಲ. ಸಚಿವರಂತೆ ಅಲ್ಲಿ ನೆರೆದಿದ್ದವರಾರೂ ಪಾದರಕ್ಷೆ ಕಳಚಲಿಲ್ಲ. ಕಾಟಾಚಾರಕ್ಕೆ ಪೂಜೆ ನಡೆಯಿತಷ್ಟೇ.

ಸ್ಥಳದಲ್ಲೇ ಇದ್ದ ಕೆಲ ಜನರು ಶೂ ತೊಟ್ಟು ಪುಜೆ ಮಾಡಿದ ಸಚಿವರನ್ನು ಗಮನಿಸಿದರಾದರೂ ಯಾರೊಬ್ಬರೂ ಹೇಳುವ ಪ್ರಯತ್ನ ಮಾಡಲಿಲ್ಲ. ಅಧಿಕಾರಿಗಳಂತೂ ಅಷ್ಟು ಧೈರ್ಯ ಮಾಡುವ ಹಾಗೆಯೇ ಇಲ್ಲ. ಆದರೆ, ಎರಡೂ ಕಡೆ ನಡೆದ ಕಾಟಾಚಾರದ ಪೂಜೆಯ ಬಗ್ಗೆ ಜನರು ತಮ್ಮ ಪಾಡಿಗೆ ತಾವು ಆಡಿಕೊಂಡು ಸುಮ್ಮನಾದರು.

ಶೂ ಬಿಚ್ಚಿ ಪೂಜೆ ಮಾಡಬೇಕಿತ್ತು

ಸಚಿವ ಡಾ.ಸುಧಾಕರ್‌ ಅವರು ಬೂಟು ಬಿಚ್ಚದೇ ಗೋಶಾಲೆ ಮತ್ತು ಗಂಗೆಗೆ ಪೂಜೆ ಮಾಡಿದ್ದು ಸರಿಯಲ್ಲ. ಅವರು ಜನರ ಮತ್ತು ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿ ವರ್ತಿಸಬಾರದಿತ್ತು ಎಂದು ಹಿರಿಯ ಪತ್ರಕರ್ತ ಹಾಗೂ ಸಂಘ ಪರಿವಾರದ ಕಾರ್ಯಕರ್ತ ದು.ಗು.ಲಕ್ಮಣ್‌ ಅಭಿಪ್ರಾಯಪಟ್ಟಿದ್ದಾರೆ.

  • ದು.ಗು.ಲಕ್ಮಣ್‌

ಶೂ ಧರಿಸಿ ಪೂಜೆ ಮಾಡಿದ್ದು ಅತ್ಯಂತ ದುರದೃಷ್ಟಕರ. ಅವರ ಜತೆ ನಿಂತಿದ್ದ ಶಾಸಕರು, ಮಾಜಿ ಶಾಸಕರು ಕೂಡ ಚಪ್ಪಲಿ ಕಳಚಿಲ್ಲ. ಜನರ ಭಾವನೆಗಳು, ಸಮಾಜದ ಶ್ರದ್ಧೆ-ನಂಬಿಕೆಗೆ ಧಕ್ಕೆ ತರುವ ಕೆಲಸವನ್ನು ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಸಚಿವ ಡಾ.ಸುಧಾಕರ್‌ ಮಾಡಿದ್ದಾರೆ.

ಅನಾದಿ ಕಾಲದಿಂದಲೂ ನಮ್ಮಲ್ಲಿರುವ ನಂಬಿಕೆ-ಶ್ರದ್ಧೆ ಪ್ರಕಾರ ನಾವು ದೇವಾಲಯಕ್ಕೆ ಪಾದರಕ್ಷೆ ಧರಿಸಿ ಪ್ರವೇಶ ಮಾಡುವುದಿಲ್ಲ. ಪಾದರಕ್ಷೆ ಧರಿಸಿ ಪೂಜೆ ಮಾಡುವುದಿಲ್ಲ ಕೂಡ. ಸುಧಾಕರ್‌ ಪವಿತ್ರವಾದ ಗೋವಿಗೆ ಆಶ್ರಯ ತಾಣವಾದ ಗೋ ಶಾಲೆಗೆ ಭೂಮಿ ಪೂಜೆ ಮಾಡುವಾಗ ಶೂ ಬಿಚ್ಚಿಡಬೇಕಿತ್ತು.

ಪಂಚಭೂತಗಳಲ್ಲಿ ಒಂದಾದ ನೀರಿನ ಬಗ್ಗೆ ನಮ್ಮ ಆಚಾರ-ವಿಚಾರಗಳಲ್ಲಿ ಬಹಳಷ್ಟು ನಂಬಿಕೆ, ಶ್ರದ್ಧೆ ಅಡಗಿದೆ. ಅಲ್ಲಿಯೂ ಅವರು ಬೂಟುಗಳನ್ನು ಧರಿಸಿ ಪೂಜೆ ಮಾಡಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಗೆ ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುತ್ತಾರೆ ಎಂಬುದನ್ನು ಸುಧಾಕರ್‌ ನೋಡಿ ಕಲಿಯಬೇಕು. ಓರ್ವ ಮಂತ್ರಿಯಾಗಿ ಅವರ ನಡವಳಿಕೆ ಸರಿಯಲ್ಲ. ಪೂಜೆಯ ವೇಳೆ ಅವರು ಶೂ ಬಿಚ್ಚಲಿಲ್ಲ ಅನ್ನುವ ಕಾರಣಕ್ಕೆ ಅಲ್ಲಿ ಸೇರಿದ್ದ ಉಳಿದವರೂ ಪಾದರಕ್ಷೆ ತೆಗೆಯಲಿಲ್ಲ. ಯಥಾ ರಾಜ, ತಥಾ ಪ್ರಜಾ ಎನ್ನುವಂತಿವೆ ಆ ದೃಶ್ಯಗಳು.

ದು.ಗು.ಲಕ್ಮಣ್‌ , ಹಿರಿಯ ಪತ್ರಕರ್ತ -ಸಂಘ ಪರಿವಾರದ ಕಾರ್ಯಕರ್ತ

ಕೆಳಗಿನಿಂದ ಮೇಲೆ ಸರಿ ಹೋಗಬೇಕು ಎಂದು ಸಚಿವರು ಭಾವಿಸಿದಂತಿದೆ, ಅದು ತಪ್ಪು. ಮೊದಲು ಮೇಲಿನಿಂದ ಕೆಳಮುಖವಾಗಿ ಸರಿ ಹೋಗಬೇಕು. ಮೊದಲು ಅವರು ಉತ್ತಮ ನಡವಳಿಕೆ ತೋರಿಸಬೇಕು. ಇಂಥವರಿಂದ ಜನರಾಗಲಿ, ಅವರ ಪಕ್ಷದ ಕಾರ್ಯಕರ್ತರಾಗಲಿ ಕಲಿಯುವುದೇನು ಎಂದು ಎಂದು ಲಕ್ಷ್ಮಣರು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
ಚಿಕ್ಕಬಳ್ಳಾಪುರದಲ್ಲಿ ಅತ್ಯುತ್ತಮ ದರ್ಜೆಯ ಮಾದರಿ ಗೋಶಾಲೆ; ರಾಜ್ಯದಲ್ಲೇ ಮೊದಲು
Tags: bhagina for lakebjpchikkaballapuradr k sudhakarganga poojaGoShalakarnataka-indianaredndra modirehabilitation for cowsrssshidlaghatta
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಗೂಡ್ಸ್ ವಾಹನ ಡಿಕ್ಕಿ: ಯು ಟರ್ನ್ ಮಾಡುತ್ತಿದ್ದ ಪೊಲೀಸರ ಹೆದ್ದಾರಿ ಗಸ್ತುವಾಹನ ಪಲ್ಟಿ

ಗೂಡ್ಸ್ ವಾಹನ ಡಿಕ್ಕಿ: ಯು ಟರ್ನ್ ಮಾಡುತ್ತಿದ್ದ ಪೊಲೀಸರ ಹೆದ್ದಾರಿ ಗಸ್ತುವಾಹನ ಪಲ್ಟಿ

Leave a Reply Cancel reply

Your email address will not be published. Required fields are marked *

Recommended

ಮುಜರಾಯಿ ಇಲಾಖೆ ಅರ್ಚಕರು, ದೇವಾಲಯ ನೌಕರರಿಗೆ ದಸರಾ ಬಂಪರ್

ಮುಜರಾಯಿ ಇಲಾಖೆ ಅರ್ಚಕರು, ದೇವಾಲಯ ನೌಕರರಿಗೆ ದಸರಾ ಬಂಪರ್

5 years ago
ನಮ್ಮ ದೇಶದಲ್ಲೇ ತಯಾರಾದ ಕೊರೊನಾ ಲಸಿಕೆ ಕುರಿತು ಅಗೌರವ ಬೇಡ; ಭಾರತ್ ಬಯೋಟೆಕ್ ನಂಬಿಕೆಗೆ ಅರ್ಹವಾದ ಕಂಪನಿ ಎಂದ ಡಾ.ಕೆ.ಸುಧಾಕರ್

ಕೋಲಾರದ ಮಾಲೂರಿನಲ್ಲಿ 100 ಎಕರೆ ಜಾಗದಲ್ಲಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ I ದೃಢಪಡಿಸಿದ ಡಿಸಿಎಂ I ಐದು ಪಟ್ಟು ಹೆಚ್ಚು ಲಸಿಕೆ ತಯಾರಿಕೆ, ರಾಜ್ಯದಲ್ಲಿ ನೀಗುತ್ತಾ ವ್ಯಾಕ್ಸಿನ್‌ ಕೊರತೆ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ