• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಶಿಕ್ಷಕರಿಗೆ ಶಿಕ್ಷೆಯೇ!? ಇಲ್ಲಿದ್ದಾರೆ ಅತಿಥಿಗಳೆಂಬ ಅನಾಥರು!

cknewsnow desk by cknewsnow desk
September 5, 2021
in GUEST COLUMN
Reading Time: 2 mins read
0
ಶಿಕ್ಷಕರಿಗೆ ಶಿಕ್ಷೆಯೇ!? ಇಲ್ಲಿದ್ದಾರೆ ಅತಿಥಿಗಳೆಂಬ ಅನಾಥರು!
1.7k
VIEWS
FacebookTwitterWhatsuplinkedinEmail

ಅತಿಥಿ ಉಪನ್ಯಾಸಕರ ಆರ್ತನಾದ!!

ಭಾರತ ಬದಲಾಗುತ್ತಿದೆ. ಕರ್ನಾಟವೂ ಕೂಡ. ಆದರೆ ಇವರ ಬದುಕು ಹಾಗೆಯೇ ಇದೆ. ಇವತ್ತಿನಿಂದ ಅಲ್ಲ, ದಶಕಗಳಿಂದ. ಶಿಕ್ಷಣದಿಂದಲೇ ರಾಷ್ಟ್ರ ನಿರ್ಮಾಣ ಎನ್ನುವ ಸರಕಾರ ಶಿಕ್ಷಕರ ದಿನಾಚರಣೆ ಆಚರಿಸುವ ಸಂಭ್ರಮದಲ್ಲಿದೆ, ನಿಜ. ಆದರೆ ಅತಿಥಿ ಉಪನ್ಯಾಸರ ಆರ್ತನಾದ ಕೇಳುತ್ತಿಲ್ಲವೇ? ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹೊತ್ತಿನಲ್ಲಿ ಇವರ ಬಗ್ಗೆ ಆಲೋಚಿಸಬೇಕಿದೆ. ಈ ಬಗ್ಗೆ ಬರೆದಿದ್ದಾರೆ ಓರ್ವ ಅತಿಥಿ ಉಪನ್ಯಾಸಕರೂ ಆದ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌ ರಾವ್‌ ಹವಲ್ದಾರ್.


ಭಾರತೀಯ ಪರಂಪರೆಯಲ್ಲಿ ಅತಿಥಿಗಳಿಗೆ ವಿಶೇಷ ಸ್ಥಾನ. ʼಅತಿಥಿ ದೇವೋ ಭವʼ ಎಂಬ ಮಾತಿನಂತೆ

ಮನೆಗೆ ಬಂದಂತಹ ಅತಿಥಿ ಯಾರೇ ಆಗಿರಲಿ; ಅದು ಬಂಧುವೋ, ಮಿತ್ರನೋ, ಶತ್ರುವೋ ಅವರಿಗೆ ಆತಿಥ್ಯ ಮಾಡುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ.

ನಾನು ಯಾಕೆ ಮೇಲಿನ ಮಾತನ್ನು ಹೇಳುತಿದ್ದೇನೆ ಎಂಬುದು ಮುಂದೆ ಈ ಲೇಖನ ಓದಿದಂತೆಲ್ಲ ಅರ್ಥವಾಗುತ್ತದೆ.

ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಾ ನಮ್ಮ ಜ್ಞಾನದಾತರಿಗೆ, ಬದುಕಿನ ಮಾರ್ಗ ತೋರಿದವರಿಗೆ ವಿಶೇಷವಾಗಿ ನಮಿಸುತ್ತಿದ್ದೇವೆ. ಗುರುವಿಗೆ ಕೊಡುವಷ್ಟು ಮನ್ನಣೆ, ಮಹತ್ವ ಭಗವಂತನಿಗೂ ಕೊಡಲಾರವೇನೋ ನಾವು. ಅದಕ್ಕೆ ಶರಣರು ಹೇಳಿರುವುದು “ಹರ ಮುನಿದರೆ ಗುರು ಕಾಯುವವನು” ಎಂದು. ಗುರು ಬದುಕಿನಲ್ಲಿ ವಹಿಸುವ ಪಾತ್ರ ಮತ್ತ್ಯಾರೂ ವಹಿಸಲಾರರೇನೋ. ಅದರೆ, ಇಂದು ಅದೇ ಗುರುವಿನ ಸ್ಥಿತಿ ಏನಾಗಿದೆ?

ಇಂದಿನ ಸರಕಾರದ ಶಿಕ್ಷಣ ವ್ಯವಸ್ಥೆಯಲ್ಲಿ ಮೇಲೆ ಹೇಳಿದ ಅತಿಥಿಗಳನ್ನು ನೋಡುವ ರೀತಿ, ಗುರುವಿಗೆ ಕೊಡುವ ಗೌರವ, ಇವುಗಳಲ್ಲಿ ಯಾವುದನ್ನೂ ನೀಡದೇ ಮಲತಾಯಿ ತನ್ನ ಮಕ್ಕಳು ಅಲ್ಲದ ಮಕ್ಕಳನ್ನು ನೋಡುವ ರೀತಿಯಲ್ಲಿಯೇ ನಮ್ಮನ್ನು ನಡೆಸಿಕೊಳ್ಳುತ್ತಿದೆ.

ಸರಕಾರದ ಉನ್ನತ ಶಿಕ್ಷಣ ಇಲಾಖೆ ತಾತ್ಸಾರಕ್ಕೆ ಒಳಗಾಗಿ, ಯಾರಿಗೂ ಬೇಡವಾದ  ರೀತಿಯಲ್ಲಿ ಕಳೆದ 15-20 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿರುವ ಒಮ್ಮೆ ʼಅತಿಥಿʼ ಹೆಸರಲ್ಲಿ, ಇನ್ನೊಮ್ಮೆ ʼಬಾಡಿಗೆʼ ಹೆಸರಲ್ಲಿ, ಮತ್ತೊಮ್ಮೆ ʼಅರೆಕಾಲಿಕʼ ಹೆಸರಿನಲ್ಲಿ ಬದುಕಿಗಾಗಿ ಚಡಪಡಿಸುತ್ತಿರುವ ಅರೆಜೀವದ ಚಾತಕ ಪಕ್ಷಿಗಳಂತಾಗಿದೆ ಅತಿಥಿ ಉಪನ್ಯಾಸಕರ ಸ್ಥಿತಿ.

ತಮ್ಮ ಹಾಗೆಯೇ ಓದಿ, ನೇಮಕಾತಿಯಲ್ಲಿ ಸ್ವಲ್ಪದರಲ್ಲೇ ಆಯ್ಕೆಯಾದವರಿಂದ ಒಂದು ರೀತಿಯಲ್ಲಿ ತಿರಸ್ಕಾರಕ್ಕೆ, ಅಸಹನೆಗೆ ಒಳಗಾಗಿ ಕಾಲೇಜಿನಲ್ಲಿ ಕುಳಿತುಕೊಳ್ಳಲು ಕುರ್ಚಿಯೂ ಸಿಗದೆ, ಮಾಡುವ ಕೆಲಸಕ್ಕೆ ಬಿಡಿಗಾಸು ಎಂಬ ಗೌರವ ಧನ ಪಡೆಯಲು ವಾರಗಟ್ಟಲೇ ಕಾಯುವ, ಕ್ಲರ್ಕ್, ಪ್ರಿನ್ಸಿಪಾಲರ ಮುಂದೆ ಕೈಕಟ್ಟಿ ನಿಲ್ಲುವ, ಅವರು ಕೊಟ್ಟಾಗ ಪಡೆದುಕೊಂಡು ಮಾಡಿದ ಸಾಲಕ್ಕೆ ಹೊಂದಿಸುವ, ಮುಂದಿನದು ಏನು ಎಂಬ ಚಿಂತೆಯಲ್ಲಿಯೇ ದಿನಗಳನ್ನು ದೂಡುತ್ತಾ ಸವೆಸುವ ಜೀವನದ ಪಾಡು ಯಾರಿಗೂ ಬೇಡ. ಅಂಥ ಬದುಕಿನವರು ಈ  ಪದವಿ ಕಾಲೇಜು ಅತಿಥಿ ಉಪನ್ಯಾಸಕರು.

ರಾಜ್ಯದ 430 ಪದವಿ ಕಾಲೇಜುಗಳಲ್ಲಿ ಸುಮಾರು 14,755 ಉಪನ್ಯಾಸಕರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಯಾವ ಸೇವಾ ಭದ್ರತೆಯೂ ಇಲ್ಲದೇ, ʼಕೊಟ್ಟಾಗಷ್ಟೇ ಪ್ರಸಾದʼ ಎಂಬ ರೀತಿಯಲ್ಲಿ ಗೌರವಧನ ಪಡೆಯುತ್ತಾ ದುಸ್ತರ ಬದುಕು ಬದುಕುತ್ತಿದ್ದಾರೆ.

ನೀವು ಪ್ರತಿ ವರ್ಷವೂ ವಿಧಾನಂಡಲ ಅಧಿವೇಶನ ಸಮಯದಲ್ಲಿ ನೋಡಬಹುದು. ಸೇವಾಭದ್ರತೆ ನೀಡಿ, ಗೌರವಧನ ಹೆಚ್ಚಿಸಿ, ಕಾಯಮಾತಿ ಮಾಡಿ ಎಂದು ಅತಿಥಿ ಉಪನ್ಯಾಸಕರ ಅರ್ನಿದಿಷ್ಟ  ಮುಷ್ಕರ ಎಂಬ ದೃಶ್ಯಗಳನ್ನು ಪತ್ರಿಕೆ, ಟೀವಿ ಮಾಧ್ಯಮಗಳಲ್ಲಿ ನೋಡಿರುತ್ತೀರಾ. ಸರಕಾರ ಮಾತುಕತೆಗೆ ಕರೆದು ಚರ್ಚಿಸುತ್ತದೆ. ಕಾಯಂ ಮಾಡುತ್ತೇವೆ ಎಂಬ ಆಶ್ವಾಸನೆ  ಕೊಡುತ್ತದೆ. ಇಂಥ ನಾಟಕ ದೃಶ್ಯಗಳು ಮರುಕಳಿಸುತ್ತಲೇ ಇವೆ.

ಮಾಡುವ ಕೆಲಸ ಒಂದೇ. ಆದರೆ ತಾರತಮ್ಯ ಯಾಕೆ? ಅತಿಥಿ ಉಪನ್ಯಾಸಕರಿಗೆ ಕೊಡುವ ಗೌರವ ಧನ  8 ಪಿರೇಡ್ʼಗಳಿಗೆ ಕೇವಲ 11,000 ರಿಂದ 13,000 ರೂಪಾಯಿಗಳು ಮಾತ್ರ. ಅದೇ ಕಾಯಂ ಉಪನ್ಯಾಸಕರಿಗೆ ಸಿಗುವ ಸಂಬಳ ವಾರದ 16 ಪಿರೇಡ್ʼಗೆ 60,000ದಿಂದ 1,10,000 ರೂಪಾಯಿ ವರೆಗೆ ಅಥವಾ ಅದಕ್ಕಿಂತ ಹೆಚ್ಚು. ಸಾಮಾಜಿಕ ನ್ಯಾಯ ಎಂದರೆ ಇದೇನಾ? ಶೈಕ್ಷಣಿಕ ಸುಧಾರಣೆ ಎಂದರೆ ಇದೇನಾ? ಅದೇ ಅನ್ಯ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಏನಿಲ್ಲವೆಂದರೂ 25,000ರಿಂದ 35,000 ರೂಪಾಯಿ ವರೆಗೆ ಸಂಬಳ, ಸೇವಾಭದ್ರತೆಯೂ ಇದೆ. ಶಿಕ್ಷಣದ ಕಾಶಿ, ಜ್ಞಾನದ ಗಂಗೋತ್ರಿ ಎಂದು ಕರೆಸಿಕೊಳ್ಳುವ ಕರ್ನಾಟಕದಲ್ಲಿ ಏಕಿಲ್ಲ?

ಕಳೆದ ವರ್ಷ ಕೊರೋನಾ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಪಾಡು ಯಾರಿಗೂ ಹೇಳದ ಸ್ಥಿತಿಯಲ್ಲಿ ಇತ್ತು. ಅನಾರೋಗ್ಯ ಪೀಡಿತರಾಗಿ ವೇತನ ಇಲ್ಲದೇ ಸುಮಾರು 45ಕ್ಕೂ ಹೆಚ್ಚು ಉಪನ್ಯಾಸಕರು ಸಾವಿಗೀಡಾದರು. ಇದು ನಿಜಕ್ಕೂ ದುರಂತವೇ ಸರಿ. ಎಷ್ಟೋ ಉಪನ್ಯಾಸಕರು ಗೌರವಧನ ಸಿಗದೇ ಬೀದಿಬದಿ ವ್ಯಾಪಾರಿಗಳಾದರು. ಹೋಟೆಲ್, ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿದ್ದಾರೆ. ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಗಳಾಗಿ ಕೆಲಸ ಮಾಡಿದ್ದಾರೆ. ಒಂದು ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳದ, ಮನೆಯವರಿಗೂ ಬೇಡವಾಗಿ, ಸಮಾಜದ ಕಣ್ಣಲ್ಲಿ ಏನಕ್ಕೂ ಆಗದವರಂತೆ ಆಗಿಬಿಟ್ಟ ಇವರ ನೋವಿನ್ನು ಹೇಳುವುದಾದರೂ ಹೇಗೆ?

ಒಂದು ನಡೆದ ಘಟನೆಯ ಬಗ್ಗೆ  ಹೇಳಬೇಕು. ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆ ಹಾಗೂ ಗೌರವಧನ ಹೆಚ್ಚಳಕ್ಕಾಗಿ ಮನವಿ ಕೊಡಲು ಡೀಸಿ ಕಚೇರಿಗೆ ಹೋದ ಸಂದರ್ಭದಲ್ಲಿ ಆ ಡೀಸಿ ಹೇಳಿದ ಮಾತು ಅಕ್ಷರಶಃ ಜಿಗುಪ್ಸಕರವಾಗಿತ್ತು. ಯಾಕಾಗಿ ಈ ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆಯೋ ಎಂಬ ಸಂಕಟ ಕಾಡಿದ್ದು ಸುಳ್ಳಲ್ಲ.

ಆ ಡೀಸಿ ಮಹಾಶಯ ಹೇಳುತ್ತಾರೆ.. ” ನೀವು ಇಲಾಖೆ ನಡೆಸುವ ನೇರ ಅಥವಾ ಸ್ಪರ್ಧಾತ್ಮಕ ಪರೀಕ್ಷಯಲ್ಲಿ ಉತ್ತೀರ್ಣರಾಗದೇ ಇಲ್ಲಿ ಬಂದು ಕಾಯಂ ಮಾಡಿ, ಗೌರವಧನ ಹೆಚ್ಚಳ ಮಾಡಿ ಅಂತ ಕೇಳ್ತಾ ಇದೀರಾ.  ಅವೆಲ್ಲ ಮಾಡೊಕೆ ಸರ್ಕಾರಕ್ಕೆ ಅಗೋದಿಲ್ಲ. ಇದೇ ಗೌರವಧನ ತೆಗೆದುಕೊಂಡು ಕೆಲಸ ಮಾಡುವುದಾದರೆ ಮಾಡಿ. ಇಲ್ಲವೇ ಕೆಲಸ ಬಿಟ್ಟುಬಿಡಿ. ಈ ಕೆಲಸ ಮಾಡಲು ಲಕ್ಷಾಂತರ ವಿದ್ಯಾವಂತರು ಕಾಯುತ್ತಿದ್ದಾರೆ.”

ಪಾಠ ಮಾಡಿಕೊಂಡೇ ಅರ್ಧ ಜೀವನವನ್ನೇ ಸವೆಸಿದ, ಇಂಥ ಡೀಸಿಗಳಿಗೆ ಪಾಠ ಮಾಡಿದ ಅವರ ಬದುಕಿಗೆ ಬೆಂಕಿ ಇಡುವಂಥ ಇಂಥ ಮಾತುಗಳು ಇನ್ನೆಷ್ಟು ದಿನ?

ಎಷ್ಟು ಕೇಳಿದರೂ, ಹೋರಾಟ ನಡೆಸಿದರೂ ಅತಿಥಿ ಉಪನ್ಯಾಸಕರಾಗಿ ಕಡಿಮೆ ಸಂಬಳಕ್ಕೆ (ಗೌರವ ಧನ) ವರ್ಷಗಳಿಂದ ಕೆಲಸ ಮಾಡುವ ದುಃಸ್ಥಿತಿ ನಮ್ಮದು. ಅತಿಥಿ ಉಪನ್ಯಾಸಕರ ಸಂಘಗಳು ನಮ್ಮಗಳ ಸೇವಾ ವಿಲೀನ, ಸೇವಾ ಭದ್ರತೆ ಹಾಗೂ ಗೌರವ ಧನ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಲೆ ಬಂದಿದೆ. ಆದರೂ ಸಹ ಯಾವುದೇ ಸರ್ಕಾರ ಗಮನ ಕೊಟ್ಟಿಲ್ಲ. ಕೊಡುತ್ತಲೂ ಇಲ್ಲ.

ಯಾಕೆ ಹೀಗೆ? ನಾನು ಕಂಡ ಕೆಲ ಅಂಶಗಳು ಹಾಗೂ ಸರಕಾರ ಅತಿಥಿ ಉಪನ್ಯಾಸಕರ ಕಷ್ಟಗಳಿಗೆ ಏಕೆ ಗಮನ ಹರಿಸುತ್ತಿಲ್ಲವೆಂಬ ಕಾರಣಗಳನ್ನು ಹುಡುಕುತ್ತಾ ಹೋದರೆ..

  • ನಮ್ಮವರು WhatsApp ವೀರರು, ಹೋರಾಟಕ್ಕೆ ಬರುವುದಿಲ್ಲ ಬರೀ ಮಾತು ಮತ್ತು ಉಪದೇಶ.
  • ಬೇರೆಯವರು ಹೋರಾಡುವುದಂತೂ ಖಂಡಿತಾ, ನಾವು ಮನೆಯಲ್ಲೇ ಕುಳಿತು ಸುದ್ದಿ ತಿಳಿದುಕೊಳ್ಳೋಣ ಮತ್ತು ಪ್ರತಿಫಲ ಕೂತೇ ಪಡೆದುಕೊಳ್ಳೋಣ ಎಂಬ ಮನೋಭಾವ.
  • ಹೋರಾಟಕ್ಕೆ ಕರೆದರೆ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುವ ನಾಜೂಕುವಂತರು ನಮ್ಮ ಅತಿಥಿ ಮಹಾಶಯರು.
  • ಅತಿಥಿ ಉಪನ್ಯಾಸಕರ ನಿಯೋಗ  MLC ಗಳು ಸಚಿವರನ್ನು ಭೇಟಿ ಮಾಡಿ ಅವರಿಂದ  ಉನ್ನತ ಶಿಕ್ಷಣ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಶಿಫಾರಸು ಪತ್ರ ಬರೆದರೆ  ಇನ್ನೇನು ಕಾಯಂ ಅಗೇ ಬಿಟ್ಟಿವೇನೋ ಎಂದು ಉಬ್ಬಿ ಹೋಗುವವರು ಈ ಉಪನ್ಯಾಸಕರು.
  • ಸಂಬಳ ಹೆಚ್ಚು ಮಾಡುತ್ತೇವೆ ಎಂದರೆ ಸಾಕು, ಹಿರಿಹಿರಿ ಹಿಗ್ಗುವ ಅಲ್ಪ ತೃಪ್ತರು.
  • ಪ್ರಾಮಾಣಿಕ ಹೋರಾಟಗಾರರು ಧರಣಿಗೆ ಕರೆ ಕೊಟ್ಟರೆ, ನಾವು ಆ ಗುಂಪಿನವರಲ್ಲ ಎಂದು ಹೋಗುವವರನ್ನು ತಡೆಹಿಡಿಯುವವರು.
  • ನಾವು ನಿಮಗೆ ಕಾಯಮಾತಿ ಮಾಡಿಸುತ್ತೇವೆ ಎಂದರೆ ಕುರಿಗಳ ಹಾಗೆ ಕಣ್ಣುಕಣ್ಣು ಬಿಡುವವರು.
  • ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಂಘಟನೆ , ಹೋರಾಟದ ಕೆಚ್ಚು ಅರಿಯದವರು.

ಇಲ್ಲಿ ಬಹುತೇಕ ಉಪನ್ಯಾಸಕರು ಪಿಎಚ್.ಡಿ, ಸೆಟ್ ಹಾಗೂ ನೆಟ್ ಪರೀಕ್ಷೆ ಪಾಸಾಗಿದ್ದು ಯು.ಜಿ.ಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿರುವುದರಿಂದ ಕಾಯಂ ಗೊಳಿಸಲು ಸೂಕ್ತ ನಿಯಮಾವಳಿ ರೂಪಿಸಲು ಏಕೆ ಮೀನಮೇಷ? ಸ್ಥಳೀಯ ಅಭ್ಯರ್ಥಿ, ಗುತ್ತಿಗೆ ಆಧಾರ ಹಾಗೂ ಅರೆಕಾಲಿಕವಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕರನ್ನು ಅವರ ಸೇವಾ ಅನುಭವ, ವಿದ್ಯಾರ್ಹತೆ ಪರಿಗಣಿಸಿ ಈ ಹಿಂದೆ ಕಾಯಂಗೊಳಿಸಿದ ಉದಾಹರಣೆಗಳಿವೆ. ಆದರೆ 2003ರಿಂದ ಇಲ್ಲಿವರೆಗೆ ಪ್ರತಿ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತಲೇ ಇದೆ.

‘ಈಚೆಗೆ ಧಾರವಾಡದ ಉಚ್ಚ ನ್ಯಾಯಾಲಯವು ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಕುರಿತು ನಿಯಮಾನುಸಾರ 3 ತಿಂಗಳ ಒಳಗಾಗಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್‌ಸದಸ್ಯರುಗಳ ಹಾಗೂ ಅತಿಥಿ ಉಪನ್ಯಾಸಕ ಪದಾಧಿಕಾರಿಗಳೊಂದಿಗೆ ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ಹಂತ-ಹಂತವಾಗಿ ಕಾಯಂಗೊಳಿಸುವ ಭರವಸೆ ನೀಡಲಾಗಿದೆ. ಆದ್ದರಿಂದ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರನ್ನು ವಿಶೇಷವಾಗಿ ವಯೋಮಿತಿ ಮೀರುತ್ತಿರುವ ಅರ್ಹತೆ ಮತ್ತು ಅನುಭವ ಹೊಂದಿದ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಇದೆ.

ಚಿಂತಕ ಬರಗೂರು ರಾಮಚಂದ್ರಪ್ಪ, ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮುಂತಾದವರು ಹಾಗೂ ಅತಿಥಿ ಉಪನ್ಯಾಸಕರ ರಾಜ್ಯ ಒಕ್ಕೂಟವು ‘ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಬೇಕು. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಕೆಲಸವನ್ನು ಪರಿಗಣಿಸಬೇಕು’ ಎಂದು ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.

15-20 ವರ್ಷಗಳಿಂದ ಕಡಿಮೆ ಸಂಬಳದಲ್ಲಿಯೂ ವೃತ್ತಿಬದ್ಧತೆ ಮೆರೆದ, ಪಾಠ, ಬೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಸಹಸ್ರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಸರಕಾರ ಪರಿಗಣಿಸದೇ ಇರುವುದು ವಿಷಾದನೀಯ. ನಾಡಿನ ಶಿಕ್ಷಣ ಚಿಂತಕರು, ಕಾನೂನು ತಜ್ಞರು, ರಾಜಕೀಯ ಧುರೀಣರು ಮುಂತಾದವರು ಸೇರಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕಲ್ಪಿಸಿಕೊಡಲು ಪ್ರಯತ್ನಿಸಬೇಕು.

34 ವರ್ಷಗಳ ನಂತರ ಕೇಂದ್ರ ಸರಕಾರ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತಂದಿದೆ. ಈ ಮೂಲಕ ಕರ್ನಾಟಕ ರಾಜ್ಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಮೊದಲ ರಾಜ್ಯವೆನಿಸಿದೆ. ಈ ನೀತಿಯನ್ನು ಜಾರಿಗೆ ತರುವಲ್ಲಿ ಅತಿಥಿ ಉಪನ್ಯಾಸಕರ  ಪಾತ್ರ ಬಹು ದೊಡ್ಡದು. ಯಾಕೆಂದರೆ, ಬಹುತೇಕ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರೇ ಇಲ್ಲ. ಅತಿಥಿ ಉಪನ್ಯಾಸಕರಿಂದಲೇ ಕಾಲೇಜು ನಡೆಯುತ್ತಿದೆ. ಈ ನೀತಿಯು ಯಶಸ್ವಿಯಾಗಬೇಕಾದೆ ಇವರ ಸೇವಾ ಭದ್ರತೆ, ವೇತನ  ತಾರತಮ್ಯ ನೀಗಬೇಕಿದೆ. ಸಚಿವರು 17 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಬೇಕು ಎಂದಿದ್ದಾರೆ, ಅದರೆ ಇವರಿಗೆ ಸರಿಯಾಗಿ ವೇತನ ಪಾವತಿ ಅಗುತ್ತಿಲ್ಲ. ಇನ್ನು ಉಳಿದವರ ಗತಿ ಏನು ಎಂಬ ಪ್ರಶ್ನೆ ಕಾಡುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಅನ್ಲೈನ್ ತರಗತಿಗಳನ್ನೂ ಅತಿಥಿ ಉಪನ್ಯಾಸಕರೇ ಮಾಡಿದ್ದರು. ಇಲಾಖೆಯು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಉಚಿತ ಲ್ಯಾಪ್‌ಟಾಪ್, ಟ್ಯಾಬ್‌ʼಗಳನ್ನು ನೀಡಿದೆ. ಅದರೆ ಎಷ್ಟೋ ಅತಿಥಿ ಉಪನ್ಯಾಸಕರುಗಳಿಗೆ ಸ್ಮಾರ್ಟ್ʼಪೋನ್ ಕೂಡ ಇಲ್ಲದಿರುವುದು  ದುರ್ದೈವದ ಸಂಗತಿ. ಕಾಯಂ ಉಪನ್ಯಾಸಕರಲ್ಲಿ ಎಲ್ಲವೂ ಇದ್ದು ತರಗತಿ ಮಾಡಿದ್ದರೆ, ಅತಿಥಿಗಳು ಏನೂ ಇಲ್ಲದೇ ಅನ್ಲೈನ್ ತರಗತಿ ನಡೆಸಲು ಒಂದು ಜಿಬಿ ಡೇಟಾಗೂ ಒದ್ದಾಡಿದ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಅವರಿಗೆ ಲ್ಯಾಪ್‌ಟಾಪ್, ಟ್ಯಾಬ್‌ʼಗಳನ್ನಾದರೂ ಸರಕಾರ ಕೊಡಬೇಕು.

ಮೇಲೆ ಹೇಳಿದ ಹಾಗೆ ಒಮ್ಮೆ ಅರೆಕಾಲಿಕ, ಇನ್ನೊಮ್ಮೆ ಬಾಡಿಗೆ ಉಪನ್ಯಾಸಕ, ಮತ್ತೊಮ್ಮೆ ಅತಿಥಿಯಾಗಿ ಇಡೀ ಬದುಕನ್ನು ಗೌರವಯುತವಾಗಿ ಬದುಕಲೂ ಅಗದೆ, ವೃತ್ತಿಗೂ ಚ್ಯುತಿ ತಾರದೆ ಬದುಕುವ ಈ ಅತಿಥಿ ಉಪನ್ಯಾಸಕರ ಬದುಕಲ್ಲಿ  ಬೆಳಕು ಮೂಡಲಿ. ಆ ಮೂಲಕ ಶಿಕ್ಷಕ ದಿನಾಚರಣೆ ಆಚರಣೆ ಅರ್ಥಪೂರ್ಣವಾಗಲಿ.


ಡಾ.ಗುರುಪ್ರಸಾದ ಹವಲ್ದಾರ್

  • ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Tags: guest lecturerhigher educationkarnatakaKarnataka guest lecturer salaryteachers day
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ಆತುರವಾಗಿ ಶಿಕ್ಷಣ ನೀತಿ ಜಾರಿ ಮಾಡಿಲ್ಲ

ಆತುರವಾಗಿ ಶಿಕ್ಷಣ ನೀತಿ ಜಾರಿ ಮಾಡಿಲ್ಲ

Leave a Reply Cancel reply

Your email address will not be published. Required fields are marked *

Recommended

ಯಡಿಯೂರಪ್ಪ ಅವರಿಂದ ಎಷ್ಟು ಸೂಟ್ ಕೇಸ್ ತೆಗೆದುಕೊಂಡಿರಿ ಸಿದ್ದರಾಮಯ್ಯ?

ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೋವಿಡ್‌ ಪಾಸಿಟಿವ್

3 years ago
ಗುಡಿಬಂಡೆ ತಾಲೂಕು ಜೆಡಿಎಸ್‌ ಅಧ್ಯಕ್ಷರಾಗಿ ಹೆಚ್.ಎನ್. ಮಂಜುನಾಥ್

ಗುಡಿಬಂಡೆ ತಾಲೂಕು ಜೆಡಿಎಸ್‌ ಅಧ್ಯಕ್ಷರಾಗಿ ಹೆಚ್.ಎನ್. ಮಂಜುನಾಥ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ