ಗುಡಿಬಂಡೆಯಲ್ಲಿ ಶಿಕ್ಷಕರ ದಿನಾಚರಣೆ
by GS Bharath Gudibande
ಗುಡಿಬಂಡೆ: ಪ್ರಪಂಚದಲ್ಲಿ ಒಬ್ಬ ಗುರುವಿಗೆ ಇರುವ ಗೌರವ ಬೇರೊಬ್ಬ ವ್ಯಕ್ತಿಗಿಲ್ಲ. ಇಂದಿನ ಪೀಳಿಗೆ ವಿದ್ಯೆ ನೀಡುವ ಗುರುಗಳಿಗೆ ಹೆಚ್ಚು ಗೌರವ ನೀಡುಬೇಕು. ವಿದ್ಯಾರ್ಥಿಗಳು ಗುರುಗಳ ಪಾದ ಮುಟ್ಟಿ ನಮಸ್ಕರಿಸಬೇಕು. ಗುರುವಿಲ್ಲದೆ ಯಾರೂ ಇಲ್ಲ, ಗುರುವಿನ ನಂತರವೇ ಎಲ್ಲರೂ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಸಹಾಯದಿಂದ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು., ಮೊದಲ ಗುರು
ನಮ್ಮ ತಂದೆ, ತಾಯಿ ನಂತರ ನಾವು ಅತಿ ಹೆಚ್ವು ಪ್ರೀತಿಸುವ ಹಾಗೂ ನಮಗೆ ಜ್ಞಾನ ನೀಡಿ ಜೀವನವನ್ನು ರೂಪಿಸುವ ಏಕೈಕ ವ್ಯಕ್ತಿ ಗುರು. ಅವರಿಗೆ ಹೆಚ್ಚು ಪ್ರತಿ, ವಿಶ್ವಾಸ ನೀಡಬೇಕು. ಖಾಸಗೀ ಶಾಲೆಗಳು ಶಿಕ್ಷಣದಲ್ಲಿ ವ್ಯಾಪಾರ ಮಾಡುತ್ತಿವೆ. ಶಿಕ್ಷಣ ನಮ್ಮ ದೇಶದಲ್ಲಿ ಉಚಿತ, ಅದರ ಆಶಯ ಬದಲಾಗಿರುವುದು ನೋವಿನ ಸಂಗತಿ ಎಂದು ಅವರು ಹೇಳಿದರು.
ಶಿಕ್ಷಕರ ದಿನದ ನಿಮಿತ್ತ ಗೌರವಕ್ಕೆ ಪಾತ್ರರಾದ ಗುಡಿಬಂಡೆ ತಾಲೂಕಿನ ಶಿಕ್ಷಕರ ಚಿತ್ರಗಳು. / Slide Show
ನಿವೃತ್ತ ಶಿಕ್ಷಕರಿಗೆ ಸನ್ಮಾನ
ತಾಲೂಕಿನಲ್ಲಿ ಹಲವು ವರ್ಷ ಶಿಕ್ಷಕರಾಗಿ ಸೇವ ಸಲ್ಲಿಸಿದ ಪ್ರೌಡಶಾಲೆ ವಿಭಾಗದಲ್ಲಿ ಬಿ.ಗಾಯಿತ್ರಿ, ಎಂ.ಕೆ.ರಾಧಾ, ಬಸವರಾಜು, ಗುರುಮೂರ್ತಿ ಎನ್.ಆದಿನಾರಾಯಣಪ್ಪ, ವೇಣುಗೋಪಾಲರೆಡ್ಡಿ. ಪ್ರಾಥಮಿಕ ಶಾಲಾ ವಿಭಾಗದ ಪುರುಷೋತ್ತಮ, ಟಿ.ಸಿ.ಅಶ್ವತ್ಥನಾರಾಯಣಪ್ಪ, ರಾಮಕೃಷ್ಣಾರೆಡ್ಡಿ ಅವರುಗಳು ಸೇವಾ ನಿವೃತ್ತಿ ಹೊಂದಿದ್ದು, ತಾಲೂಕು ಆಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಬ್ಗತ್ ವುಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಖಾಸಗೀ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಾಂಜಿ, ಪಟ್ಟಣ ಪಂಚಾಯಿತಿ ಸದಸ್ಯರು, ಪ್ರೌಡಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು